For Quick Alerts
ALLOW NOTIFICATIONS  
For Daily Alerts

ಪ್ರಿಯತಮನ ಮಾತಿನ ಮೇಲೆ ನಂಬಿಕೆ ಬರುತ್ತಿಲ್ಲವೇ?

|

ಒಂದು ಜೋಕ್‌ನಲ್ಲಿ ಮಗ ತಂದೆಗೆ ಕೇಳುತ್ತಾನೆ, ಅಪ್ಪಾ ಅಮೇರಿಕಾದಲ್ಲಿ ಸುಳ್ಳು ಹೇಳುವುದನ್ನು ಕಂಡುಹಿಡಿಯುವ ಒಂದು ಮೆಷೀನ್ ಕಂಡುಹಿಡಿದಿದ್ದಾರೆಂತೆ, ಸುಳ್ಳು ಹೇಳಿದರೆ ಥಟ್ ಅಂತ ಹಿಡಿದುಬಿಡುತ್ತದೆ ಅಂತೆ. ಅದಕ್ಕೆ ಅಪ್ಪ ಉತ್ತರಿಸುತ್ತಾರೆ, ಅದೇನು ಮಹಾ, ಅಂತಹ ಒಂದು ಯಂತ್ರವನ್ನು ನಾನು ಮದುವೆಯಾಗಿದ್ದೇನೆ! ಹೌದು, ಪತ್ನಿಯರು ತಮ್ಮ ಪತಿ ಹೇಳುವ ಸುಳ್ಳುಗಳನ್ನು ಥಟ್ಟನೇ ಹಿಡಿದುಬಿಡುತ್ತಾರೆ. ಇದಕ್ಕೆ ವರ್ಷಗಳ ಆಪ್ತತೆ, ಪರಸ್ಪರ ಪ್ರೀತಿ, ಗೌರವ ಮತ್ತು ಒಬ್ಬರನ್ನೊಬ್ಬರು ಅರಿತುಕೊಂಡಿರುವುದು ಕಾರಣವಾಗಿವೆ.

ಆದರೆ ಇನ್ನೂ ವಿವಾಹವಾಗಿರದೇ ಕೇವಲ ಪರಿಚಯ ಮುಂದುವರೆಯುತ್ತಿರುವ ಹಂತದಲ್ಲಿದ್ದಾಗ ಪ್ರಿಯತಮ ಹೇಳುವ ಎಲ್ಲಾ ಮಾತುಗಳು ನಿಜವೆಂದು ಖಡಾಖಂಡಿತವಾಗಿ ನಂಬಲಿಕ್ಕಾಗುವುದಿಲ್ಲ. ಪ್ರಿಯತಮನ ಮಾತು ಕೇಳುತ್ತಿದ್ದರೆ ಮನದೊಳಗೆ ಮುಂದೆ ಒಳ್ಳೆಯದೋ ಕೆಟ್ಟದ್ದೋ ಆಗುತ್ತದೆ ಎಂಬ ಅಳುಕು ಎದುರಾಗುತ್ತದೆ. ಇದಕ್ಕೆ ಆರನೆಯ ಇಂದ್ರಿಯ ಎಂದು ಕರೆಯಬಹುದಾದರೂ ವಿಜ್ಞಾನದಲ್ಲಿ ಖಚಿತವಾದ ಉತ್ತರವಿಲ್ಲ. ಅಪ್ಪಿ ತಪ್ಪಿಯೂ ಹೆಂಡತಿ ಬಳಿ ಆಡಬಾರದ ಮಾತುಗಳಿವು!

ಆದರೆ ನಿಮ್ಮ ಪ್ರಿಯತಮನ ಬಗ್ಗೆ ನೀವು ಈಗಾಗಲೇ ಬೆಳೆಸಿಕೊಂಡಿರುವ ಅಭಿಮಾನ ಮತ್ತು ಪ್ರೀತಿ ನಿಮ್ಮ ಪ್ರಿಯತಮನ ಮಾತನ್ನು ಒಮ್ಮೆಲೇ ನಿರಾಕರಿಸಲು ಮನ ಒಪ್ಪುವುದಿಲ್ಲ. ಆತ ಹೇಳಿದ ಮಾತುಗಳನ್ನು 'ಸರಿಯೇ' ಎಂದು ಒಮ್ಮೆಲೇ ಒಪ್ಪಿಕೊಳ್ಳಲು ಆಗದೇ ಇದ್ದರೂ 'ಇದ್ದರೂ ಇರಬಹುದು' ಎಂದು ಒಪ್ಪಿಕೊಳ್ಳುವ ಸ್ಥಿತಿ ನಿಮ್ಮದಾಗಿರುತ್ತದೆ. ಒಂದು ವೇಳೆ, ಮುಂದಿನ ದಿನಗಳಲ್ಲಿ ಈ ಅನುಮಾನ ನಿಜವಾದರೆ ನೀವು ನಿಮ್ಮ ಪ್ರಿಯತಮನ ಮೇಲಿಟ್ಟಿದ್ದ ಅಭಿಮಾನ ಮತ್ತು ಪ್ರೀತಿಗಳೆಲ್ಲಾ ಕ್ಷಣದಲ್ಲಿ ಕರಗಿ ಬಿಡುತ್ತವೆ.

ಆದ್ದರಿಂದ ನಿಮ್ಮ ಪ್ರಿಯತಮ ಹೇಳುವ ಮಾತುಗಳನ್ನೆಲ್ಲಾ ಒಮ್ಮೆಲೇ ನಂಬಿಬಿಡುವ ಬದಲು ಈ ಮಾತು ಸತ್ಯವೇ ಎಂದು ಒರೆಹಚ್ಚುವುದು ಅಗತ್ಯವಾಗಿದೆ. ಆದರೆ ಆತ ಹೇಳುತ್ತಿರುವುದು ಸುಳ್ಳೇ, ಸತ್ಯವೇ ಎಂದು ಕಂಡುಹಿಡಿಯುವುದು ಹೇಗೆ? ಕೆಳಗಿನ ಸ್ಲೈಡ್ ಶೋ ಮೂಲಕ ಈ ವಿದ್ಯೆಯನ್ನು ಸಾಧಿಸಿ, ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲು ಸೂಕ್ತ ನಿರ್ಧಾರ ಕೈಗೊಳ್ಳಿ...

ನಿಮ್ಮ ಪ್ರಶ್ನೆಗೆ ನೇರವಾಗಿ ಉತ್ತರ ನೀಡದೇ ತಪ್ಪಿಸಿಕೊಳ್ಳಲೆತ್ನಿಸಿದರೆ

ನಿಮ್ಮ ಪ್ರಶ್ನೆಗೆ ನೇರವಾಗಿ ಉತ್ತರ ನೀಡದೇ ತಪ್ಪಿಸಿಕೊಳ್ಳಲೆತ್ನಿಸಿದರೆ

ನೀವು ಕೇಳುವ ಕೆಲವೊಂದು ಪ್ರಶ್ನೆಗಳಿಗೆ ಆತ ತಕ್ಷಣ ನೇರವಾಗಿ ಉತ್ತರಿಸದೇ ವಿಷಯಪಲ್ಲಟಮಾಡಲೆತ್ನಿಸಿದರೆ, ಅಥವಾ ಇದಕ್ಕೆ ಬೇರೆಯೇ ಪ್ರಶ್ನೆ ಕೇಳಿ ನಿಮ್ಮನ್ನೇ ತಬ್ಬಿಬ್ಬಾಗಿಸಿದರೆ, ಪ್ರಶ್ನೆ ಕೇಳಿದಾಕ್ಷಣ ಮುಖ ಕುಂದುವುದು, ಸ್ವರ ಉಡುಗುವುದು, ಸಿಟ್ಟಾಗುವುದು, ನೀವು ಈ ಪ್ರಶ್ನೆ ಕೇಳಿದ್ದೇ ತಪ್ಪು ಎಂಬಂತೆ ವರ್ತಿಸುವುದು ಮೊದಲಾದವು ಕಂಡುಬಂದರೆ ಆತ ನಿಮ್ಮಿಂದೇನೋ ಮುಚ್ಚಿಡುತ್ತಿದ್ದಾನೆಂದರ್ಥ.

ನಿಮ್ಮ ಪ್ರಶ್ನೆಗೆ ಉತ್ತರಿಸುವಾಗ ತಡವರಿಸಿದರೆ

ನಿಮ್ಮ ಪ್ರಶ್ನೆಗೆ ಉತ್ತರಿಸುವಾಗ ತಡವರಿಸಿದರೆ

ಸತ್ಯ ಹೇಳುವಾಗ ತಡವರಿಸುವುದಿಲ್ಲ, ಸುಳ್ಳು ಹೇಳುವಾಗ ತಡವರಿಸುತ್ತಾರೆ ಎಂಬ ಸುಭಾಷಿತವೊಂದಿದೆ. ಏಕೆಂದರೆ ಸತ್ಯ ನುಡಿಯಲು ಮೆದುಳು ಹೆಚ್ಚು ಯೋಚಿಸಿ ಇಲ್ಲದುದನ್ನು ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಸುಳ್ಳು ಹೇಳಬೇಕಾದರೆ ಮೆದುಳು ಇಲ್ಲದ ಹಲವು ವಿಷಯಗಳನ್ನು ಕಲ್ಪಿಸಿ ಈ ಪರಿಸ್ಥಿತಿಗೆ ಒಪ್ಪುವಂತೆ ಮಾಡಲು ಯತ್ನಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಪ್ರಶ್ನೆಗೆ ಉತ್ತರಿಸುವಾಗ ತಡವರಿಸಿದರೆ

ನಿಮ್ಮ ಪ್ರಶ್ನೆಗೆ ಉತ್ತರಿಸುವಾಗ ತಡವರಿಸಿದರೆ

ಆದರೆ ವಾಸ್ತವದಲ್ಲಿ ಕೆಲವಾದರೂ ಈ ಕಲ್ಪನೆಗಳು ಮೀರಿ ಇರುವುದರಿಂದ, ಮತ್ತು ಈ ವಿಷಯ ಗ್ರಹಿಸಿದಾಕ್ಷಣ ಮೆದುಳು ಇದಕ್ಕೆ ಪರ್ಯಾಯವಾದ ಮಾರ್ಗಗಳನ್ನು ಪಡೆಯಬೇಕಾದುದರಿಂದ ಮಾತುಗಳು ನಡುನಡುವೆ ತಡೆಯಲ್ಪಡುತ್ತವೆ. ನಿಮ್ಮ ಪ್ರಿಯಕರನ ಮೆದುಳು ಎಷ್ಟೇ ಚುರುಕಿರಲಿ, ಮಾತು ತಡವರಿಸಿತೋ, ಅನುಮಾನ ಸಹಜ.

ನಿಮ್ಮ ದೃಷ್ಟಿ ತಪ್ಪಿಸಿಕೊಳ್ಳಲು ಯತ್ನಿಸಿದರೆ

ನಿಮ್ಮ ದೃಷ್ಟಿ ತಪ್ಪಿಸಿಕೊಳ್ಳಲು ಯತ್ನಿಸಿದರೆ

ನಮ್ಮ ಕಣ್ಣುಗಳು ಸುಳ್ಳು ಹೇಳುವುದನ್ನು ಸ್ಪಷ್ಟವಾಗಿ ಪ್ರಕಟಿಸುತ್ತವೆ. ಸುಳ್ಳು ಹೇಳುವಾಗ ಸಾಮಾನ್ಯವಾಗಿ ಕಣ್ಣುಗುಡ್ಡೆಗಳು ಎಡ ಅಥವಾ ಬಲಭಾಗದ ಮೇಲ್ಭಾಗವನ್ನು ನೋಡುತ್ತವೆ. ಒಂದು ವೇಳೆ ನಿಮ್ಮ ಪ್ರಶ್ನೆಗೆ ಉತ್ತರಿಸುವಾಗ ನಿಮ್ಮ ಪ್ರಿಯತಮನ ಕಣ್ಣುಗಳು ನಿಮ್ಮತ್ತ ನೋಡದೇ ಎತ್ತೆತ್ತಲೋ ನೋಡುತ್ತಿದ್ದರೆ ಆತ ನಿಮ್ಮ ದೃಷ್ಟಿ ತಪ್ಪಿಸುತ್ತಿದ್ದಾನೆಂದರ್ಥ. ಜೊತೆಗೇ ಹೆಚ್ಚು ಹೆಚ್ಚು ಕಣ್ಣು ಮಿಟುಕಿಸುತ್ತಿದ್ದಷ್ಟೂ ನಿಮ್ಮ ಅನುಮಾನ ನಿಜವಾಗುತ್ತಾ ಹೋಗುತ್ತದೆ.

ಉಸಿರಾಟ ಮತ್ತು ಹೃದಯಬಡಿತ ಹೆಚ್ಚಾದರೆ

ಉಸಿರಾಟ ಮತ್ತು ಹೃದಯಬಡಿತ ಹೆಚ್ಚಾದರೆ

ಸುಳ್ಳು ಹೇಳುವಾಗ ಏರುವ ಹೃದಯಬಡಿತ ಮತ್ತು ಉಸಿರಾಟವನ್ನು ಗಮನಿಸಿಯೇ ಸುಳ್ಳು ಹೇಳುವುದನ್ನು ಕಂಡುಹಿಡಿಯುವ ಯಂತ್ರಗಳನ್ನು ನಿರ್ಮಿಸಲಾಗಿದೆ. ನಿಮ್ಮ ಪ್ರಿಯತಮ ಒಂದು ವೇಳೆ ಸುಳ್ಳು ಹೇಳುತ್ತಿದ್ದರೆ ಆ ಸಮಯದಲ್ಲಿ ದೀರ್ಘವಾದ ಉಸಿರೆಳೆದುಕೊಳ್ಳುತ್ತಿದ್ದಾನೆಯೇ ಗಮನಿಸಿ. ಹೃದಯಬಡಿತ ಹೆಚ್ಚಾಗಿರುವ ಸೂಚನೆ (ಆಗ ಹೆಚ್ಚಿನವರು ನೀರು ಕುಡಿಯುತ್ತಾರೆ) ಕಂಡುಬಂದರೆ ನಿಮ್ಮಿಂದ ಏನೋ ಮುಚ್ಚಿಡುತ್ತಿದ್ದಾನೆ ಎಂದರ್ಥ.

ಮುಖ, ಮೂಗು, ತುಟಿಗಳನ್ನು ಪದೇ ಪದೇ ಮುಟ್ಟಿಕೊಳ್ಳುತ್ತಿದ್ದರೆ

ಮುಖ, ಮೂಗು, ತುಟಿಗಳನ್ನು ಪದೇ ಪದೇ ಮುಟ್ಟಿಕೊಳ್ಳುತ್ತಿದ್ದರೆ

ಸುಳ್ಳು ಹೇಳುತ್ತಿರುವಾಗ ನಮ್ಮ ದೇಹ ಪ್ರಕಟಿಸುವ ಅನೈಚ್ಛಿಕ ಚಟುವಟಿಕೆಗಳೆಂದರೆ ಅನಾವಶ್ಯಕವಾಗಿ ಮುಖ, ಮೂಗು, ತುಟಿಗಳನ್ನು ಮುಟ್ಟಿಕೊಳ್ಳುವುದು,ತಲೆ ತುರಿಸಿಕೊಳ್ಳುವುದು, ಮೊಡವೆಯಿದ್ದರೆ ಒಡೆಯುವುದು, ಕನ್ನಡಕವಿದ್ದರೆ ತೆಗೆದು ಕೆಳಗಿಟ್ಟು, ಮತ್ತೆ ಧರಿಸಿ, ಮತ್ತೆ ಕೆಳಗಿಡುವುದು, ಟೈ ತೊಟ್ಟಿದ್ದರೆ ಮತ್ತೊಮ್ಮೆ ಬಿಗಿ ಮಾಡುವುದು, ಷರ್ಟಿನ ಕಾಲರ್ ಸರಿಪಡಿಸಿಕೊಳ್ಳುವುದು, ಅನಗತ್ಯವಾಗಿ ಮೊದಲ ಬಟನ್ ತೆರೆಯುವುದು, ಬೆರಳುಗಳ ನೆಟಿಕೆ ತೆಗೆಯುವುದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವಾಗ ಎರಡೂ ಕೈಗಳನ್ನು ಎತ್ತಿ ತನ್ನ ಮಾತನ್ನು ಸಮರ್ಥಿಸಿಕೊಳ್ಳಲು ಯತ್ನಿಸುವುದು, ಕೆನ್ನೆ ಕೆಂಪಗಾಗುವುದು, ಕುಳಿತಿರುವ ಭಂಗಿಯನ್ನು ಪದೇ ಪದೇ ಬದಲಿಸಿಕೊಳ್ಳುವುದು, ಭುಜ ಹಾರಿಸುವುದು ಮೊದಲಾದ ಸೂಚನೆಗಳು ಸುಳ್ಳು ಹೇಳುತ್ತಿರುವುದನ್ನು ಪ್ರಕಟಿಸುತ್ತವೆ.

English summary

How To Know That Your Boy Friend Is Lying

Intuitions are never wrong and you should trust your intuitions. Our mind tells us when something good or bad is going to happen. Same is true with your relations, if you sense something wrong in your relationship, you might just be right. Have a look at some body languages which indicate that your boy friend is lying to you.
Story first published: Thursday, June 25, 2015, 11:44 [IST]
X
Desktop Bottom Promotion