For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಸರಿಗಮದಲ್ಲಿ ಅಪಸ್ವರ ಏಳದಂತೆ ಜಾಗ್ರತೆ ವಹಿಸಿ

|

ಮನುಷ್ಯನ ಜೀವನದಲ್ಲಿ ಸಂಬಂಧಕ್ಕೆ ಅದರದೇ ಆದ ಅರ್ಥವಿದೆ. ತಂದೆ ತಾಯಿ ಹಾಗೂ ಮಕ್ಕಳ ನಡುವಿನ ಸಂಬಂಧ, ಒಡನಾಡಿಗಳ ಸ್ನೇಹವೆಂಬ ಪವಿತ್ರ ಸಂಬಂಧ, ಪ್ರೇಮಿಗಳ ಪ್ರೀತಿಯ ಸಂಬಂಧ, ಗಂಡ ಹೆಂಡತಿಯರ ನಡುವಿನ ಅನುಬಂಧ ಹೀಗೆ ನಮ್ಮ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಸಂಬಂಧವನ್ನು ಬೆಳೆಸುವುದಕ್ಕಿಂತ ಅದನ್ನು ಉಳಿಸುವುದು ಅತೀ ಮುಖ್ಯವಾದದು.

ಅದರಲ್ಲೂ ದಾಂಪತ್ಯ ಎನ್ನುವುದು ಸುಂದರ ಕಾವ್ಯ. ಇಲ್ಲಿ ಗಂಡ ಹೆಂಡತಿ ಪದಗಳಿದ್ದಂತೆ. ಸರಿಯಾಗಿ ಒಂದೊಂದು ಪದವನ್ನು ಜೋಡಿಸಿದಾಗ ಸುಂದರ ಕಾವ್ಯವಾಗಲು ಸಾಧ್ಯ. ಆದರೆ ಗಂಡ ಹೆಂಡತಿಯರ ನಡುವೆಯೇ ನಂಬಿಕೆ ದ್ರೋಹವಾದರೆ ದಾಂಪತ್ಯಕ್ಕೆ ಅರ್ಥವೆಲ್ಲಿ ಅಲ್ಲವೇ?

ಹೌದು ದೀರ್ಘಾವಧಿಯ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಸಂಗಾತಿಗಳು ನಿರಂತರ ಪ್ರಯತ್ನ ಮತ್ತು ಹೊಂದಾಣಿಕೆಯನ್ನು ತೋರಬೇಕಾಗುತ್ತದೆ, ಅದರಲ್ಲಿಯೂ ತಮ್ಮ ಸಂಗಾತಿಯನ್ನು ಅರ್ಥಮಾಡಿಕೊಂಡು ಜೀವನ ನಡೆಸುವುದೇ ಇಲ್ಲಿ ಮುಖ್ಯಪಾತ್ರವಹಿಸುತ್ತದೆ. ಹೌದು ದಾಂಪತ್ಯ ಎಂಬುದು ವಿಶ್ವದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾದ ಸಂಬಂಧ ಎಂದು ಹಿರಿಯರೇ ಅಭಿಪ್ರಾಯಪಟ್ಟಿದ್ದಾರೆ.

How to keep Your Relationship Healthy

ಇಲ್ಲಿ ಎರಡು ಜೀವಗಳು ಬೇರೆ ಬೇರೆ ಸಾಮಾಜಿಕ, ಮನೋ ವೈಜ್ಞಾನಿಕ, ಆರ್ಥಿಕ ಮತ್ತು ದೈಹಿಕ ಹಿನ್ನಲೆಗಳೊಂದಿಗೆ ಬಂದು ಒಂದೇ ಕಡೆ ಕೂಡಿ ಇರುವ ಕಾಯಕವನ್ನು ನಡೆಸುತ್ತಾರೆ. ಆದರೆ ಇಲ್ಲಿ ಹೊಂದಿಕೊಂಡರೆ ಆ ಮನೆಯೇ ಸ್ವರ್ಗ...! ಜೀವನ ಪರ್ಯಂತ ಸುಖ, ಸಂತೋಷದಿಂದ ಕೂಡಿದ ಸಮಯವನ್ನು ಕಳೆಯಬೇಕೆಂದು ಪ್ರತಿಯೊಬ್ಬ ದಂಪತಿಗಳ ಆಸೆಯಾಗಿರುತ್ತದೆ. ಎಚ್ಚರ: ಸುಳ್ಳು ಸಂಸಾರವನ್ನೇ ನುಚ್ಚು ನೂರು ಮಾಡಬಹುದು!

ಆದರೆ ಈ ಆಸೆಯು ಕೈಗೂಡಬೇಕಾದರೆ ನಾವು ನಮ್ಮ ಸಂಬಂಧದ ಬಗ್ಗೆ ಹಲವಾರು ಅಂಶಗಳನ್ನು ತಿಳಿದುಕೊಂಡಿರಬೇಕು. ಪ್ರೀತಿ ನಿಜಕ್ಕು ಅತ್ಯಂತ ಬಲಿಷ್ಟವಾದ ಶಕ್ತಿ, ಆದರೆ ಅದರಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಮಾತ್ರ ಇರಬಾರದು. ಹಾಗಾದರೆ ನಿಮ್ಮ ಸಂಬಂಧ ಹಾಲು-ಜೇನಿನಂತೆ ಇರಬೇಕಾದರೆ ನಾವಿಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ, ಬನ್ನಿ ಮುಂದೆ ಓದಿ

ನಿಮ್ಮ ಪತಿ ಅಥವಾ ಪತ್ನಿಯನ್ನು ಇತರರ ಜೊತೆ ಹೊಲಿಸಬೇಡಿ
ನಿಮ್ಮ ಸಂಗಾತಿಯನ್ನು ಇತರರ ಜೊತೆ ಹೋಲಿಕೆ ಮಾಡುತ್ತಿದ್ದೀರಾ? ಇದು ಸಹ ದಾಂಪತ್ಯದಲ್ಲಿರುವವರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಲ್ಲಿ ಒಂದಾಗಿದೆ. ನೀವು ಅವರನ್ನು ಇತರರೊಂದಿಗೆ ಅಥವಾ ನಿಮ್ಮ ಮಾಜಿ... ಜೊತೆಗೆ ಹೋಲಿಕೆ ಮಾಡುತ್ತಿದ್ದಲ್ಲಿ ಖಂಡಿತ ಇದರಿಂದ ನಿಮ್ಮ ಸಂಗಾತಿ ನೊಂದು ಕೊಳ್ಳುತ್ತಾರೆ. ಅದು ಖಂಡಿತ ಅವರನ್ನು ಘಾಸಿಗೊಳಿಸುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಅನನ್ಯ. ಅವರ ರೀತಿ ಇನ್ನೊಬ್ಬರಿಲ್ಲ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿಯೊಬ್ಬರು ತಮ್ಮನ್ನು ಯಾರಾದರು ಹೊಗಳಲಿ ಎಂದು ಭಾವಿಸುತ್ತಾರೆ, ಟೀಕೆ ಮಾಡಲಿ ಎಂದು ಬಯಸುವುದಿಲ್ಲ. ಆದ್ದರಿಂದ ನೀವು ನಿಮ್ಮ ಸಂಗಾತಿಯನ್ನು ನೋಯಿಸಿದ್ದೀರಾ ಎಂದು ಒಮ್ಮೆ ನಿಮ್ಮನ್ನು ನೀವೇ ಕೇಳಿಕೊಳ್ಳಿ. ಅನುಮಾನವೇ ಸಂಸಾರವನ್ನು ನುಚ್ಚುನೂರು ಮಾಡಬಹುದು!

ಮನುಷ್ಯನಿಗೆ ಅಲ್ಲದೆ ಮರಗಳಿಗೆ ಬರುತ್ತದೆಯೇ..?
ಜೀವನದಲ್ಲಿ ಕಷ್ಟ ಸುಖ ಮನುಷ್ಯನಿಗೆ ಅಲ್ಲದೆ ಮರಗಳಿಗೆ ಬರುತ್ತದೆಯೇ..? ಏನೇ ಆಗಲಿ, ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ.

ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

ಪರಿಸ್ಥಿತಿಯನ್ನು ಆದಷ್ಟು ವಿಶ್ಲೇಷಣೆ ಮಾಡುವುದನ್ನು ರೂಢಿಸಿಕೊಳ್ಳಿ
ಹೌದು ನಿಮ್ಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲವೆಂದಾದರೆ, ಆಗ ನೀವು ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಬೇಕು ಮತ್ತು ಅಲ್ಲಿರುವ ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಿ ನಿಮ್ಮ ಸಂಬಂಧ ಶಿಥಿಲವಾಗಿದೆಯೋ, ಆ ಭಾಗವನ್ನು ಸರಿಪಡಿಸಲು ನೀವು ತುರ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಆಗ ನಿಮ್ಮ ಮದುವೆ ದೀರ್ಘಾಯಸ್ಸನ್ನು ಹೊಂದುತ್ತದೆ. ಒಂದು ವಿಚಾರ ನೆನಪಿಡಿ ಪ್ರಪಂಚದಲ್ಲಿ ಪ್ರಯತ್ನ ಪಡದೆ ಯಾವುದೇ ಅಂಶಗಳು ಸರಿಹೋಗುವುದಿಲ್ಲ. ಅದಕ್ಕೆ ದಾಂಪತ್ಯವು ಸಹ ಹೊರತಲ್ಲ.

English summary

How to keep Your Relationship Healthy

Romantic relationships are important for our happiness and well-being. Yet with more than 40 percent of new marriages ending in divorce, it's clear that relationships aren't always easy.1 Fortunately, there are steps you can take to keep your romantic partnership in good working order.
X
Desktop Bottom Promotion