For Quick Alerts
ALLOW NOTIFICATIONS  
For Daily Alerts

ಪ್ರೇಯಸಿಯ ಮನಸ್ಸನ್ನು ತಮಾಷೆಗೂ ನೋಯಿಸಬೇಡಿ

By Arshad
|

ಕೆಲವು ವ್ಯಕ್ತಿಗಳು ಅತಿ ಹೆಚ್ಚು ಸೂಕ್ಷ್ಮಮತಿಗಳಾಗಿರುತ್ತಾರೆ. ಅವರಿಗೆ ಯಾವುದೋ ಒಂದು ಪದ ಮನಸ್ಸಿಗೆ ಒಗ್ಗದೇ ಇದ್ದರೆ ಅದರ ಬಗ್ಗೆಯೇ ಯೋಚಿಸುತ್ತಾ ಖಿನ್ನರಾಗಿ ದುಃಖಿಗಳಾಗುತ್ತಾರೆ. ಉದಾಹರಣೆಗೆ ಮಾತುಮಾತಿನಲ್ಲಿ ತಮಾಷೆಗೆ 'ನೀನೊಂದು ಪೆದ್ದು ನೋಡು' ಎಂದು ಹೇಳಿದರೆ ಸೂಕ್ಷ್ಮಮತಿಯಾಗಿರುವ ಯುವತಿಯರು ಈ 'ಪೆದ್ದು' ಪದದ ಬಗ್ಗೆಯೇ ಚಿಂತಿಸುತ್ತಾ ತಮ್ಮನ್ನ ತಾವು ಹಳಿಯುತ್ತಾ ಮುಂದಿನ ದಿನವನ್ನೆಲ್ಲಾ ಇದರ ಹಿಂದೆಮುಂದೆಯೇ ಯೋಚಿಸುತ್ತಾ ಕಾಲ ಕಳೆಯುತ್ತಾರೆ.

ಈ ನಡುವೆ ಆಡುವ ಯಾವುದೇ ಮಾತನ್ನೂ ಅವರು ಈ 'ಪೆದ್ದು' ಪದದೊಂದಿಗೆ ಹೇಗಾದರೂ ಮಾಡಿ ಬೆಸೆದುಕೊಂಡು ತಮ್ಮನ್ನು ತಾವೇ ಕೀಳಾಗಿ ಕಾಣುತ್ತಾ, ತಮ್ಮ ಪ್ರಿಯಪಾತ್ರರಲ್ಲಿಯೂ ಜಗಳವಾಡುತ್ತಾರೆ. ಇದನ್ನು ರಿಪೇರಿ ಮಾಡಲು ಮನೆಯವರಿಗೆ ಅತಿ ಹೆಚ್ಚಿನ ತ್ರಾಸು ಉಂಟಾಗುತ್ತದೆ. ಇದಕ್ಕೆ ಖಚಿತವಾದ ಕಾರಣವೇನೆಂದು ಇದುವರೆಗೆ ತಿಳಿದುಬಂದಿಲ್ಲ. ಆದರೆ ಮನಃಶಾಸ್ತ್ರಜ್ಞರ ಪ್ರಕಾರ ಇದು ಕೆಲವು ಮಹಿಳೆಯರಲ್ಲಿ ಹಾರ್ಮೋನುಗಳ ಏರುಪೇರಿನ ಕಾರಣವಾಗಿದ್ದು ಅವರ ಮನೋಭಾವ ವಿಚಿತ್ರ ರೀತಿಯಲ್ಲಿ ಬದಲಾಗುತ್ತಾ ಹೋಗುತ್ತದೆ. ಅರೆರೆ...ಹುಡುಗಿಯರಿಗೆ ತಮಾಷೆ ಮಾಡುವ ಹುಡುಗರೇ ಇಷ್ಟವಂತೆ!

ಒಂದು ವೇಳೆ ನಿಮ್ಮ ಪ್ರಿಯತಮೆ, ಪ್ರೇಯಸಿ ಅಥವಾ ಪತ್ನಿಯರಲ್ಲಿ ಈ ಗುಣ ಕಂಡುಬಂದರೆ ಮೊತ್ತ ಮೊದಲನೆಯದಾಗಿ ನಿಮಗೆ ಅಪಾರ ತಾಳ್ಮೆಯ ಅಗತ್ಯವಿದೆ. ತಾಳ್ಮೆ ಕಳೆದುಕೊಂಡರೆ ಪ್ರಿಯೆಯನ್ನೇ ಕಳೆದುಕೊಂಡಂತೆ. ಆದ್ದರಿಂದ ನಿಮ್ಮ ಪ್ರಿಯತಮೆಗೆ ಯಾವ ಮಾತುಗಳಿಂದ ಈ ತೊಂದರೆ ಉಂಟಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಮೊತ್ತ ಮೊದಲ ಮತ್ತು ಅತ್ಯಂತ ಅಗತ್ಯವಾದ ಕಾರ್ಯ. ಇದು ಗೊತ್ತಾಯಿತೋ, ಉಳಿದದ್ದೆಲ್ಲಾ ಸುಲಭ.

ಇದಕ್ಕೂ ಮೊದಲು ಆಕೆಯ ಬಗ್ಗೆ ಯಾವುದೇ ನಿರ್ಧಾರವನ್ನು ತಾಳಬೇಡಿ ಅಥವಾ ಯಾವುದೇ ಹಣೆಪಟ್ಟಿಯನ್ನು ನೀಡಬೇಡಿ.ಏಕೆಂದರೆ ಈ ಮಹಿಳೆಯರು ತಮ್ಮ ಮನೋಭಾವಕ್ಕೆ ಧಕ್ಕೆಯುಂಟಾದ ಯೋಚನೆಯನ್ನು ಸುಲಭದಲ್ಲಿ ಮರೆಯದೇ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಕೊಂಚ ತಾಳ್ಮೆಯಿಂದ ವರ್ತಿಸಿದರೆ ಈ ಸ್ಥಿತಿಯಿಂದ ಖಂಡಿತಾ ಹೊರಬರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಾಲಾಗಿರುವ ಅಮೂಲ್ಯ ಮಾಹಿತಿಗಳು ನಿಮ್ಮ ನೆರವಿಗೆ ಬರಲಿವೆ.

ಆಕೆಯ ಬಗ್ಗೆ ಯಾವುದೇ ಅಭಿಪ್ರಾಯ ಪ್ರಕಟಿಸಬೇಡಿ

ಆಕೆಯ ಬಗ್ಗೆ ಯಾವುದೇ ಅಭಿಪ್ರಾಯ ಪ್ರಕಟಿಸಬೇಡಿ

ಒಂದು ವೇಳೆ ಈ ಪ್ರಕ್ರಿಯೆಯಿಂದ ಆಕೆಯ ವರ್ತನೆ ಬದಲಾಗಿದ್ದು ಇದಕ್ಕೆ ನೀವೇನಾದರೂ ತೀರ್ಮಾನ ನೀಡಲು ಹೋದಿರೋ. ಪರಿಸ್ಥಿತಿ ಗಂಭೀರತೆಯಿಂದ ವಿಕೋಪಕ್ಕೆ ತಿರುಗುತ್ತದೆ. ಬದಲಿಗೆ ಸಾಧ್ಯವಾದಷ್ಟು ಮೌನವಹಿಸಿ ಆಕೆಯ ಮಾತುಗಳನ್ನು ಕೇಳುತ್ತಾ ಹೋಗಿ, ಆಕೆಯ ಮನ ಯಾವ ವಿಷಯದಿಂದ ನೊಂದಿದೆ ಎಂಬುದನ್ನು ಗಮನಕ್ಕೆ ತಂದುಕೊಳ್ಳಿ.ಮುಂದೆ ಓದಿ

ಆಕೆಯ ಬಗ್ಗೆ ಯಾವುದೇ ಅಭಿಪ್ರಾಯ ಪ್ರಕಟಿಸಬೇಡಿ

ಆಕೆಯ ಬಗ್ಗೆ ಯಾವುದೇ ಅಭಿಪ್ರಾಯ ಪ್ರಕಟಿಸಬೇಡಿ

ಬಳಿಕವೇ ನಿಧಾನವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿ. ಬದಲಿಗೆ ಅವರ ಬಗ್ಗೆ ಒಂದು ಅಭಿಪ್ರಾಯ ಪ್ರಕಟಿಸುವುದು ಅತ್ಯಂತ ದೊಡ್ಡ ತಪ್ಪು. ನಿಮ್ಮಿಂದ ಯಾವ ಪ್ರತಿಕ್ರಿಯೆ ಇಲ್ಲದಿದ್ದರೂ ಮರುದಿನ ಅವರೇ ತಮ್ಮನ್ನು ತಾವು ಸಂತೈಸಿಕೊಂಡು ನಿಮ್ಮ ಬಳಿ ಮೃದುಭಾವನೆಯಿಂದ ಬರುವ ಸಾಧ್ಯತೆ ಇದೆ.

ಆಕೆಗೆ ಯಾವುದೇ ಹಣೆಪಟ್ಟಿ ನೀಡಬೇಡಿ

ಆಕೆಗೆ ಯಾವುದೇ ಹಣೆಪಟ್ಟಿ ನೀಡಬೇಡಿ

ಒಂದು ವೇಳೆ ನೀವೇ ಸಿಟ್ಟುಗೊಂಡು ಯಾವುದಾದರೂ ಹೆಸರು ಅಥವಾ ಹಣೆಪಟ್ಟಿ ಅಂಟಿಸಿದಿರೋ (ಶೇ 99 ಸಂದರ್ಭದಲ್ಲಿ ಪತಿಯರು ಮಾಡುವ ತಪ್ಪು ಇದೇ) ವೈಮನಸ್ಸು ಪೆಟ್ರೋಲು ಹಾಕಿದಾಗ ಭಗ್ಗನೆ ಏಳುವ ಜ್ವಾಲೆಯಂತೆ ಭುಗಿಲೇಳುತ್ತದೆ. ಇದು ನಿಮ್ಮ ಸಂಬಂಧವನ್ನೇ ಅಲುಗಾಡಿಸಬಹುದು.

ಆಕೆಯ ಭಾವನೆಗಳನ್ನು ಅರ್ಥೈಸಿಕೊಳ್ಳಿ

ಆಕೆಯ ಭಾವನೆಗಳನ್ನು ಅರ್ಥೈಸಿಕೊಳ್ಳಿ

ಪ್ರತಿ ಯುವತಿಯೂ ತನ್ನ ಪತಿ ಅಥವಾ ಪ್ರಿಯತಮ ತನ್ನನ್ನು ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತಾಳೆ. ಇದಕ್ಕೆ ನೀವು ಸ್ಪಂದಿಸಿದಷ್ಟೂ ನಿಮ್ಮ ಸಂಬಂಧ ಗಾಢಗೊಳ್ಳುತ್ತಾ ಹೋಗುತ್ತದೆ. ನಿಮ್ಮ ಪ್ರಿಯತಮೆಗೆ ಯಾವ ವಿಷಯ ಇಷ್ಟವೋ ಅದನ್ನೇ ಮಾತನಾಡಿ. ಆಕೆಗೆ ಯಾವ ವಿಷಯ ಇಷ್ಟವಿಲ್ಲವೋ ಅದರ ಬಗ್ಗೆ ಮಾತನಾಡಲು ಹೋಗಲೇ ಬೇಡಿ. ಈ ಉದಾಹರಣೆಯನ್ನು ಗಮನಿಸಿ: (ನಿಜಘಟನೆ) ಹೋಳಿ ಹಬ್ಬದ ಬಣ್ಣವನ್ನು ಬೇಡವೆಂದರೂ ಯುವತಿಯೋರ್ವರ ಮೇಲೆ ಉತ್ತರ ಭಾರತೀಯ ವಿದ್ಯಾರ್ಥಿಗಳು ಅಲರ್ಜಿಕಾರಕ ಬಣ್ಣವನ್ನು ಎರಚಿದ ಬಳಿಕ ಆಕೆಯ ಚರ್ಮ ಕೆಲವೆಡೆ ಸುಟ್ಟು ಹೋದಂತಾಗಿತ್ತು. ಮುಂದೆ ಓದಿ

ಆಕೆಯ ಭಾವನೆಗಳನ್ನು ಅರ್ಥೈಸಿಕೊಳ್ಳಿ

ಆಕೆಯ ಭಾವನೆಗಳನ್ನು ಅರ್ಥೈಸಿಕೊಳ್ಳಿ

ಆ ಬಳಿಕ ಆಕೆಗೆ ಹೋಳಿ ಹಬ್ಬವೆಂದರೆ ವಿಪರೀತ ಸಿಟ್ಟು. ಇದರ ಬಗ್ಗೆ ಅರಿವಿರದ ಆಕೆಯ ಪ್ರಿಯತಮ ಬೇಡ ಬೇಡ ಎಂದರೂ ಆಕೆಯ ಮೇಲೆ ಬಲವಂತವಾಗಿ ಬಣ್ಣ ಎರಚಿದುದರ ಪರಿಣಾಮವಾಗಿ ವಿಪರೀತವಾಗಿ ನೊಂದ ಆಕೆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವಿಷಯವನ್ನು ಬಳಿಕ ಅರ್ಥಮಾಡಿಕೊಂಡ ಆಕೆಯ ಪತಿ ಜೀವನದಲ್ಲಿ ಇನ್ನೆಂದೂ ಹೋಳಿಯ ಸುದ್ದಿ ಎತ್ತಲಾರೆ ಎಂದು ಪ್ರಮಾಣ ಮಾಡಿದ ಬಳಿಕ ಈಗ ಇಬ್ಬರೂ ಸುಖಜೀವನ ನಡೆಸುತ್ತಿದ್ದಾರೆ.

ಆಕೆಯನ್ನು ಅಪ್ಯಾಯಮಾನವಾಗಿ ತಬ್ಬಿಕೊಳ್ಳಿ

ಆಕೆಯನ್ನು ಅಪ್ಯಾಯಮಾನವಾಗಿ ತಬ್ಬಿಕೊಳ್ಳಿ

ಯಾವುದೋ ಒಂದು ವಿಷಯ ಆಕೆಯನ್ನು ಘಾಸಿಗೊಳಿಸಿದರೆ ಆಕೆ ನಿಧಾನವಾಗಿ ಅಳುವಿನ ಮೊರೆ ಹೋಗುತ್ತಾಳೆ. ಈ ಸಮಯದಲ್ಲಿ ಆಪ್ತ, ಅಪ್ಯಾಯಮಾನವಾದ ಸಾಮೀಪ್ಯ ಅತಿ ಅಗತ್ಯವಾಗಿದೆ.

ಆಕೆಯನ್ನು ಅಪ್ಯಾಯಮಾನವಾಗಿ ತಬ್ಬಿಕೊಳ್ಳಿ

ಆಕೆಯನ್ನು ಅಪ್ಯಾಯಮಾನವಾಗಿ ತಬ್ಬಿಕೊಳ್ಳಿ

ಆಕೆಯನ್ನು ನಿಮ್ಮ ತೆಕ್ಕೆಯೊಳಗೆ ಅಪ್ಯಾಯಮಾನವಾಗಿ ಅಪ್ಪಿಕೊಳ್ಳುವ ಮೂಲಕ, ಆಕೆಯ ದುಃಖದಲ್ಲಿ ನೀವೂ ಸಮಭಾಗಿ ಎಂದು ಪ್ರಕಟಿಸುವ ಮೂಲಕ ಆಕೆಯನ್ನು ಸಂತೈಸಲು ಸಾಧ್ಯ. ಆಕೆಯ ಅಳುವನ್ನು ನಿಲ್ಲಿಸಲು ಯತ್ನಿಸಬೇಡಿ. ಮನದ ಬೇಗುದಿಯೆಲ್ಲಾ ಕಣ್ಣೀರಿನಲ್ಲಿ ಕರಗಿ ಹೋಗಲಿ.

English summary

How To Deal With A Hypersensitive Girlfriend

Every man must know how to deal with a highly sensitive person. Some women are generally on the sensitive side. Blame it on hormones or moods, some women tend to hyper react to certain situations.As a man you just need to know how to cool her down. If you can't go through that emotional exercise then you are not meant to be with expressive women. Never try to judge her or label her.
X
Desktop Bottom Promotion