For Quick Alerts
ALLOW NOTIFICATIONS  
For Daily Alerts

ಪ್ರೇಯಸಿ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾಳೆಯೇ?

|

ಸಿಟ್ಟಿನ ವ್ಯಕ್ತಿಗಳು ಸಹೃದಯದವರಾಗಿರುತ್ತಾರೆ ಎಂಬ ನಾಣ್ಣುಡಿಯೊಂದಿದೆ. ಏಕೆಂದರೆ ಇವರು ತಮ್ಮ ಭಾವನೆಗಳನ್ನು ನೇರವಾಗಿ ಯಾವುದೇ ಅಳುಕಿಲ್ಲದೇ ವ್ಯಕ್ತಪಡಿಸುವವರಾಗಿರುತ್ತಾರೆ ಹಾಗೂ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ಎದುರಿನವರ ತಪ್ಪು ಇವರಲ್ಲಿ ಸಿಟ್ಟು ಬರಿಸಿ ತಕ್ಷಣ ಬೈಗುಳದಲ್ಲಿ ಪರ್ಯವಸಾನವಾಗಿದ್ದರೂ ಮರುಕ್ಷಣ ಸಿಟ್ಟಿಗೆ ಕಾರಣವಾಗಿದ್ದ ಆ ವಿಷಯವನ್ನು ಅವರು ಮತ್ತೆ ಪ್ರಸ್ತಾಪಿಸುವುದಿಲ್ಲ.

ಬಳಿಕ ಅವರು ಈ ಸಮಸ್ಯೆಯನ್ನು ಹೇಗೆ ಬಿಡಿಸುವುದೆಂಬ ನಿಟ್ಟಿನಲ್ಲಿ ಕಾರ್ಯನಿರತರಾಗಿ ಹೆಚ್ಚಿನ ಪಕ್ಷ ಸಫಲರೂ ಆಗುತ್ತಾರೆ. ಆ ಕ್ಷಣದಲ್ಲಿ ಈ ವ್ಯಕ್ತಿಗಳನ್ನು ದೂರ ಮಾಡುವಂತಾದರೂ ನಿಜವಾಗಿ ಮನಸ್ಸಿನಲ್ಲಿ ಸ್ವಚ್ಛರಾಗಿರುತ್ತಾರೆ. ಇವರಲ್ಲಿ ಸೇಡಿನ ಮನೋಭಾವವೇ ಮೂಡದ ಕಾರಣ ಇವರ ಸ್ನೇಹ ಜೀವಕ್ಕೆ ಜೀವ ಕೊಡುವಂತಹದ್ದಿರುತ್ತದೆ. ಅಯ್ಯಯ್ಯೋ ಗರ್ಲ್ ಫ್ರೆಂಡ್ ಸಹವಾಸ ಬೇಡಪ್ಪಾ ಬೇಡ..!

ವ್ಯತಿರಿಕ್ತವಾಗಿ ಸಿಟ್ಟು ಮಾಡಿಕೊಳ್ಳದೇ ಇರುವವರನ್ನು ಅರ್ಥೈಸಿಕೊಳ್ಳುವುದು ಕಷ್ಟ. ಏಕೆಂದರೆ ಸಿಟ್ಟನ್ನು ಇವರು ಆ ಕ್ಷಣದಲ್ಲಿ ಹೊರಹಾಕದೇ ಇದ್ದರೂ ಮನಸ್ಸಿನಲ್ಲಿಯೇ ಇಟ್ಟುಕೊಂಡು ಸೂಕ್ತ ಸಮಯದ ಸೇಡಿಗಾಗಿ ಕಾಯುತ್ತಿರುತ್ತಾರೆ. ಇವರ ಮನಸ್ಸಿನೊಳಗೆ ಈ ಸಿಟ್ಟು ನಿಧಾನವಾಗಿ ದ್ವೇಶವಾಗಿ ಬೆಳೆಯುತ್ತಾ ಸೇಡಿನ ರೂಪ ತಳೆದು ಎಂದಾದರೊಮ್ಮೆ ಜ್ವಾಲಾಮುಖಿಯಾಗಿ ಹೊರಬರುತ್ತದೆ. ನಿಮ್ಮ ಪ್ರೇಯಸಿ ಜಗಳಗಂಟಿ ಎಂದು ಸ್ನೇಹಿತರ ವಲಯದಲ್ಲಿ ಖ್ಯಾತರಾಗಿದ್ದಾರೆಯೇ? ಚಿಕ್ಕಪುಟ್ಟ ವಿಷಯಕ್ಕೂ ಕಾಲು ಕೆರೆದು ಜಗಳಕ್ಕೆ ಬರುತ್ತಾರೆಯೇ? ತಾರಕ ಸ್ವರದಲ್ಲಿ ಮಾತನಾಡುವುದು, ಕಿರಿಚುವುದು ಮೊದಲಾದ ಪ್ರತಿಕ್ರಿಯೆಗಳಿಂದ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆಯೇ? ಕೇಳಿ ಇಲ್ಲಿ, ಗರ್ಲ್‌ ಫ್ರೆಂಡ್‌ನ ಎಲ್ಲಾ ಮಾತು ನಂಬಬೇಡಿ!

ಒಂದು ವೇಳೆ ಹೌದು ಎಂದಾದರೆ ವಾಸ್ತವವಾಗಿ ಅವರು ಮೇಲೆ ಮೊದಲಾಗಿ ತಿಳಿಸಿರುವ ವ್ಯಕ್ತಿಗಳಲ್ಲೊಬ್ಬರಾಗಿರಬಹುದು. ಆದ್ದರಿಂದ ಸಿಟ್ಟಿನ ಆ ಕ್ಷಣವನ್ನು ನೀವು, ಅವರ ಜೀವನಸಂಗಾತಿಯಾಗುವವರು ಹೇಗೆ ಸ್ವೀಕರಿಸುತ್ತೀರಿ ಮತ್ತು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ ನಿಮ್ಮು ಮುಂದಿನ ಸಂಬಂಧ ನೆಲೆಗೊಳ್ಳಲಿದೆ. ಬನ್ನಿ ಇಂತಹ ಸಮಸ್ಯೆಯಿಂದ ಹೊರಬರಲು ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ, ಮುಂದೆ ಓದಿ

ಸರ್ವಥಾ ಮೌನಿಯಾಗಿರಬೇಡಿ

ಸರ್ವಥಾ ಮೌನಿಯಾಗಿರಬೇಡಿ

ಒಂದು ವೇಳೆ ನಿಮ್ಮ ಸಂಗಾತಿ (ಪತಿ ಅಥವಾ ಪತ್ನಿ) ಯಾವುದೋ ವಿಷಯ ತೆಗೆದು ಕೂಡಾಗುತ್ತಿದ್ದರೆ ಸರ್ವಥಾ ಮೌನಕ್ಕೆ ಶರಣಾಗಬೇಡಿ. ಮನಃಶಾಸ್ತ್ರಜ್ಞರ ಪ್ರಕಾರ ನಿಮ್ಮ ಮೌನ ನಿಮ್ಮ ಸಂಗಾತಿಯ ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ ನಿಮ್ಮ ಸಂಗಾತಿ ದನಿ ಏರಿಸಿದಾಗ ನೀವೂ ದನಿ ಏರಿಸಬೇಡಿ ಅಲ್ಲದೇ ಮೌನಕ್ಕೆ ಶರಣಾಗಬೇಡಿ. ತಾಳ್ಮೆ ಕಳೆದುಕೊಳ್ಳದೇ ದಿಟ್ಟವಾಗಿ ನೇರಮಾತುಗಳಿಂದ, ನಯವಾಗಿ ಸಂತೈಸಿ. ಕೆಲವೇ ನಿಮಿಷಗಳಲ್ಲಿ ಅವರ ಕೋಪ ತಣಿದು ನಿಮ್ಮ ತೆಕ್ಕೆಗೆ ಬರುತ್ತಾರೆ.

ನಿಮ್ಮ ಪದಗಳಲ್ಲಿ ದೃಢತೆ ಇರಲಿ ಆದರೆ ರೌದ್ರತೆ ಬೇಡ

ನಿಮ್ಮ ಪದಗಳಲ್ಲಿ ದೃಢತೆ ಇರಲಿ ಆದರೆ ರೌದ್ರತೆ ಬೇಡ

ಈ ಸಮಯದಲ್ಲಿ ನೀವು ಪದಗಳನ್ನು ಅತಿ ಸೂಕ್ಷ್ಮವಾಗಿ ಬಳಸಬೇಕಾಗುತ್ತದೆ. ಏಕೆಂದರೆ ಹೊರಗಿನ ಸಮಾಜದಲ್ಲಿ ಬಳಸುವ ಕೆಟ್ಟ ಪದಗಳೇ ಸಿಟ್ಟಿನ ಸಮಯದಲ್ಲಿ ನೆನಪಿಗೆ ಬರುತ್ತವೆ. ನೀವು ಮಾತ್ರ ತಾಳ್ಮೆ ಕಳೆದುಕೊಳ್ಳದೇ ಸ್ಪಷ್ಟವಾದ ಮತ್ತು ದೃಢತೆಯಿಂದ ಮಾತನಾಡಿ. ಆದರೆ ಎಂದಿಗೂ ಕರ್ಕಶ ಅಥವಾ ಕಠಿಣ ಪದಗಳನ್ನು ಬಳಸಬೇಡಿ. ನೀವೂ ರೌದ್ರಾವತಾರ ತಾಳುವುದು ಸರ್ವಥಾ ಸಲ್ಲದು.

ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ

ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ

ಈ ಸಮಯದಲ್ಲಿ ನಿಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ಪ್ರಕಟಿಸುವುದು ಅಗತ್ಯ. ಆಕೆಯ ಈ ಪ್ರತಿಯ ವ್ಯವಹಾರದಿಂದ ನಿಮಗೆ ಎಷ್ಟು ಬೇಸರವಾಗಿದೆ ಹಾಗೂ ಸಮಾಜ ಅಥವಾ ಕುಟುಂಬ ಸದಸ್ಯರೆದುರು ನೀವು ಯಾವ ರೀತಿಯ ಮುಜುಗರವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿ, ನೇರಪದಗಳಲ್ಲಿ ತಿಳಿಸಿ. ಅಲ್ಲದೇ ಆಕೆಯ ಈ ತಪ್ಪು ನಡುವಳಿಕೆಗಳನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಹಾಗೂ ಆಕೆ ಬದಲಾಗುವುದು ಅಗತ್ಯ ಎಂದು ನೇರಮಾತುಗಳಲ್ಲಿ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಳಿ.

ಸೂಕ್ತವಾದ ಕ್ರಮವನ್ನು ಕೈಗೊಳ್ಳಿ

ಸೂಕ್ತವಾದ ಕ್ರಮವನ್ನು ಕೈಗೊಳ್ಳಿ

ನಿಮ್ಮ ಸತತ ಪ್ರಯತ್ನದ ಬಳಿಕವೂ ಆಕೆ ಬದಲಾಗದೇ ಇದ್ದರೆ ಇದಕ್ಕೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿ. ಒಂದು ವೇಳೆ ನಿಮ್ಮ ಸರಳ, ನೇರ, ಸ್ಪಷ್ಟ ಮಾತುಗಳಿಗೆ ಆಕೆ ಯಾವುದೇ ಬೆಲೆ ನೀಡದೇ ತನ್ನ ಮೊಲಕ್ಕೆ ಮೂರೇ ಕಾಲು ಎಂಬಂತೆ ವರ್ತಿಸುತ್ತಿದ್ದರೆ ಈ ಕ್ರಮದ ಫಲ ನಿಮ್ಮ ಸಂಬಂಧ ಬೇರ್ಪಡಲೂ ಕಾರಣವಾಗಬಹುದು ಎಂದು ಎಚ್ಚರಿಸಿ. ಯಾವುದೇ ಮಹಿಳೆ ತನ್ನ ತಪ್ಪಿನಿಂದ ತನ್ನ ಸಂಬಂಧವನ್ನು ಮುರಿದುಕೊಳ್ಳಲು ಇಚ್ಛಿಸುವುದಿಲ್ಲ.

ಸೂಕ್ತವಾದ ಕ್ರಮವನ್ನು ಕೈಗೊಳ್ಳಿ

ಸೂಕ್ತವಾದ ಕ್ರಮವನ್ನು ಕೈಗೊಳ್ಳಿ

ಹೆಚ್ಚಿನ ಸಂದರ್ಭಗಳಲ್ಲಿ ಹೆತ್ತವರು ಅತಿ ಹೆಚ್ಚಾಗಿ ಮುದ್ದು ಮಾಡಿದುದರ ಫಲವನ್ನು ಈ ಸಿಟ್ಟಿನಲ್ಲಿ ಕಾಣಬಹುದು. ಅಪ್ಪ ಅಮ್ಮಂದಿರ ಮುದ್ದನ್ನು ಪತಿಯಿಂದ ಪಡೆಯಲು ಸಾಧ್ಯವಿಲ್ಲದಿರುವ ಸಂದರ್ಭಗಳಲ್ಲಿ ಸಿಟ್ಟಾಗಿ ಮಾರ್ಪಟ್ಟಿರುವುದು ಖಚಿತವಾಗಿದೆ. ಇದು ಯಾವಾಗ ಮನವರಿಕೆಯಾಯಿತೋ ಆಗ ತಮ್ಮನ್ನು ಆ ಮುದ್ದಿನಿಂದ ಹೊರತಂದು ವಾಸ್ತವಕ್ಕೆ ಒಗ್ಗಿಕೊಳ್ಳುವುದು ಮತ್ತು ತಮ್ಮನ್ನು ಬದಲಿಸಿಕೊಳ್ಳುವುದು ಅತ್ಯಂತ ಕ್ಷೇಮವಾದ ಕ್ರಮವಾಗಿದೆ.

English summary

How To Deal With An Abusive Girlfriend

Are you with a reactive girlfriend? Well, it would surely be uncomfortable for anyone. Some people can get really abusive. They may suddenly scream or yell at others to throw away their frustration. When such people get into relationships, they tend to yell at their partners. The future of the relationship depends a lot on how the partner takes such behaviour. . So, how to handle an abusive girlfriend? Read on..
X
Desktop Bottom Promotion