For Quick Alerts
ALLOW NOTIFICATIONS  
For Daily Alerts

ಕಣ್ಣು-ಕಣ್ಣು ಕಲೆತಾಗ ಮನದಲ್ಲಿ ಪ್ರೇಮಾಂಕುರ!

|

ಪ್ರಥಮ ಭೇಟಿಯಲ್ಲಿ ಅಂಕುರವಾದ ಪ್ರೇಮಕ್ಕೆ ಮೆದುಳಿನಲ್ಲಿ ಸ್ರವಿಸುವ ಕೆಲವು ರಾಸಾಯನಿಕಗಳು ಕಾರಣ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಓರ್ವ ವ್ಯಕ್ತಿಯನ್ನು ನೋಡಿದಾಕ್ಷಣ ದೇಹದಲ್ಲಾಗುವ ವಿವಿಧ ಬದಲಾವಣೆಗಳಿಗೆ, ಉದಾಹರಣೆಗೆ ಕೆನ್ನೆ ಕೆಂಪಗಾಗುವುದು, ದೇಹ ಪ್ರತಿಕ್ರಿಯಿಸಲು ಮೆದುಳಿನಿಂದ ಸೂಚನೆ ಬರದೆ ಇರಲು ಅಸಾಧ್ಯ. ದಂಪತಿಗಳ ಅನ್ಯೋನ್ಯತೆಗೂ ಈ ರಾಸಾಯನಿಕವೇ ಕಾರಣ ಎನ್ನುತ್ತಾರೆ.

ಓರ್ವ ವ್ಯಕ್ತಿಯ ರೂಪ, ಲಾವಣ್ಯ ಅಥವಾ ಇನ್ನು ಯಾವುದೋ ಗುಣ ಇನ್ನೊಬ್ಬರನ್ನು ಅತೀವವಾಗಿ ಆಕರ್ಷಿಸಬಹುದು. ಇದೇ ಪ್ರೇಮಾಂಕುರಕ್ಕೂ ಕಾರಣವಾಗಬಹುದು. ನೀವು ಪ್ರೇಮಿಸುವ ವ್ಯಕ್ತಿ ನಿಮ್ಮ ಮನದಲ್ಲಿ ಸದಾ ಇದ್ದಾಗ ಇರುವ ಭಾವಕ್ಕಿಂತಲೂ, ನಿಮ್ಮ ಅಕ್ಕಪಕ್ಕದಲ್ಲಿಯೇ ಇದ್ದಾಗ ಇರುವ ಭಾವ ಬೇರೆಯೇ ಆಗಿರುತ್ತದೆ.

ಆ ವ್ಯಕ್ತಿಯ ಆಕರ್ಷಣೆ ನಿಮ್ಮನ್ನು ಹೇಗೆ ಸೆಳೆಯುತ್ತದೆಯೋ, ಅಂತೆಯೇ ಆ ವ್ಯಕ್ತಿಗೂ ನಿಮ್ಮ ಉಪಸ್ಥಿತಿಯ ಆಕರ್ಷಣೆ ಸೆಳೆದರೆ ಇದೊಂದು ವಿಶಿಷ್ಟ ಬಂಧವಾಗಿರುತ್ತದೆ. ಆ ವ್ಯಕ್ತಿಯೊಡನೆ ಮಾತನಾಡಬೇಕು, ಎಸ್ಸೆಮ್ಮೆಸ್ ಮೂಲಕ ಸಂವಾದ ನಡೆಸಬೇಕು ಎಂದು ಮನ ಹಾತೊರೆಯುತ್ತದೆ. ಒಂದು ವೇಳೆ ನಿಮ್ಮಲ್ಲಿ ಯಾರಾದರೂ ನೀವು ಆರಾಧಿಸುವ ಅಥವಾ ಪ್ರೇಮಿಸುವ ವ್ಯಕ್ತಿಯಲ್ಲಿ ಏನನ್ನು ನೋಡಿದಿರಿ ಎಂದು ಕೇಳಿದರೆ ಕೆಲಕ್ಷಣ ತಬ್ಬಿಬ್ಬಾಗಬಹುದು. ಏಕೆಂದರೆ ನಿಮ್ಮ ಮನದಲ್ಲಿ ಆ ವ್ಯಕ್ತಿಯ ಬಗ್ಗೆ ಮೂಡಿರುವ ಆಕರ್ಷಣೆ ಮತ್ತು ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಇದಕ್ಕೆ ಏನು ಎಂಬ ಕಾರಣವನ್ನು ಒಂದು ವಾಕ್ಯದಲ್ಲಿ ನೀಡಲೂ ಸಾಧ್ಯವಿಲ್ಲ. ಆದರೆ ಆ ವ್ಯಕ್ತಿಯ ಬಗ್ಗೆ ಪ್ರಸ್ತಾಪವಾದಾಗಲೆಲ್ಲಾ ನಿಮ್ಮ ಮನದಲ್ಲಿ ರಾಸಾಯನಿಕ ಸ್ರವಿಸಿ ಮನ ಹಾರಾಡುವುದು ಮಾತ್ರ ಸುಳ್ಳಲ್ಲ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ನೀಡಲಾಗಿದೆ..

How Chemistry Affects Love

ಚಿಕ್ಕಂದಿನಲ್ಲಿ ನೀವು ಗಮನಿಸಿದ ತಂದೆ ತಾಯಿಯರ ಪ್ರೇಮ
ಬಹುತೇಕ ಎಲ್ಲರಿಗೂ ತಮ್ಮ ಬಾಲ್ಯದ ದಿನಗಳು ಅಚ್ಚಳಿಯದಂತೆ ನೆನಪಿನಲ್ಲಿ ಉಳಿದಿರುತ್ತವೆ. ಸವಿಸವಿ ನೆನಪೂ ಸಾವಿರ ನೆನಪು, ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೆಂಟು ನೆನಪು.... ಗೀತೆಯ ಸಾಲುಗಳು ಮುಂದುವರೆಯುತ್ತಿದ್ದಂತೆಯೇ ನಮ್ಮ ಬಾಲ್ಯದ ನೆನಪುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಇದರಲ್ಲಿ ಪ್ರಮುಖವಾಗಿ ಉಳಿಯುವುದು ತಂದೆ ತಾಯಿಯರ ಪ್ರೇಮ, ಮಕ್ಕಳನ್ನು ಬೆಳೆಸಲು ಅವರು ಪಟ್ಟ ಶ್ರಮ. ಕಷ್ಟದಲ್ಲಿದ್ದರೂ ಒಬ್ಬರನ್ನೊಬ್ಬರಲ್ಲಿದ್ದ ಅನ್ಯೋನ್ಯತೆ, ಪ್ರೀತಿ, ಹಿರಿಯರಲ್ಲಿ ತೋರುವ ಆದರ, ಮಕ್ಕಳಲ್ಲಿ ತೋರುವ ಪ್ರೀತಿ ಮೊದಲಾದವು ಪ್ರೀತಿ ಎಂದರೆ ಹೀಗಿರಬೇಕು ಎಂದು ಒಂದು ಮಾದರಿಯನ್ನು ನಮ್ಮ ಮೆದುಳುಗಳಲ್ಲಿ ಕೊರೆದಿರುತ್ತದೆ.

ತಾರುಣ್ಯದಲ್ಲಿ ಪ್ರಥಮ ನೋಟದಲ್ಲಿ ಒಂದು ವೇಳೆ ಇದೇ ಪ್ರೀತಿ ಸಿಗುವಂತಹ ಸಾಧ್ಯತೆ ಕಂಡುಬಂದರೆ ಆಗ ಮೆದುಳಿನಲ್ಲಿ ರಾಸಾಯನಿಕ ಸ್ರವಿಸುವ ಸಾಧ್ಯತೆ ಹೆಚ್ಚುತ್ತದೆ. ಒಂದು ವೇಳೆ ಚಿಕ್ಕಂದಿನ ದಿನಗಳಲೆಲ್ಲಾ ಬರೇ ತಂದೆ ತಾಯಿಗಳು ಜಗಳ ಮಾಡುತ್ತಿದ್ದುದನ್ನೇ ನೋಡಿ ಬೆಳೆದಿದ್ದರೆ ಮೆದುಳು ಇದಕ್ಕೆ ವಿರುದ್ಧವಾದ ರಾಸಾಯನಿಕವನ್ನು ಸ್ರವಿಸಬಹುದು. ಅಂದರೆ ತನಗೆ ಜಗಳವಾಡುವ ಸಂಗಾತಿ ಬೇಡವೇ ಬೇಡ ಎಂದು ದೃಢಸಂಕಲ್ಪ ಮಾಡಿಕೊಂಡಿದ್ದಿರಬಹುದು. ಆ ಬಳಿಕ ಅಂತಹ ನೋಟ ಕಂಡರೆ ಮಾತ್ರ ಮನಬಿಚ್ಚಿ ಹಾರಲು ಸಾಧ್ಯವಾಗುವುದು.

ಆದರೆ ಪ್ರಥಮ ನೋಟದ ಆಕರ್ಷಣೆ ಮಾತ್ರವೇ ಸಾಲದು ಏಕೆ?
ಪ್ರಥಮ ನೋಟದಲ್ಲಿಯೇ ಅಂಕುರವಾದ ಪ್ರೇಮ ಕೇವಲ ಮೊಳಕೆಯೇ ಹೊರತು ಮರವಲ್ಲ. ಇಡಿಯ ಜೀವಮಾನವನ್ನು ಓರ್ವ ಸಂಗಾತಿಯೊಂದಿಗೆ ಕಳೆಯಬೇಕಾದಾಗ ಕೇವಲ ಆಕರ್ಷಣೆಯನ್ನು ನಂಬಿ ಮುಂದುವರೆಯಲು ಸಾಧ್ಯವಿಲ್ಲ. ಸಂಗಾತಿಯಾಗಲು ಇನ್ನೂ ಹಲವಾರು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಇಬ್ಬರ ಹೆತ್ತವರಿಂದಲೂ ಒಪ್ಪಿಗೆ, ಭವಿಷ್ಯದಲ್ಲಿ ಭದ್ರತೆ ಮೊದಲಾದ ಹತ್ತು ಹಲವು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ.

ಒಂದು ವೇಳೆ ಪ್ರಥಮ ಭೇಟಿಯಲ್ಲಿ ಪ್ರೇಮಾಂಕುರವಾದ ಬಳಿಕ ಈ ಸಂಬಂಧ ಹೆಚ್ಚು ದಿನ ಬಾಳದು ಎಂದೆನಿಸಿದರೆ ಅದರ ಹಿಂದೆ ಹೋಗುವುದು ತರವಲ್ಲ. ಯಾವುದಕ್ಕೂ ಹಿರಿಯರ ಸಲಹೆ ಪಡೆದುಕೊಳ್ಳುವುದು ಅಗತ್ಯ. ಹಿರಿಯರು ತಮ್ಮ ಅನುಭವದಿಂದ ಮತ್ತು ನಿಮ್ಮ ಆಕರ್ಷಣೆಗೂ ಮೀರಿದ ಕೋನದಿಂದ ನಿಮ್ಮ ಸಂಬಂಧವನ್ನು ನೋಡಿ ಈ ಸಂಬಂಧ ಉತ್ತಮವೋ ಅಲ್ಲವೋ ಎಂದು ತಿಳಿದುಕೊಳ್ಳಲು ಸಮರ್ಥರಿರುತ್ತಾರೆ. ಕೇವಲ ಸಿನೇಮಾಗಳಲ್ಲಿ ನೋಡಿದ ಪ್ರೇಮಕಥೆಗಳನ್ನು ನಂಬಿ ಮೋಸ ಹೋಗಬೇಡಿ.

ಪ್ರಥಮ ಆಕರ್ಷಣೆ ಕೆಲವೊಮ್ಮೆ ಮಾತ್ರ ಕೆಲಸ ಮಾಡುತ್ತದೆ
ಎಷ್ಟೋ ಸಲ ಪ್ರಥಮ ಆಕರ್ಷಣೆಗೆ ಆ ವ್ಯಕ್ತಿಯ ಕೆಲವೊಂದು ಗುಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ ಸೌಂದರ್ಯ. ಸೌಂದರ್ಯವನ್ನು ನೋಡಿ ಮೋಹಿತರಾದವರಲ್ಲಿ ವಿವಾಹದ ಬಳಿಕ ಕಣ್ಣೀರಿನಲ್ಲಿ ಕೈ ತೊಳೆದವರೇ ಹೆಚ್ಚು. ಈ ಮಾಹಿತಿಯನ್ನು ವಿಚ್ಛೇದನಗಳನ್ನು ವಿಶ್ಲೇಷಿಸಿದ ಸಂಸ್ಥೆಗಳೇ ನೀಡಿವೆ. ಏಕೆಂದರೆ ಈ ಸೌಂದರ್ಯವನ್ನು ಬಳಸಿ ನಿಮ್ಮ ಸಂಗಾತಿಗೆ ನಿಮ್ಮನ್ನು ಸೆಳೆದಂತೆ ಇತರರನ್ನೂ ಸೆಳೆಯುವುದು ಸುಲಭ ಎಂದು ಅವರಿಗೆ ಮನದಟ್ಟಾಗಿರುತ್ತದೆ.


ತಾವಾಗಿಯೇ ದುಂಬಿಗಳು ಬಂದು ಬೆಂಕಿಗೆ ಬೀಳುವುದಾದರೆ ನಾವೇಕೆ ತಡೆಯೋಣ ಎಂಬ ಮೊಂಡುವಾದವನ್ನು ಅವರು ಮುಂದಿಡುತ್ತಾರೆ. ಪರಿಣಾಮ-ವಿಶ್ವಾಸಘಾತ. ಇದೇ ರೀತಿ ಕುಣಿತ, ಬೈಕ್ ಓಡಿಸುವ ಬಗೆ, ಸಿಗರೇಟಿನ ಹೊಗೆಯನ್ನು ಸುರುಳಿಯಾಕಾರದಲ್ಲಿ ಬಿಡುವುದು ಮೊದಲಾದ ಅಪ್ಪಟ ತಾತ್ಕಾಲಿಕವಾದ ಆಕರ್ಷಣೆಗಳಿಗೆ ಒಳಗಾದವರು ಬಳಿಕ ಆ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ಕಂಡು ದಿಗ್ಭ್ರಾಂತರಾಗಬಹುದು.
English summary

How Chemistry Affects Love

We all talk a lot about love chemistry. We would all love to have a romantic story of love at first sight. You would love to hear people say that there is a good chemistry between you and your partner. So, what is chemistry in love? Well, you sometimes just feel 'connected' to a person for some unknown reason.
X
Desktop Bottom Promotion