For Quick Alerts
ALLOW NOTIFICATIONS  
For Daily Alerts

ಡೇಟಿಂಗ್ ವಿಷಯದಲ್ಲಿ ಹುಡುಗಿಯರಿಗೆ ನಾಚಿಕೆ ಜಾಸ್ತಿಯಂತೆ!

|

ಡೇಟಿಂಗ್ ಅನ್ನೋದು ಭಾರತೀಯ ಸಂಪ್ರದಾಯವಲ್ಲದಿದ್ದರೂ ಇತ್ತೀಚಿನ ದಿನಗಳಲ್ಲಿ ಇದು ಯುವಜನರಲ್ಲಿ ಮಹತ್ವವನ್ನು ಪಡೆಯುತ್ತಿದೆ. ಭಾರತದಂತಹ ಸಂಪ್ರದಾಯಸ್ಥ ರಾಷ್ಟ್ರದಲ್ಲಿ ಮಹಿಳೆಯನ್ನು ಯಾವಾಗಲೂ ಗೌರವದಿಂದ ಕಾಣಲಾಗುತ್ತಿದೆ. ಅದಕ್ಕೆ ಆಕೆಯಲ್ಲಿನ ನಾಚಿಗೆ ಸ್ವಭಾವವೂ ಕಾರಣವಾಗಿರಬಹುದು. ಭಾರತದ ಮಹಿಳೆಯರು ಡೇಟಿಂಗ್ ವಿಷಯದಲ್ಲಿ ಇತರ ರಾಷ್ಟ್ರಗಳ ಮಹಿಳೆಯರಿಗಿಂತ ಹಿಂದಿದ್ದಾರೆ ಎಂದರೆ ತಪ್ಪಾಗಲಾರದು.

ನಮ್ಮಲ್ಲಿ ಡೇಟಿಂಗ್‌ಗೆ ಪ್ರಸ್ತಾಪವನ್ನಿಡುವುದು ಮತ್ತು ಅದನ್ನು ಸ್ವೀಕರಿಸುವುದು ಯೋಗ್ಯತೆಯ ವಿಷಯವಾಗಿದೆ. ಡೇಟಿಂಗ್ ಸರಿಯಾಗಿದ್ದರೆ ಅರ್ಧ ಯುದ್ಧ ಗೆದ್ದಂತೆ ಮತ್ತು ಮುಂದಿನ ವಿಷಯಗಳು ತುಂಬಾ ಸಲೀಸಾಗಿ ಸಾಗುತ್ತದೆ. ಸರಿಯಾದ ಸಮಯದಲ್ಲಿ ಕೆಲವೊಂದು ವಿಷಯಗಳನ್ನು ಸೇರಿಸಿಕೊಂಡರೆ ಮುಂದಿನ ಪ್ರಯಾಣವು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ ಸೂಕ್ತ ವಿಷಯಗಳ ಬಗ್ಗೆ ತಿಳಿದೇ ಇಲ್ಲ ಮತ್ತು ಒತ್ತಡದಿಂದ ಅವರ ಹೊಟ್ಟೆಯಲ್ಲಿ ತಳಮಳ ಉಂಟಾಗಿರುತ್ತದೆ. ಆನ್‌ಲೈನ್ ಡೇಟಿಂಗ್: ಮೊದಲು ಪ್ರೊಫೈಲ್ ಸರಿಪಡಿಸಿ!

Dating Tips For Indian Shy Women

ನೀವು ಯಾವುದೇ ಒತ್ತಡವಿಲ್ಲದೆ ತುಂಬಾ ಶಾಂತರಾಗಿ ಪ್ರಯಾಣವನ್ನು ಆರಂಭಿಸಿ. ಇದು ಪ್ರತಿಯೊಂದು ಸಮಸ್ಯೆಗೂ ಪರಿಹಾರ. ಯಾಕೆಂದರೆ ಒತ್ತಡದ ಮನಸ್ಸಿಗಿಂತ ಶಾಂತವಾಗಿರುವ ಮನಸ್ಸು ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಕೆಲವೊಂದು ಟಿಪ್ಸ್‪ಗಳನ್ನು ನೀವು ಪಾಲಿಸಿಕೊಂಡು ಹೋದರೆ ಅದು ನಿಮಗೆ ಸರಿಯಾಗಿ ಯೋಜನೆ ಹಾಕಿಕೊಳ್ಳಲು ಮತ್ತು ಡೇಟಿಂಗ್ ತುಂಬಾ ಒಳ್ಳೆಯ ರೀತಿಯಲ್ಲಿ ಸಾಗಲು ನೆರವಾಗುತ್ತದೆ.

ಸ್ಥಳ
ನಾಚಿಕೆ ಸ್ವಭಾವದ ಭಾರತೀಯ ಮಹಿಳೆಯರಿಗೆ ಡೇಟಿಂಗ್‌ಗೆ ಇರುವ ಟಿಪ್ಸ್‌ಗಳಲ್ಲಿ ಮೊದಲನೆಯದ್ದು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು. ನಿಮಗೆ ಹಿತಕರ ಮತ್ತು ಸಮಸ್ಯೆಯಾಗದಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಕೆಲವೊಂದು ಒತ್ತಡದ ಪರಿಸ್ಥಿತಿಗಳಲ್ಲಿ ನಾವಿರುವ ಪ್ರದೇಶವು ಒತ್ತಡವನ್ನು ಕಡಿಮೆ ಮಾಡಿ ಶಾಂತವಾಗಿರುವಲ್ಲಿ ಪ್ರಮುಖಪಾತ್ರವನ್ನು ನಿರ್ವಹಿಸುತ್ತದೆ. ಇದರಂತೆ ನೀವು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇಂತಹ ಮಹಿಳೆಯರ ಜೊತೆ ಡೇಟಿಂಗ್ ಮಾಡದಿರುವುದೇ ಬೆಸ್ಟ್ ಕಣ್ರೀ!

ಮಾತುಕತೆ

ಭಾರತೀಯ ಮಹಿಳೆಯರಿಗಾಗಿ ಇರುವಂತಹ 8 ಡೇಟಿಂಗ್ ಟಿಪ್ಸ್ ಗಳಲ್ಲಿ ಮಾತುಕತೆಯು ತುಂಬಾ ಮಹತ್ವದ್ದಾಗಿದೆ. ಯಾವ ವಿಷಯದಿಂದ ಮಾತುಕತೆ ಆರಂಭಿಸಬೇಕೆಂಬ ಬಗ್ಗೆ ನೀವು ಮೊದಲು ನಿರ್ಧರಿಸಿಕೊಳ್ಳಿ. ಇದರಿಂದ ನೀವು ಮಾತುಕತೆ ವೇಳೆ ಏನು ವಿಷಯವಿಲ್ಲದೆ ಸುಮ್ಮನೆ ನಿಂತಿರುವುದು ಅಥವಾ ಮಾತನಾಡಲು ವಿಷಯವೇ ಇಲ್ಲದಂತಿರುವುದು ತಪ್ಪುವುದು. ನಿಮ್ಮಲ್ಲಿ ಮಾತನಾಡಲು ಒಳ್ಳೆಯ ವಿಷಯವಿದ್ದರೆ ಆಗ ಹಿಂಜರಿಯಬೇಡಿ, ಅದನ್ನು ಆದಷ್ಟು ಬೇಗ ಆರಂಬಿಸಲು ಪ್ರಯತ್ನಿಸಿ.

ಒತ್ತಡಕ್ಕೆ ಒಳಗಾಗಬೇಡಿ

ಇದು ಕೇವಲ ಡೇಟಿಂಗ್ ಮಾತ್ರ, ನೀವು ಇದರ ಬಗ್ಗೆ ಇನ್ನಿಲ್ಲದಂತೆ ಯೋಚಿಸಿ ಒತ್ತಡಕ್ಕೆ ಒಳಗಾಗುವುದು ಬೇಡ. ಭಾರತದ ನಾಚಿಕೆ ಸ್ವಭಾವದ ಮಹಿಳೆಯರಿಗಾಗಿ ಇರುವಂತಹ 8 ಡೇಟಿಂಗ್ ಟಿಪ್ಸ್ ಗಳಲ್ಲಿ ಒತ್ತಡ ಬಿಟ್ಟು ಶಾಂತವಾಗಿರಲು ಸಲಹೆ ನೀಡಲಾಗಿದೆ. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!

ಆಕೆಯ ಮಾತು ಸರಿಯಾಗಿ ಕೇಳಿಸಿಕೊಳ್ಳಿ
ಆಕೆಯ ಮಾತು ಸರಿಯಾಗಿ ಕೇಳಿಸಿಕೊಂಡರೆ ಮಾತುಕತೆಯನ್ನು ಉತ್ತಮವಾಗಿ ಆರಂಭಿಸಬಹುದು. ಸರಿಯಾಗಿ ಆಲಿಸಿಕೊಂಡು ಅದಕ್ಕೆ ತಕ್ಕಂತೆ ನೀವು ಮಾತುಕತೆಗೆ ಸ್ಪಂದಿಸಿದರೆ ಆಗ ಶಾಶ್ವತವಾದ ಪ್ರಭಾವವನ್ನು ಬೀರಬಹುದು. ಆದರೆ ಮಾತುಕತೆ ಉದ್ದಕ್ಕೂ ನೀವು ಮೌನವಾಗಿದ್ದು ಬಿಟ್ಟರೆ ಆಗ ನಿಮ್ಮ ಬಗ್ಗೆ ಬೇರೆಯೇ ಸಂದೇಶ ಹೋಗಬಹುದು.

ಭಯ
ಭಾರತದ ಮಹಿಳೆಯರಿಗೆ ಇರುವ ಡೇಟಿಂಗ್ ಟಿಪ್ಸ್‌ಗಳು ಸಣ್ಣದೊಂದು ಸಲಹೆಯೊಂದಿಗೆ ಮುಕ್ತಾಯವಾಗುತ್ತದೆ. ನಿಮ್ಮ ಕನಸಿನ ವ್ಯಕ್ತಿಯು ನಿಮಗೆ ಸಿಕ್ಕದ್ದಾನೆಂದು ನಿಮಗನಿಸಿದರೆ ಆಗ ಎಲ್ಲಾ ಭಯವನ್ನು ಬಿಟ್ಟು ಧೈರ್ಯ ಮಾಡಿ ಎಲ್ಲವನ್ನು ಹೇಳಿಬಿಡಿ.

English summary

Dating Tips For Indian Shy Women

Asking or accepting a date, especially in Indian scenario, is a matter of mettle. The battle has already been declared as half won and rest would fall easily into place. A few right ingredients added at the appropriate hour would ease the rest of the journey. But, most women are unaware the right ingredients and hence, feel the constant pressure leading to a nervous crumple in your stomach.
X
Desktop Bottom Promotion