For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರಥಮ ರಾತ್ರಿಯನ್ನು ಮತ್ತಷ್ಟು ಮಧುರಗೊಳಿಸುವುದು ಹೇಗೆ?

By Super
|

ಮದುವೆಯಾದ ಮೇಲೆ ಪ್ರಥಮ ರಾತ್ರಿ ಎಂಬ ಆಲೋಚನೆಯೇ ವಧು-ವರರಿಬ್ಬರ ಮನಸ್ಸಿನಲ್ಲಿ ಒಂದು ಅದ್ಭುತವಾದ ರೋಮಾಂಚನವನ್ನು ಮೂಡಿಸುತ್ತದೆ. ಏಕೆಂದರೆ ಇದು ಜೀವನದಲ್ಲಿ ಒಮ್ಮೆ ಮಾತ್ರ ಬರುವ ಒಂದು ಅದ್ಭುತವಾದ ರಾತ್ರಿಯಾಗಿರುತ್ತದೆ. ಇದಕ್ಕಾಗಿ ಇಬ್ಬರು ತುಂಬಾ ದಿನಗಳಿಂದ (ಕೆಲವೊಮ್ಮೆ ವರ್ಷಗಳಿಂದ) ಕಾದು ಕುಳಿತಿರುತ್ತಾರೆ.

ಈ ಪ್ರಥಮ ರಾತ್ರಿಯ ಕುರಿತು ನಿಮಗೆ ಒಂದು ರಮ್ಯ ಕಲ್ಪನೆಗಳು ಇರುವುದು ಸಹಜ. ಆದರೆ ಇದಕ್ಕೆ ಮಿತಿಗಳು ಮತ್ತು ಅಡೆತಡೆಗಳು ಸಹ ಇರುತ್ತವೆ ಎಂಬುದನ್ನು ಮರೆಯಬಾರದು. ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?

ನಾವು ಈ ಅಂಕಣವನ್ನು ಮೂರು ವಿಭಾಗಗಳಾಗಿ ವಿಭಜಿಸಿದ್ದೇವೆ. ಮೊದಲಿಗೆ ನೀವು ಪ್ರಥಮ ರಾತ್ರಿಗೆ ಹೇಗೆ ಸಿದ್ಧರಾಗಬೇಕು ಎಂದು ಕೆಲವೊಂದು ಸಲಹೆಗಳನ್ನು ಓದುವಿರಿ. ಇದು ನಿಮ್ಮಲ್ಲಿ "ಪ್ರಥಮ ರಾತ್ರಿ" ಕುರಿತು ಇರುವ ಉದ್ವೇಗವನ್ನು ನಿವಾರಿಸುತ್ತದೆ.

ಎರಡನೆಯ ವಿಭಾಗವು ನಿಮ್ಮ ಪ್ರಥಮ ರಾತ್ರಿಯನ್ನು ಹೇಗೆ ಅವಿಸ್ಮರಣೀಯಗೊಳಿಸುವುದು ಎಂಬುದರ ಕುರಿತು ಗಮನ ಹರಿಸುತ್ತದೆ. ಮತ್ತು ಮೂರನೆಯ ವಿಭಾಗವು, ದೈಹಿಕ ಸಾಮೀಪ್ಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ತಿಳಿಸಿಕೊಡುತ್ತದೆ. ಹಾಗಾದರೆ ಬನ್ನಿ ಇಲ್ಲಿ ನಿಮ್ಮ ಪ್ರಥಮ ರಾತ್ರಿಯ ಕುರಿತು ಏನು ತಿಳಿದುಕೊಳ್ಳಬೇಕು ಮತ್ತು ಅದನ್ನು ಹೇಗೆ ಅವಿಸ್ಮರಣೀಯಗೊಳಿಸಬೇಕು ಎಂಬುದರ ಕುರಿತು ಮಾಹಿತಿಗಳಿವೆ. ಮುಂದೆ ಓದಿ.....

ನಿಮ್ಮ ಪ್ರಥಮ ರಾತ್ರಿಗೆ ಸಿದ್ಧರಾಗುವುದು

ನಿಮ್ಮ ಪ್ರಥಮ ರಾತ್ರಿಗೆ ಸಿದ್ಧರಾಗುವುದು

ಪ್ರಥಮ ರಾತ್ರಿ ಈ ರಾತ್ರಿಯ ಕುರಿತಾಗಿ ಮದುವೆಯಾಗುವ ಪ್ರತಿಯೊಬ್ಬರು ಮದುವೆಗೆ ಮೊದಲೆ ಕನಿಷ್ಠ ನೂರು ಬಾರಿಯಾದರು ತಮ್ಮ ಕಲ್ಪನೆಗಳನ್ನು ಹರಿಯಬಿಟ್ಟಿರುತ್ತಾರೆ. ಆದರೂ ಈ ರಾತ್ರಿಯನ್ನು ಪರಿಪೂರ್ಣಗೊಳಿಸಲು ಮತ್ತು ಅತಿ ನಿರೀಕ್ಷಿತ ರಾತ್ರಿಯ ಕುರಿತಾದ ಉದ್ವೇಗವನ್ನು ನಿಭಾಯಿಸಲು ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ.

ಮಾತನಾಡಿ

ಮಾತನಾಡಿ

ಒಂದು ವೇಳೆ ನೀವು ಹಿರಿಯರು ನಿಶ್ಚಯಿಸಿದ ಮದುವೆಯಾಗಿದ್ದಲ್ಲಿ, ಮದುವೆಗೆ ಮೊದಲು ನಿಮ್ಮ ಸ್ನೇಹಿತರು ಮತ್ತು ಇಷ್ಟಾನಿಷ್ಟಗಳ ಬಗ್ಗೆ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಿ. ಅದು ಲವ್ ಮ್ಯಾರೇಜ್ ಆದರು ಸಹ ಮಾತನಾಡಲು ಮರೆಯಬೇಡಿ. ಸಂವಹನವು ನಿಮ್ಮ ಸಂಬಂಧದ ಕೀಲಿ ಕೈ ಎಂಬುದನ್ನು ಮರೆಯಬೇಡಿ. ನಿಮ್ಮ ಸಂಗಾತಿಯ ನಿರೀಕ್ಷೆಗಳ ಕುರಿತಾಗಿ ಸ್ಪಷ್ಟತೆಯನ್ನು ಪಡೆದುಕೊಳ್ಳಿ.

ಮರು ದಿನ ವಿಶ್ರಾಂತಿಯಿರಲಿ

ಮರು ದಿನ ವಿಶ್ರಾಂತಿಯಿರಲಿ

ಯಾವುದೇ ಕಾರಣಕ್ಕು ನಿಮ್ಮ ಮಧುರ ರಾತ್ರಿಯ ಮರು ದಿನ ಅತಿಯಾದ ಕೆಲಸ ಕಾರ್ಯಗಳನ್ನು ಇಟ್ಟುಕೊಳ್ಳಬೇಡಿ. ಅಂದರೆ ಪೂಜೆ, ಪುನಸ್ಕಾರ, ಬೆಳಗ್ಗೆ ಹೊರಡು ರೈಲು, ಪ್ಲೇನ್ ಇತ್ಯಾದಿ ಬೇಡ. ಇನ್ನು ನಿಮ್ಮ ಮಧುಚಂದ್ರದಲ್ಲಿ ಮಧುರ ರಾತ್ರಿಯಿದ್ದಲ್ಲಿ, ಮರುದಿನ ಸಾಹಸ ಚಟುವಟಿಕೆಗಳಂತಹ ಆಯಾಸಕರ ಕಾರ್ಯಗಳನ್ನು ಇಟ್ಟುಕೊಳ್ಳಬೇಡಿ. ಏಕೆಂದರೆ ರಾತ್ರಿ ಕೋಣೆಗೆ ಹೋದ ಕೂಡಲೆ ನಿಮ್ಮ ಆಲೋಚನೆ ಬೆಳಗ್ಗೆ ಬೇಗ ಏಳಬೇಕು ಎಂದು ಚಿಂತಿಸುತ್ತದೆ. ಹಾಗಾಗಿ ಇದು ನಿಮ್ಮ ಮಧುರ ರಾತ್ರಿಗೆ ಭಂಗ ತರುತ್ತವೆ. ಆದಷ್ಟು ಮಾರನೆ ದಿನ ವಿಶ್ರಾಂತಿಯಿರಲಿ, ಇಲ್ಲವೆ ಅಂತಹ ದೇಹಾಲಸ್ಯದ ಕೆಲಸಗಳು ಇಲ್ಲದಿದ್ದರೆ ಉತ್ತಮ.

ಪ್ರಥಮ ರಾತ್ರಿಯನ್ನು ಅವಿಸ್ಮರಣೀಯವಾಗಿರಿಸಿ

ಪ್ರಥಮ ರಾತ್ರಿಯನ್ನು ಅವಿಸ್ಮರಣೀಯವಾಗಿರಿಸಿ

ಕೊನೆಯದಾಗಿ ಆ ಘಳಿಗೆ ಬಂದೆ ಬಿಟ್ಟಿತು. ನೀವು ಮದುವೆಯಾಗಿದ್ದೀರಿ, ಎಲ್ಲಾ ಸಂಪ್ರದಾಯಗಳನ್ನು ಪೂರೈಸಿದ್ದೀರಿ. ಹಾಗಾದರೆ, ಈಗ ನೀವು ನಿಮ್ಮ ಬಾಳಿನ ಮಧುರ ಕ್ಷಣಗಳನ್ನು ನಿಮ್ಮ ಸಂಗಾತಿಯ ಜೊತೆಗೆ ಆನಂದಿಸಲು ಸಿದ್ಧರಾಗಿದ್ದೀರಿ. ಇದಕ್ಕಾಗಿ ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ.

ಒಂದು ಅನಿರೀಕ್ಷಿತ ಉಡುಗೊರೆ

ಒಂದು ಅನಿರೀಕ್ಷಿತ ಉಡುಗೊರೆ

ನಿಮ್ಮ ಪ್ರಥಮ ರಾತ್ರಿಯಂದು ನಿಮ್ಮ ಸಂಗಾತಿಗೆ ಒಂದು ಅನಿರೀಕ್ಷಿತ ಉಡುಗೊರೆಯನ್ನು ನೀಡುವುದು ಒಂದು ಅದ್ಭುತವಾದ ಆಲೋಚನೆಯಾಗಿರುತ್ತದೆ. ಸ್ವಲ್ಪ ರೊಮ್ಯಾಂಟಿಕ್ ಆಗಿರುವ ಉಡುಗೊರೆಯನ್ನು ಆತನಿಗೆ/ಆಕೆಗೆ ನೀಡಿ. ಅದು ನೀವೆ ಸ್ವತಃ ರಚಿಸಿದ ಕವಿತೆ, ಹೂ ಗುಚ್ಛ, ಕಾಮಸೂತ್ರ ಪುಸ್ತಕ, ಅಥವಾ ಒಂದು ರೊಮ್ಯಾಂಟಿಕ್ ಗಿಫ್ಟ್ ಬಾಸ್ಕೆಟ್ ಮುಂತಾದವು ಖಂಡಿತವಾಗಿ ನಿಮ್ಮ ಸಂಗಾತಿಯನ್ನು ರೋಮಾಂಚನಗೊಳಿಸುತ್ತವೆ.

ಸ್ವಲ್ಪ ಹೊತ್ತು ಮಾತನಾಡಿ

ಸ್ವಲ್ಪ ಹೊತ್ತು ಮಾತನಾಡಿ

ಇದು ನಿಮ್ಮ ಪ್ರಥಮ ರಾತ್ರಿ, ನೀವಿಬ್ಬರು ಒಟ್ಟಿಗೆ ಕಳೆಯುತ್ತಿರುವ ಪ್ರಥಮ ರಾತ್ರಿ, ಇದೇ ಸುಸಮಯವೆಂದು ತಕ್ಷಣ ಪರಿಸ್ಥಿತಿಯ ಸದುಪಯೋಗ ಪಡಿಸಿಕೊಳ್ಳಲು ಹೋಗಬೇಡಿ!. ತಾಳ್ಮೆ ಇರಲಿ, ನೀವಿಬ್ಬರು ವರ್ಷಗಳಿಂದ ಪರಿಚಯ ಹೊಂದಿದ್ದರು, ಮೊದಲು ಒಂದು ಭಾವನಾತ್ಮಕ ಭಾಂದವ್ಯವನ್ನು ಬೆಳೆಸಿ. "ನನ್ನನ್ನು ನಿನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು" ಎಂಬ ಮಾತುಗಳು ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಕೃತಙ್ಞತೆಯನ್ನು ಯಾವುದೇ ನಾಟಕೀಯತೆಗಳಿಲ್ಲದೆ ನಿಮ್ಮದೆ ಮಾತಿನಲ್ಲಿ ವ್ಯಕ್ತಪಡಿಸಿ. ಆಗ ನಿಮ್ಮಿಬ್ಬರ ಸಂಬಂಧ ಶುರುವಿನಿಂದಲೆ ಗಟ್ಟಿಗೊಳ್ಳುವುದರಲ್ಲಿ ಸಂಶಯವಿಲ್ಲ.

ನಿಧಾನವೇ ಪ್ರಧಾನ

ನಿಧಾನವೇ ಪ್ರಧಾನ

ನಿಮ್ಮ ಸಂಗಾತಿಗೆ ನಿಧಾನವಾಗಿ ಮುತ್ತು ನೀಡುತ್ತಾ ಮುದ್ದಾಡಲು ಆರಂಭಿಸಿ. ಹೇಗಿದ್ದರು ಅಲ್ಲಿ ಯಾವುದಾದರು ಸಿಹಿ ತಿನಿಸು ಮತ್ತು ಹಣ್ಣುಗಳನ್ನು ಇಟ್ಟಿರುತ್ತಾರೆ. ಬೇಕಿದಲ್ಲಿ ನಿಮ್ಮ ಸಂಗಾತಿಗೆ ಇಷ್ಟವಾಗುವ ಚಾಕೊಲೇಟ್, ಪೇಸ್ಟ್ರಿ ಇತ್ಯಾದಿ ತರಿಸಿಕೊಂಡಿರಿ. ಪರಸ್ಪರ ಇದನ್ನು ತಿನ್ನಿಸಿಕೊಳ್ಳಿ. ಹೀಗೆ ನಿಮ್ಮ ಮಿಲನ ಪೂರ್ವ ಆಟಗಳು ಶುರುವಾಗಲಿ. ಹೇಗಿದ್ದರು ಇದು ಸ್ಮರಣೀಯ ರಾತ್ರಿಯಲ್ಲವೇನು, ಆದಷ್ಟು ನಿಧಾನವಾಗಿ ಮುಂದುವರಿಯಿರಿ, ಈ ರಾತ್ರಿಯನ್ನು ಅಣು ಅಣುವಾಗಿ ಆನಂದಿಸಿ. ನಿಮ್ಮ ಸಂಗಾತಿಗೆ ಹೇಳಿ ಈ ದಿನಕ್ಕಾಗಿ ಎಚ್ಟು ದಿನದಿಂದ ಕಾದಿದ್ದೆ ಎಂದು. ಅದರಲ್ಲೂ ಇಲ್ಲಿ ಮಾತುಗಳಿಗಿಂತ ನಿಮ್ಮ ಸಂಜ್ಞೆ ಮತ್ತು ಕೈಚಳಕಗಳಿಂದ ಇದನ್ನು ವ್ಯಕ್ತಪಡಿಸಿ, ಸಂಪೂರ್ಣವಾಗಿ ನಿಮ್ಮ ಸಂಗಾತಿಯನ್ನು ಮುದಗೊಳಿಸಿ.

ಕನ್ಯತ್ವದ ಸಮಸ್ಯೆಗಳು

ಕನ್ಯತ್ವದ ಸಮಸ್ಯೆಗಳು

ದೈಹಿಕ ಅನುಬಂಧವು ಕನ್ಯತ್ವಕ್ಕೆ ಸ್ವಲ್ಪ ಭಯವನ್ನುಂಟು ಮಾಡುತ್ತದೆ. ಹುಡುಗಿಯರು ಈ ಕ್ರಿಯೆಯಲ್ಲಿ ಉಂಟಾಗುವ ನೋವು, ರಕ್ತಸ್ರಾವ, ಇತ್ಯಾದಿಗಳ ಕುರಿತಾಗಿ ಭಯಭೀತರಾಗಬಾರದು. ಬಹುತೇಕ ಸಂದರ್ಭದಲ್ಲಿ ಈ ಸಮಸ್ಯೆಗಳು ಸ್ವಲ್ಪ ಕಾಡಬಹುದು, ಕೆಲ ನಿಮಿಷಗಳಲ್ಲಿ ಇದು ಸರಿಹೋಗುತ್ತದೆ. ಅದಕ್ಕಾಗಿ ಲೈಂಗಿಕ ಕ್ರಿಯೆಗೆ ಮೊದಲು ಲೂಬ್ರಿಕೇಷನ್ ಬಳಸಿ, ಇದರಿಂದ ಮಿಲನವು ಸುಗಮವಾಗಿ ಆಗುತ್ತದೆ. ನಿಮ್ಮಲ್ಲಿ ಈಗಾಗಲೆ ಮದುವೆಯಾಗಿರುವ ಸ್ನೇಹಿತರು ಅಥವಾ ನಿಮ್ಮ ಗೈನೇಕಾಲಜಿಸ್ಟ್‌ರ ಬಳಿ ಈ ಕುರಿತು ಕೇಳಿ ತಿಳಿದುಕೊಳ್ಳಿ.

ಇನ್ನು ಹುಡುಗರಿಗೆ ನಾವು ಹೇಳುವುದು ಏನೆಂದರೆ, ಒಮ್ಮೆಲೆ ಕ್ಲೈಮ್ಯಾಕ್ಸ್‌ಗೆ ಪ್ರಯತ್ನಿಸುವ ಮೊದಲು ಆದಷ್ಟು ಲೈಂಗಿಕ ಕ್ರಿಯೆ ಪೂರ್ವ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದರಿಂದ ನಿಮ್ಮ ಹುಡುಗಿಗೆ ಅಗತ್ಯವಾದ ತೃಪ್ತಿ ಸಿಗುತ್ತದೆ ಮತ್ತು ಅವರು ಅದನ್ನು ಇಷ್ಟಪಡುತ್ತಾರೆ ಎಂಬುದನ್ನು ಮರೆಯಬೇಡಿ. ಆದಷ್ಟು ಅವರಿಗೆ ನೋವು ಹೆಚ್ಚಿಗೆ ಕಾಡದೆ ಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ. ಹಾಗಾಗಿ ನೀವಿಬ್ಬರು ಸುಖ ಮತ್ತು ಸಂತೋಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.

ಸ್ವಯಂ-ಪ್ರಜ್ಞೆಯನ್ನು ಹೊಂದುವುದು

ಸ್ವಯಂ-ಪ್ರಜ್ಞೆಯನ್ನು ಹೊಂದುವುದು

ನಿಮ್ಮ ದೇಹದಲ್ಲಿರುವ ಸ್ವಲ್ಪ ಬೊಜ್ಜು, ಇತ್ಯಾದಿ ನ್ಯೂನತೆಗಳ ಕುರಿತು ಈಗ ತಲೆ ಕೆಡಿಸಿಕೊಳ್ಳಬೇಡಿ. ಕಟ್ಟಿಕೊಂಡವರಿಗೆ ಕೋಣ ಸಹ ಮುದ್ದು ಎಂಬುದನ್ನು ಮಾತ್ರ ನೆನೆಸಿಕೊಳ್ಳಿ. ಈ ದಿನ ನೀವು ಹೇಗೆ ಇದ್ದರು, ನಿಮ್ಮ ಸಂಗಾತಿಗೆ ನೀವು ರತಿ-ಮನ್ಮಥರೆ ಹಾಗಾಗಿ ನಿಮ್ಮ ದೇಹದ ಬಗ್ಗೆ ಚಿಂತೆ ಬಿಟ್ಟು, ಪೂರ್ಣ ಮನಸ್ಸಿನಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ. ಇದರ ಬಗ್ಗೆ ನೀವು ಗಮನ ಹರಿಸಿದರೆ ಪ್ರಥಮ ರಾತ್ರಿಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಇಷ್ಟಾನಿಷ್ಟಗಳನ್ನು ತಿಳಿಸಿ

ನಿಮ್ಮ ಇಷ್ಟಾನಿಷ್ಟಗಳನ್ನು ತಿಳಿಸಿ

ನಿಮ್ಮ ಸಂಗಾತಿಯೇನು ಮೈಂಡ್ ರೀಡರ್ ಅಲ್ಲ. ಒಂದು ವೇಳೆ ನಿಮಗೆ ಏನಾದರು ನೋವು ಅಥವಾ ಅಸೌಖ್ಯ ಉಂಟಾದಲ್ಲಿ ಮೊದಲು ನಿಮ್ಮ ಸಂಗಾತಿಗೆ ತಿಳಿಸಿ. ಇದರಿಂದ ಅವರು ಮುಂದೆ ಅಂತಹ ಅಸೌಖ್ಯ ನಿಮಗೆ ಕಾಡದಂತೆ ಎಚ್ಚರವಹಿಸುತ್ತಾರೆ. ಇದರ ಜೊತೆಗೆ ಯಾವುದಾದರು ಕ್ರಿಯೆಯು ನಿಮಗೆ ಇಷ್ಟವಾದಲ್ಲಿ ಮುಜುಗರವಿಲ್ಲದೆ ಅದನ್ನು ನಿಮ್ಮ ಸಂಗಾತಿಗೆ ತಿಳಿಸಿ, ನಿಮ್ಮೊಂದಿಗೆ ಅವರು ಪುನಃ ಅದನ್ನು ಆನಂದಿಸುತ್ತಾರೆ.

ಪೇಚನ್ನು ನಿಭಾಯಿಸುವುದು ಹೇಗೆ

ಪೇಚನ್ನು ನಿಭಾಯಿಸುವುದು ಹೇಗೆ

ಹೌದು, ನೀವಿಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಾಗ ಹಲವಾರು ಮುಜುಗರ, ನಾಚಿಕೆ, ಸಂಕೋಚ ಇವೆಲ್ಲ ಸಾಮಾನ್ಯವಾಗಿ ಸಂಭವಿಸುತ್ತದೆ. ಕೊನೆಯದಾಗಿ ಪೇಚಿಗೆ ಸಿಲುಕವ ಸಂಭವ ಸಹ ಬರುತ್ತದೆ. ಅದು ಕ್ರಿಯೆ ಮುಗಿದ ಮೇಲೆ ಕಾಣಿಸಿಕೊಳ್ಳುವ ರಕ್ತ ಮತ್ತು ಒದ್ದೆ ಇತ್ಯಾದಿಗಳು. ಆದರೆ ಇವುಗಳನ್ನು ನಿಭಾಯಿಸುವುದು ಅಂತಹ ಕಷ್ಟವಲ್ಲ, ನಕ್ಕು ಸುಮ್ಮನಾಗಿ ಎಷ್ಟಾದರು ಸ್ವಚ್ಛ ಮಾಡಿಕೊಂಡರೆ ಸರಿಹೋಗುತ್ತದೆ ತಾನೇ.

 ಲೈಂಗಿಕ ಕ್ರಿಯೆ ನಡೆಯದೆ ಇದ್ದರೆ, ನಿರಾಶರಾಗಬೇಡಿ

ಲೈಂಗಿಕ ಕ್ರಿಯೆ ನಡೆಯದೆ ಇದ್ದರೆ, ನಿರಾಶರಾಗಬೇಡಿ

ಬಹುತೇಕ ದಂಪತಿಗಳು ತಮ್ಮ ಪ್ರಥಮ ರಾತ್ರಿಯಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದಿಲ್ಲ. ಇದು ಸಾಮಾನ್ಯ ಸಹ ಹೌದು. ಇದಕ್ಕಾಗಿ ನಿರಾಶರಾಗಬೇಡಿ. ಕಾರಣಾಂತರಗಳಿಂದ ನೀವಂದು ಕೊಂಡಂತೆ ಈದಿನ ನಡೆಯದೆ ಇದ್ದರೆ, ಚಿಂತಿಸಬೇಡಿ, ಮುಂದಿನ ದಿನಗಳಲ್ಲಿ ಎಲ್ಲವೂ ನೀವಂದು ಕೊಂಡಂತೆ ನಡೆಯುತ್ತದೆ.

ಬೇಗ ನಿದ್ದೆ ಮಾಡಲು ಹೋಗಬೇಡಿ

ಬೇಗ ನಿದ್ದೆ ಮಾಡಲು ಹೋಗಬೇಡಿ

ಲೈಂಗಿಕ ಕ್ರಿಯೆ ಮುಗಿದ ಕೂಡಲೆ ನಿದ್ದೆ ಮಾಡಲು ಹೋಗಬೇಡಿ. ಮಲಗುವ ಮೊದಲು ಮತ್ತೊಮ್ಮೆ ನಿಮ್ಮ ಸಂಗಾತಿಯನ್ನು ಕೆಲ ಹೊತ್ತು ತಬ್ಬಿಕೊಳ್ಳಿ, ಮತ್ತೆ ಮುದ್ದಾಡಿ. ಸುಸ್ತಾಗಿ ಮಾತನಾಡಲು ಆಗಲಿಲ್ಲವಾದರು ನಿಮ್ಮ ಸಂಗಾತಿಯ ಕೂದಲ ಜೊತೆಗೆ ಆಟವಾಡಿ. ಅವರನ್ನು ಅಭಿನಂದಿಸಿ, ಅವರು ನಿಮಗೆ ಎಷ್ಟು ವಿಶೇಷ ಎಂಬುದನ್ನು ವ್ಯಕ್ತಪಡಿಸಿ. ಹೀಗೆ ನಿಮ್ಮ ಪ್ರಥಮ ರಾತ್ರಿಯಂದು ನೀವು ಮತ್ತು ನಿಮ್ಮ ಸಂಗಾತಿ ಇಬ್ಬರು ಜೀವನದ ಮತ್ತೊಂದು ಸ್ತರಕ್ಕೆ ನಿಮ್ಮ ಸಂಬಂಧವನ್ನು ತೆಗೆದುಕೊಂಡು ಹೋಗಿ. ನೆನಪಿಡಿ ಪ್ರೀತಿ ಮತ್ತು ಪ್ರಣಯ ಅಂದರೆ ರೊಮ್ಯಾನ್ಸ್ ಮರೆಯಬೇಡಿ. ಇದರ ಮಾಂತ್ರಿಕತೆಯನ್ನು ಕಣ ಕಣವಾಗಿ ಆನಂದಿಸಿ. ಕೊನೆಯದಾಗಿ ನಿಮ್ಮ ವೈವಾಹಿಕ ಜೀವನಕ್ಕೆ ನಾವು ಸಹ ಸಕಲ ಶುಭವನ್ನು ಹಾರೈಸುತ್ತೇವೆ.

English summary

Exciting Ways To Make Your Wedding Night Perfect & Memorable

There is no doubt that the term wedding night invokes excitement in the mind of the would-be groom and the bride. There is no denying the fact that wedding night is one of the most-awaited and magical moments of a newly-wed’s life. So, here is everything you need to know to make your first night memorable.
X
Desktop Bottom Promotion