For Quick Alerts
ALLOW NOTIFICATIONS  
For Daily Alerts

ಮಾತಿಲ್ಲದೆ ಐ ಲವ್ ಯೂ ಹೇಳುವ ವಿಧಾನಗಳು

By Hemanth P
|

ಐ ಲವ್ ಯೂ ಎನ್ನುವ ಮೂರು ಶಬ್ದಗಳನ್ನು ಹೇಳುವುದು ತುಂಬಾ ಕಷ್ಟದ ಕೆಲಸ. ಪ್ರೀತಿ ಮಾಡಿರುವ ಪ್ರತಿಯೊಬ್ಬರಿಗೂ ಇದು ತಿಳಿದಿರುತ್ತದೆ. ಇದನ್ನು ಯಾವಾಗ ಹೇಳಬೇಕು ಅಥವಾ ಮೊದಲು ಆತ/ಆಕೆ ಹೇಳುವ ತನಕ ಕಾಯಬೇಕೇ ಎನ್ನುವಂತಹ ಹಲವಾರು ಪ್ರಶ್ನೆಗಳು ಈ ಸಂದರ್ಭದಲ್ಲಿ ನಮ್ಮನ್ನು ಕಾಡುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಬೇಕಿರುವುದು ಏನೆಂದರೆ ಸುಲಭ ಮೆಚ್ಚುಗೆಯ ಘೋಷಣೆ ಅಥವಾ ಆತನ ಮೇಲಿರುವ ಬದ್ಧತೆಯನ್ನು ಪ್ರಾಮಾಣಿಕವಾಗಿ ಪ್ರತಿಪಾದಿಸುವುದಲ್ಲವೇ?

ನಿಮ್ಮ ಜೀವನದಲ್ಲಿ ಅನುಭವಿಸಿರುವಂತಹ ಏಳು ಬಗೆಯ ಪ್ರೀತಿ!

ಹೂವಿನೊಂದಿಗೆ ಕಾಗದ:

ಹೂವಿನೊಂದಿಗೆ ಕಾಗದ:

ನಿಮ್ಮ ಪ್ರೀತಿ ಹಾಗೂ ಭಾವನೆಗಳನ್ನು ಬಾಯಿ ಮಾತಿನಲ್ಲಿ ಹೇಳಲು ನಿಮಗೆ ಗೊಂದಲವಾಗುತ್ತಿದ್ದರೆ ಆಗ ನೀವು ಒಂದು ಹೂಗುಚ್ಛವನ್ನು ಆತನಿಗೆ ನೀಡಿ ಆಗ ನಿಮಗೆ ಮ್ಯಾಜಿಕ್ ತಿಳಿಯುತ್ತದೆ. ಇದಲ್ಲದೆ ಒಂದು ನಿಗದಿತ ತಿಂಗಳಲ್ಲಿ ಪ್ರತೀದಿನ ಆತನಿಗೊಂದು ಗುಲಾಬಿ ನೀಡಿದ. ನಿಮ್ಮ ಉದ್ದೇಶದ ಬಗ್ಗೆ ಆತ ಊಹಿಸಲು ಆರಂಭಿಸುತ್ತಾನೆ. ತಿಂಗಳ ಅಂತ್ಯದಲ್ಲಿ ಆತ ಹೂವಿನ ನಿರೀಕ್ಷೆಯಲ್ಲಿದ್ದಾಗ ನೀವು ಆತನಿಗೆ ಪ್ರೇಮಪತ್ರ ನೀಡಿ ಮತ್ತು ಆತನ ಮುಖದಲ್ಲಿ ನಿಮ್ಮ ಪ್ರೇಮಪತ್ರ ಯಾವ ರೀತಿಯ ನಗು ಹೊರತರುತ್ತದೆ ಎಂದು ನೋಡಿ.

ಆತನಿಗಾಗಿ ಅಡುಗೆ ಮಾಡಿ:

ಆತನಿಗಾಗಿ ಅಡುಗೆ ಮಾಡಿ:

ನಿಮ್ಮ ಭಾವನೆಗಳನ್ನು ಹುಡುಗನಿಗೆ ಹೇಳಲು ಬಯಸುವ ಯೋಜನೆ ಹಾಕಿಕೊಂಡಿದ್ದರೆ ಆಗ ನೀವು ಅಡುಗೆಯ ಪ್ರತಿಭೆಯನ್ನು ಹೊರಹಾಕಲೇಬೇಕು. ಮನೆಯಲ್ಲೇ ವಿವಿಧ ರೀತಿಯ ಆಹಾರಗಳನ್ನು ತಯಾರಿಸಿ ಆತನ ಹೃದಯದಲ್ಲಿ ಸ್ಥಾನ ಪಡೆಯಲು ಒಳ್ಳೆಯ ಮಾರ್ಗ. ರಸಭರಿತವಾದ ಆಹಾರಗಳನ್ನು ಸಿದ್ಧಪಡಿಸಿ ರಾತ್ರಿ ಆತನೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ. ನಿಮ್ಮ ಪ್ರೀತಿಯ ನಿವೇದನೆ ಬರೆದಿರುವ ಫ್ರಾಸ್ಟೆಡ್ ಕೇಕ್ ನ್ನು ಸಿಹಿಯಾಗಿ ನೀಡಿ ಆಹಾರದೊಂದಿಗೆ ಸ್ವಲ್ಪ ರೋಮ್ಯಾನ್ಸ್ ಸೇರಿಸಿ. ಈ ಕ್ಷಣವನ್ನು ಜೀವನಪೂರ್ತಿ ಮರೆಯಲಾರದ ನೆನಪಾಗಿ ಉಳಿದುಕೊಳ್ಳುವುದು ಖಚಿತ.

ಪ್ರೇಮ ಪತ್ರ ಬರೆಯಿರಿ:

ಪ್ರೇಮ ಪತ್ರ ಬರೆಯಿರಿ:

ಪ್ರೇಮ ಪತ್ರಗಳನ್ನು ಬರೆಯುವುದು ತುಂಬಾ ಹಳೆಯ ವಿಧಾನ. ಆದರೆ ನೀವು ಇಷ್ಟಪಟ್ಟವರಿಗೆ ಪ್ರೀತಿಯನ್ನು ಹೇಳುವುದಕ್ಕೆ ಇದಕ್ಕಿಂತ ಒಳ್ಳೆಯ ವಿಧಾನವಿಲ್ಲ. ಕಂಪುಬೀರುವ ಪ್ರೇಮಪತ್ರವು ನೀವು ಪ್ರೀತಿ ವ್ಯಕ್ತಪಡಿಸಲು ಅಂತಿಮ ಸಾಧನ. ಒಲವಿನ ಶಬ್ದಗಳಿರುವ ಪತ್ರವು ನಿಮ್ಮ ಪ್ರೀತಿಯ ಬಗ್ಗೆ ಆತನಿಗೆ ಒಳ್ಳೆಯ ಭಾವನೆ ಮೂಡಿಸುವ ಅತ್ಯುತ್ತಮ ವಿಧಾನವೆನ್ನುವುದರಲ್ಲಿ ಸಂಶಯವೇ ಇಲ್ಲ.

ಪ್ರೀತಿಯ ಸುಳಿವು ನೀಡಿ:

ಪ್ರೀತಿಯ ಸುಳಿವು ನೀಡಿ:

ಪ್ರೀತಿಯ ಮೂರು ಪದಗಳನ್ನು ಬಳಸದೆ ನೀವು ಆತನನ್ನು ಪ್ರೀತಿಸುತ್ತಿದ್ದೀರಿ ಎಂದು ಹೇಳಲು ಇದು ಶ್ರಮವಿಲ್ಲದ, ಕ್ರಿಯಾತ್ಮಕ ವಿಧಾನ. ಆತನ ಮನೆಯಲ್ಲಿ ಯಾವುದಾದರೂ ಒಂದು ಸುಳಿವನ್ನಿಡಿ ಮತ್ತು ಪ್ರತಿಯೊಂದು ಸುಳಿವು ಕೂಡ ಒಂದಕ್ಕೊಂದು ಸಂಬಂಧ ಹೊಂದಿರಲಿ. ಅಂತಿಮ ಸುಳಿವು ನಿಮ್ಮ ಪರ್ಸ್ ಅಥವಾ ಪಾಕೆಟ್ ನಲ್ಲಿರುವ ಪೇಪರ್ ಆಗಿರಲಿ. ಇದು ಆತನಿಗೆ ತುಂಬಾ ಅಚ್ಚರಿಯನ್ನುಂಟುಮಾಡಲಿದೆ.

ಆಭರಣಗಳಿಂದ ವ್ಯಕ್ತಪಡಿಸಿ:

ಆಭರಣಗಳಿಂದ ವ್ಯಕ್ತಪಡಿಸಿ:

ನಿಮ್ಮ ಪ್ರೀತಿಯನ್ನು ಆತನಿಗೆ ವ್ಯಕ್ತಪಡಿಸಲು ಇರುವ ಮತ್ತೊಂದು ವಿಧಾನವೆಂದರೆ ಅದು `ಲವ್' ಎಂದು ಬರೆದಿರುವ ಯಾವುದಾದರೂ ಜ್ಯುವೆಲ್ಲರಿ ನೀಡಿ. ನೀವು ಬ್ರಾಸಲೆಟ್ಸ್, ಉಂಗುರ ಮತ್ತು ಪೆಂಡೆಂಟ್ ನೀಡಬಹುದು. ನಿಮ್ಮ ಪ್ರೀತಿ ಮತ್ತು ಭಾವನೆಗಳ ಬಗ್ಗೆ ಆತನಿಗೆ ತಿಳಿಯುವಂತೆ ಮಾಡಲು ಇದು ಅದ್ಭುತ ವಿಧಾನ.

 ಮೊದಲ ಭೇಟಿಯ ಸ್ಥಳ:

ಮೊದಲ ಭೇಟಿಯ ಸ್ಥಳ:

ಪ್ರತಿಯೊಂದು ಜೋಡಿಗೆ ಕೂಡ ಮೊದಲ ಭೇಟಿಯ ಸ್ಥಳ ತುಂಬಾ ಮಹತ್ವದ್ದಾಗಿರುತ್ತದೆ. ಅದೇ ಮೊದಲ ಸ್ಥಳದಲ್ಲಿ ಆತನ ಕೈ ಹಿಡಿದು ನಿಮ್ಮ ಪ್ರೀತಿ ಬಗ್ಗೆ ಹೇಳುವುದು ಅತ್ಯಂತ ರೋಮ್ಯಾಂಟಿಕ್ ಆಗಿರುತ್ತದೆ.

ಮರಳಿನಲ್ಲಿ ಬರೆಯಿರಿ:

ಮರಳಿನಲ್ಲಿ ಬರೆಯಿರಿ:

ಆತನೊಂದಿಗೆ ಕಳೆದ ರೋಮ್ಯಾಂಟಿಕ್ ಕ್ಷಣಗಳಿಗೆ ಒಂದು ಫ್ರೇಮ್ ಹಾಕುವ ಐಡಿಯಾ ಹೇಗಿದೆ? ಸಮುದ್ರ ತೀರಕ್ಕೆ ಆತನೊಂದಿಗೆ ಡೇಟ್ ಗೆ ಹೋಗಿ ಮತ್ತು ನಿಮ್ಮ ಪ್ರೀತಿಯ ಬಗ್ಗೆ ಮರಳಿನಲ್ಲಿ ಬರೆದು ಆತನಿಗೆ ಸಪ್ರೈಸ್ ನೀಡಿ. ಮರಳಿನಲ್ಲಿ ಬರೆದಿರುವ ಸಂದೇಶದೊಂದಿಗೆ ನಿಮ್ಮಿಬ್ಬರ ಫೋಟೊ ತೆಗೆಯಿರಿ ಮತ್ತು ಇದಕ್ಕೆ ಫ್ರೇಮ್ ಹಾಕಿ. ಇದು ಮುಂದಿನ ವರ್ಷಗಳಲ್ಲಿ ನಿಮ್ಮಿಬ್ಬರ ಸಂತೋಷಕ್ಕೆ ಕಾರಣವಾಗಲಿದೆ.

ಹಾಡಿನಲ್ಲಿ ಪ್ರೀತಿ ಹೇಳಿ:

ಹಾಡಿನಲ್ಲಿ ಪ್ರೀತಿ ಹೇಳಿ:

ನೀವು ಒಳ್ಳೆಯ ಗಾಯಕರಾಗಿದ್ದರೆ ಆಗ ನಿಮ್ಮ ಪ್ರೀತಿಯ ಭಾವನೆಯನ್ನು ಯಾವುದಾದರೂ ಷೋದಲ್ಲಿ ವ್ಯಕ್ತಿಪಡಿಸಿ. ಸಾರ್ವಜನಿಕವಾಗಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇದು ಅದ್ಭುತ ಮಾರ್ಗ. ಒಳ್ಳೆಯ ರೋಮ್ಯಾಂಟಿಕ್ ಸಾಂಗ್ ಅಥವಾ ಯಾವುದಾದರೂ ಫೇವರಿಟ್ ಲವ್ ಸಾಂಗ್ ನ್ನು ಹಾಡಿ. ಇದನ್ನು ಷೋದಲ್ಲಿ ಹಾಡಿ ಪ್ರೀತಿಯನ್ನು ಹೇಳಿ.


English summary

Ways to Say I Love You Without Words

Sometimes saying three words of love “I Love You” is complicated, isn’t it? At times, it comes with baggage -when to say this or should I wait for him to come up with it first, and many such countless questions ramble around.
X
Desktop Bottom Promotion