For Quick Alerts
ALLOW NOTIFICATIONS  
For Daily Alerts

ಹದಿಹರೆಯದ ಮಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?

|

ನಿಮ್ಮ ಮಗಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ, ಆಕೆ ಸ್ವತಂತ್ರಗೊಳ್ಳಲು ಹೆಚ್ಚು ಬಯಸುತ್ತಾಳೆ. ಆ ಸ್ವಾತಂತ್ರ್ಯ ಆಕೆಗೆ ದೊರಕದೇ ಹೋದಾಗ ಹೆತ್ತವರ ಮೇಲೆ ಅವಳಿಗೆ ಅಸಮಾಧಾನವುಂಟಾಗುತ್ತದೆ. ತಂದೆತಾಯಿಗಳಾದ ನಿಮಗೆ ಆಕೆಯ ಸುರಕ್ಷತೆ ಮತ್ತು ಆದ್ಯತೆಗೆ ಹೆಚ್ಚಿನ ಗಮನವನ್ನು ನೀಡಬೇಕು, ಅದೇ ರೀತಿ ನೀವುಗಳು ನಿಮ್ಮ ಮಗಳ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳಬಾರದು.

ಈ ಸಮಯದಲ್ಲಿ ನಿಮ್ಮ ಮಗಳು ಬಯಸುವುದೇನೆಂದರೆ ನೀವು ಅವಳನ್ನು ಅರ್ಥಮಾಡಿಕೊಳ್ಳಲಿ ಮತ್ತು ಅವಳು ಬಯಸುವ ಕೆಲಸಗಳನ್ನು ಮಾಡಲು ಅವಳಿಗೆ ಅನುಮತಿ ದೊರಕಲಿ ಎಂದಾಗಿದೆ. ಆದರೆ ಕೆಲವೊಮ್ಮೆ ಹೆತ್ತವರು ತಮ್ಮ ಮಗಳ ಬಗ್ಗೆ ಅತಿಯಾದ ಕಾಳಜಿಯನ್ನು ವಹಿಸುವುದರಿಂದ ಮಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಳ್ಳುತ್ತಾರೆ.

Understanding Your Teenage Daughter: Being A Cool Parent

ಮಗಳ ಬೇಕು ಬೇಡಗಳನ್ನು ಕುರಿತು ಅವಳೊಂದಿಗೆ ಚರ್ಚೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಬೇಕು. ಆಕೆ ಮಾಡುವುದೆಲ್ಲಾ ತಪ್ಪೆಂದು ನೀವು ಅನ್ಯಥಾ ಭಾವಿಸಬಾರದು. ಅವಳ ಸ್ವಾತಂತ್ರ್ಯವನ್ನು ಅವಳೇ ಹುಡುಕಿಕೊಳ್ಳಲಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ

Understanding Your Teenage Daughter: Being A Cool Parent

ತಂದೆತಾಯಿಯರು ತಮ್ಮ ಮಗಳ ಸುರಕ್ಷತೆಯೊಂದಿಗೆ ಆಕೆಗೆ ನೀಡಬೇಕಾದ ಸ್ವಾತಂತ್ರ್ಯದ ಬಗೆಗೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ನಾವಿಂದು ನಿಮಗಾಗಿ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ, ನಿಮ್ಮ ಹದಿಹರೆಯದ ಮಗಳೊಂದಿಗೆ ಹೇಗೆ ಬೆರೆಯಬೇಕು ಎಂಬ ಕೆಲವು ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ, ಓದಿ ಆನಂದಿಸಿ.

ಹೆಚ್ಚು ಕಾಳಜಿ ವಹಿಸುವುದು
ಇಂದು ಹೆಚ್ಚಿನ ತಂದೆತಾಯಿಯರು ತಮ್ಮ ಮಗಳಂದಿರ ಬಗೆಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ನೀವು ಆಕೆಯ ಸುರಕ್ಷತೆಯ ಬಗೆಗೆ ಅತಿಯಾದ ಕಾಳಜಿ ವಹಿಸುವುದರಿಂದ ಸ್ವತಂತ್ರವಾಗಿರಲು ಅವರಿಗೆ ಮುಕ್ತವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ದೊಡ್ಡ ಜಗತ್ತಿನಲ್ಲಿ ಒಬ್ಬರೇ ಬದುಕನ್ನು ಹೇಗೆ ಎದುರಿಸಬೇಕೆಂಬ ಛಲ ಅವರಲ್ಲಿ ಇರುವುದಿಲ್ಲ. ಎಲ್ಲಾ ಹೆತ್ತವರು ತಿಳಿದುಕೊಳ್ಳಬೇಕಾದ ಒಂದು ಅಂಶವೆಂದರೆ: ಆಕೆಯ ಬಗೆಗೆ ಅತಿಯಾಗಿ ಕಾಳಜಿ ವಹಿಸದೇ ಇರುವುದಾಗಿದೆ. ಅವಳಷ್ಟಕ್ಕೇ ಸಮಸ್ಯೆಯನ್ನು ಆಕೆ ನಿವಾರಿಸಲಿ, ಮತ್ತು ಆಕೆಗೆ ಮಾರ್ಗದರ್ಶಿಯಾಗಿ ನೀವು ಅವಳೊಂದಿಗೆ ಇರಿ.

ಬೇಡ ಎಂದು ಹೇಳುವುದು
ನಿಮ್ಮ ಮಗಳು ಏನನ್ನಾದರೂ ಬಯಸಿದರೆ ಅದಕ್ಕೆ ಬೇಡ ಎಂಬ ಉತ್ತರವನ್ನು ನೀವು ನೀಡುವುದು ಸಾಮಾನ್ಯ. ಅದೇ ಸಮಯದಲ್ಲಿ, ಅವಳು ಬಯಸಿದ್ದನ್ನು ಅವಳು ಮಾಡಲಿ ನಂತರ ಮಾಡಿದ ತಪ್ಪೇನು ಎಂಬುದು ಅವರಿಗೆ ಅರಿವಿಗೆ ಬರುತ್ತದೆ ಅದನ್ನು ತಿದ್ದಿಕೊಂಡು ಮುಂದೆ ಆ ತಪ್ಪು ಘಟಿಸದಂತೆ ಏನು ಮಾಡಬೇಕೆಂಬ ಅರಿವು ಆಕೆಗೆ ಉಂಟಾಗುತ್ತದೆ. ಹೆತ್ತವರಾಗಿ ಆಕೆಯನ್ನು ಜೋಪಾನ ಮಾಡಿ ಅದೇ ಸಮಯದಲ್ಲಿ ಸಾಧನೆಗಳನ್ನು ಮಾಡಲು ಅವಳನ್ನು ಪ್ರೋತ್ಸಾಹಿಸಿ, ಆಕೆಗೆ ಸರಿ ಎಂದು ಅನ್ನಿಸಿದ್ದನ್ನು ಅವಳು ಮಾಡಲಿ, ಅದೇ ರೀತಿ ತಪ್ಪಿನ ಅರಿವು ಆಕೆಗೆ ಉಂಟಾಗಲಿ.

ಹೋಲಿಸುವುದು
ಮತ್ತೊಬ್ಬರಿಗೆ ಹೋಲಿಸುವುದನ್ನು ಯಾವ ಹದಿಹರೆಯದ ಮಗಳೂ ಇಷ್ಟಪಡುವುದಿಲ್ಲ. ಹದಿಹರೆಯದ ಮಗಳ ಹೆತ್ತವರು ನೀವಾಗಿದ್ದರೆ, ಅವರು ಹೇಗೆ ಇದ್ದಾರೋ ಹಾಗೆಯೇ ಅವರನ್ನು ನೀವು ಸ್ವೀಕರಿಸಲಿ ಎಂದು ಮಗಳು ಬಯಸುತ್ತಾಳೆ, ಮಗಳನ್ನು ಆಕೆಯ ಸ್ನೇಹಿತರಿಗೆ ಹೋಲಿಸಿ ಆ ರೀತಿಯಾಗಬೇಕೆಂದು ಹೇಳುವುದನ್ನು ಅವಳು ಇಷ್ಟಪಡುವುದಿಲ್ಲ. ಆದ್ದರಿಂದ ಎಂದಿಗೂ ಇನ್ನೊಬ್ಬರೊಂದಿಗೆ ನಿಮ್ಮ ಮಗಳನ್ನು ಹೋಲಿಸುವ ಕೆಲಸ ಮಾಡದಿರಿ ಇದರಿಂದ ಅವರು ಅಭದ್ರತೆ ಅಸುರಕ್ಷತೆಯಿಂದ ಬಳಲುವ ಸಾಧ್ಯತೆ ಹೆಚ್ಚು.

ಸ್ವೀಕರಿಸುವುದು
ನಿಮ್ಮ ಮಗಳು ಪ್ರೀತಿಯಲ್ಲಿ ಬಿದ್ದಿದ್ದರೆ, ನಿಮ್ಮ ಹೃದಯದಾಳದಿಂದ ಆಕೆಯ ಬಾಳಲ್ಲಿ ಇರುವ ವ್ಯಕ್ತಿಯನ್ನು ಕುರಿತು ಅರಿತುಕೊಳ್ಳಿ ಮತ್ತು ಸ್ವೀಕರಿಸಲು ಪ್ರಯತ್ನಿಸಿ. ಆಕೆಯ ಜೀವನದ ಇದೊಂದು ಮುಖ್ಯವಾದ ಭಾಗವಾಗಿದ್ದು ತನ್ನ ತಂದೆತಾಯಿಯಿಂದ ಸಣ್ಣ ಪ್ರೀತಿ ಮತ್ತು ನೆರವು ತನಗೆ ದೊರಕಲಿ ಎಂದು ಆಕೆ ಬಯಸುತ್ತಾಳೆ.

ಆತ್ಮವಿಶ್ವಾಸ
ತನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಆಕೆಗಿದೆ ಎಂಬುದನ್ನು ಆಕೆಗೆ ತಿಳಿಯಪಡಿಸಿ. ಅವಳಿಗೆ ನೀವು ನಗುತ್ತಾ ಹೇಳಬೇಕಾಗಿರುವುದು ಇಷ್ಟೇ ಈಗ ನೀನು ದೊಡ್ಡವಳಾಗಿದ್ದೀಯಾ ನಿನ್ನ ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವ ಹಕ್ಕು ನಿನಗಿದೆ ಎಂದಾಗಿದೆ.

ಆದ್ದರಿಂದ ಹದಿಹರೆಯದ ಮಗಳು ನಿಮಗಿದ್ದರೆ, ಅವಳ ಬೇಕು ಬೇಡಗಳನ್ನು ತಿಳಿದುಕೊಂಡು ಹೆಚ್ಚಿನ ಪ್ರೀತಿ ಮತ್ತು ಒಲವನ್ನು ನೀಡುವುದಾಗಿದೆ. ಈ ಮಾಹಿತಿಯನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಮಗಳ ಬದುಕಲ್ಲಿ ಏನಿದೆ ಎಂಬುದನ್ನು ಆಕೆಯೇ ನಿಮಗೆ ತಿಳಿಸುತ್ತಾಳೆ ಮತ್ತು ಇದರಿಂದ ನಿಮ್ಮ ಮತ್ತು ಆಕೆಯ ಬಾಂಧವ್ಯ ಹೆಚ್ಚು ಸುದೃಢವಾಗುತ್ತದೆ.

English summary

Understanding Your Teenage Daughter: Being A Cool Parent

As your daughter grows into a teenager, she is most likely to show her desire for independence. And when she is denied that independence, she is likely to feel a little suffocated with her parents.
X
Desktop Bottom Promotion