For Quick Alerts
ALLOW NOTIFICATIONS  
For Daily Alerts

ನಿಮ್ಮ ಗೆಳತಿಗೆ ಪ್ರೀತಿ ತೋರಿಸಲು 10 ಸೂಕ್ತ ಸಲಹೆಗಳು

|

ಕೆಲವು ಸಲ ನೇರವಾಗಿ ಆಕೆಗೆ ಐ ಲವ್ ಯೂ' ಹೇಳುವ ಮೂಲಕ ಪ್ರೀತಿ ತೋರಿಸಬಹುದು. ಆದರೆ ಇದನ್ನು ಹೇಳುವುದಕ್ಕಿಂತ ಮಾಡಿ ತೋರಿಸುವುದು ಕಷ್ಟ. ಇದನ್ನು ಹೇಳಲು ಸೂಕ್ತ ಸಮಯ ಮತ್ತು ತಯಾರಿ ಅತ್ಯಗತ್ಯ. ಇಬ್ಬರು ಸಂಬಂಧದ ಒಂದೇ ಹಂತದಲ್ಲಿದ್ದರೆ ನೇರವಾಗಿ ಪ್ರೀತಿ ತೋರಿಸುವುದು ಸುಲಭ. ಇಂತಹ ಸುಸಮಯ ಬರುವ ತನಕ ನೀವು ಆಕೆಗೆ ವಿವಿಧ ರೀತಿಯಿಂದ ಪ್ರೀತಿ ತೋರಿಸಿ ಆಕೆಗೆ ಸಂಬಂಧದಲ್ಲಿ ಆಸಕ್ತಿಯಿರುವಂತೆ ಮಾಡಿ.

ಆಕೆಯ ಬಗ್ಗೆ ತುಂಬಾ ಕಾಳಜಿ ತೋರಿಸುವುದರಿಂದ ಇದನ್ನು ಆರಂಭಿಸಿ. ಯಾವುದೇ ಹುಡುಗಿ ಕೂಡ ಕ್ಷಣ ಮಾತ್ರದಲ್ಲಿ ಪ್ರೀತಿಗೆ ಬೀಳುವುದಿಲ್ಲ. ಸ್ನೇಹಪೂರ್ವಕ ಆಲೋಚನಾತ್ಮಕ ಮತ್ತು ಬೆಂಬಲವಾಗಿರಿ. ಆಕೆಗೆ ಅಗತ್ಯಬಿದ್ದಾಗ ನಿಮ್ಮ ನೆರವು ನೀಡುವುದು ಪ್ರೀತಿ ತೋರಿಸುವ ಇತರ ಸಂಜ್ಞೆಗಳು. ದೈಹಿಕವಾಗಿ ಕೂಡ ಆಕೆಗೆ ನೀವು ಪ್ರೀತಿ ತೋರಿಸಬೇಕು. ಗೆಳೆಯನಾಗಿ ನೀವು ಹಲವಾರು ಸಣ್ಣ ಸಣ್ಣ ವಸ್ತುಗಳನ್ನು ಖರೀದಿಸಿ ಆಕೆಗೆ ನೀಡಬೇಕು. ಹೂ ಗುಚ್ಛ ಅಥವಾ ಆಕೆಯೊಂದಿಗೆ ಇರುವಾಗ ನಿಮಗೆ ಸಿಗುವ ಖುಷಿಯ ಬಗ್ಗೆ ಪತ್ರ ಬರೆದು ಪ್ರೀತಿಯನ್ನು ತೋರಿಸಬಹುದು. ಇದರ ಬಳಿಕ ಐ ಲವ್ ಯೂ' ಹೇಳಬಹುದು.

ಆಕೆಗೆ ಹೂ ಕಳುಹಿಸುವುದು

ಆಕೆಗೆ ಹೂ ಕಳುಹಿಸುವುದು

ಇದು ಆಕೆಗೆ ಪ್ರೀತಿ ತೋರಿಸುವ ಸಾಂಪ್ರದಾಯಿಕ ವಿಧಾನ. ಇದು ಪ್ರೀತಿ ವ್ಯಕ್ತಪಡಿಸಲು ಬಳಸುವ ಯಾವತ್ತಿಗೂ ಅತ್ಯಂತ ಫೇವರಿಟ್ ವಿಧಾನ. ಸ್ವಲ್ಪ ಆಲೋಚನೆ ಮಾಡಿ ಆಕೆಗೆ ಇಷ್ಟವಾಗುವಂತಹ ಹೂಗುಚ್ಛವನ್ನು ಆಯ್ಕೆ ಮಾಡಿಕೊಳ್ಳಬೇಕು.

ಪತ್ರ ಬರೆಯಿರಿ

ಪತ್ರ ಬರೆಯಿರಿ

ನೀವು ಆಕೆಯನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಿಲ್ಲದೆ ಇದ್ದಾಗ ನಿಮಗೆ ಸಮಯ ಸಿಗುತ್ತದೆ. ಈ ಸಮಯದಲ್ಲಿ ಆಕೆ ಮೇಲಿರುವ ನಿಮ್ಮ ಪ್ರೀತಿ ಬಗ್ಗೆ ತಿಳಿಸಿ, ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಥವಾ ನಿಮ್ಮಿಬ್ಬರ ಪ್ರೀತಿಯ ಬಗ್ಗೆ ಒಂದು ಸುಂದರ ಕವನ ಬರೆಯಿರಿ.

ಡೇಟಿಂಗ್‌ಗೆ ಹೋಗುವುದು

ಡೇಟಿಂಗ್‌ಗೆ ಹೋಗುವುದು

ಗೆಳೆಯನಾಗಿ ನೀವು ಒಂದು ಸರಿಯಾದ ಯೋಜನೆ ಮಾಡಿ ಮತ್ತು ಆಕೆಯನ್ನು ರೋಮ್ಯಾಂಟಿಕ್ ಡಿನ್ನರ್, ಪಾರ್ಟಿ ಅಥವಾ ಸಿನೆಮಾಗೆ ಕರೆದುಕೊಂಡು ಹೋಗಿ. ಇಂತಹ ರೋಮ್ಯಾಂಟಿಕ್ ವಿಷಯಗಳಿಂದ ಆಕೆಯ ಮೇಲೆ ನಿಮಗಿರುವ ಪ್ರೀತಿ ತೋರಿಸುತ್ತದೆ.

ಆಕೆಗಾಗಿ ಅಡುಗೆ ಮಾಡಿ

ಆಕೆಗಾಗಿ ಅಡುಗೆ ಮಾಡಿ

ರೋಮ್ಯಾಂಟಿಕ್ ಆಗಿ ಸಮಯವನ್ನು ಹೊರಗಡೆಯೇ ಕಳೆಯಬೇಕೆಂದಿಲ್ಲ. ಆಕೆಯನ್ನು ಮನೆಗೆ ರಾತ್ರಿಯ ಊಟಕ್ಕೆ ಆಹ್ವಾನಿಸಿ, ನೀವೇ ಆಕೆಗಾಗಿ ಅಡುಗೆ ಮಾಡಿ ಬಡಿಸಿ. ಆಕೆ ಬಗ್ಗೆ ನಿಮಗಿರುವ ಕಾಳಜಿಯನ್ನು ಇದು ತೋರಿಸುತ್ತದೆ.

ಮೆಚ್ಚುಗೆ ವ್ಯಕ್ತಪಡಿಸಿ

ಮೆಚ್ಚುಗೆ ವ್ಯಕ್ತಪಡಿಸಿ

ಇದಕ್ಕಾಗಿ ನೀವು ಯಾವುದೇ ಯೋಜನೆ ಹಾಕಿಕೊಳ್ಳಬೇಕಾಗಿಲ್ಲ. ಯಾವಾಗ ನಿಮಗನಿಸುತ್ತದೆಯಾ ಆಕೆಯ ಬಗ್ಗೆ ಒಳ್ಳೆಯ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ. ತುಂಬಾ ಸುಂದರ ಮತ್ತು ಒಳ್ಳೆಯ ರೀತಿಯಲ್ಲಿ ಕಾಣಿಸಿಕೊಳ್ಳಲು ಹುಡುಗಿಯರು ತುಂಬಾ ಪ್ರಯತ್ನ ಪಡುವ ಕಾರಣ ಅವರ ಬಗ್ಗೆ ಮೆಚ್ಚುಗೆ ಇಷ್ಟಪಡುತ್ತಾರೆ.

ಆಕೆಗೆ ಅಚ್ಚರಿ ನೀಡಿ

ಆಕೆಗೆ ಅಚ್ಚರಿ ನೀಡಿ

ಪ್ರೀತಿ ವ್ಯಕ್ತಪಡಿಸಲು ಎಲ್ಲವನ್ನು ಯೋಚನೆ ಮಾಡಲಾಗದು. ಮನೆಗೆ ಬರುವಾಗ ಡಿನ್ನರ್ ತಂದು ಅಚ್ಚರಿ ಮೂಡಿಸಬಹುದು. ಅಚ್ಚರಿಯ ಹುಟ್ಟುಹಬ್ಬದ ಪಾರ್ಟಿ ಅಥವಾ ಉಡುಗೊರೆ ಹೆಚ್ಚಿನ ಪ್ರೀತಿ ತೋರಿಸುತ್ತದೆ.

ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದು

ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದು

ಇದು ತುಂಬಾ ದುರ್ಬಲ ಹೃದಯದವರಿಗಲ್ಲ! ಆಕೆಯ ಹಿಂಬದಿಯನ್ನು ಸವರುವುದು ಅಥವಾ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡುವುದು ಆಕೆಯ ಬಗ್ಗೆ ನಿಮಗಿರುವ ಪ್ರೀತಿ ಮತ್ತು ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಪ್ರಾಮಾಣಿಕತೆ ಮತ್ತು ಗೌರವ

ಪ್ರಾಮಾಣಿಕತೆ ಮತ್ತು ಗೌರವ

ಆಕೆಯ ಬಗ್ಗೆ ನಿಮಗಿರುವ ಪ್ರೀತಿಗೆ ಈ ಎರಡು ಅಂಶಗಳು ಹೆಚ್ಚಿನ ಅಂಕಗಳನ್ನು ನೀಡುತ್ತದೆ. ಯಾವುದೇ ಸಂಬಂಧವಾದರೂ ಪ್ರಾಮಾಣಿಕತೆ ಮತ್ತು ಆಕೆಯನ್ನು ಗೌರವದಿಂದ ನೋಡಿಕೊಳ್ಳುವುದು ತುಂಬಾ ಮುಖ್ಯ.

ನೆರವಿಗೆ ಧಾವಿಸಿ

ನೆರವಿಗೆ ಧಾವಿಸಿ

ನಿಮ್ಮ ಗೆಳತಿಗೆ ನಿಮ್ಮ ಅಗತ್ಯವಿದೆಯೆಂದು ಕಾಣಿಸಿದರೆ ಅಥವಾ ಪ್ರೋತ್ಸಾಹ ಬೇಕಾಗಿದ್ದರೆ ಆ ಸಮಯದಲ್ಲಿ ಅಲ್ಲಿದ್ದರೆ ಆಗ ಸಂಬಂಧವು ಮತ್ತಷ್ಟು ಬಲಗೊಳ್ಳುತ್ತದೆ ಮತ್ತು ಆಕೆಯ ಬಗ್ಗೆ ನಿಮ್ಮ ಪ್ರೀತಿ ಮತ್ತು ಕಾಳಜಿ ತೋರಿಸುತ್ತದೆ.

ಪ್ರೀತಿ ಶಬ್ದ

ಪ್ರೀತಿ ಶಬ್ದ

ಸರಿಯಾದ ಸಮಯದಲ್ಲಿ ರೋಮ್ಯಾಂಟಿಕ್ ಅರ್ಥ ಬರುವಂತೆ ಗಂಭೀರವಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿ. ನಿಜವಾದ ಪ್ರೀತಿಯಿಂದ ಇದನ್ನು ಹೇಳಿದರೆ ಆಗ ಅದು ಕೆಲಸ ಮಾಡುತ್ತದೆ.

English summary

Top 10 ways a boyfriend can show love

Sometimes it can be shown in a straight forward way of telling “I LOVE YOU”, though it is easier said than done. Popping the L words to her needs proper timing and preparation. Till such time you have to make sure you show your love for her in various other ways that to keep her interest in the relationship.
Story first published: Monday, July 7, 2014, 17:20 [IST]
X
Desktop Bottom Promotion