For Quick Alerts
ALLOW NOTIFICATIONS  
For Daily Alerts

ಮದುವೆ ಪ್ರಸ್ತಾಪ ಮಾಡಲು ಇರುವ 10 ಅತ್ಯುತ್ತಮ ಸ್ಥಳಗಳು

By Deepak M
|

ಒಂದು ವೇಳೆ ನೀವು ಮೆಚ್ಚಿದ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿ ಪಡೆಯಲು ಉತ್ಸುಕತೆಯನ್ನು ತೋರಿದಾಗ ಎರಡು ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು ನಿಮ್ಮ ಪ್ರೀತಿ ಪಾತ್ರರಾದವರು ಮೆಚ್ಚುವಂತಹ ನಡವಳಿಕೆ ಮತ್ತು ಇನ್ನೊಂದು ನಿಮಗೆ ಒಪ್ಪುವಂತಹ ಉಡುಗೆ- ತೊಡುಗೆಗಳನ್ನು ಧರಿಸಿರಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ - ಹೊಸ ಹುಡುಗನೊಂದಿಗೆ ಹೀಗೆ ಮಾತುಕತೆ ಆರಂಭಿಸಿ

ನಿಮ್ಮ ಒಲವನ್ನು ಸರಿಯಾದ ಕ್ರಮದಲ್ಲಿ ವ್ಯಕ್ತ ಪಡಿಸಿದರೆ, ನಿಮ್ಮ ಪ್ರೀತಿ ಪಾತ್ರರಾದವರಿಗೆ ಅದು ತಪ್ಪದೆ ಇಷ್ಟವಾಗುತ್ತದೆ. ಜೊತೆಗೆ ನಿಮ್ಮ ನಿಲುವು ಸಹ ಉತ್ತಮವಾಗಿದ್ದರೆ, ಖಂಡಿತವಾಗಿ ಈ ಸಂದರ್ಭದಲ್ಲಿ ಗೆಲುವು ನಿಮಗೆ ಶತಃಸಿದ್ಧ.

ಮದುವೆಯ ಪ್ರಸ್ತಾಪವನ್ನು ಮಾಡುವಾಗ "ಸ್ಥಳ"ದ ಮಹತ್ವವೇನು?

ಮದುವೆ ಎನ್ನುವುದು ಜನ್ಮ ಜನ್ಮದ ಅನುಬಂಧ, ಅದಕ್ಕೆ "ಸ್ಥಳ"ದ ಜೊತೆ ಸಂಬಂಧ ಕಲ್ಪಿಸಲು ಕಾರಣ, ಇದರ ಪ್ರಸ್ತಾಪವನ್ನು ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವಂತಹ ಮತ್ತು ಸಂಬಂಧ ಶಾಶ್ವತವಾಗುವಂತಹ ವಾತಾವರಣವನ್ನು ನಿರ್ಮಿಸುವ ಸಲುವಾಗಿ ಇದು ಮುಖ್ಯ. ಒಬ್ಬ ವ್ಯಕ್ತಿ ತನ್ನ ಬಾಳ ಸಂಗಾತಿಯಾಗುವವರಿಗೆ ತನ್ನ ಮನದ ಇಂಗಿತವನ್ನು ಮತ್ತು ಪ್ರೇಮವನ್ನು ವ್ಯಕ್ತಪಡಿಸಲು ಈ ಸ್ಥಳವು ಪ್ರಧಾನ ಪಾತ್ರವಹಿಸುತ್ತದೆ.

ಏಕೆಂದರೆ ಈ ಪ್ರಸಂಗವು ಅತ್ಯಂತ ಸೂಕ್ಷ್ಮವಾದ ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗಬಹುದು. ಅಲ್ಲದೆ ಒಬ್ಬರು ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದರೆ,ಇನ್ನೊಬ್ಬರು ಆ ಪ್ರೇಮವನ್ನು ಸ್ವೀಕರಿಸಲು ಹಿಂದೇಟು ಹಾಕಬಹುದು. ಇದಕ್ಕಾಗಿ ಮದುವೆಯ ಪ್ರಸ್ತಾಪ ಮಾಡುವ ಮೊದಲು ಹಲವಾರು ಸುತ್ತಿನ ಯೋಜನೆಗಳನ್ನು ಮಾಡುವ ಮತ್ತು ಸ್ಥಳವನ್ನು ನಿಗದಿ ಮಾಡಿಕೊಳ್ಳುವ ಅಗತ್ಯತೆ ಹೆಚ್ಚಾಗಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಗಳಲ್ಲಿ ವಂಚನೆಯಾದರೆ ನಿಭಾಯಿಸುವುದು ಹೇಗೆ?

 ಕ್ಯಾಂಡಲ್ ಲೈಟ್ ಡಿನ್ನರ್

ಕ್ಯಾಂಡಲ್ ಲೈಟ್ ಡಿನ್ನರ್

ಒಂದು ವೇಳೆ ನೀವು ಪ್ರೀತಿಸುವ ಹುಡುಗಿಯು ನಿಮ್ಮ ಮತ್ತು ನಿಮ್ಮವರಾಗಿರುವ ಕೆಲವು ವ್ಯಕ್ತಿಗಳ ಜೊತೆ ಸಮಯವನ್ನು ಕಳೆಯಲು ಇಷ್ಟಪಡುವವರಾದಲ್ಲಿ, ಆಕೆಯನ್ನು ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಆಹ್ವಾನಿಸಿ. ಒಂದು ಉತ್ತಮವಾದ ರೆಸ್ಟೋರೆಂಟ್‍ನಲ್ಲಿ ಆಕೆಗಾಗಿ ಒಂದು ಪ್ರತ್ಯೇಕ ಸ್ಥಳವನ್ನು ರಿಸರ್ವ್ ಮಾಡಿ, ಆಕೆಯೊಂದಿಗೆ ಸ್ವಲ್ಪ ಸಮಯ ಏಕಾಂತವಾಗಿ ಕಳೆಯಿರಿ.

ಕಛೇರಿ

ಕಛೇರಿ

ಒಂದು ವೇಳೆ ಆಕೆ ನಿಮ್ಮ ಸಹೋದ್ಯೋಗಿಯಾಗಿದ್ದಲ್ಲಿ, ಮದುವೆಯನ್ನು ಪ್ರಸ್ತಾಪಿಸಲು ಕಛೇರಿಯು ನಿಜಕ್ಕು ಉತ್ತಮವಾದ ಸ್ಥಳ. ಏಕೆಂದರೆ ಈ ವೇಳೆಗಾಗಲೆ ನೀವಿಬ್ಬರು ಒಬ್ಬರನ್ನೊಬ್ಬರು ರಹಸ್ಯವಾಗಿ ಇಷ್ಟಪಟ್ಟಿರುತ್ತೀರಿ. ನಿಮ್ಮ ಸಹೋದ್ಯೋಗಿಗಳು ಸಹ ಈ ವಿಷಯವನ್ನು ಅರಿತಿರುತ್ತಾರೆ. ಏಕೆಂದರೆ ನಿಮ್ಮ ಪ್ರೇಮ ವ್ಯವಹಾರವು ಒಂದು ಬಹಿರಂಗ ಗುಟ್ಟಾಗಿರುತ್ತದೆ.

ಸಮುದ್ರ ತೀರ

ಸಮುದ್ರ ತೀರ

ಮದುವೆ ಪ್ರಸ್ತಾಪ ಮಾಡಲು ಸಮುದ್ರ ತೀರವು ಅತ್ಯದ್ಭುತವಾದ ಸ್ಥಳವಾಗಿರುತ್ತದೆ. ಜನಜಂಗುಳಿಯ ಮಧ್ಯದಲ್ಲು ಸಹ ನೀವು ನಿಮ್ಮ ಏಕಾಂತವನ್ನು ಕಳೆಯಬಹುದಾದ ಸ್ಥಳ ಇದಾಗಿರುತ್ತದೆ. ನಿಮ್ಮ ಪ್ರೇಮ ಸಾಗರವನ್ನು ಸೇರುವ ತವಕವನ್ನು ಹೊಂದಿರುವ ನದಿ ತಾನೆಂದು ಆಕೆಗೆ ಅರ್ಥವಾಗಲು ಈ ಸ್ಥಳವನ್ನು ಮೀರಿಸಿದ ಮತ್ತೊಂದು ಸ್ಥಳ ದೊರೆಯುವುದಿಲ್ಲ. ಅದಕ್ಕಾಗಿ ಈ ಮರೆಯಲಾಗದ ಕ್ಷಣಗಳನ್ನು ಮತ್ತಷ್ಟು ಅವಿಸ್ಮರಣೀಯಗೊಳಿಸಲು ಪ್ರಯತ್ನಿಸಿ.

ಲಾಂಗ್ - ಡ್ರೈವ್

ಲಾಂಗ್ - ಡ್ರೈವ್

ಒಂದು ವೇಳೆ ನೀವಿಬ್ಬರು ಸ್ವಲ್ಪ ಸಮಯದಿಂದ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದು, ಮದುವೆಯನ್ನು ಪ್ರಸ್ತಾಪ ಮಾಡುವ ಸಮಯಕ್ಕಾಗಿ ಕಾದಿದ್ದರೆ, ಆಕೆಯನ್ನು ಒಂದು ಲಾಂಗ್- ಡ್ರೈವ್‍ಗೆ ಹೋಗಲು ಆಹ್ವಾನಿಸಿ. ಲಾಂಗ್-ಡ್ರೈವ್‍ಗೆ ಹೋಗುವ ಸಂದರ್ಭದಲ್ಲಿ ಆಕೆಯ ಕೈಯನ್ನು ಮೃದುವಾಗಿ ತೆಗೆದುಕೊಂಡು, ಒಂದು ಬಿಸಿ ಮುತ್ತನ್ನು ನೀಡಿ. " ಡಾರ್ಲಿಂಗ್, ಈ ಕೈಯನ್ನು ಸದಾ ಹೀಗೆ ಹಿಡಿದುಕೊಳ್ಳುವ ಅವಕಾಶವನ್ನು ನೀಡುತ್ತೀಯಾ? " ಎಂದು ನೇರವಾಗಿ ಆಕೆಗೆ ಕೇಳಿಬಿಡಿ.

ವೈಲ್ಡ್ ಪಾರ್ಟಿ

ವೈಲ್ಡ್ ಪಾರ್ಟಿ

ಒಂದು ವೇಳೆ ನಿಮ್ಮ ಸಂಗಾತಿಯು ವಿನೋದವನ್ನು ಇಷ್ಟಪಡುವ ವ್ಯಕ್ತಿಯಾಗಿದ್ದಲ್ಲಿ, ನಿಮ್ಮ ಎಲ್ಲಾ ಸ್ನೇಹಿತರನ್ನು ಒಂದು ವಿನೋದ ಕೂಟಕ್ಕೆ ಆಹ್ವಾನಿಸಿ. ಆ ಪಾರ್ಟಿಯಲ್ಲಿ ಎಲ್ಲಾ ಹುಡುಗ- ಹುಡುಗಿಯರ ಮುಂದೆ ಆಕೆಗೆ ಬಹಿರಂಗವಾಗಿ ಮದುವೆಯ ಪ್ರಸ್ತಾಪವನ್ನು ಮಾಡಿ.

ವಿಹಾರ ತಾಣ

ವಿಹಾರ ತಾಣ

ಕಾಡು ಮತ್ತು ಬೆಟ್ಟಗಳಿಂದ ಸುತ್ತುವರೆದ ಅದ್ಭುತವಾದ ವಿಹಾರ ತಾಣದಲ್ಲಿ ನಿಮ್ಮ ಸಂಬಂಧಿಕರ ಜೊತೆಗೆ ವಿಹರಿಸುವಾಗ ನಿಮ್ಮ ಸಂಗಾತಿಗೆ ನಿಮ್ಮ ಪ್ರೇಮವನ್ನು ವ್ಯಕ್ತಪಡಿಸಿ, ಬಾಳ ಸಂಗಾತಿಯಾಗಲು ಆಹ್ವಾನ ನೀಡಬಹುದು. ಇದಕ್ಕಾಗಿ ಬೇಕಾದರೆ ಒಂದು ಸ್ವ ರಚಿತ ಕವನವನ್ನು ಬರೆಯಿರಿ. ಅದರಲ್ಲಿ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಿ, ಅದನ್ನು ಎಲ್ಲರ ಎದುರಿಗೆ ಓದಿ. ಎಲ್ಲರು ಅದನ್ನು ಕೇಳಿ ಖುಷಿಪಡಲಿ. ತನಗೆ ಸೂಕ್ತವಾದ ಸಂಗಾತಿ ಸಿಕ್ಕ ಸಂತೋಷದಲ್ಲಿ ಆಕೆಗೆ ಆನಂದ ಭಾಷ್ಪ ಬರಲಿ.

 ಒಂದು ಸುಂದರವಾದ ಉದ್ಯಾನವನ

ಒಂದು ಸುಂದರವಾದ ಉದ್ಯಾನವನ

ಒಂದು ಜೋಡಿಯು ಪಾರ್ಕಿನ ಸುಂದರವಾದ ಪರಿಸರದಲ್ಲಿ ಬೆಂಚಿನ ಮೇಲೆ ಕುಳಿತ ಚಿತ್ರವನ್ನು ನೀವು ನೋಡಿಲ್ಲವೇ? ಆ ಬೆಂಚಿನ ಮೇಲೆ ಕುಳಿತಾಗ ಅವರಿಬ್ಬರ ನಡುವಿನ ಅಂತರವು ಕಿರಿದಾಗಿರುತ್ತದೆ. ನೀವು ಮತ್ತು ನಿಮ್ಮ ಬಾಳ ಸಂಗಾತಿಯು ಹಾಗೆ ಕುಳಿತ ಮತ್ತು ನಿಮ್ಮ ಪ್ರೇಮವನ್ನು ವ್ಯಕ್ತಪಡಿಸುವ ಚಿತ್ರವನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ಆಗಾ ಆಕೆಯು ತನ್ನ ಸಂಕೋಚವನ್ನು ವ್ಯಕ್ತಪಡಿಸಿ, ಮುಖವನ್ನು ಮುಚ್ಚಿಕೊಳ್ಳುತ್ತಾಳೆ. ಅದೇ ಸಮಯದಲ್ಲಿ ನಿಮ್ಮ ನಡುವೆ ಅಂತರವೇ ಇಲ್ಲದಾಗಿ, ಆಕೆಯ ಕೈಗಳು, ನಿಮ್ಮ ಕೈಗಳು ಒಂದನ್ನೊಂದು ಬೆಸೆದುಕೊಂಡಿರುತ್ತವೆ. ಆಗಿನ ಸಂದರ್ಭವು ಜನ್ಮ ಜನ್ಮದ ಅನುಬಂಧವು ಮತ್ತೆ ಈ ಭೂಮಿಯ ಮೇಲೆ ಜೀವತಳೆದಂತಿರುತ್ತದೆ. ಆಗ ಆ ಸ್ಥಳವು ಭುವಿಯ ಸ್ವರ್ಗವಾಗಿ ಕಾಣುತ್ತದೆ.

ಒಂದು ಪವಿತ್ರವಾದ ಸ್ಥಳ

ಒಂದು ಪವಿತ್ರವಾದ ಸ್ಥಳ

ಒಂದು ವೇಳೆ ನೀವು ಆಸ್ತಿಕರಾಗಿದ್ದಲ್ಲಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಧಾರ್ಮಿಕ ಸ್ಥಳಗಳನ್ನು ಆರಿಸಿಕೊಳ್ಳಿ. ಅದು ದೇವಸ್ಥಾನ, ಚರ್ಚ್, ಮಸೀದಿ ಯಾವುದಾದರು ಸರಿ. ದೇವರ ಸಾಕ್ಷಿಯಾಗಿ ಒಂದು ಉಂಗುರವನ್ನು ಆಕೆಗೆ ಉಡುಗೊರೆಯಾಗಿ ನೀಡಿ. ಈ ಸಂದರ್ಭವು ನಿಮ್ಮ ಪ್ರಿಯತಮೆಗೆ ನಿಮ್ಮ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿ, ನಿಮ್ಮ ಪ್ರೀತಿಯು ಶಾಶ್ವತವಾಗಲು ನೆರವಾಗುತ್ತದೆ.

ಆಕಾಶದ ಚಪ್ಪರದಡಿಯಲ್ಲಿ, ಬಯಲಿನ ನಡುವೆ.

ಆಕಾಶದ ಚಪ್ಪರದಡಿಯಲ್ಲಿ, ಬಯಲಿನ ನಡುವೆ.

"ಆಕಾಶವೇ ಬೀಳಲಿ ಮೇಲೆ, ನಾನೆಂದು ನಿನ್ನವನು, ಈ ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾನಿನ್ನ ಕೈಬಿಡೆನು" - ಈ ಹಾಡು ಅಣ್ಣಾವ್ರು ಹಾಡಿದರೇನು? ನೀವು ಹಾಡಿದರೇನು? ಫಲಿತಾಂಶ ಒಂದೇ ಇರುತ್ತೆ. ಒಂದು ವಿಶಾಲವಾದ ಬಯಲು, ಅದರ ಮೇಲೆ ಆಕಾಶವೇ ಚಪ್ಪರ. ಈ ಎರಡು ಅನಂತ ಶಕ್ತಿಗಳೇ ಸಾಕು ನಿಮ್ಮ ಪ್ರೀತಿಯ ಅನಂತತೆಗೆ ಸಾಕ್ಷಿಯಾಗಲು , ಹೇಳಿ ನಿಮ್ಮಾಕೆಗೆ ನಿಮ್ಮ ಪ್ರೀತಿಯನ್ನು, ಆಕಾಶ- ಭೂಮಿಗಳು ಒಂದಾಗಿ ನೋಡಲಿ, ನೀವು ಒಂದಾಗುವುದನ್ನು.

ಒಂದು ಕೌಟುಂಬಿಕ ಸಮಾರಂಭ

ಒಂದು ಕೌಟುಂಬಿಕ ಸಮಾರಂಭ

ನಿಮ್ಮ ಬಾಳ ಸಂಗಾತಿಯಾಗುವ ಹುಡುಗಿಯನ್ನು ಏಕೆ ನಿಮ್ಮ ಮನೆಯ ಸಮಾರಂಭಕ್ಕೆ ಆಹ್ವಾನಿಸಬಾರದು? ಒಂದು ವೇಳೆ ನಿಮ್ಮ ಸಂಗಾತಿಯು ಮುಕ್ತ ಮನಸ್ಸನ್ನು ಹೊಂದಿದ್ದರೆ, ನಿಮ್ಮ ಸಂಬಂಧವನ್ನು ಅಧಿಕೃತಗೊಳಿಸಿಕೊಳ್ಳಲು ಇದಕ್ಕಿಂತ ಸುಸಂದರ್ಭ ದೊರೆಯಲಾರದು. ಜೊತೆಗೆ ನಿಮ್ಮ ಕುಟುಂಬದ ಸದಸ್ಯರು ಸಹ ನಿಮ್ಮ ಬಾಳ ಸಂಗಾತಿಯನ್ನು ನೋಡುವ ಅವಕಾಶ ಇದರಿಂದ ದೊರೆಯುತ್ತದೆ.

English summary

Top 10 Places To Propose Marriage

Basically when you feel somebody deserves to be your life partner, you must combine two things in your approach. The first one is the right courtship necessary for proposing and second one is the perfect self-presentation.
X
Desktop Bottom Promotion