For Quick Alerts
ALLOW NOTIFICATIONS  
For Daily Alerts

ಹದಿಹರೆಯದ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?

|

ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ, ಅವರು ಸ್ವತಂತ್ರವಾಗಿರಲು ಹೆಚ್ಚು ಬಯಸುತ್ತಾರೆ. ಆ ಸ್ವಾತಂತ್ರ್ಯ ಅವರಿಗೆ ದೊರಕದೇ ಹೋದಾಗ ಹೆತ್ತವರ ಮೇಲೆ ಅಸಮಾಧಾನವುಂಟಾಗುತ್ತದೆ. ತಂದೆತಾಯಿಗಳಾದ ನೀವು ಮಕ್ಕಳ ಸುರಕ್ಷತೆ ಮತ್ತು ಆದ್ಯತೆಗೆ ಹೆಚ್ಚಿನ ಗಮನವನ್ನು ನೀಡಬೇಕು,

ಅದೇ ರೀತಿ ನೀವುಗಳು ನಿಮ್ಮ ಮಕ್ಕಳ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳಬಾರದು. ಆದರೆ ಕೆಲವೊಮ್ಮೆ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಅತೀಯಾದ ಕಾಳಜಿಯನ್ನು ವಹಿಸುವುದರಿಂದ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲಗೊಳ್ಳುತ್ತಾರೆ.

Tips to Understanding Your Teenage Children

ಅಪ್ಪಾ ... ನೀ ಹೀಗಿದ್ದರೆ ನನಗೆ ತುಂಬಾ ಇಷ್ಟ

ಹೆಚ್ಚಿನ ಕಾಳಜಿ:
ಇಂದು ಹೆಚ್ಚಿನ ತಂದೆತಾಯಿಯರು ತಮ್ಮ ಮಕ್ಕಳ ಬಗೆಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ನೀವು ಅವರ ಸುರಕ್ಷತೆಯ ಬಗೆಗೆ ಅತಿಯಾದ ಕಾಳಜಿ ವಹಿಸುವುದರಿಂದ ಸ್ವತಂತ್ರವಾಗಿರಲು ಅವರಿಗೆ ಮುಕ್ತವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ದೊಡ್ಡ ಜಗತ್ತಿನಲ್ಲಿ ಒಬ್ಬರೇ ಬದುಕನ್ನು ಹೇಗೆ ಎದುರಿಸಬೇಕೆಂಬ ಛಲ ಅವರಲ್ಲಿ ಇರುವುದಿಲ್ಲ. ಎಲ್ಲಾ ಹೆತ್ತವರು ತಿಳಿದುಕೊಳ್ಳಬೇಕಾದ ಒಂದು ಅಂಶವೆಂದರೆ: ಮಕ್ಕಳ ಬಗೆಗೆ ಅತಿಯಾಗಿ ಕಾಳಜಿ ವಹಿಸದೇ ಇರುವುದಾಗಿದೆ! ಅವರ ಸಮಸ್ಯೆಯನ್ನು ಅವರೇ ನಿವಾರಿಸಲಿ, ಮತ್ತು ಅವರಿಗೆ ಮಾರ್ಗದರ್ಶಿಯಾಗಿ ನೀವು ಅವರೊಂದಿಗೆ ಇರುವುದು ಅತ್ಯವಶ್ಯಕ.

ಮಕ್ಕಳ ತಪ್ಪುಗಳನ್ನು ಚಿಕ್ಕ ಪ್ರಾಯದಲ್ಲೇ ಸರಿ ಪಡಿಸಿ:
ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಅದಕ್ಕಾಗಿ ಹೊಡೆಯಬೇಡಿ, ನಯವಾಗಿ ಹೇಳಿ, ತುಂಬಾ ಬೈಯುವುದು, ಹೊಡೆಯುವುದು ಮಾಡಿದರೆ ಮಕ್ಕಳು ಹಠಮಾರಿಗಳಾಗುತ್ತಾರೆ. ಪೋಷಕರ ಮೇಲೆ ಪ್ರೀತಿ ಬದಲು ಭಯ ಹಾಗೂ ಧ್ವೇಷ ಬೆಳೆಯುತ್ತಾ ಹೋಗುತ್ತದೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳಸಿ:
ತನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಅವರಿಗಿದೆ ಎಂಬುದನ್ನು ಮಕ್ಕಳಿಗೆ ತಿಳಿಯಪಡಿಸಿ. ಅವರಿಗೆ ನೀವು ನಗುತ್ತಾ ಹೇಳಬೇಕಾಗಿರುವುದು ಇಷ್ಟೇ ಈಗ ನೀನು ದೊಡ್ಡವನಾಗಿದ್ದೀಯಾ ನಿನ್ನ ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವ ಹಕ್ಕು ನಿನಗಿದೆ ಎಂದಾಗಿದೆ.

ಹದಿಹರೆಯದಲ್ಲಿ ಲವ್ ಮಾಡಿದರೆ ತಪ್ಪೇನು?

ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ:
ನಿಮ್ಮ ಮಕ್ಕಳು, ಎಲ್ಲಾ ವಿಷಯವನ್ನು ಧೈರ್ಯವಾಗಿ ನಿಮ್ಮ ಹತ್ತಿರ ಹೇಳುವಂತೆ ಪ್ರೋತ್ಸಾಹಿಸಿ, ಹದಿಹರೆಯದ ಮಕ್ಕಳ ಜೊತೆ ಸ್ನೇಹಿತರಂತೆ ವರ್ತಿಸಿ.

ಆದ್ದರಿಂದ ಹದಿಹರೆಯದ ಮಕ್ಕಳು ನಿಮಗಿದ್ದರೆ, ಅವರ ಬೇಕು ಬೇಡಗಳನ್ನು ತಿಳಿದುಕೊಂಡು ಹೆಚ್ಚಿನ ಪ್ರೀತಿ ಮತ್ತು ಒಲವನ್ನು ನೀಡುವುದಾಗಿದೆ. ಈ ಮಾಹಿತಿಯನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಮಕ್ಕಳ ಬದುಕಲ್ಲಿ ಏನಿದೆ ಎಂಬುದನ್ನು ಅವರೇ ನಿಮಗೆ ತಿಳಿಸುತ್ತಾರೆ ಮತ್ತು ಇದರಿಂದ ನಿಮ್ಮ ಮತ್ತು ಅವರ ಬಾಂಧವ್ಯ ಹೆಚ್ಚು ಸುದೃಢವಾಗುತ್ತದೆ.

English summary

Tips to Understanding Your Teenage Children

As your Children grows into a teenager, They are most likely to show their desire for independence. And when they denied that independence, Children likely to feel a little suffocated with their parents.
Story first published: Monday, April 28, 2014, 16:54 [IST]
X
Desktop Bottom Promotion