For Quick Alerts
ALLOW NOTIFICATIONS  
For Daily Alerts

ನಿಮ್ಮ ಮನದ ಭಾವನೆಗಳನ್ನು ನಿಮ್ಮವರಿಗೆ ತಿಳಿಸುವುದು ಹೇಗೆ?

|

ನಿಮ್ಮ ಸುಮಧುರ ಸಂಬಂಧದ ಕೆಲವೊಂದು ಸನ್ನಿವೇಶಗಳಲ್ಲಿ, ನಿಮ್ಮವರು ನಿಮ್ಮ ಮನದ ಭಾವನೆಗಳನ್ನು ಅರ್ಥೈಸಿಕೊಳ್ಳುವಂತೆ ಮಾಡುವುದು ಹೇಗೆಂಬ ತಿರುವು ನಿಮ್ಮಲ್ಲಿ ಬಂದಿರಬಹುದು. ಇದನ್ನು ಸಾಕಾರಗೊಳಿಸಲು ಹೋಗಿ ನೀವು ಸೋಲನ್ನು ಅನುಭವಿಸಿದ್ದೂ ಇರಬಹುದು. ಕೆಲವೊಂದು ಪುರುಷರು ತಮ್ಮಾಕೆಯ ಮನದ ಭಾವನೆಗಳನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿರುತ್ತಾರೆ. ಇಂತಹ ಸಮಯದಲ್ಲಿ ನಿಮ್ಮನ್ನು ಕಾಡುವ ಪ್ರಶ್ನೆಯೊಂದೇ ನಿಮ್ಮ ಮನದ ಮಾತನ್ನು ನಿಮ್ಮವರು ತಿಳಿಯುವಂತೆ ಮಾಡುವುದು ಹೇಗೆಂಬುದು?

ಹಾಗಿದ್ದರೆ ನಿಮ್ಮ ಮನದ ಮಾತು ಅವರಿಗೆ ತಲುಪುವಂತೆ ಮಾಡುವುದು ಬಹು ಕಷ್ಟದ ಕೆಲಸ ಎಂಬುದು ಮಹಿಳೆಯರ ಮಾತಾಗಿದೆ. ತಮ್ಮ ಮನವನ್ನು ಅವರಲ್ಲಿ ಪ್ರದರ್ಶಿಸಬೇಕೆಂಬುದು ಮಹಿಳೆಯರ ತುಡಿತವಾಗಿದ್ದರೆ ಪುರುಷರಿಗೆ ಅದನ್ನೆಲ್ಲಾ ಕೇಳುವ ವ್ಯವಧಾನ ಇರುವುದಿಲ್ಲ. ಇದುವೇ ಸಂಬಂಧದ ನಡುವೆ ಬಿರುಕನ್ನು ಉಂಟುಮಾಡುವುದು. ಸಾಮರಸ್ಯದ ನೆಲೆಗಟ್ಟಲ್ಲಿ ವಾಸಿಸುವ ಮನಸ್ಸುಗಳು ಬೇರ್ಪಡುವುದು ಹೀಗೆಯೇ.

ನಾವು ಹೇಳಿದ್ದನ್ನು ಅವರು ಕೇಳಲಿಲ್ಲವೆಂದಲ್ಲಿ ನಮಗೆ ನಮ್ಮವರ ಮೇಲೆ ಸಂಶಯಬರಲು ಶುರುವಾಗುತ್ತದೆ. ನಾವಲ್ಲದೆ ನಮ್ಮವರ ಮನದಲ್ಲಿ ಬೇರೆ ಯಾರಾದರೂ ಸ್ಥಾನ ಪಡೆದುಕೊಂಡಿರುವಿರಾ ಎಂಬ ಆತಂಕ ನಮ್ಮದಾಗುತ್ತದೆ. ಹೌಸ್ ವೈಫ್ ಆಗಿರುವುದು ಎಷ್ಟು ಕಷ್ಟದ ಕೆಲಸ ಗೊತ್ತಾ?

ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಒಂದು ಸಮಾಧಾನ ಇರಲೇಬೇಕೆಂದೇ ಈ ಲೇಖವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಪುರುಷರೂ ಕೂಡ ಹಲವಾರು ಚಿಂತೆಗಳನ್ನು ತಮ್ಮ ಮನದಲ್ಲಿಟ್ಟುಕೊಂಡು ಬೇಯುತ್ತಿರುತ್ತಾರೆ. ಆದರೆ ಮಹಿಳೆಯರಿಗೆ ಮನದಾಳದ ಚಿಂತೆಯನ್ನು ಹೇಳಿಕೊಂಡಾಗಲೇ ತುಸು ಸಮಾಧಾನ. ಈ ತರಹದ ಇಬ್ಬಗೆಯ ವಾತಾವರಣವೇ ಸಂಬಂಧವನ್ನು ಕಂಗೆಡಿಸುತ್ತಿರುವುದು.

ವಾಗ್ವಾದ ಬೇಡ


ನಿಮ್ಮ ಸಂಬಂಧದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲು ನೀವು ಬಯಸುವುದಿದ್ದರೆ, ಅದರಲ್ಲಿ ಒಮ್ಮತದಿಂದಿರಿ, "ನಿಮ್ಮಿಂದಾಗದು" "ನೀವು ಯಾವಾಗಲೂ" ಮುಂತಾದ ಮಾತುಗಳನ್ನು ಅವರೆದುರಿಗೆ ಹೇಳಬೇಡಿ. ಹಳೆಯ ಜಗಳಗಳನ್ನು ಪುನಃ ಕೆದಕಬೇಡಿ.

ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಿ


ಪರಿಸ್ಥಿತಿಯನ್ನು ಅವರೊಂದಿಗೆ ಚರ್ಚಿಸಿ ಮತ್ತು ಅವರದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕೇಳಿಕೊಳ್ಳಿ. ನೀವು ಅದನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಅವರೊಂದಿಗೆ ವಿಚಾರಿಸಿ. ಇದು ನಿಮ್ಮಲ್ಲಿನ ವ್ಯತ್ಯಾಸಗಳನ್ನು ಪರಸ್ಪರ ಪ್ರೀತಿಯಿಂದ ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ಲೇಖನ ಓದಿರಿ


ಸಂಬಂಧದ ಬಗೆಗಿನ ಲೇಖನಗಳನ್ನು ಓದಿ ಇದರಿಂದ ನಿಮ್ಮವರನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬುದು ನಿಮಗೆ ಅರಿವಾಗುತ್ತದೆ.

ಹೋಲಿಕೆ ಬೇಡ


ಇನ್ನೊಂದು ಜೋಡಿಗಳನ್ನು ನಿಮ್ಮವರ ಎದುರಿಗೆ ಹೊಗಳುವುದು ನಿಮ್ಮ ಜೋಡಿಯನ್ನು ತೆಗಳುವುದು ಮಾಡದಿರಿ. ಇದು ನಿಮ್ಮ ಸಂಗಾತಿಯನ್ನು ಖಿನ್ನತೆ ಮತ್ತು ಅಸಹಾಯಕರನ್ನಾಗಿ ಮಾಡಬಹುದು, ಮತ್ತು ಸಂಬಂಧಗಳು ಯಾವಾಗಲೂ ಸರಿಯಾಗಿರುತ್ತದೆ ಎಂಬುದನ್ನು ತೀರ್ಮಾನಿಸದಿರಿ.

ಪ್ರಯತ್ನಗಳನ್ನು ಅಭಿನಂದಿಸಿ


ನಿಮ್ಮನ್ನು ಅವರು ಸ್ವಲ್ಪವಾದರೂ ಅರ್ಥಮಾಡಿಕೊಂಡಿದ್ದಾರೆ ಎಂದಾದಲ್ಲಿ ಅವರ ಪ್ರಯತ್ನಗಳನ್ನು ಅಭಿನಂದಿಸಿ. ಇದು ನಿಮ್ಮವರನ್ನು ಪ್ರೋತ್ಸಾಹಿಸುತ್ತದೆ ಮತ್ತು ಅವರಿಗೆ ನಿಮ್ಮ ಮೇಲಿನ ಪ್ರೀತಿ ಇದರಿಂದ ಹೆಚ್ಚುತ್ತದೆ.

ವೃತ್ತಿಪರ ಸಹಾಯ ಪಡೆದುಕೊಳ್ಳಿ


ಇವು ಯಾವುದೂ ನಿಮ್ಮ ಸಹಾಯಕ್ಕೆ ಬರದೆ ನೀವು ಇನ್ನೂ ಚಿಂತೆಯಲ್ಲಿದ್ದಲ್ಲಿ ಕೌನ್ಸಲಿಂಗ್ ಮಾಡಿಸಿಕೊಳ್ಳಿ; ನೀವು ಒಂಟಿಯಾಗಿ ಅಥವಾ ಜೊತೆಯಾಗಿ ಕೂಡ ಇದನ್ನು ಮಾಡಿಸಿಕೊಳ್ಳಬಹುದು; ವೃತ್ತಿಪರವಾಗಿ ನಿಮ್ಮ ಸಹಾಯವನ್ನು ಪರಿಹರಿಸಲು ಇವರುಗಳು ನಿಮಗೆ ಸಹಾಯ ಮಾಡುತ್ತಾರೆ.
English summary

Tips To Make A Man Understand Your Feelings

Men and women have very different approaches to life; most men aren’t as intuitive as women in understanding feelings or reading expressions.
Story first published: Tuesday, October 28, 2014, 18:26 [IST]
X
Desktop Bottom Promotion