For Quick Alerts
ALLOW NOTIFICATIONS  
For Daily Alerts

ಯಾವ ಹಂತದಲ್ಲಿ ನೀವು ಒಂದು ಸಂಬಂಧ ಬಿಡಬೇಕು ?

By Poornima Hegde
|

ತನಗೆ ಸರಿಹೊಂದುವಂತಹ ಜೊತೆಗಾರನನ್ನು/ಳನ್ನು ಆಯ್ದುಕೊಂಡು ಅವರ ಜೊತೆಗೆ ಜೀವನ ಸಾಗಿಸುವ ಒಂದು ಸುಂದರ ಮಾನವ ಒಕ್ಕೂಟ ಈ ಸಂಬಂಧ ಎನ್ನುವುದು. ಅದೇ ರೀತಿ, ಸಂಗಾತಿಯ ಜೊತೆಗಿ ತನಗೆ ಸರಿಹೊಂದದ ಪಕ್ಷದಲ್ಲಿ ಸಂಬಂಧಗಳಲ್ಲಿ ವಿಚ್ಛೇಧನ, ವಿಘಟನೆಗಳೂ ಸಾಮಾನ್ಯ.

ಸಂಬಂಧಕ್ಕೆ ಫ್ಲರ್ಟಿಂಗ್ ಯಾಕೆ ಒಳ್ಳೆಯದು?

ಆದರೆ ಒಂದು ತಮಾಷೆಯ ವಿಷಯವೆಂದರೆ ಈ ವಿಚ್ಛೇದನದ ಕ್ರಾಂತಿ ಅದೆಷ್ಟು ಬೇಗ ಹುಟ್ಟಿಕೊಳ್ಳುತ್ತದೆಯೆಂದರೆ, ಸಂಬಂಧ ಬೆಸೆಯುವ ಅಲ್ಪ ಅವಧಿಯಲ್ಲಿಯೇ ಸಂಬಂಧಗಳಿಗೆ ಇತಿಶ್ರೀ ಹೇಳಬೇಕಾಗುತ್ತದೆ. ಈ ಸಮಯದಲ್ಲಿ ಹುಟ್ಟಿಕೊಳ್ಳುವ ಎರಡು ಸಂಭವನೀಯ ಪ್ರಶ್ನೆಗಳೆಂದರೆ. ಅವರು ತಪ್ಪಾಗಿ ನಿಮ್ಮ ಸಂಗಾತಿಯನ್ನು ಜೀವನ ಪಾಲುದಾರರಾಗಿ ಆಯ್ಕೆ ಮಾಡಿಕೊಂಡಿದ್ದಾರೆಯೇ? ಅಥವಾ ಸಂಬಂಧದಲ್ಲಿನ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆಯೇ ?

Tips to know when you should leave a relationship?

ಅದನೇ ಇರಲಿ, ಯಾರಾದರೂ ಸಂಬಂಧಗಳಲ್ಲಿ ಮುಂದುವರೆಯಲು ಅತ್ಯಂತ ಕಷ್ಟ ಪಡುತ್ತಿದ್ದರೆ, ಅಥವಾ ಅತಿಯಾಗಿ ಕಿರಿಕಿರಿಯನ್ನು ಅನುಭಸುತ್ತಿದ್ದರೆ, ನಮ್ಮ ಸಲಹೆ ಅಂತಹ ಸಂಬಂಧಗಳಿಂದ ಮುಕ್ತಿ ಪಡೆಯುವುದು.
ನಿಮ್ಮ ಸಂಬಂಧ ಕೇವಲ ಸಮಸ್ಯೆಗಳು ಮತ್ತು ಅಸಮಾಧಾನವನ್ನು ಮಾತ್ರ ನೀಡುತ್ತದೆಯೆಂದಾದರೆ ಅಂತಹ ಸಂಬಂಧವನ್ನು ಬಿಟ್ಟು ಬಿಡುವುದೇ ಉತ್ತಮ. ಆಶಾಜನಕವಲ್ಲದ ಸಂಬಂಧ ಬಿಡಲು ಸರಿಯಾದ ಸಮಯವನ್ನು ನಿರ್ಧರಿಸಲು ಕೆಲವು ಸಲಹೆಗಳನ್ನು ಕೆಲವು ನೋಡೋಣ.

ನಿಮ್ಮ ಜೀವನದಲ್ಲಿ ಅನುಭವಿಸಿರುವಂತಹ ಏಳು ಬಗೆಯ ಪ್ರೀತಿ!

ನಿಂದನೆ ಮತ್ತು ನಿರಾಸಕ್ತಿಯನ್ನು ಅನುಭವಿಸಿದರೆ:
ನೀವು ಗೌರವ ಮತ್ತು ಕಾಳಜಿಯ ಬದಲಿಗೆ ನಿರಂತರವಾಗಿ ನಿಂದನೆ ಅನುಭವಿಸುತ್ತಿದ್ದರೆ, ನೀವು ನಿಮ್ಮ ಸಂಬಂಧವನ್ನು ಬಿಟ್ಟು ಆ ವ್ಯಕ್ತಿಯಿಂದ ದೂರ ಉಳಿಯುವುದು ಉತ್ತಮ. ಪ್ರತಿಯೊಬ್ಬರು ಸಂಬಂಧದ ಬಂಧಕ್ಕೆ ಬೆಸೆದುಕೊಳ್ಳುವ ಗುರಿ, ಖುಷಿ ಮತ್ತು ತೃಪ್ತಿಯಿಂದ ಇರುವುದು. ಸಂಗಾತಿಯಾದವನು/ಳು ಸಾಂಬಂಧದಲ್ಲಿ ಪರಸ್ಪರ ಕಾಳಜಿ ಮತ್ತು ಒಬ್ಬರನ್ನೊಬರು ಅರ್ಥ ಮಾಡಿಕೊಳ್ಳಬೇಕು. ಭಾವನಾತ್ಮಕ ಅಥವಾ ದೈಹಿಕ ದುರ್ಬಳಕೆಯಾದರೆ, ನಿಮ್ಮ ಮನಸ್ಸಿನ ಮೇಲೆ ಸಂಗಾತಿ ನಿಂದನಾ ನಡವಳಿಕೆ ಪರಿಣಾಮ ಬಿದ್ದರೆ, ತಕ್ಷಣವೇ ನೀವು ಅವರನ್ನು ಬಿಡುವುದು ಸೂಕ್ತ.

ಯಾವಾಗ ಪ್ರೀತಿ ಕಡಿಮೆಯಾಗುತ್ತದೆಯೋ :
ಜನರು ಇನ್ನೊಬ್ಬರ ಜೊತೆ ಸಂಬಂಧದಲ್ಲಿ ಭಾಗಿಯಾಗುತ್ತಿದ್ದಂತೆ ಅವರ ನಡುವೆ ಪ್ರೀತಿ ಪ್ರಣಯಗಳು ಆರಂಭವಾಗುತ್ತದೆ. ಆದರೆ ನಿಮ್ಮ ಪಾಲುದಾರರರು ಸಂಬಂಧ ಪ್ರೀತಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ನಿಮ್ಮ ಸಂಬಂಧ ಪರಿಣಾಮಕಾರಿಯಾಗಿ ಮುಂದೆ ಹೋಗಲು ಸಾಧ್ಯವಿಲ್ಲ. ನಿಮ್ಮ ಮೇಲೆ ಪ್ರೀತಿಯೇ ಇರದ ಅಥವಾ ಅಥವಾ ನಿಮ್ಮೊಂದಿಗೆ ಅಸಭ್ಯವಾಗಿ ವರ್ತಿಸುವ ಸಂಗಾತಿಯ ಜೊತೆ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಸಂಬಂಧದಲ್ಲಿ ಪ್ರಣಯದ ಕೊರತೆಗೆ, ಆಸಕ್ತಿಯ ಕೊರತೆಯೇ ಕಾರಣ. ಇದರಿಂದ ನಿಮ್ಮ ಪ್ರೀತಿ ಕೆಳಗೆ ಇಳಿದಾಗ, ಇದರಿಂದ ಸಂಬಂಧವನ್ನು ಮುಂದುವರೆಸುವ ಬದಲು ದೂರವಾಗುವುದೇ ಒಳ್ಳೆಯದು.

ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ?

ನಂಬಿಕೆ ಸುಳ್ಳಾದಾಗ
ಪರಸ್ಪರ ವಿಶ್ವಾಸ. ಪ್ರತಿ ಸಂಬಂಧಕ್ಕೆ ಅಗತ್ಯ. ಮತ್ತು ಇದಕ್ಕೆ ಬದ್ಧರಾಗುರಬೇಕು. ನಂಬಿಕೆ. ಇನ್ನೊಬ್ಬ ವ್ಯಕ್ತಿಯ ಬಗ್ಗೆ ನಿಮಗಿರುವ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುವ ದಾರಿ. ಸಂಬಂಧದಲ್ಲಿ ಗಂಡ ಯಾ ಹೆಂಡತಿ ನಂಬಿಕೆಯನ್ನು ನಿರ್ವಹಿಸಲು ಅಸಮರ್ಥವಾಗಿದ್ದರೆ ಅಂತಹ ಸಂಬಂಧ ಮುಂದುವರೆಯುವುದರಲ್ಲಿ ಯಾವ ಅರ್ಥವೂ ಇಲ್ಲ.

ಖಿನ್ನತೆಗೆ ಅಥವಾ ಅತೃಪ್ತಿ ಭಾವ ಉಂಟಾದರೆ
ಖುಷಿ ಮತ್ತು ಶಾಂತಿಯುತ ಜೀವನದ ಬದಲಿಗೆ ಖಿನ್ನತೆ, ಅತೃಪ್ತಿಯನ್ನೇ ನಿಮ್ಮ ಸಂಬಂಧ ನೀಡುತ್ತಿದ್ದರೆ, ಆ ಸಂಬಂಧದಿಂದ ಆದಷ್ಟು ಬೇಗ ಹಿಂದೆ ಸರಿಯುವುದು ಉತ್ತಮ. ಖಿನ್ನತೆ ನಿಮ್ಮ ಸ್ವಂತ ಮನಸ್ಥಿತಿ ಅಥವಾ ಸಂಬಂಧದ ನಿದರ್ಶನಗಳಿಂದ ಉಂಟಾಗಿದೆಯೋ ಎಂಬುದನ್ನು ಮೊದಲು ವಿಶ್ಲೇಷಿಸಿ. ಇದು ನಿಮ್ಮ ಸಂಬಂಧದ ಸಮಸ್ಯೆಗಳಿಂದ ಉಂಟಾಗಿದ್ದರೆ, ಆಗ ಸಂಬಂಧ ಸಹಜವಾಗಿ ನಿಮ್ಮ ಜೀವನದಲ್ಲಿ ಕಪ್ಪು ಚುಕ್ಕಿಯಾಗಬಹುದು. ಆದ್ದರಿಂದ ನಿಮ್ಮ ಮುಂದಿನ ಭವಿಷ್ಯ ನಿವೇ ನಿರ್ಧಾರ ಮಾಡಿಕೊಳ್ಳಿ.

English summary

Tips to know when you should leave a relationship?

Relationship is beautiful union of two human beings for the same cause which begins when they find they are soul mates and customarily breakup when they feel the other person as the most unsuitable match he/she can ever find.
Story first published: Monday, May 5, 2014, 15:44 [IST]
X
Desktop Bottom Promotion