For Quick Alerts
ALLOW NOTIFICATIONS  
For Daily Alerts

ನಿಮ್ಮ ಪತ್ನಿ ಎದುರು ಇಂತಹ ಗುಟ್ಟುಗಳನ್ನು ರಟ್ಟುಮಾಡದಿರಿ!

|

ಪ್ರತಿಯೊಂದು ಜೀವನದ ಅಡಿಪಾಯ ನಂಬಿಕೆ ಮತ್ತು ಗೌರವವಾಗಿದೆ. ನಿಮ್ಮ ಸಂಬಂಧ ಚೆನ್ನಾಗಿ ಮುಂದುವರಿಯಬೇಕೆಂದಲ್ಲಿ ನಿಮ್ಮ ಸಂಗಾತಿಯೊಂದಿಗಿನ ವಿಶ್ವಾಸ ಅತೀ ಮುಖ್ಯವಾಗಿರುತ್ತದೆ. ನಿಮ್ಮೊಳಗಿನ ಗೌರವವನ್ನು ಅವರು ಗುರುತಿಸಬೇಕೆಂದು ನೀವು ಹೇಗೆ ಬಯಸುತ್ತೀರೋ ಅದೇ ರೀತಿ ಅವರು ನಿಮ್ಮನ್ನು ಗುರುತಿಸುವಂತಾಗಲು ನಿಮ್ಮ ಪ್ರೀತಿಯ ಬೆಸುಗೆ ಸಂಸಾರದಲ್ಲಿ ಅತೀ ಅಗತ್ಯ.

ಸಂಸಾರ ರಥದ ಎರಡು ಚಕ್ರಗಳೆಂಬ ದಂಪತಿಗಳು ಅನ್ಯೋನ್ಯವಾಗಿದ್ದಲ್ಲಿ ಮಾತ್ರವೇ ಹಾಲು ಜೇನಿನಂತೆ ದಾಂಪತ್ಯ ಸುಂದರವಾಗಿರುತ್ತದೆ. ನಿಮ್ಮ ಸಂಸಾರದಲ್ಲಿ ಗುಟ್ಟುಗಳನ್ನು ಆದಷ್ಟು ನಿಮ್ಮ ಪತ್ನಿಗೆ ಗೊತ್ತಾಗದಂತೆ ನಿರ್ವಹಿಸುವುದೂ ಕೂಡ ಸಂಸಾರದ ಉಳಿಕೆಗೆ ಮುಖ್ಯವಾಗಿರುವುದು ಎಂಬುದು ನಿಮಗೆ ತಿಳಿದಿದೆಯೇ?

Things You Should Never Say To Your Wife

ನಿಮ್ಮಲ್ಲಿರುವ ಎಲ್ಲಾ ರಹಸ್ಯವನ್ನು ನಿಮ್ಮ ಪತ್ನಿಗೆ ತಿಳಿಸಬೇಕೆಂದೇನಿಲ್ಲ. ಕೆಲವು ಗುಟ್ಟು ರಹಸ್ಯಗಳನ್ನು ನಿಮ್ಮ ಹೆಂಡತಿಯಲ್ಲಿ ಹೇಗೆ ಮುಚ್ಚಿಡಬಾರದೋ ಅದೇ ರೀತಿ ಕೆಲವೊಂದು ರಹಸ್ಯಗಳನ್ನು ಅವರಿಗೆ ತಿಳಿಸದೆಯೇ ಅದನ್ನು ಅವರ ಒಲವನ್ನು ನೀವು ಪಡೆಯಬೇಕು.

ಇಂದಿನ ಲೇಖನದಲ್ಲಿ ನಿಮ್ಮ ಪತ್ನಿಗೆ ನೀವು ತಿಳಿಸಲೇಬಾರದ ಕೆಲವು ರಹಸ್ಯಗಳನ್ನು ಇಲ್ಲಿ ನಾವು ತಿಳಿಸುತ್ತಿದ್ದೇವೆ. ನಿಮ್ಮ ಕುಟುಂಬ ನಂದನವನವಾಗಬೇಕಾದರೆ ಈ ರಹಸ್ಯಗಳನ್ನು ನೀವು ನಿಮ್ಮಲ್ಲಿಯೇ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಹಾಗಿದ್ದರೆ ಅವು ಯಾವುದು ಎಂಬುದನ್ನು ಅರಿತುಕೊಳ್ಳೋಣ.

ವಯಸ್ಸಿನ ಕುರಿತು
ನಿಮ್ಮ ಪತ್ನಿಗೆ ಎಷ್ಟು ವಯಸ್ಸಾಗಿದ್ದರೂ ಅದನ್ನು ತೋರ್ಪಡಿಸದಿರಿ. ಅವರು ಸುಂದರವಾಗಿರುವುದು ನಿಮ್ಮನ್ನು ಆಕರ್ಷಿಸಲು ಎಂಬುದನ್ನು ಮರೆಯದಿರಿ. ಅವರ ರೂಪ ಲಾವಣ್ಯ ಏನಿದ್ದರೂ ಅದು ನಿಮ್ಮನ್ನು ಮೋಡಿ ಮಾಡಲು ಇರುವುದಾಗಿದೆ. ಆದ್ದರಿಂದ ತಾವು ಸುಂದರವಾಗಿ ಕಾಣುತ್ತಿದ್ದೇವೆಯೇ ಎಂದು ಅವರು ನಿಮ್ಮನ್ನು ಕೇಳಿದಾಗ ಹೌದು ಎಂದು ಹೇಳಿ. ಅವರಿಗೆ ವಯಸ್ಸಾಗಿದೆ ಎಂಬುದನ್ನು ಅವರೆದುರು ಆಡಿಕೊಳ್ಳದಿರಿ.

ನಿಮ್ಮ ಮುದ್ದಿನ ಪತ್ನಿಯನ್ನು ಪ್ರೀತಿಸಲು ಬಜೆಟ್ ನೋಡಬೇಡಿ!

ಪತ್ನಿಯನ್ನು ಹೊಗಳಿ
ಹೊಗಳಿಕೆ ಯಾರಿಗೆ ಪ್ರಿಯವಲ್ಲ ಹೇಳಿ? ಅದರಲ್ಲೂ ಹೆಂಗಳೆಯರಿಗೆ ತಮ್ಮನ್ನು ಹೊಗಳುವ ಪತಿರಾಯರೆಂದರೆ ತುಂಬಾ ಪ್ರೀತಿ ಇರುತ್ತದೆ ಎಂಬುದನ್ನು ಮಾತ್ರ ಮರೆಯದಿರಿ. ಅವರನ್ನು ಯಾವಾಗಲೂ ಇತರರಿಗೆ ಹೋಲಿಸಿ ಮಾತನಾಡಿ. ಈ ಭೂಮಿಯಲ್ಲಿರುವ ಅತಿ ಸುಂದರಿ ನೀವೇ ಎಂದು ಹೇಳಿ. ಇದರಿಂದ ನಿಮ್ಮ ನಡುವೆ ವಾಗ್ವಾದಗಳು ಕಡಿಮೆಯಾಗುತ್ತದೆ ಮತ್ತು ಅವರು ನಿಮ್ಮನ್ನು ಇನ್ನಷ್ಟು ಹೆಚ್ಚು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ಬೆಂಬಲಿಸುತ್ತಾರೆ. ನಿಮ್ಮ ಪ್ರೀತಿ ಒಲವು ಅವರಿಗೆ ಅರ್ಥವಾಗುತ್ತದೆ.

ಜಿಮ್‌ಗೆ ಸೇರುವುದು
ನಿಮ್ಮ ತಲೆಯಲ್ಲಿ ಜಿಮ್‌ನ ಕಲ್ಪನೆ ಬಂತೆಂದರೆ ಅದು ನಿಮ್ಮನ್ನು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುತ್ತದೆ. ಆದರೆ ನಿಮ್ಮ ಪತ್ನಿ ತುಸು ದಪ್ಪನಾಗಿ ತೋರುತ್ತಿದ್ದರೆ ಆಕೆಯನ್ನು ಮೂದಲಿಸದಿರಿ. ನಿಮ್ಮೊಂದಿಗೆ ಆಕೆಯನ್ನು ಕೂಡ ಜಿಮ್‌ಗೆ ಕರೆದುಕೊಂಡು ಹೋಗಿ. ನೀವಿಬ್ಬರೂ ಜಿಮ್‌ಗೆ ಹೋಗುವ ಬೇಡಿಕೆಯನ್ನು ಆಕೆಯ ಮುಂದೆ ನೇರವಾಗಿ ವ್ಯಕ್ತಪಡಿಸದಿರಿ. ಅಲ್ಲಿಗೆ ಹೋಗುವುದರಿಂದ ಉಂಟಾಗುವ ಪ್ರಯೋಜನಗಳನ್ನು ಆಕೆಗೆ ತಿಳಿಸಿ ಹೇಳಿ.

ಅಮ್ಮನಿಗೆ ಹೋಲಿಸುವುದು
ನಿಮ್ಮ ಜೀವನದಲ್ಲಿ ನಿಮ್ಮ ತಾಯಿಯದು ಮಹತ್ವದ ಪಾತ್ರವಾಗಿದೆ. ನಿಮ್ಮ ಪತ್ನಿ ಅದನ್ನು ಅರ್ಥಮಾಡಿಕೊಂಡಿರುತ್ತಾರೆ. ಆದರೆ ನಿಮ್ಮ ಹೆಂಡತಿಗೂ ಒಂದು ಸ್ವಂತ ವ್ಯಕ್ತಿತ್ವವಿರುತ್ತದೆ. ನಿಮ್ಮ ತಾಯಿಯಂತೆ ಆಕೆಯಲ್ಲ. ನಿಮ್ಮ ತಾಯಿಯಂತೆ ಆಕೆ ಇರಬೇಕು ಎಂದು ಅಪೇಕ್ಷಿಸದಿರಿ ಇದು ನಿಮ್ಮ ಸಂಸಾರದಲ್ಲಿ ಅಪಸ್ವರಗಳನ್ನು ಉಂಟುಮಾಡಬಹುದು. ಇಂತಹ ಮಾತುಗಳನ್ನು ನಿಮ್ಮ ಪತ್ನಿಯ ಎದುರು ಆಡದಿರಿ.

ಅತಿಯಾಗಿ ಭಾವುಕರಾಗುವುದು
ನಿಮ್ಮ ಪತ್ನಿಗೆ ಒಂದು ವಿಷಯವನ್ನು ನೀವು ಹೇಳಲೇಬೇಕು ಎಂದಾದಲ್ಲಿ ಅದನ್ನು ಎರಡು ಬಾರಿ ಆಲೋಚಿಸಿ. ಅದನ್ನು ಆಕೆ ಹೇಗೆ ಸ್ವೀಕರಿಸುತ್ತಾಳೆ ಎಂಬುದು ಆಕೆಗೆ ಬಿಟ್ಟಿರುವಂಥದ್ದು. ಹೆಣ್ಣಿನಲ್ಲಿ ದುಃಖ ಮತ್ತು ಸಂತೋಷ ಎಂಬ ಎರಡು ಹಾರ್ಮೋನುಗಳಿರುತ್ತವೆ ಆದ್ದರಿಂದ ವಿಷಯವು ನಿಮ್ಮ ಪತ್ನಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಕುರಿತು ಚಿಂತಿಸಿ.

ತನ್ನ ಗಂಡನ ಸಹಕಾರವಿಲ್ಲದೆ ಮಹಿಳೆಯರು ಏನೆಲ್ಲಾ ಮಾಡಬಹುದು?

ಮನಸ್ಸಿಗೆ ನೋವನ್ನುಂಟು ಮಾಡುವ ವಿಷಯದಿಂದ ದೂರವಿರಿ
ಕೆಲವೊಮ್ಮೆ ಆಕೆಗೆ ನೀವು ಹೇಳುವ ವಿಷಯ ಅಧಿಕ ನೋವನ್ನುಂಟು ಮಾಡಬಹುದು ಅಥವಾ ಆಘಾತವನ್ನುಂಟು ಮಾಡಬಹುದು ಎಂದಾದಲ್ಲಿ ಆ ವಿಷಯದ ಪ್ರಸ್ತಾಪನೆಯನ್ನೇ ಮಾಡದಿರಿ. ಇದರಿಂದ ನಿಮ್ಮ ಮನಸ್ಸಿಗೆ ಮತ್ತು ಅವರ ಮನಸ್ಸಿಗೆ ಕೂಡ ಸಮಾಧಾನವುಂಟಾಗುತ್ತದೆ. ಹಾಗಾಗಿ ಈ ತೊಂದರೆಗಳಿಂದ ನಿಮ್ಮ ಸಂಸಾರದಲ್ಲಿ ಉಂಟಾಗಬಹುದಾದ ವಿಷಯವನ್ನು ಗುಟ್ಟಾಗಿ ಇಡುವುದರಿಂದ ಸಮಸ್ಯೆ ಮಾಯವಾಗಬಹುದು.

ಆಕೆ ಆಕರ್ಷಕವಾಗಿಲ್ಲವೇ?
ನೀವು ನಿಮ್ಮ ಪತ್ನಿಯ ಎದುರಿಗೆ ಇನ್ನೊಬ್ಬ ಮಹಿಳೆಯನ್ನು ಅಥವಾ ನಟಿಯನ್ನು ಹೊಗಳಿದರೆ ನೂರರಲ್ಲಿ ಹತ್ತು ಭಾಗ ಮಾತ್ರವೇ ನಿಮ್ಮ ಪರ ನಿಲ್ಲುತ್ತಾಳೆ. ಆದರೆ ಶೇಕಡಾವಾರು ಎಲ್ಲಾ ಪತ್ನಿಯಂದಿರು ತಮ್ಮ ಪತಿಯನ್ನೇ ಇಡಿಯಾಗಿ ನುಂಗಿಬಿಡುವಷ್ಟು ಸಿಟ್ಟನ್ನು ತೋರ್ಪಡಿಸುತ್ತಾರೆ. ಆದ್ದರಿಂದ ಇನ್ನೊಂದು ಹೆಣ್ಣಿಗೆ ನಿಮ್ಮ ಪತ್ನಿಯನ್ನು ಹೋಲಿಸುವಾಗ ಜಾಗರೂಕರಾಗಿರಿ.

English summary

Things You Should Never Say To Your Wife

Every relationship is based on trust and honesty. It’s said that you need to be honest with your partner. There are many things to never say to your wife. Here is a list of those things. Try to memorise them so that you don’t make the mistake
Story first published: Tuesday, August 12, 2014, 13:12 [IST]
X
Desktop Bottom Promotion