For Quick Alerts
ALLOW NOTIFICATIONS  
For Daily Alerts

ಭಾರತೀಯ ವಿವಾಹವನ್ನು ಅತಿ ವಿಶಿಷ್ಟಗೊಳಿಸುವ ಅಂಶಗಳಿವು

|

"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು", " ಮದುವೆಯೆನ್ನುವುದು ಬ್ರಹ್ಮ ಗಂಟು", " ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ" ಆದರೆ ಕಲ್ಯಾಣ ಮಂಟಪ ಮಾತ್ರ ಇಲ್ಲಿ ಬುಕ್ ಮಾಡಲಾಗಿರುತ್ತದೆ. ಭಾರತೀಯ ಮದುವೆಯೆಂದರೆ ಹಲವಾರು ವಿಚಾರಗಳು ಹೀಗೆ ಸುಮ್ಮನೆ ಮನಸ್ಸಿನಲ್ಲಿ ಹಾದು ಹೋಗುತ್ತವೆ. ಅದರಲ್ಲೂ ಕೆಲವೊಂದು ವಿಚಾರಗಳಂತು ನೆನಸಿಕೊಂಡರೆ ವಿಚಿತ್ರವಾಗಿ ತೋರುತ್ತವೆ. ಉದಾಹರಣೆಗೆ ವಧುವನ್ನು ಆರಿಸುವಾಗ ತ್ವಚೆಯ ಬಣ್ಣವು ತುಂಬಾ ಪ್ರಧಾನವಾಗಿರುತ್ತದೆ.

ಇನ್ನೂ ಹುಡುಗಿಯರ ಮನೆಯವರು ನೋಡುವುದು ಅಧಿಕ ಬ್ಯಾಂಕ್ ಬ್ಯಾಲೆನ್ಸ್ ಅಥವಾ ಅತ್ಯಧಿಕ ಸಂಪಾದನೆಯನ್ನು ಪಡೆಯುವ ಸಂಬಳವನ್ನು ಪಡೆಯುವ ಹುಡುಗನನ್ನು. ಹೀಗೆ ಸಾಗುತ್ತದೆ ಭಾರತೀಯ ಮದುವೆಗಳ ಕೊಡು ಕೊಳ್ಳುವಿಕೆಗಳು. ನೀವು ಮದುವೆಗಳಲ್ಲಿ ಏನೇನು ನೋಡುತ್ತೀರೋ, ಅದೆಲ್ಲ ಸತ್ಯ. ವಿವಿಧ ಬಗೆಯ ಸಂಪ್ರದಾಯಗಳು ಮತ್ತು ಆಚರಣೆಗಳ ಸಲುವಾಗಿ ಭಾರತೀಯ ಮದುವೆಯು ನೋಡಲು ತುಂಬಾ ಸೊಗಸಾಗಿ ಇರುತ್ತದೆ. ಅದೇ ಸಮಯಕ್ಕೆ ವಿಶಾಲ ಮನೋಭಾವವನ್ನು ಹೊಂದಿರುವವರಿಗೆ ಈ ಮದುವೆಗಳು ನಿಜಕ್ಕು ಬೇಸರವನ್ನು ತರಿಸುತ್ತವೆ.

ಬಹುತೇಕ ಭಾರತೀಯ ಗಂಡಸರು ವಿದ್ಯಾವಂತರಾಗಿದ್ದರು ಸಹ ಯಾವುದೇ ಸಂಕೋಚವಿಲ್ಲದೆ ವರದಕ್ಷಿಣೆಯನ್ನು ತೆಗೆದುಕೊಳ್ಳುತ್ತಾರೆ. ಇದು ಭಾರತೀಯ ಮದುವೆಯ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೂ ಕೆಲವು ಜೋಡಿಗಳು ಈ ಮದುವೆಗಳಲ್ಲಿ ಕೆಲವೊಂದು ಆಚರಣೆಗಳನ್ನು ಬಿಡಬೇಕೆಂದು ಮತ್ತು ಇನ್ನೂ ಕೆಲವನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕೆಂದು ಬಯಸುತ್ತವೆ. ಬನ್ನಿ ಹಾಗಾದರೆ ಮದುವೆಗಳಲ್ಲಿ ಏನು ನಡೆಯುತ್ತವೆ ಎಂಬ ಬಗ್ಗೆ ಸುಮ್ಮನೆ ಒಂದು ನೋಟ ಹರಿಸಿ ಬರೋಣ.

ವಿವಾಹ ಪೂರ್ವ ಮಿಲನ ಏಕೆ ಸಲ್ಲದು? ಇಲ್ಲಿದೆ 10 ಕಾರಣಗಳು

ವರದಕ್ಷಿಣೆ ವ್ಯವಸ್ಥೆ

ವರದಕ್ಷಿಣೆ ವ್ಯವಸ್ಥೆ

ಭಾರತದಲ್ಲಿ ಮದುವೆಯೆಂದರೆ ವರದಕ್ಷಿಣೆಯೆನ್ನುವಷ್ಟರ ಮಟ್ಟಿಗೆ ಇದು ಮದುವೆಯ ಅವಿಭಾಜ್ಯ ಅಂಗವಾಗಿ ಹೋಗಿದೆ. ಪ್ರತಿಯೊಂದು ಮದುವೆಯಲ್ಲೂ ಹುಡುಗನ ಮನೆಯವರ ಕೋರಿಕೆಯ ಪ್ರಕಾರ ವರದಕ್ಷಿಣೆಯ ಮೊತ್ತವು ಸಂದಾಯವಾಗುತ್ತದೆ. ಇದು ಇಷ್ಟೇ ಇರಬೇಕು ಮತ್ತು ಇಷ್ಟು ಇರಬಾರದು ಎಂಬ ಯಾವ ನಿಯಮವು ಸಹ ಇಲ್ಲ. ಅವರವರ ಭಾವ ಮತ್ತು ಭಕುತಿಗೆ ಅನುಸಾರವಾಗಿ ಇದು ನಿರ್ಧಾರವಾಗುತ್ತ ಹೋಗುತ್ತದೆ.

ನೀವು ನೋಡಲು ಸುಂದರವಾಗಿರಬೇಕು

ನೀವು ನೋಡಲು ಸುಂದರವಾಗಿರಬೇಕು

ಒಂದೊಮ್ಮೆ ನೀವು ನೋಡಲು ಸುಂದರವಾಗಿರದ ವಧುವಾಗಿದ್ದಲ್ಲಿ, ನಿಮ್ಮನ್ನು ನೋಡಿದ ತಕ್ಷಣಕ್ಕೆ ನಿರಾಕರಿಸಲಾಗುವುದು. ಹಾಗೆಂದ ಮಾತ್ರಕ್ಕೆ ನಿಮ್ಮನ್ನು ಮದುವೆಯಾಗಬೇಕೆಂದಿರುವ ವರ ಮಹಾಶಯನು ನೋಡಲು ಸುಂದರವಾಗಿರಬೇಕು ಎಂದು ಭಾವಿಸಬೇಡಿ. ಏಕೆಂದರೆ ಭಾರತೀಯ ಸಮಾಜದಲ್ಲಿ ನೋಡಲು ಲಕ್ಷಣವಾಗಿರುವ, ರೂಪವತಿಯಾದ ಎಂದೇ ಇವರ ಹುಡುಕಾಟ ಶುರುವಾಗಿ, ಅನುಕೂಲಸ್ಥ ಮನೆತನದ, ಓದಿರುವ, ಗುಣವಂತೆಯಾದ ವಧು ಬೇಕಾಗಿದ್ದಾಳೆ ಎಂದು ಅಂತ್ಯವಾಗುತ್ತದೆ!!!!!.

ಆಭರಣಗಳು

ಆಭರಣಗಳು

ಆಭರಣಗಳಿಲ್ಲದೆ ಮದುವೆಯಾಗಲು ಸಾಧ್ಯವೇ?, ಮದುವೆ ಇನ್ನೂ ಕೆಲವು ವರ್ಷಗಳು ಇರುವಾಗಲೇ ಒಡವೆ- ಆಭರಣಗಳು ಹೆಣ್ಣಿನ ಆಯಕಟ್ಟಿನ ಸ್ಥಳಗಳಿಗೆ ಬಂದು ಕೂರುತ್ತವೆ. ಭಾರತದಲ್ಲಿ ಆಭರಣಗಳಿಲ್ಲದ ಮದುವೆಗಳು ನಡೆಯುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇನ್ನು ಕೆಲವು ವಧುಗಳಂತು ತಮ್ಮ ತೂಕದ ಅರ್ಧದಷ್ಟು ಒಡವೆಗಳನ್ನು ಹೊತ್ತು ತಿರುಗುತ್ತಾರೆ.

ಹೆಚ್ಚಿನ ಬ್ಯಾಂಕ್ ಬ್ಯಾಲೆನ್ಸ್

ಹೆಚ್ಚಿನ ಬ್ಯಾಂಕ್ ಬ್ಯಾಲೆನ್ಸ್

"ಸ್ನೇಹ ಮಾಡುವಂತಿದ್ದರೆ ಒಂದು ಹೆಜ್ಜೆ ಮೇಲೆ ಹೋಗು, ಹೆಣ್ಣು ತರುವಾಗ ಒಂದು ಹೆಜ್ಜೆ ಕೆಳಗೆ ಹೋಗು" ಎಂದು ಹೇಳುತ್ತಾರೆ ಹಿರಿಯರು. ಇದರರ್ಥ ಹೆಣ್ಣನ್ನು ಮಾಡಿಕೊಳ್ಳುವಾಗ ನಮ್ಮ ಅಂತಸ್ತಿಗಿಂತ ಕಡಿಮೆಯಿರುವ ಹೆಣ್ಣನ್ನು ಮಾಡಿಕೊಳ್ಳಬೇಕು ಎಂಬುದಾಗಿತ್ತು. ಈಗ ಕಾಲ ಬದಲಾಗಿದೆ. ನಿಮಗಿಂತ ಮೊದಲು ಹೆಣ್ಣನ್ನು ಸಾಕಲು ಯೋಗ್ಯತೆ ಇದೆಯೇ ಎಂದು ಹೆಣ್ಣಿನ ಪೋಷಕರು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗೆಗೆ ಪತ್ತೆದಾರಿಕೆಯನ್ನು ಆರಂಭಿಸಿರುತ್ತಾರೆ. ಅದಕ್ಕಾಗಿ ನಿಮ್ಮ ಸಂಬಳ ಮತ್ತು ಬ್ಯಾಂಕ್ ಬ್ಯಾಲೆನ್ಸ್‌ ಅನ್ನು ಚೆನ್ನಾಗಿ ನೋಡಿಕೊಳ್ಳಿ.

ಕಣ್ಣೀರಿನ ಬೀಳ್ಕೊಡುಗೆ

ಕಣ್ಣೀರಿನ ಬೀಳ್ಕೊಡುಗೆ

ನೀವು ಗಂಡನ ಮನೆಗೆ ಹೊರಡುವಾಗ ಕಣ್ಣೀರು ಹಾಕಲಿಲ್ಲವಾದರೆ, ಅದನ್ನು ಅಪ ಶಕುನ ಅಥವಾ ದುರಾದೃಷ್ಟವೆಂದು ಪರಿಗಣಿಸಲಾಗುತ್ತದೆ. ಹಿರಿಯರ ಪ್ರಕಾರ ನೀವು ಮದುವೆಯಂದು ಅಳಲಿಲ್ಲವಾದರೆ ನಿಮ್ಮ ಮದುವೆಯು ದುರಾದೃಷ್ಟದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಯಾಕೆ ಬಂತು ಅಕಸ್ಮಾತ್ ನೀವು ಮದುವೆಯಾಗುತ್ತಿದ್ದಲ್ಲಿ, ಅಥವಾ ಇನ್ನೂ ಆಗ ಬೇಕೆಂದರೆ ಅತ್ತು ಬಿಡಿ. ಆಮೇಲೆ ಯಾರ ಬೇಕಾದರು ಅಳಲಿ!!.

ಎಲ್ಲಾನೂ ಮಾಡುವುದು ಮಕ್ಕಳಿಗಾಗಿ

ಎಲ್ಲಾನೂ ಮಾಡುವುದು ಮಕ್ಕಳಿಗಾಗಿ

ಭಾರತೀಯ ಮದುವೆಯ ಮೊದಲ ಉದ್ದೇಶವೇ ವಂಶಾಭಿವೃದ್ಧಿ. ನೀವು ಮದುವೆಯಾದ ಮೇಲೆ ನಿಮ್ಮ ಮೇಲೆ ಬರುವ ಅತಿ ದೊಡ್ಡ ಜವಾಬ್ದಾರಿ ಇದು. ಒಂದು ವೇಳೆ ನೀವು ಮದುವೆಯಾದ ನಂತರ ನಿಧಾನವಾಗಿ ಮಕ್ಕಳ ಬಗ್ಗೆ ಯೋಚಿಸುತ್ತೇವೆ ಎಂದರೆ ಮನೆಯಲ್ಲಿರುವ ಹಿರಿಯರು ಒಪ್ಪುವುದಿಲ್ಲ. ಅದರಲ್ಲೂ ಅತಿ ಹೆಚ್ಚು ದಿನ ಕಾಯಲು ಅವರು ಸುತರಾಂ ತಯಾರಿರುವುದಿಲ್ಲ.

ತಲೆ ಮ್ಯಾಲೊಂದು ಸೂರು

ತಲೆ ಮ್ಯಾಲೊಂದು ಸೂರು

ಹೊಸದಾಗಿ ಮದುವೆಯಾದವರಿಗಾಗಿಯೇ, ಹೊಸ ಮನೆ, ಫ್ಲಾಟ್ ಕೊಡಿಸುವವರು ಇದ್ದಾರೆ, ಇನ್ನೂ ಕೆಲವರು ಮಾಡಿಕೊಳ್ಳುತ್ತಾರೆ ಕೂಡಾ. ಆಗ ಶುರುವಾಗುವುದು, ಹೊಸ ಮನೆ, ಹೊಸ ಹೆಂಡತಿ, ಹೊಸ ಬಾಳು, ಅದ್ಭುತ!!!!

ಕುಟುಂಬಕ್ಕೆ ಮೊದಲ ಆಧ್ಯತೆ

ಕುಟುಂಬಕ್ಕೆ ಮೊದಲ ಆಧ್ಯತೆ

ನಾವು ಇಲ್ಲಿ ನಿಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಗಂಡನ ಕುಟುಂಬದ ಬಗ್ಗೆ ಮಾತನಾಡುತ್ತಿದ್ದೇವೆ. ಮದುವೆಯಾದ ಮೇಲೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗು" ಎಂಬ ಗಾದೆಯಂತೆ, ಅವರ ಕುಟುಂಬಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಾಗುತ್ತದೆ.

ಜಾತಿ ಮತ್ತು ಜಾತಿ ವ್ಯವಸ್ಥೆ

ಜಾತಿ ಮತ್ತು ಜಾತಿ ವ್ಯವಸ್ಥೆ

ಭಾರತದಲ್ಲಿ ಜಾತಿ ವ್ಯವಸ್ಥೆ ತುಂಬಾ ಕಠೋರವಾಗಿರುತ್ತದೆ. ಹುಡುಗ ಮತ್ತು ಹುಡುಗಿ ಒಂದೇ ಜಾತಿಗೆ ಸೇರಿಲ್ಲವಾದಲ್ಲಿ ಸಿಕ್ಕಾಪಟ್ಟೆ ಸಮಸ್ಯೆಗಳು ಎದುರಾಗುತ್ತವೆ. ನಿಮ್ಮ ಮದುವೆ ನಿರ್ವಿಘ್ನವಾಗಿ ನೆರವೇರಬೇಕೆಂದರೆ ನೀವಿಬ್ಬರು ಒಂದೇ ಜಾತಿಗೆ ಸೇರಿದವರಾಗಿರಬೇಕು. ಇದೇ ಭಾರತೀಯ ಮದುವೆಯಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುವ ಸಂಗತಿಯಾಗಿದೆ.

ಮೊದಲ ರಾತ್ರಿಯೆಂಬ ರಮ್ಯಕತೆ

ಮೊದಲ ರಾತ್ರಿಯೆಂಬ ರಮ್ಯಕತೆ

ಪ್ರತಿ ಮದುವೆಯಲ್ಲೂ ಮೊದಲ ರಾತ್ರಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಆದರೆ ಭಾರತೀಯ ಮದುವೆಗಳಲ್ಲಿ ಇದು ವಾಸ್ತವವಾಗಿ ಬೇರೆಯೇ ಕಥೆಯಾಗಿರುತ್ತದೆ. ಈ ಮೊದಲ ರಾತ್ರಿ ಬರಲು ಕೆಲವು ದಿನಗಳು ಬೇಕಾಗುತ್ತವೆ ಕೆಲವರಲ್ಲಿ, ಇನ್ನೂ ಕೆಲವರಲ್ಲಿ ಅಂದಿನ ರಾತ್ರಿಯೇ ಇದರ ಭಾಗ್ಯ ದೊರೆಯುತ್ತದೆ.

ಜನ್ಮ ಕುಂಡಲಿಗಳನ್ನು ಹೊಂದಾಣಿಕೆ ಮಾಡುವುದು

ಜನ್ಮ ಕುಂಡಲಿಗಳನ್ನು ಹೊಂದಾಣಿಕೆ ಮಾಡುವುದು

ಗಣ ಕೂಟ ನೋಡುವುದು, ಹೆಸರು ಬಲ ನೋಡುವುದು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಆಚರಣೆಯು ಭಾರತೀಯರಲ್ಲಿ ಮಾತ್ರ ಕಂಡುಬರುತ್ತದೆ. ಹುಡುಗ-ಹುಡುಗಿ ಪರಸ್ಪರ ಒಪ್ಪಿದರು, ಅವರ ಜನ್ಮ ಕುಂಡಲಿಗಳು ಪರಸ್ಪರ ಹೊಂದಾಣಿಕೆಯಾಗಬೇಕಾದುದು ಅತ್ಯಗತ್ಯ. ಮದುವೆಯ ನಿಜವಾದ ಶಾಸ್ತ್ರ ಆರಂಭವಾಗುವುದೇ ಈ ಪ್ರಕ್ರಿಯೆ ಮುಗಿದ ಮೇಲೆ.

ಪ್ರೇಮ ವಿವಾಹಗಳು

ಪ್ರೇಮ ವಿವಾಹಗಳು

ಭಾರತೀಯರಲ್ಲಿ ಪ್ರೇಮ ವಿವಾಹದ ಬಗೆಗೆ ಪೂರ್ವಾಗ್ರಹಗಳು ಇಂದಿಗು ಇವೆ. ಭಾರತದಲ್ಲಿರುವ ಕುಟುಂಬಗಳ ಮಟ್ಟಿಗೆ ಹಿರಿಯರು ನೋಡಿ ಮಾಡುವ ಮದುವೆಯೇ ಎಲ್ಲ ರೀತಿಯಲ್ಲಿ ಸರಿಯೆನಿಸಿಕೊಳ್ಳುತ್ತದೆ.

English summary

Things That Define An Indian Marriage

A lot of strange things define an Indian marriage. For instance, skin colour is of utter importance when choosing a bride. Second, a high bank balance or a high paying job is a must for the boy to look after the girl.
X
Desktop Bottom Promotion