For Quick Alerts
ALLOW NOTIFICATIONS  
For Daily Alerts

ನಿಮ್ಮ ಆತ್ಮ ಬಂಧುವಿನಲ್ಲಿರುವ 10 ಪ್ರಭಾವಿ ಗುಣಗಳು

By Super
|

ಯಾರು ನಿಮ್ಮ ಮನಸ್ಸಿನಲ್ಲಿ ಆತ್ಮ ಬಂಧುವಿನ ಸ್ಥಾನವನ್ನು ತುಂಬಬಲ್ಲರು. ನಿಮ್ಮ ಆತ್ಮ ಬಂಧು ಎಂಬ ಪದವು ಬಾಳ ಸಂಗಾತಿ ಮತ್ತು ಅರ್ಧಾಂಗಿ ಎಂಬ ಪದಗಳಿಗಿಂತ ವಿಭಿನ್ನವಾದುದು ಎಂಬುದನ್ನು ಮರೆಯಬೇಡಿ. ಆತ್ಮ ಸಂಗಾತಿ ಎಂದರೆ ನಿಮ್ಮ ಮನಸ್ಸಿನಂತೆ ಯೋಚಿಸುವ ಮತ್ತೊಂದು ಜೀವ. ನಿಮ್ಮ ನೋವು, ದುಃಖ, ಹತಾಶೆ, ಸಂತೋಷ ಮತ್ತು ಸಂಭ್ರಮಗಳನ್ನು ತಮ್ಮದೇ ಎಂದು ಭಾವಿಸುವ ಒಂದು ಜೀವ. ಸದಾ ನಿಮ್ಮ ಸ್ಫೂರ್ತಿಯಾಗಿ ನಿಲ್ಲುವವರೇ ನಿಮ್ಮ ಆತ್ಮ ಬಂಧು.

ಪ್ರೀತಿಯ ಬಗ್ಗೆ ಕೆಲ ಕೂಲ್ ಫ್ಯಾಕ್ಟ್ಸ್

ಬಾಳ ಸಂಗಾತಿಯು ಇದೇ ಭಾವನೆಯನ್ನು ನಮ್ಮೆಡೆಗೆ ವ್ಯಕ್ತಪಡಿಸುತ್ತಾರೆ. ಇವರು ನಮ್ಮೊಂದಿಗೆ ದೀರ್ಘ ಕಾಲದ ಸಂಬಂಧವಿರಿಸಿಕೊಂಡು ನಮ್ಮನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿರುತ್ತಾರಾದರು ಅದು ಆಕೆ ಮತ್ತು ಆತನ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ನಮಗೆ ಸ್ಫೂರ್ತಿ ತುಂಬಬಲ್ಲರು. ಆದರೆ ಆತ್ಮ ಬಂಧು ನಮಗೆ ಒದಗಿಸುವ ಸ್ಫೂರ್ತಿಯು ಎಂತಹ ಬೆಟ್ಟವನ್ನು ಬೇಕಾದರು ನಡುಗಿಸಬಲ್ಲದು.

ಹಾಗಾದರೆ ನಿಮ್ಮ ಬಾಳ ಸಂಗಾತಿಯನ್ನು ನಿಮ್ಮ ಆತ್ಮ ಬಂಧುವಿನಿಂದ ಪ್ರತ್ಯೇಕಿಸುವ ಅಂಶಗಳು ಯಾವುವು? ಇದರ ಕುರಿತಾಗಿ ಹಲವಾರು ವಿಚಾರಗಳು ನಿಮಗೆ ಮಾನದಂಡವಾಗಿ ನೆರವಾಗುತ್ತವೆ. ಈ ಕೆಳಗೆ ನೀಡಿರುವ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿದರೆ ನಿಮ್ಮ ಸಂಗಾತಿಯು ನಿಮ್ಮ ಆತ್ಮ ಬಂಧುವಿನ ಸ್ಥಾನವನ್ನು ಅಲಂಕರಿಸುವರೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮ್ಮ ಆತ್ಮ ಬಂಧುವಿನಲ್ಲಿರಬೇಕಾದ 10 ಗುಣಗಳು

ಹೆಂಗಸರ ಮನದಾಳವನ್ನು ಅರಿಯಲು 10 ಸಲಹೆಗಳು

ಅಂತರಾಳದಲ್ಲಿ ಏನೋ, ಒಂಥರಾ!

ಅಂತರಾಳದಲ್ಲಿ ಏನೋ, ಒಂಥರಾ!

ಆತ್ಮ ಬಂಧುವನ್ನು ವರ್ಣಿಸುವುದು ನಿಜಕ್ಕು ಸಾಧ್ಯವಿಲ್ಲದ ಮಾತು. ಅದನ್ನು ಹೇಳುವುದಕ್ಕಿಂತ ಅನುಭವ ವೇದ್ಯವಾಗಿ ಮಾತ್ರ ತಿಳಿದುಕೊಳ್ಳಲು ಸಾಧ್ಯ. ಅವರು ನಿಮ್ಮ ಎದೆ ಬಡಿತ, ಉಸಿರಾಟದಷ್ಟೇ ಸರಾಗವಾಗಿ ನಿಮ್ಮ ಮನೋಭಾವನೆಯನ್ನು ನೋಡದೆಯು ಅಳೆದು ಬಿಡಬಲ್ಲರು. ನಿಮ್ಮ ಮಿಡಿತ ನಿಮಗೆ ತಿಳಿಯುವ ಮೊದಲು ಅವರಿಗೆ ತಿಳಿದುಬಿಡುತ್ತದೆ. ಅವರನ್ನು ಹಿಡಿಯಾಗಿ ಹಿಡಿದಿಡುವಂತಹ ಪದಗಳು ಯಾವ ಭಾಷೆಯಲ್ಲೂ ಇಲ್ಲ ಬಿಡಿ.

ಫ್ಲ್ಯಾಶ್ ಬ್ಯಾಕ್‍ಗಳು

ಫ್ಲ್ಯಾಶ್ ಬ್ಯಾಕ್‍ಗಳು

ಒಂದು ವೇಳೆ ನಿಮ್ಮ ಸಂಗಾತಿಯು ನಿಮ್ಮ ಆತ್ಮ ಬಂಧುವು ಸಹ ಆಗಿದ್ದಲ್ಲಿ. ಆಕೆ ಅಥವಾ ಆತನು ನಿಮ್ಮ ನೆನಪಿನಂಗಳದಲ್ಲಿ ಸದಾ ಇರುತ್ತಾರೆ. ನೀವು ಎದುರಿಸಿದ ಸಮಸ್ಯೆಗಳು ಅಥವಾ ಎದುರಿಸುತ್ತಿರುವ ಸಮಸ್ಯೆಗಳು ಎಲ್ಲವು ಸಹ ನಿಮ್ಮ ನೆನಪಿನಂಗಳದಲ್ಲಿನ ಆತ್ಮ ಬಂಧು ಎಂಬ ವೃತ್ತವನ್ನು ಸುತ್ತು ಹಾಕಿಕೊಂಡೆ ಹೋಗುತ್ತವೆ. ಅವರನ್ನು ಹೊರತುಪಡಿಸಿ ಜೀವನ ಸಾಗಿಸುತ್ತಿದ್ದರು, ಅವರನ್ನು ನೆನಪಿಸಿಕೊಳ್ಳದೆ ಜೀವನ ಸಾಗಿಸುವುದು ದುಸ್ತರ ಇದೇ ಆತ್ಮ ಬಂಧುವಿನ ಹೆಗ್ಗಳಿಕೆ.

ನೀವಿಬ್ಬರು ಒಂದೇ ಭಾವ ಎರಡು ದೇಹ

ನೀವಿಬ್ಬರು ಒಂದೇ ಭಾವ ಎರಡು ದೇಹ

ಎಂದಾದರು ಒಂದು ವಾಕ್ಯವನ್ನು ಒಮ್ಮೆಲೆ ಇಬ್ಬರು ಒಂದೇ ಸಮಯದಲ್ಲಿ ಹೇಳುವುದನ್ನು ನೀವು ನೋಡಿರುವಿರಾ? ಬಹುಶಃ ನೋಡೇ ಇರುತ್ತೀರಿ. ಇದಕ್ಕೆ ನೀವು ಅವರಿಬ್ಬರು ಒಟ್ಟಿಗೆ ತುಂಬಾ ಕಾಲದಿಂದ ಇದ್ದರು ಅದಕ್ಕೆ ಇಬ್ಬರೂ ಒಂದೇ ರೀತಿ ಮಾತನಾಡುತ್ತಾರೆ ಎಂದು ಹೇಳಬಹುದು. ಇಂತಹ ಸನ್ನಿವೇಶವನ್ನು ನಿಮ್ಮ ಆಪ್ತ ಮಿತ್ರ ಮತ್ತು ತಾಯಿಯ ಬಳಿಯಲ್ಲು ಸಹ ಅನುಭವಿಸಿರಬಹುದು.ಆದರೆ ಇಂತಹ ಒಂದು ಸನ್ನಿವೇಶವು ನಿಮ್ಮ ಆತ್ಮ ಬಂಧುವಿನ ಬಗ್ಗೆ ತಿಳಿದುಕೊಳ್ಳಲು ಒದಗುವ ಸುಸಮಯ ಎಂದು ಅರ್ಥ ಮಾಡಿಕೊಳ್ಳಬೇಕು. ಇಂತಹ ಸನ್ನಿವೇಶ ನಿಮ್ಮ ಸಂಗಾತಿಯೊಂದಿಗೆ ಎಂದಾದರು ಸಂಭವಿಸಿದೆಯೇ ನೆನಪಿಸಿಕೊಳ್ಳಿ.

ನೀವು ಅವರ ನ್ಯೂನತೆಗಳನ್ನು ಸಹ ಇಷ್ಟಪಡುತ್ತೀರಿ

ನೀವು ಅವರ ನ್ಯೂನತೆಗಳನ್ನು ಸಹ ಇಷ್ಟಪಡುತ್ತೀರಿ

ಯಾವುದೇ ಸಂಬಂಧಗಳು ಪರಿಪೂರ್ಣವಲ್ಲ. ಆತ್ಮ ಬಂಧುವಿನೊಂದಿಗಿನ ಸಂಬಂಧವು ಸಹ ಏರು-ಪೇರುಗಳಿಂದ ಕೂಡಿರುತ್ತದೆ. ಆದರೂ ಸಹ ಈ ಆತ್ಮಬಂಧುಗಳ ಸಂಬಂಧವನ್ನು ಅಷ್ಟು ಸುಲಭವಾಗಿ ಮುರಿಯಲು ಆಗುವುದಿಲ್ಲ. ಈ ಆತ್ಮ ಬಂಧುಗಳು ನಿಮ್ಮಲ್ಲಿರುವ ಎಲ್ಲಾ ಲೋಪದೋಷಗಳನ್ನು ಸಹ ಒಪ್ಪಿಕೊಳ್ಳುತ್ತಾರೆ. ಇದನ್ನು ಹೊಂದಿರುವ ನಿಮ್ಮನ್ನು ಸಹ ಆ ದೋಷಗಳ ಜೊತೆಯಲ್ಲಿಯೇ ಇಷ್ಟಪಡಲು ಆರಂಭಿಸುತ್ತಾರೆ.

ತೀವ್ರತರದ ಪ್ರೀತಿ

ತೀವ್ರತರದ ಪ್ರೀತಿ

ಆತ್ಮ ಬಂಧುಗಳಲ್ಲಿ ಒಮ್ಮೊಮ್ಮೆ ಸಾಮಾನ್ಯಕ್ಕಿಂತ ತೀವ್ರ ತರಹದ ಪ್ರೀತಿಯು ಕಂಡು ಬರುತ್ತದೆ. ಇದು ಒಳ್ಳೆಯದಕ್ಕು ಹಾಗು ಕೆಲವೊಮ್ಮೆ ಕೆಟ್ಟದ್ದಕ್ಕು ಸಹಕರಿಸುತ್ತದೆ. ಇದರಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಒಬ್ಬ ಆತ್ಮ ಬಂಧುವು ತನ್ನ ಆತ್ಮ ಬಂಧುವಿನ ತಪ್ಪು ಮತ್ತು ಅಪರಾಧವನ್ನು ಕಡೆಗಣಿಸಿ ಅದರಾಚೆಗೆ ನೋಡುವ ಪ್ರಯತ್ನವನ್ನು ಇವರು ಮಾಡುತ್ತಾರೆ.

ನೀವಿಬ್ಬರು ಪ್ರಪಂಚಕ್ಕೆ ವಿರುದ್ಧವಾಗಿರುತ್ತೀರಿ

ನೀವಿಬ್ಬರು ಪ್ರಪಂಚಕ್ಕೆ ವಿರುದ್ಧವಾಗಿರುತ್ತೀರಿ

ಆತ್ಮ ಬಂಧುಗಳು ಯಾವಾಗಲು ಪ್ರಪಂಚವನ್ನು ತಮ್ಮ ವಿರೋಧಿಯನ್ನಾಗಿಯೆ ನೋಡುತ್ತಾರೆ. ಅವರ ತತ್ವ" ನಾವು ಮತ್ತು ನಮ್ಮ ವಿರೋಧಿಯಾಗಿ ಪ್ರಪಂಚ" ಎಂಬ ಮಾದರಿಯಲ್ಲಿರುತ್ತದೆ. ಅವರಿಬ್ಬರು ಕೂಡಿ ಇರುವಾಗ ಇಡೀ ವಿಶ್ವವೇ ಅವರನ್ನು ಅಲುಗಾಡಿಸಲು ಆಗುವುದಿಲ್ಲ ಎಂಬ ಬಗೆಯಲ್ಲಿ ಅವರ ಚಿಂತನೆ ಸಾಗುತ್ತದೆ.

ನಿಮ್ಮನ್ನು ಮಾನಸಿಕವಾಗಿ ಬೇರ್ಪಡಿಸಲು ಅಸಾಧ್ಯ

ನಿಮ್ಮನ್ನು ಮಾನಸಿಕವಾಗಿ ಬೇರ್ಪಡಿಸಲು ಅಸಾಧ್ಯ

ಆತ್ಮ ಬಂಧುಗಳು ಅವಳಿಗಳಂತೆ ಒಬ್ಬರನ್ನೊಬ್ಬರು ಮಾನಸಿಕವಾಗಿ ಹಚ್ಚಿಕೊಂಡಿರುತ್ತಾರೆ. ಇವರಿಬ್ಬರು ಒಂದೇ ಸಮಯಕ್ಕೆ ಒಬ್ಬರಿಗೊಬ್ಬರು ಕರೆ ಮಾಡಲು ಫೋನ್ ಎತ್ತಿಕೊಂಡಿರುತ್ತಾರೆ. ಜೀವನವು ನಿಮ್ಮಿಬ್ಬರನ್ನು ಕಾಲ ಕ್ರಮೇಣ ದೂರ ಮಾಡಬಹುದು. ಆದರೆ ನಿಮ್ಮ ಮನಸ್ಸುಗಳು ಒಂದನ್ನೊಂದು ಬೆಸೆದುಕೊಂಡಿರುತ್ತವೆ.

ನಿಮ್ಮಲ್ಲಿ ಸುಭದ್ರ ಮತ್ತು ಸುರಕ್ಷತೆಯ ಭಾವನೆ ಇರುತ್ತದೆ

ನಿಮ್ಮಲ್ಲಿ ಸುಭದ್ರ ಮತ್ತು ಸುರಕ್ಷತೆಯ ಭಾವನೆ ಇರುತ್ತದೆ

ನಿಮ್ಮ ಸಂಗಾತಿಯ ಯಾವ ಲಿಂಗವಾದರು ಪರವಾಗಿಲ್ಲ. ಆತ ಅಥವಾ ಆಕೆ ನಿಮಗೆ ಸುಭದ್ರ ಮತ್ತು ಸುರಕ್ಷತೆಯ ಭಾವನೆಯನ್ನು ಒದಗಿಸುತ್ತಾರೆ. ನಿಮ್ಮ ಆತ್ಮ ಬಂಧುವು ನಿಮ್ಮನ್ನು ಕಾಪಾಡುವ ದೇವರಂತೆ ನಿಮ್ಮ ಪಕ್ಕದಲ್ಲಿ ನಿಲ್ಲುತ್ತಾರೆ. ನಿಮ್ಮಲ್ಲಿ ಪ್ರಜ್ಞಾಪೂರ್ವಕವಾಗಿ ಅಥವಾ ಸುಪ್ತ ಪ್ರಜ್ಞೆಯಲ್ಲಿ ಸಹ ಅಸುರಕ್ಷತೆಯ ಭಾವವನ್ನು ಮೂಡಿಸುವವರು ನಿಮ್ಮ ಆತ್ಮ ಬಂಧುವಲ್ಲ.

ಅವರಿಲ್ಲದೆ ನೀವು ನಿಮ್ಮ ಜೀವನವನ್ನು ಊಹಿಸಲು ಸಹ ಸಾಧ್ಯವಾಗುವುದಿಲ್ಲ

ಅವರಿಲ್ಲದೆ ನೀವು ನಿಮ್ಮ ಜೀವನವನ್ನು ಊಹಿಸಲು ಸಹ ಸಾಧ್ಯವಾಗುವುದಿಲ್ಲ

ಆತ್ಮ ಬಂಧುವೆಂದರೆ ನಿಮ್ಮ ಜೊತೆ ಸುಮ್ಮನೆ ನಡೆಯುವವರು ಎಂದರ್ಥವಲ್ಲ. ನಿಮ್ಮ ಆತ್ಮ ಬಂಧುವಿಲ್ಲದ ಜೀವನವನ್ನು ನೀವು ಊಹಿಸಿ ನೋಡುವುದು ಸಹ ಕಷ್ಟವಾಗುತ್ತದೆ. ಅವರಿಲ್ಲದ ಜೀವನವು ನಿಮಗೆ ಗೊತ್ತು-ಗುರಿ ಎರಡು ಇಲ್ಲದ ಜೀವನವಾಗಿ ತೋರಲು ಆರಂಭಿಸುತ್ತದೆ.

ನೀವಿಬ್ಬರು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೀರಿ

ನೀವಿಬ್ಬರು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೀರಿ

ಆತ್ಮ ಬಂದುವು ತನ್ನ ಸಂಗಾತಿಯು ಮಾತನಾಡುವಾಗ ಅವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವು ಗುಣವನ್ನು ಹೊಂದಿರುತ್ತಾರೆ. ಇದು ಸಾಮಾನ್ಯ ಸಂಗಾತಿಗಳಿಗೆ ಹೋಲಿಸಿದರೆ ಹೆಚ್ಚು ಎಂದೆ ಹೇಳಬಹುದು. ಇದು ಅವರಿಬ್ಬರ ನಡುವೆ ಇರುವ ಗಾಢವಾದ ಅನುಬಂಧದ ಮೂಲಕ ಬಂದಿರುತ್ತದೆ. ಮಾತನಾಡುವಾಗ ಇತರರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದು ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ಭದ್ರತೆಯ ಭಾವವನ್ನು ಒದಗಿಸುತ್ತದೆ.

English summary

The 10 Elements of a Soul Mate

Not just anyone can fulfill you the way your soulmate can. There's a world of a difference between your soulmate, your heart's other half and a life partner As you go through this list, think about your partner or potential partner and evaluate whether they meet the soulmate criteria.
Story first published: Tuesday, August 19, 2014, 16:55 [IST]
X
Desktop Bottom Promotion