For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಅರಿತುಕೊಳ್ಳಬೇಕಾದ ಪುರುಷರ ರಹಸ್ಯ ಸಂಗತಿಗಳು

By Viswanath S
|

ಒಬ್ಬ ಮಹಿಳೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಿಜವಾಗಲೂ ಅಸಾಧ್ಯ ಎಂಬುದನ್ನು ನಾವೆಲ್ಲರೂ ತಿಳಿದೇ ಇದ್ದೇವೆ. ಪರಿಣಾಮಕಾರಿ ಆರೋಗ್ಯ ಒಕ್ಕೂಟದ (EHC - Effective Health Care) ತಂಡದವರೂ ಕೂಡ ಪುರುಷರ ಬಗ್ಗೆ ಇದನ್ನೇ ಸಮರ್ಥಿಸಿದ್ದಾರೆ. ನೀವು ಪುರುಷನ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ತಿಳಿಯಬಯಸಿದರೆ ನಿಮಗೆ ಈ ಲೇಖನವು ಸೂಕ್ತವಾಗಿದೆ.

ಅವನು ನಿಮ್ಮಿಂದ ಕೆಲವು ರಹಸ್ಯಗಳನ್ನು ದೂರವಿಟ್ಟುಕೊಂಡಿರುವುದು ಅಷ್ಟೇನೂ ಅಶ್ಚರ್ಯವಲ್ಲ. ಅಂತಹ ಕೆಲವು ರಹಸ್ಯಗಳು ತಿಳಿದಿದ್ದರೂ ನಿಮಗೇನೂ ಅನ್ನಿಸುವುದಿಲ್ಲ. ಇದು ಪುರುಷರಿಗೆ ತಮ್ಮ ರಹಸ್ಯಗಳನ್ನು ಕಾಪಾಡಿಕೊಳ್ಳುವುದು ವಾಸ್ತವವಾದರೂ ರಹಸ್ಯಗಳು ನಿಮಗೆ ಗೊತ್ತಾದಾಗ ಅವುಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು. ಮಹಿಳೆಯರಿಗೆ ಕೆಲವೊಮ್ಮೆ ತಿಳಿಯದಿರುವುದೇ ಒಂದು ರೀತಿಯ ಆನಂದ. ಆದರೆ ಈ ಲೇಖನವು ಪುರುಷನ ಅತ್ಯಂತ ಅಂತರಾಳದ ವಿಚಾರಗಳನ್ನು ಚರ್ಚಿಸುವುದರಿಂದ ಅದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ.

ತನ್ನ ಪುರುಷನು ಈಗಲೂ ವಯಸ್ಕರ ವೀಡೀಯೋಗಳನ್ನು ಮಾತ್ರವೇ ನೋಡುತ್ತಾನೆ
ಅವನು ಎಲ್ಲಾ ಸಮಯದಲ್ಲಿ ಇಲ್ಲದಿದ್ದರೂ ಅಥವ ಅಂತಹ ಚಿತ್ರಗಳ ದುಃಶ್ಚಟ ಇಲ್ಲದಿರಲೂ ಬಹುದು. ಆದರೆ ಅವನು ವಯಸ್ಕರ ವೀಡಿಯೊಗಳನ್ನು ಮಾತ್ರವೇ ನೋಡುತ್ತಾನೆ ಮತ್ತು ನೋಡಿ ಸಂತೋಷಪಡುತ್ತಾನೆ ಆದರೆ ಅವನು ಅದರ ಬಗ್ಗೆ ಹೆಚ್ಚೇನೂ ನಿಮಗೆ ಹೇಳುವುದಿಲ್ಲ ಮತ್ತು ಆ ವಿಡೀಯೋಗಳಲ್ಲಿ ಕಾಣಿಸಿಕೊಳ್ಳುವ ಮಹಿಳೆಗೆ ನಿಮಗಿಂತ ಹೆಚ್ಚು ಆದ್ಯತೆ ಕೊಡುತ್ತಾನೆಂದು ನೀವು ವಿನಾ ಕಾರಣದಿಂದ ಯೋಚಿಸುವುದೂ ಇಲ್ಲ ಅಥವ ನೀವು ಅವಳಂತೆ ಕಾಣಬೇಕೆಂದು ಅವನು ಅಂದುಕೊಂಡಿರುವುದಿಲ್ಲ.

Secrets of Men Women Should Know

ಅದರೂ ಅವನು ಆ ವೀಡಿಯೋವನ್ನು ನೋಡಿ ಆನಂದಿಸುತ್ತಿರುತ್ತಾನೆ. ಅವನು ಕೆಲವೊಮ್ಮೆ ನಿಮ್ಮ ಜೊತೆಗೂಡಿ ಅದನ್ನು ನೋಡುವ ಮನೋಭಾವ ಇರುವುದಕ್ಕೆ ಅವನಿಗೆ ಏನೂ ಅಡ್ಡಿಯಿರುವುದಿಲ್ಲ ಅಂದರೆ ನಿಮ್ಮನ್ನು ಆ ವೀಡಿಯೊನಲ್ಲಿರುವ ಮಹಿಳೆಯಂತೆ ನಿಮ್ಮನ್ನು ಕಾಣಬಯಸಿ ಆನಂದ ಪಡುತ್ತಾನೆ. ಆದರೆ ಅವನು ನಿಮಗೆ ಹಾಗೆ ಮಾಡುತ್ತಾನೆಂದು ನೀವು ಯೋಚಿಸುವುದಿಲ್ಲ. ಹೊಸದಾಗಿ ಅಂಕುರಿಸಿದ ಪ್ರೀತಿಯನ್ನು ಗಟ್ಟಿಯಾಗಿಸುವ 5 ನಿಯಮಗಳು

ಅವನು ಪರಸ್ತ್ರೀಯನ್ನು ಪರಿಶೀಲಿಸುತ್ತಾನೆ
ಹೌದು. ಪುರುಷರು ಕೆಲವೊಮ್ಮೆ ಹಾಗೆ ಮಾಡುತ್ತಾರೆ. ಅವನು ಅವರ ಬುದ್ಧಿ ಮತ್ತೆಯ ಬಗ್ಗೆ ಅಷ್ಟೇನೂ ಉತ್ಸುಕರಾಗಿರುವುದಿಲ್ಲ ಆದರೆ ಅವನು ಹೆಚ್ಚು ಸರಿದೂಗುವ ಆಕರ್ಷಕ ಮಹಿಳೆಯರನ್ನು ಆಗಾಗ್ಗೆ ನೋಡಬಯಸುತ್ತಾನೆ. ಸಹಜವಾಗಿ ಹೀಗೆ ಮಾಡಿದಾಗ ಅವನು ಅವಕಾಶ ಸಿಕ್ಕಿದಾಗ ನಿಮ್ಮನ್ನು ಬಿಟ್ಟು ಅವರನ್ನು ಬಯಸುತ್ತಾನೆಂದು ಹೇಳಲಾಗುವುದಿಲ್ಲ. ಇದು ಕೇವಲ ಅವನು ಅಂದದ ಚೆಲುವೆಯರನ್ನು ನೋಡಲು ಮಾತ್ರ ಬಯಸುತ್ತಾನೆಂದು ಅರ್ಥ. ಅವನ ಮತ್ತೊಂದು ರಹಸ್ಯ ಮಹಿಳೆಯ ಕುತ್ತಿಗೆ ಸುತ್ತುವರಿದಿರುವ ಕಂಠರೇಖೆ ಅಥವ ಮಿನಿಸ್ಕರ್ಟ್ ಧರಿಸಿರುವ ಮಹಿಳೆಯರ ಕಡೆ ಕೊಡುವ ಗಮನ ಕೇವಲ ತಾತ್ಕಾಲಿಕವಾದ್ದು. ಆದರೆ ಅವನು ನಿಮಗೆ ಈ ವಿಷಯವನ್ನು ಕೆಲವು ಸಲ ತಿಳಿಸುವುದಿಲ್ಲ ಏಕೆಂದರೆ ಅವನ ಬಾಯ್‌ಫ್ರೆಂಡ್ / ಪತಿಯ ಅನುಕೂಲಗಳನ್ನು ಪಡೆಯುವ ಲಾಭಗಳನ್ನು ಕಳೆದುಕೊಳ್ಳಬೇಕಾಗಬಹುದೆಂದು ನಿಮ್ಮಿಂದ ವಿಷಯವನ್ನು ತನ್ನಲ್ಲೇ ಇಟ್ಟುಕೊಂಡಿರುತ್ತಾನೆ.

ನೀವು ಬಳಸುವ ಮೇಕಪ್ಪಿನ ಖರ್ಚಿನಬಗ್ಗೆ ಬೆಚ್ಚುತ್ತಾನೆ
ಅವನು ನೀವು ಮೇಕಪ್ ಮಾಡಿಕೊಂಡು ಅಂದವಾಗಿ ಕಾಣಬಯಸಿದರೂ ನೀವು ಅತಿಯಾಗಿ ಲಿಪ್‌ಸ್ಟಿಕ್ ಅಥವ ಐಶಾಡೋ ಬಳಸುವುದನ್ನು ಹೆಚ್ಚಾಗಿ ಸಹಿಸುವುದಿಲ್ಲ. ನೀವು ಮೇಕಪ್ ಮಾಡಿಕೊಳ್ಳುವುದನ್ನು ಅವನು ಇಷ್ಟಪಡುತ್ತಾನೆ ಆದರೆ ಅದರ ಪ್ರಮಾಣವಲ್ಲ. ಈ ವಿಷಯವನ್ನು ನೇರವಾಗಿ ಹೇಳಿದರೆ ನಿಮ್ಮ ಭಾವನೆಗಳಿಗೆ ನೋವಾಗುತ್ತೆಂದು ಅವನಿಗೆ ಗೊತ್ತಿದೆ ಮತ್ತು ಎಲ್ಲಿಯವರೆಗೆ ನೀವು ಅವನ ಬಳಿಯಿರಲು ಇಷ್ಟಪಡುತ್ತೀರೋ ಅಲ್ಲಿಯವರೆಗೆ ಈ ರಹಸ್ಯವನ್ನು ತನ್ನಬಳಿಯೇ ಇಟ್ಟುಕೊಂಡಿರುತ್ತಾನೆ.

ಅವನ ವಿರಾಮ ಸಮಯವನ್ನು ಒಂಟಿಯಾಗಿ ಕಳೆಯಲು ಇಷ್ಟಪಡುತ್ತಾನೆ
ಪುರುಷರು ಒಬ್ಬರೇ ಇದ್ದು ವಿರಾಮ ಸಿಕ್ಕಾಗ ಪ್ರತಿ ಬಾರಿಯೂ ಮತ್ತೆ ಯುವಕರಂತೆ ಕಾಣ ಬಯಸಿ ಕಾಲ ಕಳೆಯಲು ಇಷ್ಟಪಡುತ್ತಾರೆ ಮತ್ತು ಅವರಿಗೆ ಒಂದೊಂದು ಬಾರಿ ಹಾಗೆ ಇರುವುದನ್ನು ನೀವು ಕೂಡ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಇಂತಹ 13 ಬಗೆಯ ಪ್ರೇಯಸಿಯರಿಂದ ದೂರವುಳಿದರೆ ಒಳಿತು!

ಅವನೂ ಕೂಡ ನಿಮ್ಮಂತೆ ಅಭಿನಂದನೆ ಮಾಡಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾನೆ
ಬಹಳಷ್ಟು ಮಹಿಳೆಯರು ತಾವು ಮಾತ್ರ ಸುಂದರವಾಗಿ ಕಾಣುತ್ತೀರೆಂದು ಹೇಳಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ನಿಮ್ಮ ಜೊತೆ ಇರುವ ನಿಮ್ಮ ಪತಿಗೆ ಹಾಗೆ ಹೇಳುತ್ತೀರಾ? ಪುರುಷರು ಕೆಲವು ಬಾರಿ ಅಭಿನಂದನೆ ಮಾಡಿಸಿಕೊಳ್ಳಬೇಕೆಂದು ಎದುರುನೋಡುತ್ತಾರೆ ಮತ್ತು ಅವರು ಹಾಗೆ ಹೇಳೆಂದು ನಿಮಗೆ ಹೇಳುವುದಿಲ್ಲ, ಏಕೆಂದರೆ ಪುರುಷರು ಹಾಗೆ ಕೇಳಿ ಹೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ, ಅದರೂ ನಿವಾಗಿ ಅವರನ್ನು ಒಂದೊಂದು ಬಾರಿ ಅಭಿನಂದಿಸಿದರೆ ನಿಜಕ್ಕೂ ನಿಮ್ಮನ್ನು ಪ್ರಶಂಸಿಸುತ್ತಾರೆ.

ಅವರು ಹಾಸಿಗೆಯಲ್ಲಿ ನಿಮ್ಮ ಜೊತೆ ಚಕ್ಕಂದವಾಡಲು ಸ್ವಲ್ಪ ಹೆದರುತ್ತಾರೆ
ನೀವು ಮಾತ್ರ ವಿವಸ್ತ್ರಗೊಂಡು ಮಾದಕನೋಟದಿಂದ ನಿಮ್ಮ ಪತಿಯನ್ನು ಆಕರ್ಷಿಸಬಹುದಾದರೂ ಅವನಿಗೆ ಅವನ ಅಸಮರ್ಥತೆ ಇದ್ದರೂ ಅವನಿಗೆ ಬಲುಬೇಗ ತನ್ನ ಪ್ರಚೋದನೆಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ, ಅದರಲ್ಲೂ ಇದು ಮೊದಲನೇ ಬಾರಿಯಾಗಿದ್ದರೆ ಮತ್ತು ನಿಮಗೆ ಆ ಪ್ರಕರಣವನ್ನು ಭಯಾನಕವಾಗಿತ್ತೆಂಬ ಭಾವನೆ ಬರಿಸಲು ಇಷ್ಟಪಡುವುದಿಲ್ಲ.

ಅವನು ನಿಮ್ಮನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ
ಅವನನ್ನು ಕಳೆದುಕೊಳ್ಳಲು ನೀವು ಮಾತ್ರ ಬಯಸುವುದಿಲ್ಲ ಎಂದುಕೊಳ್ಳಬೇಡಿ. ಅವನೂ ಕೂಡ ನಿಮ್ಮನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗೂ ನೀವು ತೋರಿಸಿಕೊಳ್ಳುವಹಾಗೆ ಅವನು ಹೇಳುವುದಿಲ್ಲ ಮತ್ತು ತನ್ನೊಳಗೆ ನೀವು ಎಂದೂ ಅವನನ್ನು ಬಿಟ್ಟು ಹೊರಟುಹೋಗುವುದಿಲ್ಲವೆಂಬ ನಂಬಿಕೆಯಿಟ್ಟುಕೊಂಡಿರುತ್ತಾನೆ.

ಕೆಲವೊಮ್ಮೆ ಅವನು ತನ್ನ ಮೂಡಿನಲ್ಲಿರುವುದಿಲ್ಲ
ಹೌದು, ಇದನ್ನು ನೀವು ನಂಬಲೇ ಬೇಕು. ಪುರುಷರು ಸದಾ ಗಡುಸಾಗಿರುವುದಿಲ್ಲ. ಕೆಲವೊಮ್ಮೆ ಅವನು ಆತ್ಮವಿಶ್ವಾಸ ಕಳೆದುಕೊಂಡಿರಬಹುದು, ದಣಿದಿರಬಹುದು ಅಥವ ಒತ್ತಡದಲ್ಲಿರಬಹುದು. ಆದರೆ ಒಳ್ಳೆಯ ಮನಃಸ್ಥಿತಿಯಲ್ಲಿದ್ದಾಗ ಅವನು ತನ್ನ ಮಾಡಬೇಕಾದ ಕಾರ್ಯಗಲೆಳ್ಳವನ್ನೂ ಮಾಡುತ್ತಾನೆ. ಆದ್ದರಿಂದ ಒಮ್ಮೊಮ್ಮೆ ತನ್ನ ಪ್ರೀತಿಸುವ ಕಾರ್ಯನಿರ್ವಹಣೆಯಲ್ಲಿ ಹೆಚ್ಚು ಕಮ್ಮಿಯಾಗಬಹುದಾದ್ದರಿಂದ ಅದನ್ನು ತಪ್ಪಾಗಿ ಕಾಣಬಹುದು. ದಂಪತಿಗಳ ಸುಖ ಸಂಸಾರಕ್ಕೆ ಇಲ್ಲಿದೆ ಸುಲಭ ಸಲಹೆಗಳು!

ಪುರುಷರಿಗೆ ಹಣವೇ ಮೊದಲು
ಪುರುಷರು ತಮ್ಮ ಪತ್ನಿಯರಿಂದ ರಹಸ್ಯವಾಗಿ ಇಟ್ಟುಕೊಳ್ಳುವ ಮತ್ತೊಂದು ವಿಷಯವೆಂದರೆ ಹಣಕ್ಕೆ ಆದ್ಯತೆ ಕೊಡುವುದು. ಅನೇಕ ಮಹಿಳೆಯರಿಗೆ ಹೀಗೆ ನಡೆದುಕೊಳ್ಳುವುದು ಇಷ್ಟವಿಲ್ಲ ಏಕೆಂದರೆ ಹಣಕ್ಕೆ ಮೊದಲು ಅವರು ತಮಗೆ ಆದ್ಯತೆ ನೀಡಬೇಕೆಂದು ಇಚ್ಛಿಸುತ್ತಾರೆ. ಆದರೆ ಪುರುಷರು ಹಣವನ್ನು ಸಂಪಾದಿಸುವುದು ತಮ್ಮ ಪತ್ನಿಯರ ಕಾಳಜಿ ತೆಗೆದುಕೊಳ್ಳುವುದಕ್ಕೆ ಎಂದು ನಿಮಗೆ ತಿಳಿದಿರಬೇಕು. ಪುರುಷರು ತಮ್ಮ ರಹಸ್ಯ ಮತ್ತು ಯಾವ ವಿಷಯವನ್ನೇ ನಿಮ್ಮಿಂದ ಮರೆಮಾಚಿದರೂ ಕೊನೆಗೆ ಸಾಕಷ್ಟು ಪ್ರೀತಿ ಇದ್ದು ಮತ್ತು ನಿಮ್ಮನ್ನು ಅರ್ಥಮಾಡಿಕೊಂಡಿದ್ದರೆ ನಿಮ್ಮ ಸಂಬಂಧ ಸಂತೋಷವಾಗಿಯೂ ಮತ್ತು ಬಲವಾಗಿಯೂ ಇರುವುದು ಮುಖ್ಯ. ನಿಮಗೆ ಪ್ರೀತಿಯ ಮತ್ತು ಸಂತೋಷದ ತೃಪ್ತ ಜೀವನವನ್ನು ಬಯಸುತ್ತೇವೆ.

English summary

Secrets of Men Women Should Know

We know that it is almost impossible to know a woman completely. EHC’s research team has found out a similar situation with men. If you like to take a trip to your man’s mind, you are reading the right material.
Story first published: Saturday, November 29, 2014, 19:01 [IST]
X
Desktop Bottom Promotion