For Quick Alerts
ALLOW NOTIFICATIONS  
For Daily Alerts

ನಿಮ್ಮ ಗೆಳತಿ ಫೋನಿನ ವಿಷಯದಲ್ಲಿ ಮುನಿಸಿಕೊಳ್ಳುವುದು ಏಕೆ?

By Super
|

ಆಧುನಿಕ ಯುಗದಲ್ಲಿ ನಾವು ಪ್ರತಿನಿತ್ಯ ಬಳಸುವ ಫೋನ್ ಎಷ್ಟರ ಮಟ್ಟಿಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ಜನರು ಅಷ್ಟೇ ತೀಕ್ಷ್ಣವಾಗಿ ಅದನ್ನು ರಕ್ಷಿಸಿತ್ತಾರೆ. ಒಮ್ಮೆ ನೀವು ಒಂದು ಸಂಬಂಧದೊಳಗೆ ಇದ್ದೀರಿ ಎಂದು ತಿಳಿದು, ಅದರ ಅಡ್ಡ ಗೋಡೆಗಳನ್ನು ಬೀಳಿಸಬಹುದು ಎಂದು ತಿಳಿದರೆ, ಅದು ಸಾಧ್ಯವಿಲ್ಲ.
ಹಾಗಂತ ಆಕೆ ನಿಮ್ಮನ್ನು ವಂಚಿಸುತಿದ್ದಾಳೆ ಎಂತಲೂ ಅಲ್ಲ. ನಿಮ್ಮ ಗೆಳತಿ, ನಿಮ್ಮನ್ನು ತನ್ನ ಫೋನಿನ ಬಳಿ ಬಿಡದೇ ಇರಲು, ಕಾರಣಗಳು ಹಲವಾರು. ಅದರ ಒಂದು ಒಳನೋಟ ಇಲ್ಲಿದೆ ನೋಡಿ.

ಹೆಚ್ಚಿಗೆ ಗಮನ ಕೊಡುವುದು ಇಷ್ಟವಾಗದೇ ಇರಬಹುದು

ಹೆಚ್ಚಿಗೆ ಗಮನ ಕೊಡುವುದು ಇಷ್ಟವಾಗದೇ ಇರಬಹುದು

ಮುಚ್ಚಿಡುವಂಥಹ ವಿಷಯ ಏನೂ ಇಲ್ಲದಿದ್ದರೂ, ಆಕೆಯ ಪೋನನ್ನು ನಿಮಗೆ ತೋರಿಸದಿರುವುದಕ್ಕೆ ಕಾರಣ ಪರಸ್ಪರ ವಿಶ್ವಾಸದ ವಿಚಾರವಿರಬಹುದು ಅಥವಾ ಅದರ ಬಗ್ಗೆ ಹೆಚ್ಚಿನ ಗಮನ ಆಕೆಗೆ ಇಷ್ಟವಾಗದೇ ಇರಬಹುದು. ವಿಶ್ವಾಸ-ಅವಿಶ್ವಾಸದ ನಡುವಿನ ರೇಖೆ ಅಷ್ಟೇನು ತೆಳ್ಳಗಿಲ್ಲದಿದ್ದರೂ, ಆಕೆಯ ಪಾಸ್ ವರ್ಡ್ ತಿಳಿಯುವುದಕ್ಕೆ ಹೆಚ್ಚಿನ ಕಾತುರ ತೋರಿಸಿದರೆ ಅವಳಿಗೆ ಇರಿಸುಮುರಿಸಾಗಬಹುದು. ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಹುಡುಗಿಯರಿಗೂ ಖಾಸಗಿ ಜೀವನ ಬೇಕು. ಹೆಚ್ಚಾಗಿ ಒತ್ತಾಯ ಹೇರಿದರೆ ಆಕೆ ನಿಮ್ಮನ್ನು ಬೇರೆ ರೀತಿಯೇ ನೋಡಬಹುದು.

ನಿಗೂಢತೆಯ ವಿಶೇಷ

ನಿಗೂಢತೆಯ ವಿಶೇಷ

ಇದು ಎಲ್ಲಾ ಹುಡುಗಿಯರಿಗೂ ಅನ್ವಯಿಸುವುದಿಲ್ಲ. ಆದರೆ ಎಷ್ಟೋ ಹುಡುಗಿಯರು, ತಮ್ಮದನ್ನು ಬಿಟ್ಟು ನಿಮ್ಮ ಬಗ್ಗೆ ಎರಡನೆ ಅಭಿಪ್ರಾಯವನ್ನು ಹೊಂದಿರುತ್ತಾರೆ. ವಿಶೇಷವಾಗಿ ನೀವು ಬಹಳ ದಿನಗಳ ನಂತರ ಡೇಟ್ ಮಾಡಿದಾಗ. ನಿಮಗೆ ಬೇಕಾಗಿದ್ದು ಸಿಗದೇ ಹೋದಾಗ, ಅವರ ಫೋನ್ ಕೂಡ ಅವುಗಳಲ್ಲಿ ಒಂದು ಎಂದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ.

ಬಿಎಫ್ಎಫ್ ಮಾತುಗಳು

ಬಿಎಫ್ಎಫ್ ಮಾತುಗಳು

ಅವಳು ನಿಮ್ಮ ಗುಂಪಿನಲ್ಲಿಯೇ ಮತ್ತೊಬ್ಬರ ಬಗ್ಗೆ ಹೆಚ್ಚು ಮಾತನಾಡಿದಾಗ ನಿಮಗೆ ಹೇಗೆ ಭಾಸವಾಗುತ್ತದೆಯೋ ಹಾಗೆಯೇ ಆಕೆಗೆ ನೀವು ಆಕೆಯ ಬಿಬಿಎಮ್ ಅಥವಾ ವಾಟ್ಸ್ ಆಪ್ ನಲ್ಲಿ ತನ್ನ ಬಿಎಫ್ಎಫ್ ಜೊತೆಗಿನ ಸಂಭಾಷಣೆಯನ್ನು ನೋಡಲು ಇಚ್ಛಿಸಿದಾಗ ಹಾಗೇ ಅನಿಸುತ್ತದೆ. ಪಿಎಮ್ಎಸ್ ನಿಂದ ಹಿಡಿದು ಚಾಕಲೇಟ್ ನವರೆಗೆ ಮಹಿಳೆಯರಿಗೆ ಖಾಸಗಿ ವಿಷಯ. ಅದರ ಹತ್ತಿರ ಸುಳಿಯುವುದು ಆಕೆಗೆ ಇಷ್ಟವಾಗುವುದಿಲ್ಲ.

ಮುಗ್ಧ ಸಂಭಾಷಣೆಗಳು

ಮುಗ್ಧ ಸಂಭಾಷಣೆಗಳು

ಬಹಳಷ್ಟು ಹುಡುಗಿಯರಿಗೆ ತಮ್ಮ ಗೆಳೆಯರು ತಮ್ಮ ಫೋನಿನ ವಿವರ ನೋಡುವುದು ಇಷ್ಟವಾಗುವುದಿಲ್ಲ. ಏಕೆಂದರೆ ಹುಡುಗರು ಬಹಳ ಬೇಗ ಪೊಸೆಸಿವ್ ಆಗುತ್ತಾರೆ ಎಂದು ಅವರ ಭಾವನೆ. ಹಳೆಯ ಕಲೀಗ್ ಜೊತೆ ಅರೆಕ್ಷಣ ಮಾತನಾಡಿದರೆ, ಯಾರೀ ಹುಡುಗ? ಎಂಬ ಅವಾವಶ್ಯಕ ಮಾತನ್ನು ತಡೆಗಟ್ಟಲು ಹಾಗೆ ಮಾಡುತ್ತಾರೆ. ಆದರೆ ಆ ಸಂಭಾಷಣೆಗಳೆಲ್ಲಾ ಮುಗ್ಧತೆಯಿಂದ ಕೂಡಿರುತ್ತದೆ.

ಅತಿ ಶ್ಲಾಘನೆಗೆ ಅರ್ಹವಲ್ಲದ ಭಾವ ಚಿತ್ರಗಳು

ಅತಿ ಶ್ಲಾಘನೆಗೆ ಅರ್ಹವಲ್ಲದ ಭಾವ ಚಿತ್ರಗಳು

ಕೆಲವು ಭಾವ ಚಿತ್ರಗಳು ಮುಗ್ಧವಾಗಿ, ಸುಂದರವಾಗಿರುತ್ತದೆ ಕೆಲವು ಅಷ್ಚೇ ಭಯಾನಕವಾಗಿರುತ್ತದೆ. ಎಲ್ಲರೂ ತಮ್ಮ ಪೊಟೋಗಳನ್ನು ತಮ್ಮ ಫೋನಿನಲ್ಲಿ ಇರಿಸಿಕೊಂಡಿರುತ್ತಾರೆ. ಆದರೆ ಇಡೀ ಜಗತ್ತಿಗೆ ತೋರಿಸಲು ಇಚ್ಛಿಸುವುದಿಲ್ಲ. ಕಡೇ ಪಕ್ಷ ಅವರ ಸಂಗಾತಿಗೆ- ಏಕೆಂದರೆ ಎಷ್ಟೋ ಬೇಡದ ಪೊಟೋಗಳನ್ನು ಅವರು ಡಿಲೀಟ್ ಮಾಡಿರುವುದಿಲ್ಲ. ಬಹುಷಃ ಆಕೆ ನಿಮಗೆ ಅಷ್ಟು ಮಹತ್ವ ಕೊಡುತ್ತಾಳೆ. ಅದು ನಿಮ್ಮ ಒಳಿತಿಗೇ ಇರಬಹುದು.

ಹ್ಯಾಕಿಂಗ್

ಹ್ಯಾಕಿಂಗ್

ಹಿಂದೆ ನಡೆದ ಕೆಟ್ಟ ಅನುಭವದಿಂದ ಅಥವಾ ವಿಶ್ವಾಸದ ವಿಚಾರವಾಗಿ, ಕೆಲವು ಹುಡುಗಿಯರಿಗೆ ತಮ್ಮ ನಲ್ಲ ಎಲ್ಲಿ ತಮ್ಮ ಫೋನ್ ಅನ್ನು ಹ್ಯಾಕ್ ಮಾಡುತ್ತಾರೋ ಎಂಬ ಭಯ ಕಾಡುತ್ತದೆ.

ಫೋನಿನ ದುರ್ಬಳಕೆ

ಫೋನಿನ ದುರ್ಬಳಕೆ

ಈ ಜಗತ್ತು ಜೋಕರ್ ಗಳಿಂದ ಕೂಡಿದೆ. ಅಂಥಹವರು, ಯಾರದಾದರ ಅನ್ ಅಟೆಂಡೆಡ್ ಕರೆ ಇದ್ದರೆ ಅಥವಾ ಯಾವುದೇ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ಇಲ್ಲದ ವಿಚಾರವನ್ನು ಪ್ರಚಾರ ಮಾಡುತ್ತಾರೆ. ನೀವು ಆ ಗುಂಪಿಗೆ ಸೇರದೇ ಇದ್ದರೂ ಆಕೆಯ ಫೋನ್ ಅನ್ನು ರಕ್ಷಿಸಿಕೊಳ್ಳುವಾಗ ಅವಳನ್ನು ದೂಷಿಸುವುದಕ್ಕೆ ಆಗುವುದಿಲ್ಲ.

 ಹಂಚಿಕೊಳ್ಳಲಾಗದಂಥಹ ಖಾಸಗಿ ವಿಷಯಗಳು

ಹಂಚಿಕೊಳ್ಳಲಾಗದಂಥಹ ಖಾಸಗಿ ವಿಷಯಗಳು

ಬ್ಯಾಂಕ್ ಅಕೌಂಟ್ ವಿವರಗಳು, ಮುಖ್ಯವಾದ ಪಾಸ್ ವರ್ಡ್ ಗಳು, ಇತರೇ ಪ್ರಮುಖ ವಿಚಾರಗಳು ಆಕೆ ತನ್ನ ಫೋನಿನಲ್ಲಿ ದಾಖಲಿಸಿಕೊಂಡಿಕುವುದರಿಂದ ಯಾರಿಗೂ ತೋರಿಸಲು ಇಷ್ಟ ಪಡುವುದಿಲ್ಲ. ಅಷ್ಟರಮಟ್ಟಿಗೆ ನೀವು ಆ ಸಂಬಂಧದಲ್ಲಿ ನೀವು ಪ್ರಮುಖ ಎಂಬ ವಿಚಾರವನ್ನು ಮಾಡಬೇಕು.

ನಿಮ್ಮ ಮೇಲೆ ದೂರು

ನಿಮ್ಮ ಮೇಲೆ ದೂರು

ಸಹಜ. ನಿಮ್ಮನ್ನು ಆಕೆ ದೂರುವುದು ನಿಮ್ಮ ಮೇಲಿನ ದ್ವೇಷದಿಂದಲ್ಲ ಅಥವಾ ನಿಮ್ಮ ಜೊತೆಗಿನ ಸಂಬಂಧ ಮುರಿಯಬೇಕೆಂದಲ್ಲ. ಆದರೆ ಮೇಲೆ ಮೂರನೇ ಕಾರಣ ಹೇಳಿದಂತೆ, ಹುಡುಗಿಯರ ಖಾಸಗಿ ವಿಷಯಗಳು ಮತ್ತು ತನ್ನ ಬಿಎಫ್ಎಫ್ ಜೊತೆಗಿನ ಸಂಭಾಷಣೆಯ ಬಗ್ಗೆ ನಿಮಗಿರುವ ಕುತೂಹಲ.

ನಿಮಗೆ ಆಗದೇ ಇರುವವರ ಜೊತೆಗೆ ಗೆಳೆತನ

ನಿಮಗೆ ಆಗದೇ ಇರುವವರ ಜೊತೆಗೆ ಗೆಳೆತನ

ಇಬ್ಬರಿಗೂ ಕಾಮನ್ ಗೆಳೆಯರು ಅಥವಾ ಗೆಳತಿಯರು ಇದ್ದರೆ, ಅದರಲ್ಲಿ ನಿಮಗೆ ಅಷ್ಟೇನು ಪ್ರಿಯವಾಗದ ಸ್ನೇಹಿತರು ಇರುತ್ತಾರೆ. ಆದರೆ ಅಂಥಹವರು ಅವಳಿಗೆ ಇಷ್ಟವಾಗಬಹುದು. ಪುನಃ ಅದೇ ವಿಚಾರಕ್ಕೆ ಬರುವುದಾದರೆ, ಅನಾವಶ್ಯಕ ಮನಸ್ತಾಪಗಳನ್ನು ತಡೆಗಟ್ಟಲು ಅವಳು ಕೆಲವು ವಿಷಯಗಳನ್ನು ಬಿಚ್ಚಿಡಲು ಇಷ್ಟ ಪಡುವುದಿಲ್ಲ.

English summary

Reasons Why Your Girlfriend Doesn’t Want You To Touch Her Phone

Seeing how our phones have become virtual extensions of our lives, it is no wonder that people guard them more fiercely than ever. However, you would think that once you are in a relationship, those walls can be torn down.
X
Desktop Bottom Promotion