Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 7 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 8 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳೆಯರು ಮಿಲನವನ್ನು ಬಯಸಲು ಕಾರಣಗಳು
ಮಿಲನವು ಮಾನವ ಕುಲದ ಒಂದು ಅತ್ಯಂತ ಮೂಲ ಅಗತ್ಯಗಳಲ್ಲಿ ಒಂದಾಗಿದೆ. ಏಕೆಂದರೆ ಮಾನವರು ಸಹ ಒಂದು ಪ್ರಾಣಿಗಳೇ ತಾನೇ. ಆದರೆ ಇವರು ಸಾಮಾಜಿಕ ಪ್ರಾಣಿಗಳು ಅಷ್ಟೇ. ನಮಗೆ ಸಂಬಂಧಗಳು ಇರುತ್ತವೆ, ಪ್ರೀತಿ-ಪ್ರೇಮ ಎಂಬ ಭಾವನೆಗಳು ಇರುತ್ತವೆ ಜೊತೆಗೆ ಮದುವೆಗಳಂತಹ ಸಾಮಾಜಿಕ ಸ್ಥಾನಮಾನಗಳು ಇರುತ್ತವೆ. ಹಾಗಾಗಿ ಮಾನವರ ಪಾಲಿಗೆ ಮಿಲನವು ಬುದ್ಧಿಹೀನವಾದ ಅಥವಾ ಜನ್ಮದತ್ತವಾಗಿ ಬಂದ ನಡುವಳಿಕೆಯಾಗಿರುವುದಿಲ್ಲ.
ಅದರಲ್ಲೂ ಹೆಂಗಸರ ಪಾಲಿಗೆ ಇದು ತೀರಾ ಮುಜುಗರದ ಸಂಗತಿ. ಆದರೂ ಹೆಂಗಸರು ಈ ಮಿಲನದಲ್ಲಿ ತೊಡಗಿಸಿಕೊಳ್ಳುವುದೇ ಇಲ್ಲ ಎಂದರೆ ಅದು ನಗೆಪಾಟಲಿನ ವಿಷಯವಾಗುತ್ತದೆ. ಹೆಂಗಸರು ಮಿಲನದಲ್ಲಿ ತೊಡಗಿಕೊಳ್ಳಲು ಕೆಲವೊಂದು ಕಾರಣಗಳು ಇವೆ, ಇದನ್ನು ಅರ್ಥ ಮಾಡಿಕೊಳ್ಳುವ ಮೊದಲು ನೀವು ಹೆಂಗಸರ ಮನಸ್ಸಿನ ಒಳಗೆ ಮತ್ತು ಹೊರಗೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಹೆಂಗಸರು ತಮ್ಮ ಆಯ್ಕೆಗಳನ್ನು ಪರಿಗಣಿಸದೆ ಮಿಲನದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅಪರೂಪ. ಹುಡುಗಿಯರು ಸಹ ತಕ್ಷಣ ಕಾಮನೆಗಳಿಗೆ ಒಳಗಾಗುತ್ತಾರೆ ಎಂಬುದು ಸತ್ಯ.
ಆದರೆ ಇಂತಹ ಪರಿಸ್ಥಿತಿ ಎದುರಾಗುವುದು ತೀರಾ ವಿರಳ. ಹಾಗಾದರೆ ಆಕೆ ಏಕೆ ನಿಮ್ಮೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುತ್ತಾಳೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಅದಕ್ಕೆ ಉತ್ತರ ಹೆಂಗಸರು ಯಾವತ್ತು ನಿಷ್ಪ್ರಯೋಜಕವಾದ ಕೆಲಸವನ್ನು ಮಾಡುವುದಿಲ್ಲ.
ದಾಂಪತ್ಯ ಮಿಲನಕ್ಕೆ ಪೂರಕ ಈ 20 ಕಾರಣಗಳು!
ಹೆಂಗಸರು ಏಕೆ ಮಿಲನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದಕ್ಕೆ ಕೆಲವೊಮ್ಮೆ ಸ್ವಾರ್ಥ ಕಾರಣವಾದರೆ, ಮತ್ತೊಮ್ಮೆ ಗಂಡಸನ್ನು ಯಾಮಾರಿಸುವ ಸಲುವಾಗಿ ಎಂದು ಹೇಳಲಾಗುತ್ತದೆ. ಆದರೆ ಹೆಂಗಸರು ಬುದ್ಧಿವಂತರು, ಅವರನ್ನು ನೀವು ಮೋಸಗೊಳಿಸಲು ಅಷ್ಟು ಸುಲಭವಲ್ಲ. ಹೆಂಗಸರು ಯಾವಾಗಲು ತಮ್ಮ ಅಗತ್ಯತೆಗಳನ್ನು ಮತ್ತು ನಿರ್ಧಾರಗಳನ್ನು ನಿಖರವಾಗಿ ತಿಳಿದಿರುತ್ತಾರೆ. ಅದರ ಮೂಲಕವೇ ಗಂಡಸನ್ನು ಅಳೆಯುತ್ತಾರೆ. ಆದ್ದರಿಂದಲೇ ಬೋಲ್ಡ್ ಸ್ಕೈ ಇಂದು ಹೆಂಗಸರು ಏಕೆ ಮಿಲನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಕುರಿತಾಗಿ ಕೆಲವೊಂದು ಪ್ರಮುಖ ಕಾರಣಗಳನ್ನು ನಿಮ್ಮ ಮುಂದೆ ಇಡುತ್ತಿದೆ.
ಇದು ಪ್ರಕೃತಿಯ ಕರೆಯಷ್ಟೇ
ಹೆಂಗಸರೇನು ಅಜ್ಞಾತ ಗ್ರಹದಿಂದ ಬಂದ ಜೀವಿಗಳಲ್ಲ. ಅವರಿಗೂ ಸಹ ಕಾಮ, ಕ್ರೋಧ, ಮೋಹ ಎಲ್ಲವೂ ಇರುತ್ತವೆ. ದೈಹಿಕ ಸಾಮೀಪ್ಯವು ಅವರನ್ನು ಮತ್ತಷ್ಟು ಪ್ರೇರೇಪಿಸುತ್ತದೆ. ಬೆಂಕಿ ಸಮೀಪ ಇದ್ದ ಬೆಣ್ಣೆ ಕರಗುವಂತೆ, ಇಷ್ಟಪಟ್ಟ ಗಂಡು ಪಕ್ಕದಲ್ಲಿದ್ದರೆ ಹೆಣ್ಣು ಕರಗಿ ನೀರಾಗುತ್ತಾಳೆ, ಇದು ಪ್ರಕೃತಿ ಸಹಜ ಧರ್ಮ.
ಒಲವಿನ ಪ್ರತೀಕವಾಗಿ
ನೀವು ಆಕೆಗೆ ಮಾಡಿದ ಒಳ್ಳೆಯ ಕೆಲಸ ಅಥವಾ ತೋರುತ್ತಿರುವ ಪ್ರೀತಿಯನ್ನು ನಿಮಗೆ ಪ್ರತಿಯಾಗಿ ನೀಡಲು ಆಕೆ ಮಿಲನವನ್ನು ಆಯ್ದುಕೊಳ್ಳುತ್ತಾಳೆ. ನಿಮ್ಮ ಕಾರ್ಯದಿಂದ ಆಕೆಗೆ ಸಂತೋಷವಾದಾಗ ಅದಕ್ಕಾಗಿ ಆಕೆ ತನ್ನನ್ನೇ ನಿಮಗೆ ಅರ್ಪಿಸಿಕೊಳ್ಳುತ್ತಾಳೆ.
ಸ್ವಾಭಾವಿಕವಾದ ಮುಂದಿನ ಹಂತ
ಆಗ ತಾನೇ ನೀವು ಒಂದು ಸಂಬಂಧಕ್ಕೆ ಕಾಲಿರಿಸಿದ್ದೀರಿ, ಮುಂದಿನ ದಿನಗಳಲ್ಲಿ ನೀವು ಮತ್ತು ಆಕೆ ಒಟ್ಟಿಗೆ ಇರುತ್ತೀರಿ. ಆಗ ನಿಮ್ಮ ಸಂಬಂಧವು ಮುಂದಿನ ಹಂತಕ್ಕೆ ತೆರಳುವ ಪೀಠಿಕೆಯಾಗಿ ಆಕೆ ನಿಮ್ಮೊಂದಿಗೆ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಾಳೆ.
ಆಕೆಗೆ ಮೂಡ್ ಬಂದಿದೆ
ಹೆಂಗಸರು ತಮಗೆ ಮಿಲನದ ಆಸೆ ಬಂದಿದೆ ಎಂದು ತೋರಿಸುವುದು ವಿರಳ, ಒಂದು ವೇಳೆ ನೀವೇನಾದರು ಆ ಭಾವನೆಯನ್ನು ಅವರಲ್ಲಿ ಹೊರ ಹೊಮ್ಮಿಸಿದ್ದರೆ, ಬಹುಶಃ ಈ ರಾತ್ರಿ ನೀವೇ ಅದೃಷ್ಟಶಾಲಿಗಳು.
ಆಕೆಗೆ ಭಾವನಾತ್ಮಕ ಬೆಂಬಲ ಬೇಕು
ದೈಹಿಕ ಪ್ರೀತಿಯು ಭಾವನಾತ್ಮಕ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಷ್ಟೇ. ಆಕೆ ನಿಮ್ಮೊಂದಿಗೆ ಮಲಗಲು ಸಮ್ಮತಿಸಿದಳೆಂದರೆ ಆಕೆಗೆ ನೀವು ಭಾವನಾತ್ಮಕವಾಗಿ ಸಹ ಬೇಕು ಎಂದರ್ಥ.
ಒಂದಿಷ್ಟು ಮುತ್ತಿನ ಕತೆ
ಹೌದು, ಹೆಂಗಸರಿಗೆ ಗಂಡಸು ಮುದ್ದಾಗಿರದಿದ್ದರು ಪರವಾಗಿಲ್ಲ. ತಮ್ಮನ್ನು ಮುದ್ದಾಡುವ ಮತ್ತು ರಮಿಸುವ ಗುಣವನ್ನು ಅವರು ಹೊಂದಿರಬೇಕು ಎಂದು ಭಾವಿಸುತ್ತಾರೆ. ನೀವು ಅವರನ್ನು ಉತ್ತಮವಾಗಿ ಚುಂಬಿಸಿದರೆ, ಮಿಲನದ ಸುಖ ನಿಮಗೆ ಕಟ್ಟಿಟ್ಟ ಬುತ್ತಿ. ಇನ್ನೇಕೆ ತಡ, ಮುದ್ದಾಡೆಂದಿದೆ ಮಲ್ಲಿಗೆ ಹೂವು.......
ನಿಮಗೆ ಉಡುಗೊರೆ ನೀಡಲು
ನೀವು ಅವರಿಗೆ ವಜ್ರದ ಉಂಗುರ ತಂದಿರುತ್ತೀರಿ, ಅಥವಾ ಅವರಿಗೆ ಹಿಡಿಸುವ ಯಾವುದೋ ಒಂದು ಉಡುಗೊರೆಯನ್ನು ಅವರಿಗೆ ನೀಡಿದಾಗ ಅವರಿಗೆ ಆಗುವ ಆನಂದದಲ್ಲಿ ಅವರು ತಮ್ಮನ್ನೆ ಒಂದು ಉಡುಗೊರೆಯಾಗಿ ನಿಮಗೆ ನೀಡಿ ಬಿಡುತ್ತಾರೆ.
ಏಕಾಂತದಲ್ಲಿ ಪ್ರೀತಿ,ಪ್ರೇಮ, ಪ್ರಣಯ
ಕಾರಿನ ಸೀಟಿನಲ್ಲಿ ಕುಳಿತು ಸೊಂಟ ಹುಳುಕಿಸಿಕೊಂಡರು ಸಹ ಗಂಡಸರು ಮಿಲನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಅವರು ಸಾಹಸ ಶೀಲರು. ಆದರೆ ಹೆಂಗಸರಿಗೆ ಇದು ಏಕಾಂತದಲ್ಲಿ ನಡೆಯುವ ದಿವ್ಯ ಪ್ರಕ್ರಿಯೆ. ಒಳ್ಳೆಯ ಹವಾಮಾನ, ದೃಶ್ಯ ವೈಭವ ಮತ್ತು ಬೆಳಕುಗಳ ಸಮ್ಮಿಲನವು ಆಕೆಯಲ್ಲಿ ಮಿಲನದ ಆಸೆಯನ್ನು ಚಿಗುರಿಸಬಲ್ಲವು.
ತಮ್ಮ ಗಂಡನನ್ನು ಒಪ್ಪಿಸಲು
ಯಾವುದೋ ಒಂದು ಕೆಲಸ ತನ್ನ ಗಂಡನಿಂದ ಆಗ ಬೇಕಿರುತ್ತದೆ. ಅದಕ್ಕೇ ಈ ಮಹಾನುಭಾವನವರು ಆಗೋಲ್ಲ ಎಂದಿರುತ್ತಾರೆ. ಏನಾದರು ಮಾಡಿ ಒಪ್ಪಿಸುವ ಧಾವಂತಕ್ಕೆ ಬೀಳುವ ಹೆಂಡತಿ, ಗಂಡನೊಂದಿಗೆ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆ. ಹೀಗೆ ಕೊಟ್ಟು ತೆಗೆದುಕೊಳ್ಳುವುದು ನಡೆಯುತ್ತ ಇರುತ್ತದೆ ಬಿಡಿ, ಬೆಡ್ರೂಮಿನಲ್ಲಿ!
ಪ್ರೀತಿಯ ಪರಾಕಾಷ್ಠೆ
ಹೆಂಗಸರಿಗೆ ಪ್ರೀತಿ ಮತ್ತು ಕಾಮ ಎರಡೂ ಬೇರೆ ಬೇರೆಯಲ್ಲ. ಅವೆರಡು ಅವರ ಪ್ರಕಾರ ಒಂದೇ, ಆಕೆ ನಿಮ್ಮೊಂದಿಗೆ ಮಲಗಲು ಇಷ್ಟಪಟ್ಟಲ್ಲಿ, ಅದು ಆಕೆ ನಿಮಗಾಗಿ ತೋರುತ್ತಿರುವ ಪ್ರೀತಿಯ ಪರಾಕಾಷ್ಠೆ ಎಂದಷ್ಟೇ ಭಾವಿಸಿ.
ಕಾಮಾತುರಾಣಂ ನ ಲಜ್ಜಾ ನ ಭಯಂ
ಕೇವಲ ಗಂಡಸರು ಮಾತ್ರ ಮೂಡ್ ಬಂದು ದೇಹ ಬಿಸಿಯದಾಗ ಮಿಲನಕ್ಕೆ ಸಿದ್ಧವಾಗುತ್ತಾರೆ ಎಂದು ತಿಳಿಯಬೇಡಿ, ಈ ವಿಷಯದಲ್ಲಿ ಹೆಂಗಸರ ಭಾವನೆಯು ಸಹ ಅದೇ ಆಗಿರುತ್ತದೆ. ಯಾವುದನ್ನು ನಿಯಂತ್ರಿಸಲು ಆಗುವುದಿಲ್ಲವೋ, ಆಗ ಎಲ್ಲರೂ ಆ ಭಾವನೆಗೆ ಶರಣಾಗುತ್ತಾರೆ ಇದಕ್ಕೆ ಸ್ತ್ರೀಯರು ಸಹ ಹೊರತಲ್ಲ.
ಒತ್ತಡವನ್ನು ನಿವಾರಿಸಿಕೊಳ್ಳಲು
ಹೆಂಗಸರಿಗೆ ಅಧಿಕ ಕಾರ್ಯದೊತ್ತಡದಿಂದ ಉಂಟಾಗುವ ಆಯಾಸದಿಂದ ಮುಕ್ತಿ ಪಡೆಯಲು ಸಿಗುವ ಮಾರ್ಗವೆಂದರೆ ಅದು ಮಿಲನ. ಏಕೆಂದರೆ ಹೆಂಗಸರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಮಿಲನದಲ್ಲಿ ಪಾಲ್ಗೊಳ್ಳುವುದು ಸಹಜ.
ಆಕೆಯಲ್ಲಿ ಹಾರ್ಮೊನುಗಳು ಬಿಡುಗಡೆಯಾದಾಗ
ಮುಟ್ಟಿನ ಅವಧಿಯ ನಡುವೆ ಒಂದು ಹಂತದಲ್ಲಿ ಮಹಿಳೆಯರಲ್ಲಿ ಫಲವಂತಿಕೆಯು ರೂಪುಗೊಳ್ಳುತ್ತದೆ, ಇದನ್ನು ಒವುಲೇಟಿಂಗ್ ಎಂದು ಸಹ ಕರೆಯುತ್ತಾರೆ. ಈ ಅವಧಿಯಲ್ಲಿ ಸಹಜವಾಗಿ ಆಕೆಯಲ್ಲಿ ಕಾಮಾಸಕ್ತಿಯು ಕಂಡು ಬರುತ್ತದೆ. ಆಗ ನಡೆಯುವ ಮಿಲನವೇ ಆಕೆಯನ್ನು ಗರ್ಭವತಿಯನ್ನಾಗಿಸುತ್ತದೆ.
ಆಕೆ ನಿಮ್ಮ ಮೇಲೆ ಪ್ರಾಬಲ್ಯವನ್ನು ತೋರಲು
ಗಂಡಸರು ಹಾಸಿಗೆಯಲ್ಲಿ ಹೆಂಗಸಿನ ಮುಂದೆ ತಮ್ಮ ಪ್ರಾಬಲ್ಯವನ್ನು ತೋರಲು ಮುಂದಾಗುತ್ತಾರೆ. ಆದರೆ ನೆನಪಿರಲಿ ಒಂದೊಮ್ಮೆ ಆಕೆಯೇನಾದರು ಹಾಸಿಗೆಯಲ್ಲಿ ಪ್ರಾಬಲ್ಯ ಮೆರೆದರೆ, ಜೀವನದ ಪ್ರತಿ ಹಂತದಲ್ಲು ನಿಮ್ಮನ್ನು ಹಣ್ಣು ಗಾಯಿ ನೀರು ಗಾಯಿ ಮಾಡಿಬಿಡುತ್ತಾಳೆ.
ನೀವು ಸದಾ ಆಕೆಯನ್ನೇ ಅವಲಂಬಿಸಬೇಕು
ಗಂಡಸರಿಗೆ ತಮ್ಮ ಹೆಂಡತಿ ಆತನನ್ನೆ " ಅವಲಂಬಿಸಬೇಕು" ಎಂಬ ಭಾವನೆ ಇರುವುದಿಲ್ಲ. ಅದು ಆತನಿಗು ಸಹ ಹಿಡಿಸುವುದಿಲ್ಲ. ಆದರೆ ಹೆಂಗಸರಿಗೆ ಇದರ ವಿರುದ್ಧ ಭಾವನೆಯಿರುತ್ತದೆ. ಆಕೆಗೆ ತನ್ನವರು ಸದಾ ತನ್ನನ್ನೆ ಬಯಸಬೇಕು, ತನ್ನನ್ನೆ ಅವಲಂಬಿಸಬೇಕು ಎಂಬ ಭಾವನೆ ಇರುತ್ತದೆ. ಏಕೆಂದರೆ ನೀವೆಲ್ಲಿ ಆಕೆಯನ್ನು ತ್ಯಜಿಸಿ ಹೋಗುತ್ತೀರೋ ಎಂಬ ಅಭದ್ರತೆ ಮತ್ತು ಭಯ ಆಕೆಯನ್ನು ಕಾಡುತ್ತಿರಬಹುದು. ಅದಕ್ಕಾಗಿ ಆಕೆ ನಿಮ್ಮೊಂದಿಗೆ ಮಲಗಿ ಅದನ್ನು ನಿಮಗೆ ನೆನಪಿಗೆ ತರುವ ಪ್ರಯತ್ನ ಮಾಡುತ್ತಾಳೆ.
ಆಕೆ ನಿಮ್ಮನ್ನು ಮದುವೆಯಾಗಲು ನಿರ್ಧರಿಸಿರುತ್ತಾಳೆ
ಇದು ತುಂಬಾ ಅಪರೂಪವಾಗಿ ನಡೆಯುತ್ತದೆ, ನೀವು ಆಕೆಯನ್ನು ಇಷ್ಟಪಟ್ಟು, ಆಕೆ ನಿಮ್ಮನ್ನು ಇಷ್ಟಪಟ್ಟು, ನೀವೇ ಆಕೆ ಬಯಸಿದಂತಹ ಗಂಡಾಗಿದ್ದಲ್ಲಿ, ಮದುವೆಗೆ ಮುನ್ನ ಆಕೆಯು ತನ್ನ ಕನ್ಯತ್ವವನ್ನು ನಿಮಗಾಗಿ ಉಡುಗೊರೆ ಕೊಡಲು ಬಯಸಿ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆ. ಆದರೆ ಈ ರೀತಿ ಆಕೆಯೊಂದಿಗೆ ಸುಖ ಪಡೆಯುವ ಮೊದಲು ಮದುವೆಗೆ ಎಲ್ಲಾ ಸಿದ್ಧತೆಗಳು ಪಕ್ಕಾ ಮಾಡಿಕೊಂಡು ಮುಂದುವರಿದರೆ ಉತ್ತಮ. ಮದುವೆಯಾದ ಮೇಲೆ ಇದರ ಬಗ್ಗೆ ಆಲೋಚಿಸಿದರೆ ಮತ್ತೂ ಉತ್ತಮ, ಯಾವ ಭಯವು ನಿಮಗಿರುವುದಿಲ್ಲ. ಆಲ್ ದಿ ಬೆಸ್ಟ್...