For Quick Alerts
ALLOW NOTIFICATIONS  
For Daily Alerts

ವ್ಯಾಲಂಟೇನ್: ನೀವು ಮಾಡಲೇಬೇಕಾದ 5 ಪ್ರಾಮಿಸ್‌!

|

ವ್ಯಾಲಂಟೇನ್ ದಿನ ಮುಗಿಯುತ್ತಾ ಬರುತ್ತಿದೆ. ಈ ವಿಶೇಷ ವ್ಯಾಲಂಟೇನ್ ದಿನವನ್ನು ಹಲವಾರು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ವ್ಯಾಲಂಟೇನ್ ದಿನದ ಮಹತ್ವವನ್ನು ಒಂದು ವಾರದಿಂದ ಆಚರಿಸಲಾಗುತ್ತದೆ ವಾರದ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಆ ವಾರದಲ್ಲೊಂದು ದಿನವೇ ಪ್ರೇಮಿಗಳ ದಿನ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಪ್ರೇಮ ದಿನವನ್ನು ಈ ರೀತಿಯಾಗಿ ಆಚರಿಸಿ!

ಇಬ್ಬರಿಗೂ ಪ್ರೀತಿಯುಂಟಾದಾಗ ಅದನ್ನು ಕಾರ್ಯರೂಪಕ್ಕೆ ತರಲು ಈ ಜೋಡಿಗಳು ಪ್ರಯತ್ನಿಸುತ್ತಾರೆ ಮತ್ತು ಭವಿಷ್ಯದಲ್ಲಿ ಅದು ಶಾಶ್ವತವಾಗಿರುವಂತಹ ಒಂದು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾರೆ. ಪರಸ್ಪರ ಅರಿಯುವಿಕೆ, ಬಾಂಧವ್ಯ ಕಾಪಾಡುವುದು, ಹೀಗೆ ಪ್ರೇಮಿಗಳ ಲೋಕವೇ ಹೊಸದಾಗಿರುತ್ತದೆ. ತನ್ನ ಇನಿಯ ಅಥವಾ ಇನಿಯಳ ಬಗೆಗೆ ತಿಳಿದುಕೊಂಡಷ್ಟು ಹೊಸ ಹೊಸ ಸುದ್ದಿ ಹುಟ್ಟಿದಂತೆ ಅನಿಸುತ್ತದೆ. ತನ್ನಾಕೆಯ ಬಗೆಗೆ ಕೇಳಿದಷ್ಟು ತಣಿಯದು. ಇಂತಹ ಮನಸ್ಸು ಪ್ರತಿಯೊಬ್ಬ ಪ್ರೇಮಿಯದಾಗಿರುತ್ತದೆ.

Make your Valentine's Day bit special

ವ್ಯಾಲಂಟೇನ್ ದಿನವನ್ನು ಆಚರಿಸುವುದು ಈ ಪ್ರೀತಿಯನ್ನು ಅಜರಾಮರಗೊಳಿಸುವ ಒಂದು ಸಂಪ್ರದಾಯ. ಪ್ರೀತಿಯ ಆಳ, ಬಾಂಧವ್ಯವನ್ನು ಈ ದಿನದಂದು ಪ್ರತಿಯೊಬ್ಬರೂ ತಮ್ಮ ಮನಮೆಚ್ಚಿದವರೊಂದಿಗೆ ಮನಬಿಚ್ಚಿ ಮಾತಾನಾಡುತ್ತಾರೆ. ಜೀವನಪೂರ್ತಿ ನಾನು ನಿನ್ನ ಕಷ್ಟ ಸುಖಕ್ಕೆ ಸ್ಪಂದಿಸುತ್ತೇನೆ, ಕೈ ಹಿಡಿದು ನಡೆಸುತ್ತೇನೆ ಎಂಬ ಭಾಷೆಯನ್ನು ಹೃದಯಪೂರ್ವಕವಾಗಿ ಪ್ರೇಮಿಗಳು ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ವ್ಯಾಲಂಟೇನ್ ದಿನಕ್ಕೆ ಅದರದ್ದೇ ಆದ ಮಹತ್ವವಿದೆ. ವ್ಯಾಲಂಟೇನ್ ದಿನಕ್ಕಾಗಿ ನೀವು ಮಾಡಲೇಬೇಕಾದ ಐದು ಪ್ರಾಮಿಸ್‌ಗಳು ಹೀಗಿವೆ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವ್ಯಾಲಂಟೇನ್ ದಿನ: ನಿಮ್ಮ ಬೆಡ್‌ರೂಮ್ ಹೀಗೆ ಸಜ್ಜುಗೊಳ್ಳಲಿ

1.ನೀನು ಕಷ್ಟದಲ್ಲಿದ್ದಾಗ ನನ್ನನ್ನು ನಂಬು:
ನೀವು ಕಷ್ಟದಲ್ಲಿದ್ದಾಗ, ತೊಂದರೆಗೆ ಒಳಗಾದಾಗ ನಿಮ್ಮ ಸಂಗಾತಿ ನಿಮ್ಮೊಡನಿರಬೇಕೆಂದು ಬಯಸುತ್ತೀರಿ. ಜೀವನದ ಪ್ರತಿಯೊಂದು ಹೆಜ್ಜೆಯನ್ನು ಆಕೆಯ ಅಥವಾ ಆತನ ಹೆಜ್ಜೆಯೊಂದಿಗೆ ಇರಿಸಲು ಮುಂದಾಗುತ್ತೀರಿ. ಆದ್ದರಿಂದ ಈ ವ್ಯಾಲಂಟೇನ್ ದಿನದ ಪ್ರಾಮಿಸ್‌ನಲ್ಲಿ ನಿಮ್ಮ ಸಂಗಾತಿಯ ಜೊತೆ ಬಿಡದಿರುವುದು ಒಂದು ಶಾಶ್ವತ ಭಾಷೆಯಾಗಲಿ. ಈ ಭಾಷೆ ನಿಮ್ಮ ಸಂಗಾತಿಯ ಆತ್ಮಸ್ಥೈರ್ಯವನ್ನು ಹೆಚ್ಚಾಗಿಸಿ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

2.ಎಂದೆಂದಿಗೂ ನಾನು ನಿನ್ನೊಂದಿಗೆ ಇರುವೆ :
ಏನು ಬೇಕಾದರೂ ಸಂಭವಿಸಲಿ ನಾನು ನಿನ್ನೊಂದಿಗೆ ಇದ್ದೇನೆ ಎಂಬ ಆಶ್ವಾಸನೆಯನ್ನು ನಿಮ್ಮ ಸಂಗಾತಿಗೆ ನೀಡಿ. ನೀವು ನಿಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದು ಇದರಿಂದ ಮನದಟ್ಟಾಗುತ್ತದೆ. ಜವಬ್ದಾರಿಯುತ ಸಂಗಾತಿಯಾಗಿ ಕೆಲವೊಂದು ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಸಂಬಂಧಕ್ಕೆ ನೀವು ಸಮಾನರಾಗಿ ಬದ್ಧರಾಗಿದ್ದೀರಿ ಎಂಬುದನ್ನು ಈ ಮೂಲಕ ತೋರಿಸಿಕೊಡಿ.

3.ನಿನ್ನನ್ನು ಸಂತೋಷದಿಂದಿರುಸುತ್ತೇನೆ:
ಈ ಜಗತ್ತಿನಲ್ಲಿ ನಾವೆಲ್ಲರೂ ಸಂತೋಷವನ್ನು ಬಯಸುತ್ತೇವೆ. ಎಷ್ಟೇ ಒತ್ತಡವಿದ್ದರೂ, ನಿಮ್ಮ ಸಂಗತಿಗಾಗಿ ಕೆಲವು ಸಮಯವನ್ನು ವ್ಯಯ ಮಾಡಿ ಅವರ ಸಂತೋಷದಲ್ಲಿ ನಿಮ್ಮ ಸುಖ ಕಾಣಿರಿ. ಮಹಿಳೆ ಮತ್ತು ಪುರುಷ ಇಬ್ಬರೂ ಈ ವಿಷಯದಲ್ಲಿ ಈ ನಿಯಮವನ್ನು ಪಾಲಿಸಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲದಲ್ಲಿ ರಾತ್ರಿ ಕಳೆಯುವ ಉಪಾಯಗಳು!

4.ಯಾವಾಗಲೂ ನಂಬಿಕೆ ಇರಲಿ:

ನಿಮ್ಮ ಸಂಗಾತಿಗೆ ಅತಿ ಮುಖ್ಯವಾಗಿ ನೀವು ಮಾಡಲೇಬೇಕಾದ ಪ್ರಾಮಿಸ್ ಎಂದರೆ ನನ್ನನ್ನು ನಂಬು ಎನ್ನುವುದಾಗಿದೆ. ನೀವು ಕೆಟ್ಟ ದಿನಗಳನ್ನು ಕಳೆದು ಬಂದಿದ್ದರೆ ನಿಮ್ಮ ಸಂಗಾತಿಗೆ ನಿಮ್ಮಲ್ಲಿ ನಂಬಿಕೆ ಇರಿಸುವುದು ಕಷ್ಟವಾಗಬಹುದು.ಆದರೂ ಅವರಿಗೆ ನಿಮ್ಮಲ್ಲಿ ನಂಬಿಕೆ ಉಂಟಾಗುವಂತೆ ಮಾಡಿ. ನಿಮ್ಮ ಪ್ರೀತಿ ಎಷ್ಟು ಮಹತ್ವದ್ದು ಮತ್ತು ನ್ಯಾಯಬದ್ಧವಾದುದು ಎಂಬುದನ್ನು ಅವರಿಗೆ ತಿಳಿಯಪಡಿಸಿ.

5.ನಿನ್ನನ್ನು ಎಂದೆಂದಿಗೂ ಪ್ರೇಮಿಸುತ್ತೇನೆ:
ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ತಮ್ಮ ಸಂಗಾತಿಯಿಂದ ಈ ಭಾಷೆ ತೆಗೆದುಕೊಳ್ಳಲು ಬಯಸುತ್ತಾರೆ. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ಎಂಬ ಮಾತು ನಿಮ್ಮ ಮೇಲಿನ ಗೌರವವನ್ನು ಸಂಗಾತಿಯಲ್ಲಿ ಇನ್ನೂ ಹೆಚ್ಚಿಸುತ್ತದೆ. ತನ್ನಷ್ಟು ಸುಖಿ ಯಾರೂ ಇಲ್ಲ ಎಂಬ ಭಾವನೆ ಅವರ ಮನದಲ್ಲಿ ಮೂಡುತ್ತದೆ. ವ್ಯಾಲಂಟೇನ್ ದಿನದಂದು ಈ ರೀತಿಯ ಭಾಷೆ ಖಂಡಿತಾ ನಿಮ್ಮ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ವ್ಯಾಲಂಟೇನ್ ದಿನದಂದು ನಿಮ್ಮ ಸಂಗಾತಿಗೆ ನೀವು ಮಾಡಬೇಕಾದ 5 ಪ್ರಾಮಿಸ್‌ಗಳು ಇವುಗಳಾಗಿವೆ. ಇದಕ್ಕಿಂತಲೂ ವಿಭಿನ್ನವಾಗಿ ನಿಮ್ಮ ಸಂಗಾತಿಯನ್ನು ಖುಷಿಪಡಿಸುವ ಯಾವುದಾದರೂ ಯೋಚನೆ ನಿಮ್ಮಲ್ಲಿದೆಯೇ?

English summary

Make your Valentine's Day bit special

Valentines week is coming to an end. Soon, the special Valentine's Day will be celebrated in many countries. When two fall in love, they try to make it work and find a future to their relationship. So, when you realise that he/she is the one whom you desire in your life, you ought to make some promises with each other.
X
Desktop Bottom Promotion