For Quick Alerts
ALLOW NOTIFICATIONS  
For Daily Alerts

ಬೇರ್ಪಟ್ಟ ಸಂಬಂಧ ನೀಡುವುದೇ ಹೊಸ ತಿರುವು?

|

ಬೇರೆಯಾಗುವುದು ಎಂಬುದು ಒಂದು ಸಂಬಂಧದಲ್ಲಿ ಯಾರೇ ಆಗಲಿ ತೆಗೆದುಕೊಳ್ಳಬಹುದಾದ ಅತ್ಯಂತ ಕಠಿಣ ನಿರ್ಧಾರವಾಗಿರುತ್ತದೆ. ಬೇರೆಯಾದರೆ ಸಾಕು ಎಂದು ಹಾತೊರೆಯುವ ಜನರ ಜೀವನದಲ್ಲೂ ಸಹ ಈ

ಸಂಬಂಧವು ಬೇರ್ಪಟ್ಟಾಗ ಮಾಸದ ಗಾಯಗಳನ್ನು ಮಾಡಿ ಹೋಗುತ್ತದೆ. ಅದನ್ನು ಪರಿಹರಿಸಿಕೊಳ್ಳಲು ನೀವು ಎಷ್ಟು ಪ್ರಯತ್ನಪಡುತ್ತೀರಾ, ಎಂಬುದು ಇಲ್ಲಿ ವಿಷಯವೇ ಅಲ್ಲ. ಆದರೆ ಪ್ರತಿಯೊಂದು ಸಂಬಂಧವು ಬೇರ್ಪಟ್ಟಾಗ ಗೊತ್ತಾಗುತ್ತದೆ, ನಿಮ್ಮ ಸಂಬಂಧದಲ್ಲಿ ನಿಮಗೆ ಗೊತ್ತೇ ಆಗಿರದ ಎಷ್ಟು ವಿಷಯಗಳು ಇದ್ದವು ಎಂದು!.

ಇದರಲ್ಲಿ ಕೆಲವೊಂದು ಸ್ಫೂರ್ತಿದಾಯಕವಾಗಿದ್ದರೆ, ಇನ್ನೂ ಕೆಲವು ನಿಮಗೆ ಪ್ರೇರಣೆಯನ್ನು ಒದಗಿಸುವಂತಿರುತ್ತವೆ, ಮತ್ತೆ ಕೆಲವು ನಿಮಗೆ ಮತ್ತೇನನ್ನು ಕೊಡದೆ ಇದ್ದರು, ಕೊರಗನ್ನು ಮಾತ್ರ ಕೊಡುತ್ತವೆ. ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಸಂಬಂಧದಲ್ಲಿ ನಡೆದ ಎಲ್ಲ ಧನಾತ್ಮಕ ಮತ್ತು ಋಣಾತ್ಮಕ ವಿಚಾರಗಳ ಕುರಿತಾಗಿ ಒಮ್ಮೆ ಆಲೋಚಿಸಿ. ಏಕೆಂದರೆ ನೀವು ಬೇರ್ಪಟ್ಟಾಗ ಅದರಿಂದ ಕಲಿಯುವ ಪಾಠಗಳು, ನಿಮ್ಮ ಸಂಬಂಧದ ಕುರಿತಾದ ಅತ್ಯಂತ ಒಳ್ಳೆಯ ಸಲಹೆಗಳಾಗಿ ನಿಮಗೆ ಗೋಚರಿಸುತ್ತವೆ. ಗಂಡು ಹೆಣ್ಣಿನ ನಡುವೆ ಆತ್ಮೀಯ ಸ್ಪರ್ಶವೇಕೆ ಅಗತ್ಯ?

ಇವುಗಳು ಮುಂದೆ ನೀವು ಭವಿಷ್ಯದಲ್ಲಿ ಮಾಡಬಾರದಾದ ತಪ್ಪುಗಳನ್ನು ತಿಳಿಸುತ್ತದೆಯಲ್ಲದೆ, ನಿಮ್ಮ ಸಂಗಾತಿಯನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಅವಕಾಶಮಾಡಿಕೊಡುತ್ತದೆ. ಆದರೆ ಏನು ಮಾಡುವುದು, ಏನಾದರು ಬದುಕಿನ ಬಂಡಿ ಸಾಗಲೇ ಬೇಕಲ್ಲವೇ! ವಾಸ್ತವಕ್ಕೆ ಬನ್ನಿ ಮತ್ತು ಜೀವನವನ್ನು ನೀವು ಬಯಸಿದ ಕಡೆಗೆ ತೆಗೆದುಕೊಂಡು ಹೋಗಿ. ಇಲ್ಲಿ ಬೇರೆಯಾದವರು ಕಲಿಯುವ ಕೆಲವೊಂದು ಪಾಠಗಳನ್ನು ನೀಡಿದ್ದೇವೆ. ಓದಿಕೊಳ್ಳಿ, ಬೇರೆಯಾದವರು ಮತ್ತು ಬೇರೆಯಾಗಲು ಮನಸ್ಸು ಮಾಡುತ್ತಿರುವವರು ಸಹ ಓದಬಹುದು. ಅವಿವಾಹಿತರಾಗಿರಲು ಬಯಸುವವರು ನೀಡುವ 20 ಕಾರಣಗಳು

ಸಂವಹನವು ಬೇರೆಯಾದವರ ಈಗಿನ ಪರಿಸ್ಥಿತಿಗೆ ನಿಜವಾದ ಕಾರಣವಾಗಿ ನಿಲ್ಲುತ್ತದೆ

ಸಂವಹನವು ಬೇರೆಯಾದವರ ಈಗಿನ ಪರಿಸ್ಥಿತಿಗೆ ನಿಜವಾದ ಕಾರಣವಾಗಿ ನಿಲ್ಲುತ್ತದೆ

ಹೌದು, ಒಳ್ಳೆಯ ಸಂವಹನದ ಕೊರತೆಯು ಸಂಗಾತಿಗಳ ನಡುವೆ ಕಂದಕವನ್ನು ತೋಡಿಬಿಡುತ್ತದೆ. ನಿಮ್ಮ ಸಂಗಾತಿಯ ಕುರಿತು ನಿಮಗೆ ಸರಿಯಾಗಿ ತಿಳಿದುಕೊಳ್ಳಲು ಮತ್ತು ಅವರು ನೀವು ಅಂದುಕೊಂಡಂತೆ ಹೇಗೆ ಇರಬೇಕು ಎಂಬುದನ್ನು ತಿಳಿಸಲು ಸಂವಹನದ ಅವಶ್ಯಕತೆ ಇರುತ್ತದೆ. ಅದರೆ ಏನು ಮಾಡುವುದು ನೀವು ಬೇರೆಯಾದ ಮೇಲೆ ಗೊತ್ತಾಗುತ್ತದೆ. ಸಂಬಂಧದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದರ ಮಹತ್ವ ಏನೆಂಬುದನ್ನು.

ಹೃದಯವು ಮೆದುಳನ್ನು ಆಳಬೇಕು

ಹೃದಯವು ಮೆದುಳನ್ನು ಆಳಬೇಕು

ಹೌದು ಹೃದಯವು ಮೆದುಳನ್ನು ಆಳಬೇಕು ಏಕೆಂದರೆ ನಿಮಗೆ ಅವಮಾನವಾದಾಗ ಅಥವಾ ಮನ ನೊಂದಾಗ ನೀವು ಬೇರೆಯಾಗಲು ಬಯಸುವುದು ಸಹಜ. ಆದರೆ ಇದೆಲ್ಲ ಆದ ಮೇಲೂ, ನಿಮಗೆ ಒಂದು ವಿಚಾರ ನೆನಪಿರಬೇಕು. ಸಂಬಂಧ ಎಂಬುದು ಎರಡು ಭಿನ್ನ ವ್ಯಕ್ತಿತ್ವಗಳ ಸಮ್ಮಿಲನವೆಂಬುದನ್ನು ಹಾಗೂ ಇದನ್ನು ನೀವು ಹೇಗೆ ಅಚ್ಚುಕಟ್ಟಾಗಿ ನಿಭಾಯಿಸುವಿರಿ ಎಂಬುದನ್ನು ತಿಳಿದಿರಬೇಕು. ಆದ್ದರಿಂದಲೆ ನೀವು ಬೇರೆಯಾದ ಮೇಲೆ ನಿಮಗೆ ಗೊತ್ತಾಗುವ ಮತ್ತೊಂದು ಪಾಠವೆಂದರೆ " ಪ್ರೀತಿಯ ಶಕ್ತಿ".

ಒಮ್ಮೊಮ್ಮೆ ಗೆದ್ದವರು ಸೋಲುತ್ತಾರೆ

ಒಮ್ಮೊಮ್ಮೆ ಗೆದ್ದವರು ಸೋಲುತ್ತಾರೆ

ಇದು ನಿಮ್ಮ ಸಂಗಾತಿಯನ್ನು ನೀವು ಪ್ರತಿಸ್ಪರ್ಧಿ ಎಂದು ಬಗೆದು ಅವರ ಜೊತೆಗೆ ಜಗಳ ಮಾಡಿಕೊಂಡು, ಒಂದು ವಾದವನ್ನೋ ಅಥವಾ ಜಗಳವನ್ನೋ ಗೆಲ್ಲಲು ಹೋಗಿ, ಗೆದ್ದಿರಿ ಎಂದು ಭಾವಿಸಿ! ಆಗ ನೀವು ಸೋತಿರಿ ಎಂಬುದು ನೀವಿಬ್ಬರು ಬೇರೆಯಾದ ಮೇಲೆ ಮನವರಿಕೆಯಾಗುತ್ತದೆ. ಇದು ಬೇರೆಯಾದವರು ಮಾಡಿರುವ ಅತ್ಯಂತ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ.

ಮಿತಿಗಳ ಮಟ್ಟವನ್ನು ಗುರುತಿಸಿಕೊಳ್ಳಿ

ಮಿತಿಗಳ ಮಟ್ಟವನ್ನು ಗುರುತಿಸಿಕೊಳ್ಳಿ

ನೀವೆಲ್ಲರು ನಿಮ್ಮ ತೃಪ್ತಿ, ಸಂತೋಷ, ಕೋಪ ಮತ್ತು ತಾಳ್ಮೆಗೆ ಒಂದು ಮಿತಿಯನ್ನು ಹಾಕಿಕೊಂಡಿರುತ್ತೀರಿ. ಒಂದು ವೇಳೆ ಈ ವಿಚಾರಗಳಲ್ಲಿ ನೀವು ಮತ್ತಷ್ಟು ರಾಜಿಯಾಗಲು ಬಯಸಿದಲ್ಲಿ, ಖಂಡಿತವಾಗಿ ನಿಮ್ಮ ಸಂಬಂಧವನ್ನು ನೀವು ಮತ್ತಷ್ಟು ಆರೋಗ್ಯಕರವಾಗಿ ಮತ್ತು ಸದೃಢವಾಗಿ ಇರಿಸಿಕೊಳ್ಳಬಹುದು. ಬೇರೆಯಾದ ಮೇಲೆ ನೀವು ಕಲಿಯುವ ಮತ್ತೊಂದು ಪಾಠ ಎಂದರೆ, ಮಿತಿಗಳ ಮಟ್ಟವನ್ನು ಗುರುತಿಸಿಕೊಳ್ಳಲು ವಿಫಲವಾದುದ್ದು ಎಂದು ನಿಮಗೆ ಮನವರಿಕೆಯಾಗುತ್ತದೆ.

ಬೇರ್ಪಡುವಿಕೆಯು ಒಳ್ಳೆಯದನ್ನೆ ಮಾಡುತ್ತದೆ!

ಬೇರ್ಪಡುವಿಕೆಯು ಒಳ್ಳೆಯದನ್ನೆ ಮಾಡುತ್ತದೆ!

ಬೇರೆಯಾಗುವುದು ಎಲ್ಲರ ವಿಚಾರದಲ್ಲಿ ಕೆಟ್ಟದಲ್ಲ. ಕೆಲವೊಮ್ಮೆ ಈ ಬೇರ್ಪಡುವಿಕೆಯು ಒಳ್ಳೆಯದನ್ನೆ ಮಾಡುತ್ತದೆ! ಹೌದು ಕೆಲವರ ವಿಚಾರದಲ್ಲಿ ಇದು ಬಿಡುಗಡೆ ಹೊಂದಿದ ಮನೋಭಾವವನ್ನು ನೀಡುತ್ತದೆ. ಬೇರ್ಪಟ್ಟ ನಂತರ ಗೊತ್ತಾಗುತ್ತದೆ, ಅಷ್ಟೊಂದು ನಾಟಕೀಯವಾದ ಬಾಳ್ವೆಯನ್ನು ಮಾಡುವುದಕ್ಕಿಂತ, ಬೇರ್ಪಟ್ಟಿದ್ದೆ ಒಳ್ಳೆಯದು ಎಂದು. ಚಿತ್ರ ಹಿಂಸೆ ನೀಡುವ ಸಂಗಾತಿಯ ಜೊತೆಗೆ ಬಾಳ್ವೆ ನಡೆಸುವುದಕ್ಕಿಂತ ಒಂಟಿಯಾಗಿ ಜೀವನ ಸಾಗಿಸುವುದೇ ಉತ್ತಮ.

ಬೆಳ್ಳಗಿರುವುದೆಲ್ಲ ಹಾಲು ಅಲ್ಲ!

ಬೆಳ್ಳಗಿರುವುದೆಲ್ಲ ಹಾಲು ಅಲ್ಲ!

ಹೌದು, ಬೆಳ್ಳಗಿರುವುದೆಲ್ಲ ಹಾಲು ಅಲ್ಲ, ಬೇರೆಯಾದವರನ್ನು ಒಮ್ಮೆ ಕೇಳಿ, " ಈಗ ನೀವು ಹೇಗಿದ್ದೀರಾ" ಎಂದು. ಅವರೆಲ್ಲರು ಒಂದೇ ಉತ್ತರವನ್ನು ನೀಡುತ್ತಾರೆ. ಜೀವನ ನಾವು ಅಂದು ಕೊಂಡಂತಲ್ಲ ಎಂದು. ಮದುವೆಗೆ ಮೊದಲು, ನೀವು ಒಂದು ಕಾಲ್ಪನಿಕ ಜಗತ್ತನ್ನು ಊಹಿಸಿಕೊಂಡಿರುತ್ತೀರಿ. ಆದರೆ ಮದುವೆಯಾದ ಮೇಲೆ ಅದು ಬೇರೆಯಾಗಿರುತ್ತದೆ. ಏನೇ ಆದರೂ ಸಂಬಂಧವನ್ನು ಜಗಳಗಳಿಲ್ಲದೆ, ಜಗಳ ಬಂದರು ಅದನ್ನು ಪರಿಹರಿಸಿಕೊಂಡು ಹೋಗುವುದರಲ್ಲಿ, ನಿಮ್ಮ ಬುದ್ಧಿವಂತಿಕೆಯು ಅಡಗಿರುತ್ತದೆ ಎಂಬುದನ್ನು ಮರೆಯಬೇಡಿ.

English summary

Lessons You Learn After A Breakup

Breaking up is one of the hardest decisions that anyone can ever take in a relationship. Breaking up from a relationship will always leave some permanent scars that will never heal, no matter how hard you try. Here are some lessons you learn from a breakup.
X
Desktop Bottom Promotion