For Quick Alerts
ALLOW NOTIFICATIONS  
For Daily Alerts

ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ?

By Hemanth P
|

ತಮ್ಮ ಸಂಬಂಧದಲ್ಲಿ ತಾವು ಎಲ್ಲಿದ್ದೇವೆ ಅಥವಾ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಮಹಿಳೆಯರು ಪುರುಷರನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಪುರುಷರನ್ನು ಅರಿತುಕೊಳ್ಳುವುದು ತುಂಬಾ ಸರಳ ಹಾಗೂ ಮುಗ್ದ ವಿಷಯ, ನೀವು ಯೋಚಿಸಿದಷ್ಟು ಇದು ಕ್ಲಿಷ್ಟಕರವಲ್ಲ. ಪುರುಷರನ್ನು ನೀವು ತುಂಬಾ ಆಳವಾಗಿ ಅರಿಯಲು ಪ್ರಯತ್ನಿಸುತ್ತಿದ್ದರೆ ಆಗ ತುಂಬಾ ಸೂಕ್ಷ್ಮವಾಗಿ ಅವರನ್ನು ನಿಭಾಯಿಸಬೇಕು. ಪುರುಷರು ಯಾವಾಗಲೂ ತಮ್ಮ ವೈಯಕ್ತಿಕತೆ ರಕ್ಷಿಸುವ ಕಾರಣ ಅವರ ಬಗ್ಗೆ ತಿಳಿದುಕೊಳ್ಳುವುದು ನಿಮಗೆ ಕಠಿಣವಾಗಬಹುದು.

ಪುರುಷರನ್ನು ಅರ್ಥಮಾಡಿಕೊಳ್ಳಲು ನಿಮಗೆ ಬೇಕಾಗಿರುವ ಮಾಹಿತಿಯನ್ನು ಅವರಿಂದ ಹೊರಹಾಕಲು ತುಂಬಾ ತಾಳ್ಮೆ ಬೇಕಾಗುತ್ತದೆ. ನಿಮ್ಮ ಸಂಬಂಧದಲ್ಲಿರುವ ಪುರುಷನನ್ನು ತಿಳಿದುಕೊಳ್ಳಲು ಹಲವಾರು ವಿಧಾನಗಳಿವೆ. ನಿಮ್ಮ ಪುರುಷನನ್ನು ಚೆನ್ನಾಗಿ ತಿಳಿದುಕೊಳ್ಳುವುದರಿಂದ ಯಾವುದೇ ರೀತಿಯ ನಕಾರಾತ್ಮಕ ಸಪ್ರೈಸ್ ನ್ನು ಕಡೆಗಣಿಸಲು ನಿಮಗೆ ಸಾಧ್ಯವಾಗಲಿದೆ. ಪರಸ್ಪರರನ್ನು ಚೆನ್ನಾಗಿ ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದರಿಂದ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಸಂಗಾತಿಯನ್ನು ತಿಳಿದುಕೊಳ್ಳುವುದು ಒಂದು ದೀರ್ಫ ಪ್ರತಿಕ್ರಿಯೆ ಮತ್ತು ಇದು ನಿಮ್ಮ ಸಂಬಂಧವಿರುವ ತನಕ ಮುಂದುವರಿಯುತ್ತದೆ. ನೀವು ಹಲವಾರು ವರ್ಷಗಳ ಕಾಲ ಜತೆಗಿದ್ದರೂ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು. ಕೆಲವರು ಗೌಪ್ಯವಾಗಿ ತುಂಬಾ ಮೂಢನಂಬಿಕೆ ಉಳ್ಳವರಾಗಿರಬಹುದು, ಗೊತ್ತಿಲ್ಲದೆ ಏಕಾಂಗಿಯಾಗಿರಬಹುದು, ಆಘಾತಕಾರಿ ಹಿಂದಿನ ಜೀವನ, ಸಾಕು ಪ್ರಾಣಿಯ ಪ್ರೀತಿ ಇತ್ಯಾದಿ. ಕೆಲವೊಂದು ಸಲ ಕೊಡುಕೊಳ್ಳುವಿಕೆಯಿಂದ ವಿಷಯಗಳು ಹೊರಬರುತ್ತದೆ. ನೀವು ಕೆಲವೊಂದು ಅನ್ಯೋನ್ಯ ವಿಷಯವನ್ನು ಆತನಿಗೆ ತಿಳಿಸುವ ಮೂಲಕ ಆತ ಕೂಡ ನಿಮ್ಮೊಂದಿಗೆ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುವಂತೆ ಮಾಡಬಹುದು.

How you can get to know your man better


1. ನಿಧಾನವಾಗಿ ಆರಂಭಿಸಿ

ಸಂಬಂಧದ ಆರಂಭದಲ್ಲಿ ನಂಬಿಕೆ ಬೆಳೆಸುವುದು ಮತ್ತು ಪರಸ್ಪರರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಈ ಸಮಯದಲ್ಲಿ ಆತ ನಿಮ್ಮ ಕನಸಿನ ಹುಡುಗನಾ ಅಥವಾ ನೀವು ಬೇಗನೆ ಏಳಲು ಪ್ರಯತ್ನಿಸುತ್ತಿರುವ ಕೆಟ್ಟ ಕನಸಾ ಎನ್ನುವುದನ್ನು ನಿರ್ಧರಿಸುತ್ತದೆ. ಆದಾಗ್ಯೂ ನೀವು ಆತನ ಬಗ್ಗೆ ತುಂಬಾ ಬೇಗನೆ ಕಲಿಯಲು ಪ್ರಯತ್ನಿಸಿದಷ್ಟು ಅದರಿಂದ ನಿಮಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು.

2. ಪ್ರಶ್ನೆಗಳು
ಹಿತಕಾರಿ ವಿಷಯಗಳ ಬಗ್ಗೆ ನಿಮ್ಮ ಸಂಗಾತಿ ಮಾತನಾಡಲು ಆರಂಭಿಸಿದರೆ ಆಗ ನೀವು ಆತನ ಕೆಲವೊಂದು ಉತ್ತರಗಳಿಂದಲೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ ಇನ್ನಷ್ಟು ವಿಷಯ ತಿಳಿದುಕೊಳ್ಳಬಹುದು. ಆತನ ಫೇವರಿಟ್ ತಂಡ ಯಾವುದೆಂದು ಕೇಳಿ ಅಲ್ಲಿಗೆ ನಿಲ್ಲಿಸಬೇಡಿ. ಫೇವರಿಟ್ ಆಟಗಾರ ಯಾರು ಎಂದು ಮರಳಿ ಪ್ರಶ್ನೆ ಕೇಳಿ. ಹೀಗೆ ಮುಂದುವರಿಯಲಿ. ಇದರಿಂದ ನೀವು ಆತನನ್ನು ಚೆನ್ನಾಗಿ ತಿಳಿದುಕೊಳ್ಳಬಹುದು ಮತ್ತು ಆತ ತನ್ನ ಇಷ್ಟಗಳ ಬಗ್ಗೆ ಹೇಳಬಹುದು.

3. ಕೊಡು ಮತ್ತು ಕೊಳ್ಳು
ನೀವು ಆತನನ್ನು ತಿಳಿದುಕೊಳ್ಳಲು ಬಯಸಿದಷ್ಟೇ ಆತ ಕೂಡ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ನೀವು ತುಂಬಾ ಪ್ರಶ್ನೆಗಳ ಬಾಂಬ್ ಹಾಕುವ ಬದಲು ಆತ ಏನು ಹೇಳುತ್ತಿದ್ದಾನೆ ಎನ್ನುವುದನ್ನು ಕೇಳಿ ಪ್ರತಿಕ್ರಿಯೆ ನೀಡಿ. ಪರಸ್ಪರರು ಮಾತನಾಡುವುದನ್ನು ಕೇಳುವ ಮೂಲಕ ಒಳ್ಳೆಯ ಮಾತುಕತೆ ಮುಂದುವರಿಯುತ್ತದೆ ಮತ್ತು ಹಿಂದಿನ ವಿಷಯವು ಬಲಗೊಳ್ಳುತ್ತದೆ.

4. ಆತನ ಗೆಳೆಯರನ್ನು ತಿಳಿಯಿರಿ
ನೀವು ಸಂಗಾತಿಯ ಗೆಳೆಯರ ಹೆಸರುಗಳನ್ನು ಮಾತ್ರ ಕೇಳದ್ದೀರಾ ಅಥವಾ ಅವರನ್ನು ಭೇಟಿ ಕೂಡ ಆಗಿದ್ದೀರಾ? ಆತನ ಗೆಳೆಯರನ್ನು ಚೆನ್ನಾಗಿ ತಿಳಿದುಕೊಳ್ಳುವುದರಿಂದ ನಿಮ್ಮ ಸಂಗಾತಿಗೆ ಹತ್ತಿರವಾಗಬಹುದು. ಸಂಗಾತಿಗೆ ತಿಳಿಯದೆ ಇರುವಂತಹ ಕೆಲವೊಂದು ವಿಷಯಗಳು ಸ್ನೇಹಿತರಿಗೆ ತಿಳಿದಿರುತ್ತದೆ. ಅವರಿಂದ ಕೆಲವೊಂದು ಸಲಹೆಗಳನ್ನು ಕೂಡ ಪಡೆಯಬಹುದು.

5. ಆತನ ಕೆಲಸ ತಿಳಿಯಿರಿ

ಆತನ ಕೆಲಸ ಮತ್ತು ಅದರ ಬಗ್ಗೆ ಆತನಿಗಿರುವ ಪ್ಯಾಶನ್ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ಆತನನ್ನು ತುಂಬಾ ಆಳವಾಗಿ ಅರಿಯಬಹುದು. ಆತನ ಕೆಲಸ ಮತ್ತು ಆ ದಿನದ ಕೆಲಸ ಹೇಗೆ ಸಾಗಿತು ಇತ್ಯಾದಿಯಿಂದ ಮಾತುಕತೆ ಆರಂಭಿಸಬಹುದು. ಕಚೇರಿಯ ಯಾವುದೇ ಪಾರ್ಟಿ ಅಥವಾ ಗೆಟ್ ಟುಗೇದರ್ ವೇಳೆ ನೀವು ಆತನ ಸಹೋದ್ಯೋಗಿಗಳೊಂದಿಗೆ ಮಾತನಾಡುವ ಅವಕಾಶ ಪಡೆಯಬಹುದು.

6. ಒಳ್ಳೆಯ ಕೇಳುಗರಾಗಿ
ಆತನ ಬಗ್ಗೆ ಅರಿಯಲು ಇದಕ್ಕಿಂತ ಒಳ್ಳೆಯ ವಿಧಾನ ಬೇರೊಂದಿಲ್ಲ. ಕೇವಲ ಆತನ ಮಾತು ಕೇಳುಗರಾಗಬೇಡಿ. ಆತ ತನ್ನ ಬಗ್ಗೆ ಅಥವಾ ಆತನ ಪ್ಯಾಶನ್ ಬಗ್ಗೆ ಹೇಳುತ್ತಿರುವಾಗ ಅದನ್ನು ತುಂಬಾ ಗಮನವಿಟ್ಟು ಕೇಳಿ. ಆತ ಮೊದಲು ಹೇಳಿರುವ ಯಾವುದಾದರೂ ವಿಷಯದ ಬಗ್ಗೆ ಆತನಿಗೆ ಬೆಂಬಲವಾಗಿ ನಿಲ್ಲಬೇಕಾಗಿರುವ ಸಮಯ ಬಂದಾಗ ನಿಮಗೆ ಏನೂ ತಿಳಿದೇ ಇಲ್ಲ ಎನ್ನುವಂತಾಗಬಾರದು.

English summary

How you can get to know your man better

Every women would like to know their men more in order to know where they stand in their relationship or to find some meaning to their relationship.
Story first published: Monday, January 6, 2014, 15:30 [IST]
X
Desktop Bottom Promotion