For Quick Alerts
ALLOW NOTIFICATIONS  
For Daily Alerts

ಚಂಚಲವಾಗಿರುವ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

By Super
|

ಯಾವುದೇ ಸಂಬಂಧ ಗಟ್ಟಿಗೊಳ್ಳಲು ಅತ್ಯಂತ ಅಗತ್ಯವಿರುವುದು ಪರಸ್ಪರ ವಿಶ್ವಾಸ. ಯಾವುದೇ ಕಟ್ಟಡ ಸ್ಥಿರವಾಗಿ ನಿಲ್ಲಲು ಗಟ್ಟಿ ಮುಟ್ಟಾದ ಅಡಿಪಾಯ ಅಗತ್ಯವಿರುವಂತೆಯೇ ಒಂದು ಸಂಬಂಧ ಗಟ್ಟಿಗೊಳ್ಳಲು ಪರಸ್ಪರ ವಿಶ್ವಾಸ, ಪ್ರೀತಿ, ಒಲುಮೆ ಮುಖ್ಯ. ಇದರಲ್ಲಿ ವಿಶ್ವಾಸವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಚಂಚಲವಾಗಿರುವ ಹೆಣ್ಣಿನ ಮನಸ್ಸನ್ನು ಅರಿಯುವುದು ಅಷ್ಟು ಸುಲಭವಲ್ಲ.

ಅಲ್ಲದೇ ಇಂದಿನ ದಿನಗಳಲ್ಲಿ ಧಿಡೀರನೇ ವಿಶ್ವಾಸವಿಡುವುದೂ ಅಪಾಯಕಾರವೇ ಆಗಿದೆ. ಇದಕ್ಕಾಗಿ ಸಾಕಷ್ಟು ಸಮಯ, ತಾಳ್ಮೆ ಮತ್ತು ಸಮರ್ಪಣಾ ಭಾವ ಅತ್ಯಂತ ಅಗತ್ಯವಾಗಿದೆ. ಒಂದು ಬಂಡಿಯ ಎರಡು ಎತ್ತುಗಳಂತಿರುವ ಗಂಡು ಹೆಣ್ಣಿನ ನಡುವೆ ಇರುವ ಪರಸ್ಪರ ವಿಶ್ವಾಸವೇ ಸಂಸಾರ ಸುಗಮವಾಗಿ ಮುನ್ನಡೆಯಲು ಕಾರಣವಾಗಿದೆ. ಒಮ್ಮೆ ಎಲ್ಲಾದರೂ ಅನುಮಾನದ ಎಳೆ ಈ ವಿಶ್ವಾಸದ ಗೋಡೆಯಲ್ಲಿ ಕಿರಿದಾದ ಬಿರುಕನ್ನು ಎಬ್ಬಿಸಿದರೂ ಕಂಡುಬರುವ ಪರಿಣಾಮಗಳು ಮಾತ್ರ ಘೋರವಾಗಿದೆ. ಜಗಳ, ಅಪಾರ್ಥಕಲ್ಪನೆ ಮೊದಲಾದವು ಪ್ರಾರಂಭವಾಗುವ ಸಂಭವವಿರುತ್ತದೆ.

How To Trust Your Girlfriend

ಈ ಪರಿಸ್ಥಿತಿ ಬರದೇ ಇರಲು ಪ್ರಿಯತಮೆ-ಪ್ರಿಯಕರನ ನಡುವೆ ಪರಸ್ಪರ ವಿಶ್ವಾಸ ಹೆಚ್ಚಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ವಾಸ್ತವವಾಗಿ ಮಹಿಳೆಯರೇ ಸಂಬಂಧ ಕೆಡುವ ಬಗ್ಗೆ ಹೆಚ್ಚು ವ್ಯಾಕುಲರಾಗಿರುತ್ತಾರೆ. ಇದನ್ನು ತಪ್ಪಿಸಿಕೊಳ್ಳಲು ಅವರಿಂದಲೇ ಪ್ರಯತ್ನ ಹೆಚ್ಚಾಗಿರುತ್ತದೆ. ಇದು ಪ್ರತಿ ಹೆಣ್ಣಿನಲ್ಲಿಯೂ ಜನ್ಮತಃ ಬಂದಿರುವ ಸ್ವಭಾವವಾಗಿರುವುದರಿಂದ ಈ ಭಾವಕ್ಕೆ ಗೌರವ ನೀಡಿದಷ್ಟೂ ಪ್ರಿಯಕರನಿಗೆ ತನ್ನ ಪ್ರಿಯತಮೆಯಿಂದ ಹೆಚ್ಚಿನ ಒಲವು ಮತ್ತು ವಿಶ್ವಾಸ ಲಭ್ಯವಾಗುತ್ತದೆ. ಪ್ರಿಯತಮೆಯ ವಿಶ್ವಾಸ ಗಳಿಸಲು ಮತ್ತು ಉಳಿಸಿಕೊಳ್ಳಲು ಇನ್ನೂ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಎಂದಿಗೂ ಹಿಂದಿನ ಕಹಿಘಟನೆಗಳನ್ನು ಅಥವಾ ಮಾತುಗಳನ್ನು ಕೆಣಕದಿರಿ


ಎಲ್ಲಾ ಸಂಬಂಧಗಳಲ್ಲೂ ಹಿಂದೆ ಕಳೆದಿರುವ ಕ್ಷಣಗಳಲ್ಲಿ ಕೆಲವು ಸಿಹಿಯಾದ ಮತ್ತು ಕೆಲವು ಕಹಿಯಾದ ಕ್ಷಣಗಳು ನಮ್ಮ ನೆನಪಿನಲ್ಲಿರುತ್ತವೆ. ಆದರೆ ತಪ್ಪಿಯೂ ಕೂಡಾ ಈ ಕಹಿಘಟನೆಗಳನ್ನು ಕೆದಕದಿರಿ. ಒಂದು ವೇಳೆ ಕಹಿಘಟನೆಯನ್ನು ಕೆದಕಿದರೆ ಇದು ನಿಮ್ಮ ಸಂಬಂಧಕ್ಕೆ ಮುಳುವಾಗಿ ಪರಿಣಮಿಸಬಹುದು. ಅಪ್ಪಿ ತಪ್ಪಿ ಆಡಿಬಿಟ್ಟರೂ ತಕ್ಷಣ ಮನಸಾರೆ ಕ್ಷಮೆ ಯಾಚಿಸಿ ಈ ವಿಷಯವನ್ನು ಬಿಟ್ಟು ಬೇರೆಯ ಸಿಹಿಕ್ಷಣಗಳ ಬಗ್ಗೆ ವಿಮರ್ಶಿಸಿರಿ. ಇದರಿಂದಾಗಿ ನಿಮ್ಮ ಪ್ರಿಯತಮೆ ನಿಮ್ಮಲ್ಲಿ ಹೆಚ್ಚು ವಿಶ್ವಾಸವಿಡಲು ಸಾಧ್ಯವಾಗುತ್ತದೆ. ಸಂಬಂಧದ ವಿಷಯ ಬಂದಾಗ ಪುರುಷರು ಏಕೆ ನರ್ವಸ್ ಆಗುತ್ತಾರೆ?

ಅನುಮಾನವನ್ನಿಟ್ಟುಕೊಳ್ಳಬೇಡಿ, ನೇರವಾಗಿ ಚರ್ಚಿಸಿ


ಎಷ್ಟೋ ಬಾರಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಾದ ಪ್ರಮೇಯಕ್ಕೆ ಸೂಕ್ತ ಅವಕಾಶ ಸಿಗದೇ ಅಪಾರ್ಥಕಲ್ಪನೆಗೆ ಮೂಲವಾಗಬಹುದು. ಇಂತಹ ಪ್ರಸಂಗ ಎದುರಾದರೆ ವಾಸ್ತವದಿಂದ ವಿಮುಖರಾಗದೇ ನಿಮ್ಮ ಪ್ರಿಯತಮೆಯಲ್ಲಿ ಖಾಸಗಿ ಸಂಭಾಷಣೆಯ ಮೂಲಕ ನೇರವಾಗಿ ಮತ್ತು ಮುಕ್ತವಾಗಿ ಚರ್ಚಿಸಿ. ಇದರಿಂದ ಅಪಾರ್ಥಕಲ್ಪನೆಗೆ ಕಾರಣವಾಗಿದ್ದ ವಿಷಯ ವಿಮರ್ಶೆಯಾಗಿ ಇಬ್ಬರ ಮನಸ್ಸೂ ತಿಳಿಯಾಗುತ್ತದೆ. ಎಂದಿಗೂ ಮತ್ತು ಎಂದೆಂದಿಗೂ ಮೂರನೆಯವರ ಸಹಾಯ ಪಡೆದುಕೊಳ್ಳಬೇಡಿ. ಏಕೆಂದರೆ ಮೂರನೆಯವರ ಸಹಾಯ ಪಡೆದಾಕ್ಷಣ ನಿಮ್ಮ ಪ್ರಿಯತಮೆ ನಿಮ್ಮಲ್ಲಿಟ್ಟಿದ್ದ ವಿಶ್ವಾಸವನ್ನು ಕಳೆದುಕೊಳ್ಳುತ್ತೀರಿ. ನೆನಪಿಡಿ, ಪ್ರತಿ ಹೆಣ್ಣು ಸಹಾ ತನ್ನ ಪ್ರಿಯಕರ ತನ್ನೊಂದಿಗೆ ನೇರವಾಗಿ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದನ್ನೇ ಇಷ್ಟಪಡುತ್ತಾಳೆ.

ನಿಮ್ಮ ಪ್ರಿಯತಮೆಯನ್ನು ಸಂತೋಷವಾಗಿಡಿ


ನಿಮ್ಮ ಪ್ರಿಯತಮೆಗೆ ಯಾವುದರಿಂದ ಹೆಚ್ಚು ಸಂತೋಷವಾಗುತ್ತದೆ ಎಂಬುದನ್ನು ಗಮನಿಸಿ. ಪ್ರತಿ ಹೆಣ್ಣಿನ ಅಭಿರುಚಿ ವಿಭಿನ್ನವಾಗಿರುತ್ತದೆ. ನಿನಗೆ ಏನು ಇಷ್ಟ ಎಂದು ನೇರವಾಗಿ ಕೇಳಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿದ್ದರೆ ಖಂಡಿತಾ ನೆರವೇರಿಸಿ. ಕೆಲವೊಮ್ಮೆ ಪ್ರಿಯತಮೆಯ ಬೇಡಿಕೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ್ದೆನಿಸಿದರೆ ಆಗುವುದಿಲ್ಲ ಎಂದು ಖಂಡಿತಾ ಹೇಳಬೇಡಿ, ಖಂಡಿತಾ ಪ್ರಯತ್ನಿಸೋಣ, ನಿನ್ನ ಜೊತೆಯೊಂದಿದ್ದರೆ ಈ ಬೇಡಿಕೆಯನ್ನು ಖಂಡಿತಾ ನೆರವೇರಿಸುವೆ ಎಂದು ಭರವಸೆ ನೀಡಿ. ಇದಕ್ಕಾಗಿ ನಿಮ್ಮ ಪ್ರಯತ್ನಗಳನ್ನು ಮೀಸಲಾಗಿಡಿ. ನೆನಪಿಡಿ, ನಿಮ್ಮ ಕಾಣಿಕೆಗಿಂತಲೂ ಆ ಕಾಣಿಕೆಗೆ ನೀವು ಪಡುವ ಪ್ರಯತ್ನವೇ ನಿಮ್ಮ ಪ್ರಿಯತಮೆಗೆ ಅಪ್ಯಾಯಮಾನವಾಗುತ್ತದೆ. ಮುಖ್ಯವಾಗಿ ಆಕೆಗೆ ನೀಡಬಹುದಾದ ಅತ್ಯಂತ ಅಮೂಲ್ಯ ಕಾಣಿಕೆಯೆಂದರೆ ನಿಮ್ಮ ಸಮಯ. ಆಕೆಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಜೊತೆಯಾಗಿ ಕಳೆಯಿರಿ, ಮುಕ್ತವಾಗಿ ಚರ್ಚಿಸಿ ಆಕೆ ಎಂದೂ ಸಂತೋಷವಾಗಿರುವಂತೆ ನೋಡಿಕೊಳ್ಳಿ. ಪತಿ ಪತ್ನಿಯರ ನಡುವಿನ ಪ್ರಣಯಭರಿತ ಪ್ರೇಮಸಲ್ಲಾಪ ಹೇಗಿರಬೇಕು?

ನಿಮ್ಮ ಪ್ರಿಯತಮೆಯ ವ್ಯಕ್ತಿತ್ವವನ್ನು ಗೌರವಿಸಿ


ಪ್ರತಿ ಹೆಣ್ಣು ಸಹಾ ತನ್ನ ಪ್ರಿಯಕರ ತಮ್ಮ ವ್ಯಕ್ತಿತ್ವವನ್ನು ಗೌರವಿಸಬೇಕೆಂದು ಬಯಸುತ್ತಾಳೆ. ತನ್ನ ಭಾವನೆಗಳನ್ನು ಹಂಚಿಕೊಳ್ಳಬಯಸಿದಾಗ ಆಕೆಗೆ ಪೂರ್ಣ ಅವಕಾಶ ನೀಡಿ ಆಕೆ ಹೇಳುವ ಎಲ್ಲಾ ವಿಷಯಗಳನ್ನು ಗಮನವಿಟ್ಟು ಕೇಳಿ. ಆಕೆ ಯಾವುದೇ ರೀತಿಯಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಬಯಸಿದರೂ ಮುಕ್ತವಾಗಿ, ನಿಸ್ಸಂಕೋಚವಾಗಿ ನಿಮ್ಮಲ್ಲಿ ಹಂಚಿಕೊಳ್ಳಲು ಆಕೆಗೆ ಅವಕಾಶ ನೀಡಿ. ನೀವು ಆಕೆಯ ಅತ್ಯಂತ ಆಪ್ತನಾದ ಸ್ನೇಹಿತನಾಗಿ. ಯಾವುದೇ ಹೆಣ್ಣು ಅತ್ಯಂತ ಆಪ್ತರಲ್ಲಿ ಮಾತ್ರ ತನ್ನ ಅತ್ಯಂತ ಖಾಸಗಿ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ. ಎಂದೆಂದಿಗೂ ಈ ಖಾಸಗಿ ವಿಷಯಗಳನ್ನು ಯಾವುದೇ ಕಾರಣಕ್ಕೂ ಮೂರನೆಯವರ ಕಿವಿಗೆ ಬೀಳದಿರುವಂತೆ ನೋಡಿಕೊಳ್ಳಿ. ಆಕೆಯ ವ್ಯಕ್ತಿತ್ವವನ್ನು ಗೌರವಿಸಿ ಆಕೆಯಲ್ಲಿ ಯಾವುದೇ ಬದಲಾವಣೆಯಿಲ್ಲದೇ ಸ್ವೀಕರಿಸುವ ಬಗ್ಗೆ ಖಚಿತವಾದ ಮಾತುಗಳನ್ನು ತಿಳಿಸಿ. ಇದರಿಂದ ಆಕೆ ನಿಮ್ಮಲ್ಲಿ ಹೆಚ್ಚಿನ ವಿಶ್ವಾಸವಿಡಲು ಸಹಾಯವಾಗುತ್ತದೆ. ಈ ವಿಶ್ವಾಸ ಜೀವಮಾನವಿಡೀ ಸುಖವಾಗಿ ಜೀವಿಸಲು ಸಹಕಾರಿಯಾಗಿದೆ.
English summary

How To Trust Your Girlfriend

Relationships are like buildings constructed on foundations made of trust. If you don't trust your girlfriend, you are not in a relationship at all. If you love her, just trust her. Of course, you shouldn't blindly trust someone, here are some ways to trust your girlfriend. Read on for more...
X
Desktop Bottom Promotion