For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಒಳ್ಳೆಯ ಆಲಿಸುವವರಾಗುವುದು ಹೇಗೆ?

By Hemanth P
|

ನೀವು ಒಳ್ಳೆಯ ಆಲಿಸುವವರಾಗುವುದು ತುಂಬಾ ಮುಖ್ಯ, ಅದರಲ್ಲೂ ನೀವು ಯಾವುದೇ ಸಂಬಂಧದಲ್ಲಿದ್ದರೆ ಇದು ಅತ್ಯಗತ್ಯ. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಕೆಲವೊಂದು ಲಕ್ಷಣಗಳಿಂದ ನೀವು ಒಳ್ಳೆಯ ಆಲಿಸುವವರು ಎಂದು ತಿಳಿದುಕೊಳ್ಳಬಹುದು. ಕೆಲವೊಂದು ಭಯಾನಕ ಪರಿಸ್ಥಿತಿಗಳಿಂದಾಗಿ ನಾವು ಒಳ್ಳೆಯ ಆಲಿಸುವವರಾಗಿ ಪರಿವರ್ತಿತರಾಗಿರಬಹುದು.

ಮದುವೆಯಾಗಿ ಸಂತಸವಾಗಿರುವ ಸಂಗಾತಿಗಳ 5 ರಹಸ್ಯಗಳು!

ಇಂತಹ ಪರಿಸ್ಥಿತಿಯಲ್ಲಿ ಸಂಬಂಧದಲ್ಲಿರುವಾಗ ಒಳ್ಳೆಯ ಆಲಿಸುವವರಾಗುವುದು ತುಂಬಾ ಮುಖ್ಯ. ಸಂಬಂಧದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೆಲವೊಂದು ಸಲ ವಾಗ್ವಾದ ಉಂಟಾಗುತ್ತದೆ. ಇಂತಹ ಪರಿಸ್ಥಿತಿ ಬರುವ ಮೊದಲೇ ಅದನ್ನು ತಡೆಯಬೇಕು. ನಿಮಗೆ ಆಸಕ್ತಿ ಮೂಡಿಸದಿದ್ದರೂ ಕೆಲವೊಂದು ಸಲ ಸಂಗಾತಿಯ ಮಾತುಗಳನ್ನು ಕೇಳಲೇಬೇಕಾಗುತ್ತದೆ.

ಇದು ಪರಸ್ಪರರ ಬೆಂಬಲಕ್ಕೆ ನೆರವಾಗಲಿದೆ. ನಿಮ್ಮ ಜೀವನ ತುಂಬಾ ಮೃದುವಾಗಿ ಸಾಗಿಸಲು ಸಂಬಂಧದಲ್ಲಿ ಒಳ್ಳೆಯ ಆಲಿಸುವವರಾಗುವುದು ಹೇಗೆಂದು ತಿಳಿದುಕೊಳ್ಳುವುದು ಮುಖ್ಯ. ಸಂಬಂಧದಲ್ಲಿ ಒಳ್ಳೆಯ ಆಲಿಸುವವರು ಹೇಗೆ ಆಗುವುದೆಂದು ನೀವು ಯೋಚಿಸುತ್ತಿದ್ದರೆ ಇಲ್ಲಿ ಕೆಲವೊಂದು ಟಿಪ್ಸ್‌ಗಳಿವೆ.

ಸಂಬಂಧಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಆರು ಸಲಹೆಗಳು

ಆಸಕ್ತಿ ತೋರಿಸಿ:

ಆಸಕ್ತಿ ತೋರಿಸಿ:

ನಿಮಗೆ ಆಸಕ್ತಿಯಿದೆ ಎಂದು ತೋರಿಸುವುದು ತುಂಬಾ ಮುಖ್ಯ. ನಿಮ್ಮ ಕೆಲವೊಂದು ಕಾರ್ಯಗಳನ್ನು ಸಂಗಾತಿಯು ಸುಲಭವಾಗಿ ತಿಳಿದುಕೊಳ್ಳಬಹುದು. ಇದರಿಂದ ನೀವು ಮೊಬೈಲ್ ನೋಡುವುದು, ಆಗಾಗ ವಾಚ್ ನೋಡುವುದು, ಆಕಲಿಸುವುದು ಮತ್ತು ಸುತ್ತಮುತ್ತ ನೋಡುವುದನ್ನು ಬಿಟ್ಟುಬಿಡಿ.

ಪ್ರತಿಕ್ರಿಯಿಸಿ:

ಪ್ರತಿಕ್ರಿಯಿಸಿ:

ಸಂಬಂಧದಲ್ಲಿ ಒಳ್ಳೆಯ ಆಲಿಸುವವರು ಹೇಗಾಗುದೆಂದರೆ ಪ್ರತಿಕ್ರಿಯೆ ನೀಡುವುದು. ನಿಮ್ಮಿಂದ ಧನಾತ್ಮಕವಾದ ಪ್ರತಿಕ್ರಿಯೆಯನ್ನು ಎದುರಿನ ವ್ಯಕ್ತಿಯು ನಿರೀಕ್ಷಿಸಿರುತ್ತಾನೆ. ಇದನ್ನು ಅರ್ಥಮಾಡಿಕೊಂಡು ನೀವು ಒಳ್ಳೆಯ ಆಲಿಸುವವರೆಂದು ನಿಮ್ಮ ಸಂಗಾತಿ ಭಾವಿಸುವಂತೆ ಮಾಡಿ.

ಪ್ರಶ್ನೆಗಳನ್ನು ಕೇಳಿ:

ಪ್ರಶ್ನೆಗಳನ್ನು ಕೇಳಿ:

ನಿಮ್ಮ ಸಂಗಾತಿ ಮಾತನಾಡುತ್ತಿರುವ ವಿಷಯದ ಬಗ್ಗೆ ಯಾವುದಾದರೂ ಪ್ರಶ್ನೆ ಕೇಳುವುದು ನೀವು ಒಳ್ಳೆಯ ಆಲಿಸುವವರೆಂದು ಮನದಟ್ಟಾಗುತ್ತದೆ. ಅವರು ಈಗಷ್ಟೇ ಹೇಳಿದ ವಿಷಯದ ಬಗ್ಗೆ ಪ್ರಶ್ನೆ ಕೇಳುವುದು ಒಳ್ಳೆಯ ಆಯ್ಕೆ. ಸಂಬಂಧದಲ್ಲಿ ಒಳ್ಳೆಯ ಆಲಿಸುವವರು ಹೇಗಾಗುವುದು ಎಂದು ಇದು ಹೇಳುತ್ತದೆ.

ಮೊದಲಿನ ಮಾತುಕತೆ ಬಗ್ಗೆ ನೆನಪಿಸಿ:

ಮೊದಲಿನ ಮಾತುಕತೆ ಬಗ್ಗೆ ನೆನಪಿಸಿ:

ನಿಮ್ಮಿಬ್ಬರ ಮಧ್ಯೆ ನಡೆದಿರುವಂತಹ ಹಿಂದಿನ ಮಾತುಕತೆ ಬಗ್ಗೆ ಸಂಗಾತಿಗೆ ನೆನಪಿಸುವುದು ಅತ್ಯುತ್ತಮ ವಿಧಾನ. ಅವರು ಏನು ಹೇಳಿದ್ದಾರೆನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಂಡಿದ್ದೀರಿ ಎಂದು ತಿಳಿದು ಸಂತೋಷವಾಗುತ್ತದೆ. ಸಂಬಂಧದಲ್ಲಿ ಒಳ್ಳೆಯ ಆಲಿಸುವವರು ಹೇಗಾಗುವುದೆಂದು ನಿಮಗೆ ತಿಳಿಯುತ್ತದೆ.

ಮಧ್ಯೆ ಮಾತನಾಡಬೇಡಿ:

ಮಧ್ಯೆ ಮಾತನಾಡಬೇಡಿ:

ಸಂಗಾತಿ ಮಾತನಾಡುತ್ತಿದ್ದರೆ ಆಗ ನೀವು ಮಧ್ಯೆ ಬಾಯಿ ಹಾಕಬೇಡಿ. ನಿಮಗೆ ಏನಾದರೂ ಹೇಳಬೇಕೆಂದಿದ್ದರೆ ಆಗ ಅವರ ಮಾತು ಪೂರ್ಣಗೊಳ್ಳುವ ತನಕ ಕಾಯಿರಿ. ಅವರ ಮಾತನ್ನು ಸಂಪೂರ್ಣವಾಗಿ ಕೇಳಿದ್ದೀರಿ ಎಂದು ಅವರಿಗನಿಸುತ್ತದೆ.

ದೇಹಭಾಷೆ ಬಳಸಿ:

ದೇಹಭಾಷೆ ಬಳಸಿ:

ಒಳ್ಳೆಯ ಆಲಿಸುವವರು ಹೇಗಾಗುವುದು ಎಂದು ತಿಳಿದುಕೊಂಡರೆ ಆಗ ನಿಮ್ಮ ಸಂಬಂಧ ನಯವಾಗಿ ಸಾಗುತ್ತದೆ. ನಿಮ್ಮ ದೇಹಭಾಷೆಯನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ವಿಧಾನ. ಇದು ನಿಮ್ಮ ಸಂಗಾತಿ ಮಾತುಕತೆಯಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡುತ್ತದೆ.

ಪ್ರೋತ್ಸಾಹಿಸಿ:

ಪ್ರೋತ್ಸಾಹಿಸಿ:

ನಿಮ್ಮ ಸಂಗಾತಿ ಯಾವುದೇ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ ಆಗ ನೀವು ಅವರನ್ನು ಪ್ರೋತ್ಸಾಹಿಸಿ. ಕೆಲವೊಂದು ಸಂದರ್ಭದಲ್ಲಿ ನೀವು ಗಮನಾರ್ಹವಲ್ಲವೆಂದು ಭಾವಿಸಿರುವ ವಿಷಯ ನಿಮ್ಮ ಸಂಗಾತಿಗೆ ಗಮನಾರ್ಹವಾಗಿರಬಹುದು. ಇದರಿಂದ ನೀವು ಆಲಿಸುವಾಗ ಅವರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಿ.

English summary

How To Be A Better Listener In Relationships

Being a good listener is very important, esspecially if you are in a relationship. But, it is not as easy as it seems. There are certain traits that will clearly indicate that you are a good listener.
Story first published: Saturday, May 24, 2014, 15:40 [IST]
X
Desktop Bottom Promotion