For Quick Alerts
ALLOW NOTIFICATIONS  
For Daily Alerts

ಇಂಟರ್ ನೆಟ್ ಸಂಬಂಧಕ್ಕೆ ಡೇಟಿಂಗ್ ಟಿಪ್ಸ್‪‌ಗಳು

By Hemanth P
|

ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಹೆಚ್ಚಾಗಿ ಇಂಟರ್ ನೆಟ್ ಗೆ ಒಗ್ಗಿಕೊಂಡಿರುವ ಕಾರಣ ಡೇಟಿಂಗ್ ಕೂಡ ಇಂಟರ್ ನೆಟ್ ನಲ್ಲೇ ಆಗುತ್ತದೆ. ಆದರೆ ಇಂತಹ ಡೇಟಿಂಗ್ ನಲ್ಲಿ ಭೌತಿಕ ಸ್ವರೂಪ ಇಲ್ಲದಿರುವ ಕಾರಣ ಹೆಚ್ಚಿನ ಅಪಾಯವಿರುತ್ತದೆ. ಸಾಮಾನ್ಯವಾಗಿ ಡೇಟಿಂಗ್ ನಲ್ಲಿ ನೀವು ವ್ಯಕ್ತಿಯನ್ನು ಭೇಟಿ ಮಾಡಿ ದೈಹಿಕ ಕ್ರಿಯೆ ಮತ್ತು ಮುಖಾಮುಖಿ ಮಾತನಾಡುತ್ತೀರಿ. ಆದರೆ ಇಂಟರ್ ನೆಟ್ ಸಂಬಂಧದಲ್ಲಿ ಹೊಸ ರೀತಿಯ ಸವಾಲು ಮತ್ತು ನಿಯಮಗಳು ಬರುತ್ತದೆ. ವ್ಯಕ್ತಿಗತವಾಗಿ ನೀವು ಡೇಟಿಂಗ್ ವೇಳೆ ಯಾರನ್ನೂ ಭೇಟಿಯಾಗದೆ ಇರುವ ಕಾರಣ ಡೇಟಿಂಗ್ ನಿಜವಾಗಿಯೂ ಹೇಗಿತ್ತು ಎಂದು ಹೇಳುವುದು ಕಷ್ಟ.

ಇಂಟರ್ ನೆಟ್ ಸಂಬಂಧದಲ್ಲಿ ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿ ಮತ್ತು ನಿಮ್ಮ ಮಧ್ಯೆ ಮೈಲುಗಟ್ಟಲೆ ಅಂತರವಿರಬಹುದು. ಇದರಿಂದ ಎಲ್ಲಾ ಸಾಂಪ್ರದಾಯಿಕ ಡೇಟಿಂಗ್ ಐಡಿಯಾಗಳನ್ನು ಬದಿಗೆ ಸರಿಸಿ ಇಂಟರ್ ನೆಟ್ ನಲ್ಲಿ ಡೇಟಿಂಗ್ ಮಾಡಲು ಹೊಸ ಐಡಿಯಾ ಮತ್ತು ವಿಧಾನಗಳನ್ನು ಹುಡುಕಬೇಕು. ಇಲ್ಲಿ ಯಾವುದೇ ರೀತಿಯ ದೈಹಿಕ ಸಂಪರ್ಕ ಆಗದೇ ಇದ್ದರೂ ಪ್ರತಿಯೊಂದು ತಂತ್ರಜ್ಞಾನದಿಂದ ನೀವು ಅನ್ಯೋನ್ಯ ಹಾಗೂ ನಿಜವೆಂದು ಭಾವಿಸಬಹುದು.

Dating tips for E-relationship

ನೀವು ಇಂಟರ್ ನೆಟ್ ನಲ್ಲಿ ಯಾರೊಂದಿಗಾದರೂ ಸಂಬಂಧ ಬೆಳೆಸಿದ್ದರೆ ಇದನ್ನು ಶಾಶ್ವತವಾಗಿ ವಾಸ್ತವಿಕವಾಗಿಸಬೇಕೆಂಬ ಯಾವುದೇ ನಿಯಮಗಳಿಲ್ಲ. ಸಂಬಂಧವು ಒಂದು ಹಂತದವರೆಗೆ ಮುಂದುವರಿದು ನೀವು ಆ ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದುಕೊಂಡ ಬಳಿಕ ನಿಮಗಿಬ್ಬರಿಗೆ ತುಂಬಾ ಯೋಗ್ಯವಾಗಿರುವ ಜಾಗದಲ್ಲಿ ಭೇಟಿಯಾಗಬಹುದು. ನೀವಿಬ್ಬರು ತುಂಬಾ ಹತ್ತಿರವಾಗಿದ್ದರೆ ಆಗ ಸಪ್ರೈಸ್ ಡೇಟ್ ಗೂ ಹೋಗಬಹುದು. ಇಂಟರ್ ನೆಟ್ ನಲ್ಲಿ ಸಂಬಂಧದಲ್ಲಿರುವರೊಂದಿಗೆ ಡೇಟ್ ಮಾಡಲು ಕೆಲವೊಂದು ಮೋಜಿನ ವಿಧಾನಗಳಿವೆ. ಇದು ತುಂಬಾ ವಾಸ್ತವಿಕ ಹಾಗೂ ನೈಜವಾಗಿರುತ್ತದೆ.

1. ಸಮಯ ಮೀಸಲಿಡಿ
ನಿಮ್ಮ ಆನ್ ಲೈನ್ ಸಂಗಾತಿಗೆ ನೀವು ಸಮಯವನ್ನು ಮೀಸಲಿಡಿ. ಇದು ಪೋನ್ ಕರೆ, ವೀಡಿಯೋ ಚಾಟ್ ಅಥವಾ ಆನ್ ಲೈನ್ ಚಾಟ್ ಇತ್ಯಾದಿ ಆಗಿರಬಹುದು. ನಿಮ್ಮ ಸಂಗಾತಿಯೊಂದಿಗೆ ಮಾತುಕತೆ ನಡೆಸಲು ಇದು ಮಾತ್ರ ಮಾರ್ಗವಾಗಿರುತ್ತದೆ. ವ್ಯಕ್ತಿಯನ್ನು ತಿಳಿದುಕೊಂಡು ಅವರೊಂದಿಗಿನ ಸಂಬಂಧ ಬಲಪಡಿಸಿ.

2. ವಿಭಿನ್ನ ಸಂಭಾಷಣೆ
ಇಂದಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಸಂಭಾಷಣೆ ನಡೆಸಲು ಹಲವಾರು ರೀತಿಯ ಮಾರ್ಗಗಳಿವೆ. ದಿನಾಲೂ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಂಗಾತಿಯಲ್ಲಿ ಆಸಕ್ತಿ ಉಳಿಸಿಕೊಳ್ಳಲು ನೀವು ವಿವಿಧ ಮಾಧ್ಯಮ ಮತ್ತು ವಿಧಾನಗಳಿಂದ ಮಾತನಾಡಲು ಪ್ರಯತ್ನಿಸಬೇಕು.

3. ಮುಖಾಮುಖಿ

ನೈಜ ಸಂಬಂಧದಲ್ಲಿ ಇರುವಂತೆ ಇಂಟರ್ ನೆಟ್ ಸಂಬಂಧದಲ್ಲಿ ಯಾವುದೇ ದೈಹಿಕ ಡೇಟ್ ಗಳಿರುವುದಿಲ್ಲ. ಆದಾಗ್ಯೂ ನೀವು ಸ್ಕೈಪೆ ಅಥವಾ ಫೇಸ್ ಬುಕ್ ವೀಡಿಯೋದಂತಹ ಚಾಟ್ ಗಳನ್ನು ಬಳಸಿಕೊಂಡು ಮುಖಾಮುಖಿಯಾಗಿ ವೀಡಿಯೋ ಚಾಟ್ ಮಾಡಬಹುದು. ಇದರಿಂದ ನಿಮ್ಮ ಇಂಟರ್ ನೆಟ್ ಸಂಬಂಧವು ಬಲವಾಗಿ ಅನ್ಯೋನ್ಯತೆ ಹೆಚ್ಚಾಗಬಹುದು.

4. ಆನ್ ಲೈನ್ ಆಟಗಳು
ಇದು ಆನ್ ಲೈನ್ ನಲ್ಲಿ ಸಂಪರ್ಕ ಸಾಧಿಸಿ ಡೇಟಿಂಗ್ ಮಾಡಲು ತುಂಬಾ ಮೋಜಿನ ವಿಧಾನ. ಸರಳ ಮತ್ತು ಮೋಜಿನ ಆಟಗಳನ್ನು ಆಡಿ ನಿಮ್ಮ ಇಂಟರ್ ನೆಟ್ ಸಂಗಾತಿ ಜತೆ ಸಂಬಂಧ ಮತ್ತು ಬಂಧನ ಬಲಪಡಿಸಿ. ನೀವು ಜತೆಯಾಗಿ ಸಾಮಾಜಿಕ ಆಟ, ತುಂಬಾ ಜಟಿಲವಾಗಿರುವ ಯುದ್ಧ ಅಥವಾ ರೇಸಿಂಗ್ ಗೇಮ್ ಗಳನ್ನು ಆಡಬಹುದು. ಇದು ನಿಮ್ಮಿಬ್ಬರ ಅಭಿರುಚಿಗೆ ಹೊಂದಿಕೊಂಡು ಇರಲಿ. ಇದರಲ್ಲಿ ಆಯ್ಕೆಗೆ ಕೊನೆಯಿಲ್ಲ ಮತ್ತು ಮೋಜಿಗೆ ಮಿತಿಯಿಲ್ಲ.

5. ಆನ್ ಲೈನ್ ಡೇಟ್
ಇದು ತುಂಬಾ ವಿಚಿತ್ರವೆನಿಸಿದರೂ ನೀವು ಇಂಟರ್ ನೆಟ್ ಸಂಗಾತಿ ಜತೆಗೆ ಆನ್ ಲೈನ್ ನಲ್ಲಿ ಡೇಟಿಂಗ್ ನಡೆಸಬಹುದು. ಇಂದಿನ ದಿನಗಳಲ್ಲಿ ಇರುವ ಹಲವಾರು ಸಾಮಾಜಿಕ ಜಾಲತಾಣಗಳು ಮತ್ತು ಆಪ್ಲಿಕೇಶನಗಳು ವಾಸ್ತವ ಪಾತ್ರದೊಂದಿಗೆ ವಾಸ್ತವ ಸ್ಥಳದಲ್ಲಿ ಡೇಟ್ ಮಾಡಬಹುದು. ಇದು ನೈಜ ವಿಶ್ವಕ್ಕಿಂತ ತುಂಬಾ ವಿಚಿತ್ರ ಹಾಗೂ ಅನನ್ಯವಾಗಿರುತ್ತದೆ. ನಿಮ್ಮ ಡೇಟ್ ಗೆ ಆಪ್ಸ್ ನ್ನು ಉಪಯೋಗಿಸಬಹುದು.

6. ಮುಂದುವರಿಸಿಕೊಂಡು ಹೋಗಿ
ವಾಸ್ತವ ಪ್ರಪಂಚದಿಂದ ನೈಜ ಪ್ರಪಂಚಕ್ಕೆ ನಿಮ್ಮ ಸಂಬಂಧ ಮುಂದುವರಿಸಿಕೊಂಡು ಹೋಗಬಹುದೆಂದು ನೀವು ಭಾವಿಸಿದರೆ ಆಗ ನಿಜವಾದ ಜಗತ್ತಿನಲ್ಲಿ ನಿಜವಾದ ಡೇಟ್ ಮಾಡಿ. ನಿಮ್ಮಿಬ್ಬರ ವಾಸದ ಅಂತರ ತುಂಬಾ ದೂರವಿದ್ದರೆ ಆಗ ನಿಮಗಿಬ್ಬರಿಗೆ ತುಂಬಾ ಯೋಗ್ಯವಾಗುವಂತಹ ಒಂದು ಸ್ಥಳ ಆಯ್ಕೆ ಮಾಡಿಕೊಳ್ಳಬಹುದು. ಇದು ಇಂಟರ್ ನೆಟ್ ಸಂಬಂಧದಲ್ಲಿ ಒಂದು ಪ್ರಮುಖ ಹೆಜ್ಜೆ. ಇದು ಸಂಗಾತಿಗಳ ಮಧ್ಯೆ ಹೆಚ್ಚಿನ ವಿಶ್ವಾಸ ಮತ್ತು ಹೊಂದಾಣಿಕೆ ಇದ್ದರೆ ಮಾತ್ರ ಸಾಧ್ಯ.

English summary

Dating tips for E-relationship

When it comes to dating over the internet, there are lots of risks involved due to non-physical nature of the whole thing. Unlike regular dating where you meet the person on your date and have physical interaction and conversation face to face, having a e-relationship brings a whole new set of challenges and rules.
Story first published: Saturday, January 4, 2014, 12:56 [IST]
X
Desktop Bottom Promotion