For Quick Alerts
ALLOW NOTIFICATIONS  
For Daily Alerts

ಬಾಸ್ ಸಿಬ್ಬಂದಿ ಪ್ರೇಮ ಸಲ್ಲಾಪ ಹೀಗಿದ್ದರೆ ಚೆಂದ!

|

ನಿಮ್ಮ ಆಫೀಸ್ ಬಾಸ್‌ನೊಂದಿಗೆ ನಿಮಗೆ ಪ್ರೇಮವಿದೆಯೇ? ಇದೇನೂ ದೊಡ್ಡ ವಿಷಯವಲ್ಲ ಬಿಡಿ. ತಮ್ಮ ಜೀವನ ಸಂಗಾತಿಯನ್ನು ಹಲವಾರು ಜನರು ಕಚೇರಿಯಲ್ಲಿಯೇ ಹುಡುಕುತ್ತಾರೆ. ನಿಮ್ಮ ದಿನದ ಬಹು ಸಮಯವನ್ನು ನೀವು ಕಚೇರಿಯಲ್ಲೇ ಕಳೆಯುವುದರಿಂದ ನಿಮ್ಮ ಸಹೋದ್ಯೋಗಿ ಅಥವಾ ಬಾಸ್‌‌ಗೆ ನೀವು ಹತ್ತಿರವಾಗುವುದು ಸಾಮಾನ್ಯ ಸಂಗತಿಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರಥಮ ಚುಂಬನ ಯಶಸ್ವಿಯಾಗಲು ಕೆಲವು ಸಲಹೆಗಳು!

ಹಲವಾರು ಜನರು ತಮ್ಮ ಬಾಸ್‌ನೊಂದಿಗೆ ಉತ್ತಮ ಸಾಮರಸ್ಯವನ್ನು ಹೊಂದಿರುವುದನ್ನು ನೀವು ನೋಡಿರಬಹುದು ಇದು ನಿಜವಾದ ಪ್ರೀತಿಯೇ ಅಥವಾ ತಮ್ಮ ಅವಶ್ಯಕತೆಗಳನ್ನು ಪೂರೈಸಲು ಕಂಪೆನಿ ಬಾಸ್ ಅನ್ನು ದಾಳವನ್ನಾಗಿ ಬಳಸುವುದೇ ಎಂಬುದು ತಿಳಿಯುವುದಿಲ್ಲ. ಹೆಚ್ಚಿನ ಹೆಂಗಳೆಯರು ತಮ್ಮ ಬಾಸ್‌ನೊಂದಿಗೆ ಉತ್ತಮ ಮೈತ್ರಿಯನ್ನು ಹೊಂದುವುದೇ ತಮ್ಮ ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಲು ಇಲ್ಲವೇ ಒಳ್ಳೆಯ ಪೋಸ್ಟ್ ಅನ್ನು ಏರಲು.

ಹೆಚ್ಚಾಗಿ ಸಹೋದ್ಯೋಗಿಗಳು ವಿಧುರ ಅಥವಾ ವಿವಾಹಿತ ಬಾಸ್‌ನ್ನೇ ತಮ್ಮ ದುರಾಸೆಗಾಗಿ ಬಳಸಿಕೊಳ್ಳುತ್ತಾರೆ. ಒಳ್ಳೆಯ ಸ್ಥಾನಕ್ಕೇರಿರುವ ಬಾಸ್ ಅವಿವಾಹಿತನಾಗಿರಲು ಇಲ್ಲವೇ ಯುವಕ ಅಥವಾ ಹ್ಯಾಂಡ್‌ಸಮ್ ಆಗಿರಲು ಸಾಧ್ಯವೇ ಇಲ್ಲ. ಪ್ರೀತಿ ಕುರುಡು ಎಂಬಂತೆ ಈ ತರಹದ ಆಫೀಸ್ ಪ್ರೇಮ ಕೂಡ ಕುರುಡಾಗಿರುತ್ತದೆ.

ನೀವೂ ಕೂಡ ನಿಮ್ಮ ಬಾಸ್ ಅಥವಾ ಸಹೋದ್ಯೋಗಿಯೊಂದಿಗೆ ಪ್ರೇಮ ಸಲ್ಲಪದಲ್ಲಿದ್ದರೆ ನಾಲ್ಕು ಗೋಡೆಯೊಳಗೆ ಅದನ್ನು ಗುಟ್ಟಾಗಿ ಕಾಪಾಡುವುದು ಹೇಗೆ ಎಂಬುದು ಕೂಡ ನಿಮಗೆ ತಿಳಿದಿರಬೇಕು. ಈ ಲೇಖನವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಅದನ್ನು ಅನುಸರಿಸಿ ಮುಂದುವರಿಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಚುಂಬನದ ಬಗ್ಗೆ ಕೆಲ ಇಂಟರೆಸ್ಟಿಂಗ್ ಅಂಶಗಳು

ಇಮೇಲ್ ಬೇಡ:

ಇಮೇಲ್ ಬೇಡ:

ಫಿಫ್ಟಿ ಶೇಡ್ಸ್ ತ್ರಿಯೋಲಜಿಯಲ್ಲಿ ಕ್ರಿಶ್ಚಿಯನ್ ಗ್ರೇ ಎಲ್ಲಾ ಸಮಯವೂ ಅನಸ್ತೇಶಿಯಾ ಸ್ಟೀಲ್ ಅನ್ನು ಹೇಗೆ ಎಚ್ಚರಿಸುತ್ತಾರೆ ಎಂಬುದನ್ನು ನೆನಪು ಮಾಡಿಕೊಳ್ಳಿ. ನಿಮ್ಮ ಬಾಸ್‌ನೊಂದಿಗೆ ನೀವು ಡೇಟಿಂಗ್ ಮಾಡುತ್ತಿದ್ದೀರಿ ಎಂದಾದಲ್ಲಿ, ಕಚೇರಿ ಇಮೇಲ್‌ನಲ್ಲಿ ಯಾವುದೇ ಚಾಟ್‌ಗಳನ್ನು ವಿನಿಮಯ ಮಾಡಿಕೊಳ್ಳಬೇಡಿ. ಮೇಲ್ ವಿನಿಮಯವನ್ನು ಟ್ರೇಸ್ ಮಾಡುವುದು ಕಷ್ಟಕರವಲ್ಲ ಎಂಬುದು ನಿಮಗೆ ತಿಳಿದಿರಲಿ.

ವೃತ್ತಿಪರರಾಗಿರಿ;

ವೃತ್ತಿಪರರಾಗಿರಿ;

ಕಚೇರಿಯಲ್ಲಿ ಯಾವಾಗಲೂ ಸಂಬಂಧವನ್ನು ವೃತ್ತಿಪರರಾಗಿಡಿ. ಆರೋಗ್ಯಪೂರ್ಣ ಕಚೇರಿ ರೊಮಾನ್ಸ್‌ಗಾಗಿ ಇದು ತುಂಬಾ ಮುಖ್ಯವಾದ ಸಲಹೆಯಾಗಿದೆ.

ಪ್ರೈವಸಿಯನ್ನು ಗೌರವಿಸಿ;

ಪ್ರೈವಸಿಯನ್ನು ಗೌರವಿಸಿ;

ಪರಸ್ಪರರ ಗೌರವವನ್ನು ಕಚೇರಿ ಸ್ಥಳದಲ್ಲಿ ಕಾಪಿಡುವುದು ತುಂಬಾ ಮುಖ್ಯವಾದ ಅಂಶವಾಗಿದೆ. ಕೆಲಸದ ಸಮಯದಲ್ಲಿ ಪರಸ್ಪರರನ್ನು ಭೇಟಿ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ.

ಚತುರತೆಯಿಂದ ನಿಭಾಯಿಸಿ;

ಚತುರತೆಯಿಂದ ನಿಭಾಯಿಸಿ;

ಯಶಸ್ವಿ ಬಾಸ್ ಮತ್ತು ಸಿಬ್ಬಂದಿ ಪ್ರೇಮ ಸಲ್ಲಾಪಕ್ಕಾಗಿ, ಈ ಸಲಹೆಯನ್ನು ನೀವು ಮುಖ್ಯವಾಗಿ ಮನದಲ್ಲಿಟ್ಟುಕೊಳ್ಳಬೇಕು. ಕಚೇರಿ ಅವಧಿಯ ನಂತರ ಆಫಿಸ್ ಪಕ್ಕದಲ್ಲಿ ಸಾಧ್ಯವಾದಷ್ಟು ಭೇಟಿಯನ್ನು ಕಡಿಮೆ ಮಾಡಿ. ಭೇಟಿಗಾಗಿ ಪ್ರತ್ಯೇಕ ಸ್ಥಳವನ್ನು ನೋಡಿ.

ಯಾವುದೇ ದಾಖಲೆಯನ್ನು ಬಿಡಬೇಡಿ;

ಯಾವುದೇ ದಾಖಲೆಯನ್ನು ಬಿಡಬೇಡಿ;

ಆಫೀಸ್ ರೊಮಾನ್ಸ್ ಅನ್ನು ಗುಪ್ತವಾಗಿಡಲು, ಯಾವುದೇ ದಾಖಲೆಯನ್ನು ಹಾಗೆಯೇ ಬಿಡಬೇಡಿ. ಎಲ್ಲಾ ಲಾಗ್‌ಗಳು, ಸಂದೇಶಗಳು ಹಾಗೂ ಚಿತ್ರಗಳನ್ನು ಅಳಿಸಿ ಇದರಿಂದ ಇತರರ ಮನದಲ್ಲಿ ವಿನಾಕಾರಣ ಸಂಶಯಗಳು ತಲೆದೋರಬಹುದು. ನಿಮ್ಮ ಸಹೋದ್ಯೋಗಿ ಅಥವಾ ಬಾಸ್‌ನೊಂದಿಗೆ ಹೆಚ್ಚು ಮಾತನಾಡದಿರಿ. ಇತರ ಸಹೋದ್ಯೋಗಿಗಳಂತೆ ಅವರನ್ನು ನಿಭಾಯಿಸಿ.

ಪಿಡಿಎ ಬೇಡ;

ಪಿಡಿಎ ಬೇಡ;

ಕಾಫಿ ಮತ್ತು ಸಿಗರೇಟ್ ಸೇವನೆ ಸಮಯದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಬಹುದಾದ ಪಿಡಿಯೆ (ಪ್ರೀತಿಯ ಸಾರ್ವಜನಿಕ ಪ್ರದರ್ಶನ) ಯನ್ನು ಹೆಚ್ಚಿನ ಜೋಡಿಗಳು ಪ್ರದರ್ಶಿಸುತ್ತಾರೆ. ಆಫೀಸ್ ರೊಮಾನ್ಸ್ ಅನ್ನು ಗೌಪ್ಯವಾಗಿಡಲು, ಯಾವುದೇ ಪಿಡಿಎ ಅನ್ನು ಅನುಮೋದಿಸಬೇಡಿ.

ಅತಿ ಪ್ರದರ್ಶನ ಬೇಡ;

ಅತಿ ಪ್ರದರ್ಶನ ಬೇಡ;

ತಮ್ಮ ಬಾಸ್‌ನೊಂದಿಗೆ ಸಿಬ್ಬಂದಿ ಒಡನಾಟ ಪ್ರಾರಂಭಿಸಿದೊಡನೆ ಕೆಲವೊಂದು ಲಾಭಗಳನ್ನು ಪಡೆದುಕೊಳ್ಳುತ್ತಾರೆ. ಆಫೀಸ್‌ಗೆ ತಡವಾಗಿ ಬರುವುದು, ದೀರ್ಘ ರಜೆ ಹಾಕುವುದು, ಇತ್ಯಾದಿ ಈ ಎಲ್ಲಾ ಸೂಚನೆಗಳು ಕಚೇರಿ ವಲಯದಲ್ಲಿ ಗಾಸಿಪ್ ಹರಡಬಹುದು. ಆದ್ದರಿಂದ ಅತಿ ಪ್ರದರ್ಶನ ಬೇಡ.

ಗೌಪ್ಯವಾಗಿಡುವುದು ತುಂಬಾ ಮುಖ್ಯವಾದುದು:

ಗೌಪ್ಯವಾಗಿಡುವುದು ತುಂಬಾ ಮುಖ್ಯವಾದುದು:

ಕಚೇರಿ ರೋಮಾನ್ಸ್ ಅನ್ನು ಗೌಪ್ಯವಾಗಿಡುವುದು ತುಂಬಾ ಮಹತ್ವಪೂರ್ಣ ಅಂಶವಾಗಿದೆ. ಸಂಬಂಧವನ್ನು ಮರೆಮಾಡಿದಷ್ಟೂ ಗುಟ್ಟಾಗಿ ಕಾಪಾಡಿಕೊಂಡಷ್ಟೂ ಯಶಸ್ಸು ಮತ್ತು ಸುರಕ್ಷತೆ ಅದಕ್ಕಿರುತ್ತದೆ.

English summary

Boss and Employee Romance: Tips

Having an affair with your boss is not a new thing. There are many people who have found their better half at workplace. As you spend half of the time at workplace, getting close to your colleague or boss is quite obvious.
X
Desktop Bottom Promotion