For Quick Alerts
ALLOW NOTIFICATIONS  
For Daily Alerts

ಈ ವಿಷಯಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸಬೇಡಿ!

By Arpitha Rao
|

ಹೆಚ್ಚಿನ ಸಂದರ್ಭದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳನ್ನು ಸ್ನೇಹಿತರಂತೆ ಕಾಣಬಹುದು,ಅವರೊಂದಿಗೆ ಸಾಕಷ್ಟು ಸಮಯ ಕಳೆಯಬಹುದು.ಆದರೆ ಕೆಲವೊಂದು ಸಂದರ್ಭದ್ದಲ್ಲಿ ಹೆಚ್ಚು ಹತ್ತಿರವಾಗುವುದನ್ನು ತಡೆದು ವೃತ್ತಿ ಜೀವನಕ್ಕಷ್ಟೇ ಮೀಸಲಾಗಿಡಬೇಕಾಗುತ್ತದೆ.

ಭಾರತೀಯ ಮೂಲದ ಕೆಲಸದ ಕಾನೂನು ತಜ್ಞ ಜಯದೀಪ ಹೋರ್ ಖಾಸಗಿ ಜೀವನ ಮತ್ತು ವೃತ್ತಿಪರ ಜೀವನದ ನಡುವೆ ಗಡಿಗಳು ಇರದಿದ್ದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿಸುತ್ತಾರೆ.
ನಮ್ಮ ಸಹೋದ್ಯೋಗಿಗಳೊಡನೆ ನಾವು ಮಾತನಾಡಬಾರದ ಮತ್ತು ಚರ್ಚಿಸಬಾರದ ಏಳು ವಿಷಯಗಳನ್ನು ಅವರು ತಿಳಿಸಿದ್ದಾರೆ.ಓದಿ ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಸಹೋದ್ಯೋಗಿಯನ್ನು ಪ್ರೀತಿಸಿದ್ದಿರಿ ಎನ್ನುವ ಸೂಚನೆ

7 Things never to discuss with colleagues

1.ಹೊಯರ್ ಹೇಳುವ ಮೊದಲನೇ ಅಂಶವೆಂದರೆ ಲೈಂಗಿಕ ಜೀವನದ ಬಗ್ಗೆ ನಿಮ್ಮ ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುವುದು ಸೂಕ್ತವಲ್ಲ ಇದು ಕಾನೂನು ಸಮಸ್ಯೆಗಳನ್ನು ತಂದೊಡ್ಡಬಹುದು ಎನ್ನುತ್ತಾರೆ.ಲೈಂಗಿಕ ಕಿರುಕುಳ ಎಂಬುದು ಸಾಕಷ್ಟು ವಿಶಾಲವಾದ ವ್ಯಾಖ್ಯಾನ ಎಂದು ನ್ಯೂಸ್.ಕಾಂ ತಿಳಿಸುತ್ತದೆ.

2.ಎರಡನೆಯದಾಗಿ ಕೆಲವು ಜನರನ್ನು ಸೇರಿಸಿ ಗುಂಪು ಮಾಡಿಕೊಂಡಿರುವುದು ಸರಿಯಲ್ಲ,ವೈಯಕ್ತಿಕ ಅಭಿಪ್ರಾಯಗಳನ್ನು ಅಭಿವ್ಯಕ್ತಿಸುವುದು ಅಪಾಯಕಾರಿ ಎನ್ನಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬಾಸ್ ಸಿಬ್ಬಂದಿ ಪ್ರೇಮ ಸಲ್ಲಾಪ ಹೀಗಿದ್ದರೆ ಚೆಂದ!

3.ವೃತ್ತಿಜೀವನದಲ್ಲಿ ಸಹೋದ್ಯೋಗಿಗಳ ಬಗ್ಗೆ ಗಾಸಿಪ್ ಮಾಡುವುದು ಕೂಡ ಒಳ್ಳೆಯದಲ್ಲ,ಜೊತೆಗೆ ತಮ್ಮ ಖಾಸಗಿ ಜೀವನದ ಬಗ್ಗೆ ಗಾಸಿಪ್ ಮಾಡುವುದು ಕೂಡ ಅಪಾಯಕಾರಿ ಎನ್ನಲಾಗುತ್ತದೆ.

4.ಕೆಲಸಗಾರ ವಾರಾಂತ್ಯದಲ್ಲಿ ಆಫ್ ತೆಗೆದುಕೊಂಡು ಬರೆದಿದ್ದೇನೆ ಎಂದು ಎಂದಿಗೂ ಹೇಳಬಾರದು. ಏಕೆಂದರೆ ತೀರ್ಪಿನಲ್ಲಿ ಅವನತಿಗೆ ಕಾರಣ ಇದಾಗಿರಬಹುದು ಎನ್ನಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕೆಲಸದ ಸ್ಥಳದಲ್ಲಿ ಮಾಡಲೇಬಾರದಂತಹ 5 ತಪ್ಪುಗಳು

5.ಸಹೋದ್ಯೋಗಿ ಅಥವಾ ಗ್ರಾಹಕ ಇಬ್ಬರಲ್ಲಿ ಯಾರಾದರೂ ಮುಗಿಬಿದ್ದರೆ ಪ್ರತಿಕ್ರಿಯಿಸುವಾಗ ಎಚ್ಚರಿಕೆಯಿಂದ ಇರಬೇಕು,ಅದರಲ್ಲೂ ಅವರು ಕೋಪದಲ್ಲಿದ್ದಾಗ ಸಮಾದಾನದಲ್ಲಿರುವುದು ಒಳಿತು.

6.ಸಹೋದ್ಯೋಗಿಗಳೊಂದಿಗೆ ನೀವು ನಿಮ್ಮ ಜೀವನದಲ್ಲಿ ಮಾಡಿದ ದೊಡ್ಡ ತಪ್ಪುಗಳ ಬಗ್ಗೆ ಚರ್ಚಿಸಬೇಡಿ ಏಕೆಂದರೆ ಅವರು ಇದನ್ನು ಎಲ್ಲರೊಂದಿಗೆ ಹಂಚಿಕೊಂಡುಬಿಡಬಹುದು.

7.ಖಾಸಗಿ ಜೀವನದ ಮುಖ್ಯ ಘಟನೆಗಳ ಬಗ್ಗೆ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಾಗ ಅವರು ಅದನ್ನು ಬೇರೆ ರೀತಿಯಲ್ಲಿ ಹೇಳಿದರೆ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಇದರ ಬಗ್ಗೆ ಎಚ್ಚರದಿಂದಿರಿ.

ಈ ಮೇಲೆ ಹೇಳಿದ ಎಲ್ಲಾ ವಿಷಯಗಳು ವೃತ್ತಿಜೀವನ ಮತ್ತು ಖಾಸಗಿ ಜೀವನ ಬೇರೆಬೇರೆಯಾಗಿರಲಿ ಎಂದು ಹೊಯರ್ ತಿಳಿಸಿದ ಸಲಹೆಗಳು.

Story first published: Saturday, March 29, 2014, 16:48 [IST]
X
Desktop Bottom Promotion