For Quick Alerts
ALLOW NOTIFICATIONS  
For Daily Alerts

ಮದುವೆಯಾದ ಮೇಲೆ ಗಂಡಸರು ಮಾಡುವುದನ್ನು ನಿಲ್ಲಿಸಬೇಕಾದ 7 ಕೆಲಸಗಳು

By Deepak m
|

ಹುಡುಗರೆಂದರೆ ಹುಡುಗರು! ಆದರೆ ಮದುವೆಯಾದ ಮೇಲೆ ಪ್ರತಿಯೊಬ್ಬರಿಗು ಬದಲಾವಣೆಯ ಗಾಳಿ ತಟ್ಟುತ್ತದೆ, ಏಕೆಂದರೆ ಮದುವೆಯೆಂಬುದೆ ಹಾಗೆ. ಬ್ಯಾಚುಲರ್ ಜೀವನದಿಂದ ಮದುವೆಯಾಗಿ ಸಂಸಾರಿಯಾಗುವ ಪ್ರತಿಯೊಬ್ಬ ಗಂಡಸು ಮತ್ತು ಅವರ ಅರ್ಧಾಂಗಿಗಳಿಗೆ ಜೀವನ ಕಷ್ಟ ಕಷ್ಟವಾಗಿಯೆ ಇರುತ್ತದೆ. ಬಹುಶಃ ನೀವು ಗಮನಿಸಿರುವುದಿಲ್ಲ,

ನಿಮಗೆ ಮಹತ್ವ ಎಂದು ತೋರುವ ಕೆಲವೊಂದು ಅಂಶಗಳು ನಿಮ್ಮ ಹೆಂಡತಿಗೆ ಕ್ಷುಲ್ಲಕವಾಗಿ ತೋರಬಹುದು. ಹೊಸ ಪ್ರಣಯವು ಹೆಚ್ಚುಕಡಿಮೆಯಾಗುವುದನ್ನು ತಡೆಯಬೇಕಾದರೆ ಮೊದಲು ನೀವು ಇನ್ನು ಮುಂದೆ ಬ್ಯಾಚುಲರ್ ಆಗಿ ಇರುವುದಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. " ಗಂಡ"ನಾದ ಮೇಲೆ ನೀವು ಬಿಡಬೇಕಾದ ಮತ್ತು ಬದಲಾಯಿಸಿಕೊಳ್ಳಬೇಕಾದ ಕೆಲವೊಂದು ಹವ್ಯಾಸಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿಕೊಳ್ಳಿ.

ಭಾರತೀಯರ ವಿವಾಹಗಳು ಯಶಸ್ವಿಯಾಗಲು 12 ಕಾರಣಗಳು

ಕೀ ಮತ್ತು ಸಾಕ್ಸ್‌ಗಳನ್ನು ಕೇಳುವುದು

ಕೀ ಮತ್ತು ಸಾಕ್ಸ್‌ಗಳನ್ನು ಕೇಳುವುದು

ಪ್ರತಿಯೊಬ್ಬ ಹೆಂಗಸು ತನ್ನ ಗಂಡನು ಜವಾಬ್ದಾರಿಯುತನಾಗಿರಬೇಕು ಎಂದು ಬಯಸುತ್ತಾಳೆ. ಹಾಗಾಗಿ ಕೆಲವೊಂದು ಸಣ್ಣ ಸಣ್ಣ ವಿಚಾರಗಳ ಬಗ್ಗೆ ಗಮನಕೊಡಿ. ನಿಮ್ಮ ಸಾಕ್ಸ್, ಕೀ,ವ್ಯಾಲೆಟ್ ಮತ್ತು ವಾಚ್ ಇತ್ಯಾದಿಗಳನ್ನು ಹುಡುಕಲು ನಿಮ್ಮ ಹೆಂಡತಿಯ ಮೇಲೆ ಅವಲಂಬಿತರಾಗಬೇಡಿ. ಅವುಗಳನ್ನು ನಿರ್ದಿಷ್ಟ ಜಾಗದಲ್ಲಿಡಿ. ಇದರಿಂದ ನಿಮ್ಮ ಅಚ್ಚುಕಟ್ಟುತನಕ್ಕೆ ನಿಮ್ಮ ಹೆಂಡತಿ ಮೆಚ್ಚುಗೆ ಸೂಚಿಸುತ್ತಾಳೆ ಮತ್ತು ಆಕೆಯ ಪ್ರೀತಿ ನಿಮಗೆ ದೊರೆಯುತ್ತದೆ.

ಸ್ಪೋರ್ಟ್ಸ್ ಮತ್ತು ವಿಡೀಯೊ ಗೇಮ್‍ಗಳೆಡೆಗಿನ ಆಸಕ್ತಿ

ಸ್ಪೋರ್ಟ್ಸ್ ಮತ್ತು ವಿಡೀಯೊ ಗೇಮ್‍ಗಳೆಡೆಗಿನ ಆಸಕ್ತಿ

ಕೆಲಸ ಮುಗಿಸಿ ಬಂದ ಕೂಡಲೆ ಯಾವುದೋ ಸ್ಪೋರ್ಟ್ಸ್ ಚಾನೆಲ್ ಆನ್ ಮಾಡಿ ಲೈವ್ ಮ್ಯಾಚ್‍ಗಳನ್ನು ಗಂಟೆಗಟ್ಟಲೆ ನೋಡುವುದು ಅಥವಾ ಗೇಮಿಂಗ್ ಕನ್ಸೋಲ್ ಮುಂದೆ ಕೂರುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು " ಬಿಡಿ". ಸಾಮಾನ್ಯವಾಗಿ ಮದುವೆಯಾದವರು "ಬೆಡ್‍ರೂಮ್ ಗೇಮ್ಸ್" ಬಗ್ಗೆ ಆಸಕ್ತಿ ಹೊಂದಿರಬೇಕೆ ಹೊರತು ಕ್ರಿಕೆಟ್, ಫುಟ್‍ಬಾಲ್, ವಿಡೀಯೊ ಗೇಮ್ಸ್ ಬಗ್ಗೆ ಅಲ್ಲ. ಟಿವಿ ಮುಂದೆ ರಾತ್ರಿಯೆಲ್ಲ ಕೂರುವ ಬದಲು ನಿಮ್ಮ ಹೆಂಡತಿಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿ.

ಸ್ನೇಹಿತರ ಜೊತೆಗೆ ಗಂಟೆಗಟ್ಟಲೆ ಕಳೆಯುವ ಅಭ್ಯಾಸ

ಸ್ನೇಹಿತರ ಜೊತೆಗೆ ಗಂಟೆಗಟ್ಟಲೆ ಕಳೆಯುವ ಅಭ್ಯಾಸ

ಯಾವತ್ತೊ ಒಂದು ದಿನ ನೀವು ನಿಮ್ಮ ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ತಡವಾಗಿ ಬಂದರೆ ನಿಮ್ಮ ಹೆಂಡತಿಗೆ ಯಾವುದೇ ತಕರಾರಿರುವುದಿಲ್ಲ. ಆದರೆ ನಿಮ್ಮ ಸ್ನೇಹಿತರು ನಿಮ್ಮ ಸಮಯದಲ್ಲಿನ ಸಿಂಹಪಾಲನ್ನು ತೆಗೆದುಕೊಂಡಲ್ಲಿ, ಆಗ ನಿಮ್ಮಾಕೆಗೆ ಅಸೂಯೆ ಮತ್ತು ಕಿರಿಕಿರಿಯು ಶುರುವಾಗುತ್ತದೆ. ಆದ್ದರಿಂದ ಮದುವೆಯಾದ ಮೇಲೆ, ನೀವು ನಿಮ್ಮ ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯುವ ಸಮಯವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಅದರ ಬದಲಿಗೆ ಬೇಕಾದರೆ ನಿಮ್ಮ ಸ್ನೇಹಿತರಲ್ಲಿ ಮದುವೆಯಾಗಿರುವ ದಂಪತಿಗಳನ್ನು ಆಹ್ವಾನಿಸಿ, ಆಗ ನಿಮ್ಮಾಕೆಗು ಸಹ ಒಂದು ಜೊತೆಗಾತಿ ದೊರೆಯುತ್ತಾಳೆ. ಆಗ ನಿಮ್ಮ ಹೆಂಡತಿ ತನ್ನಷ್ಟಕೆ ತಾನೇ ನಿಮ್ಮ ಸ್ನೇಹಿತರನ್ನು ದೂರುವ, ಅಸೂಯೆ ಪಡುವ ಸನ್ನಿವೇಶ ಸೃಷ್ಟಿಯಾಗುವುದಿಲ್ಲ.

ಮನೆಯ ಅಚ್ಚುಕಟ್ಟುತನ ಹಾಳು ಮಾಡುವುದು

ಮನೆಯ ಅಚ್ಚುಕಟ್ಟುತನ ಹಾಳು ಮಾಡುವುದು

ಮದುವೆಯಾದ ನಂತರ ಮೈ ಒರೆಸಿಕೊಂಡು ಒದ್ದೆಯಾಗಿರುವ ಆ ಟವೆಲನ್ನು ಅಲ್ಲಿ ಇಲ್ಲಿ ಬಿಸಾಡುವುದನ್ನು, ಕೊಳೆಯಾದ ಟೀ ಶರ್ಟ್‍ಗಳನ್ನು ಹಾಸಿಗೆ ಮೇಲೆ ಹಾಕಬೇಡಿ. ಯಾವುದೇ ರೀತಿಯಲ್ಲಿ ಮನೆಯ ಅಂದಗೆಡಿಸುವ ಪ್ರಕ್ರಿಯೆಯನ್ನು ಮೊದಲು ಕೈಬಿಡಿ. ಅಚ್ಚುಕಟ್ಟುತನವನ್ನು ಮೊದಲು ಮೈಗೂಡಿಸಿಕೊಳ್ಳಿ. ಇದರಿಂದ ನಿಮ್ಮ ಮನೆಯವರು ವಿಶೇಷವಾಗಿ ನಿಮ್ಮ ಅರ್ಧಾಂಗಿಗೆ ಇದರಿಂದ ಅನಾವಶ್ಯಕ ಕೆಲಸಗಳು ತಪ್ಪುತ್ತವೆ. ಹಾಗಾಗಿ ಮನೆಯನ್ನು ಮನೆಯ ತರಹ ನೋಡಿ, ಬದಲಿಗೆ ಹಾಸ್ಟೆಲ್ ಅಥವಾ ಪಿಜಿ ತರ ನಡೆದುಕೊಳ್ಳುವುದನ್ನು ಮೊದಲು ಬಿಡಿ. ಇಲ್ಲದಿದ್ದಲ್ಲಿ ಅದರಿಂದಲೆ ಜಗಳ ಶುರುವಾಗಬಹುದು.

ನಿಮ್ಮ ಮನೆಯು ರೆಸ್ಟೋರೆಂಟ್ ಅಲ್ಲ

ನಿಮ್ಮ ಮನೆಯು ರೆಸ್ಟೋರೆಂಟ್ ಅಲ್ಲ

ನಿಮ್ಮ ಹೆಂಡತಿಯು ಮನೆಯಲ್ಲಿ ಯಾವುದೇ ಕುಕ್ ಅಥವಾ ವೇಟರ್ ಅಲ್ಲ. ಮನೆಯ ಎಲ್ಲಾ ಕೆಲಸವನ್ನು ಮಾಡಿಕೊಂಡು ನಿಮಗೆ ದಿನಪೂರ್ತಿ ಅಡುಗೆ ಮಾಡಿ ಹಾಕಿಕೊಂಡು ಇರಲು ಆಕೆಯಿಂದ ಸಾಧ್ಯವೇ. ಆದ್ದರಿಂದ ನೀವು ಸಹ ಆಕೆಗೆ ಸ್ವಲ್ಪ ಸಹಾಯ ಮಾಡಿ! ಹಾಗೆಯೇ ಹಾಸಿಗೆಯ ಮೇಲೆ ಗಟ ಗಟ ಎಂದು ಗುಟುಕರಿಸುವ ಬೀರ್ ಮತ್ತು ಕುರುಕಲು ತಿಂಡಿ ಸೇವಿಸುವ ಅಭ್ಯಾಸ ನಿಮಗಿದ್ದಲ್ಲಿ, ಅದಕ್ಕೆ ವಿದಾಯ ಹೇಳಿ. ಏಕೆಂದರೆ ಹಾಸಿಗೆಯ ಮೇಲಿನ ಬೀರ್ ಮತ್ತು ಆಹಾರದ ಕಲೆಗಳನ್ನು ಯಾರ ಹೆಂಡತಿ ತಾನೇ ಸಹಿಸುತ್ತಾಳೆ.

ಯಾವಾಗಲು

ಯಾವಾಗಲು " ಗಂಡಸರ ವಿಷಯ" ವನ್ನು ಮಾತನಾಡುವುದು

ಜೀವನದಲ್ಲಿ ಮುಂದೆ ಸಾಗುತ್ತ ಸಾಗುತ್ತ ನಿಮ್ಮ ಹೆಂಡತಿ ನಿಮ್ಮ ಉತ್ತಮ ಸ್ನೇಹಿತಳಾಗುತ್ತಾಳೆ. ಹಾಗೆಂದು ಆಕೆಯೊಂದಿಗೆ ಯಾವಾಗಲು "ಗಂಡಸರ ವಿಷಯ"ವನ್ನೆ ಮಾತನಾಡಬೇಡಿ. ನಿಮ್ಮ ಮೆಚ್ಚಿನ ಆಟೋಟ, ಇತ್ತೀಚಿನ ಮ್ಯಾಚ್ ಸ್ಕೋರ್‌ಗಳು, ಶೇರ್ ಮಾರ್ಕೆಟ್ ದರಗಳು ಅಥವಾ ರಾಂಬೋ, ಮುಂತಾದ ವಿಷಯಗಳ ಬಗ್ಗೆ ನಿಮ್ಮ ಹೆಂಡತಿಗೆ ಆಸಕ್ತಿ ಇದ್ದ ಹೊರತಾಗಿ ಹೆಚ್ಚಿಗೆ ಮಾತನಾಡಲು ಹೋಗಬೇಡಿ.

ಇತರ ಹೆಂಗಸರನ್ನು ಓರೆಗಣ್ಣಿನಲ್ಲಿ ನೋಡುವ ಚಟ

ಇತರ ಹೆಂಗಸರನ್ನು ಓರೆಗಣ್ಣಿನಲ್ಲಿ ನೋಡುವ ಚಟ

ಬಹುಶಃ ಇದು ನಿಮ್ಮ ಪರಿಸ್ಥಿತಿಯನ್ನು ವಿಕೋಪಕ್ಕೆ ತೆಗೆದುಕೊಂಡು ಹೋಗಬಹುದಾದ ಅಭ್ಯಾಸವಾಗಿರುತ್ತದೆ. "ಸೌಂದರ್ಯವನ್ನು ಆಸ್ವಾದಿಸುವ ಮತ್ತು ಅದಕ್ಕೆ ಮೆಚ್ಚುಗೆ ಸೂಚಿಸುವ" ನಿಮ್ಮ ಮನೋಭಾವದಲ್ಲಿ ಮದುವೆಯಾದ ನಂತರ ಕೆಲವೊಂದು ಮಾರ್ಪಾಡುಗಳು ಮಾಡಿಕೊಳ್ಳಬೇಕಾದುದು ಅತ್ಯಗತ್ಯ. ಪ್ರತಿ ಹೆಂಗಸು ತನ್ನ ಗಂಡನು ತನ್ನನ್ನು ಇಷ್ಟಪಡಬೇಕು ಎಂದು ಕೋರಿಕೊಳ್ಳುತ್ತಾಳೆಯೇ, ಹೊರತು ಇತರರನ್ನು ಹೊಗಳಲಿ ಎಂದಲ್ಲ. ಹಾಗಾಗಿ ಕನಿಷ್ಟ ನಿಮ್ಮಾಕೆ ಮುಂದಾದರು ಇತರರನ್ನು ನೋಡಿ ಹೊಗಳಲು ಹೋಗಬೇಡಿ!

English summary

7 Things Men Should Stop Doing after Becoming Husbands

Boys will be boys! But then, marriage is a life changing experience for everyone. The transition from bachelorhood to married life is tough for most men and their better halves. So, here are some habits that you should think about changing before you become a 'husband'.
X
Desktop Bottom Promotion