For Quick Alerts
ALLOW NOTIFICATIONS  
For Daily Alerts

ಮಾಜಿ ಪ್ರೇಮಿಗೆ ಕಳುಹಿಸಬಾರದ 7 ಟೆಕ್ಸ್ಟ್ ಮೆಸೇಜ್‌ಗಳು

By Hemanth P
|

ನಿಮ್ಮ ಹಳೆಯ ಪ್ರೇಮಿಗೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಬಾರದೆಂದರೆ ಕೆಲವೊಂದು ಟೆಕ್ಸ್ಟ್ ಮೆಸೇಜ್ ಗಳನ್ನು ಕಳಹಿಸಬಾರದು. ನಿಮ್ಮ ಮಾಜಿಯನ್ನು ನೋಡುವುದು ಎಷ್ಟು ನೋವಿನ ವಿಷಯವೆಂದು ನನಗೆ ತಿಳಿದಿದೆ. ಮಾತನಾಡುವ ವಿಷಯ ಬಿಟ್ಟು ನೀವು ಟೆಕ್ಸ್ಟ್ ಮೆಸೇಜ್ ಮಾಡುವುದು ಒಳ್ಳೆಯ ಐಡಿಯಾ.

ಇದರಿಂದ ನಿಮ್ಮ ಮನಸ್ಸಿನಲ್ಲಿ ಏನಿದೆ ಮತ್ತು ಅವರ ಬಗ್ಗೆ ನಿಮಗೆ ಈಗಲೂ ಏನು ಅನಿಸುತ್ತಿದೆ ಎಂದು ಹೇಳಬಹುದು. ನಿಮಗೆ ಅವರ ಬಗ್ಗೆ ಭಾವನೆಗಳಿದ್ದರೂ ಅವರು ನಿಮ್ಮ ಮಾಜಿಗಳೆನ್ನುವುದು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಇದರಿಂದ ನಿಮ್ಮ ಮಾಜಿಗೆ ಕಳುಹಿಸಬಾರದ ಕೆಲವೊಂದು ಟೆಕ್ಸ್ಟ್ ಮೆಸೇಜ್ ಗಳ ಬಗ್ಗೆ ಗಮನದಲ್ಲಿಟ್ಟುಕೊಳ್ಳಬೇಕು.

7 Text Messages You Should Never Send to Your Ex

ಮದುವೆಯಾಗಿ ಸಂತಸವಾಗಿರುವ ಸಂಗಾತಿಗಳ 5 ರಹಸ್ಯಗಳು!

1. ಐ ಮಿಸ್ ಯು:
ಹಲವರ ಅಭಿಪ್ರಾಯದಂತೆ ಈ ಒಂದು ಟೆಕ್ಸ್ಟ್ ಮೆಸೇಜ್ ನ್ನು ನೀವು ಮಾಜಿಗೆ ಕಳುಹಿಸಬಾರದು. ನೀವು ಆತ(ಆಕೆ)ನನ್ನು ಎಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದರೂ ಇದನ್ನು ನಿಮ್ಮ ಮಾಜಿಗೆ ತಿಳಿಸಲು ಪ್ರಯತ್ನಿಸಬೇಡಿ. ಇದರಿಂದ ನಿಮಗೆ ಅಗತ್ಯವಿರುವಂತೆ ಮತ್ತು ಅವರ ಭಾವನೆಯಿಂದ ನಿಮ್ಮನ್ನು ಹೊರಗಿಡುವಂತೆ ಮಾಡುತ್ತೀರಿ.

2. ಐ ಆ್ಯಮ್ ರಿಯಲಿ ಸಾರಿ:
ನಿಮ್ಮ ಮಾಜಿಗೆ ಇದನ್ನು ಹೇಳುವ ಮೊದಲು ಇದು ನಿಜವಾಗಿಯೂ ಅರ್ಥಪೂರ್ಣವೇ ಅಥವಾ ಕ್ಷಮೆ ಕೇಳಲು ಇದು ಒಳ್ಳೆಯ ಕಾರಣವೇ ಎಂದು ತಿಳಿಯಿರಿ. ಕೇವಲ ಸಂಪರ್ಕವನ್ನಿಟ್ಟುಕೊಳ್ಳಲು ಆಕೆ(ಆತ)ಗೆ ಟೆಕ್ಸ್ಟ್ ಮಾಡಬೇಡಿ. ಯಾಕೆಂದರೆ ಆಕೆ(ಆತ) ನಿಮ್ಮ ಮಾಜಿ ಮತ್ತು ನೀವು ಇದನ್ನು ತಿಳಿದು ಮುಂದುವರಿಯಬೇಕು ಮತ್ತು ಆತನ ಸುತ್ತ ಜೀವನ ತಿರುಗುವಂತೆ ಮಾಡಬಾರದು. ಇನ್ನೊಂದು ಕಡೆ ನೀವು ಏನಾದರೂ ತಪ್ಪು ಮಾಡಿದ್ದೇ ಆಗಿದ್ದರೆ ಮತ್ತು ನಿಮ್ಮ ತಪ್ಪಿನ ಬಗ್ಗೆ ಅರಿವಾಗಿದ್ದರೆ ಆಗ ಕ್ಷಮೆ ಕೇಳುವುದು ಅತ್ಯುತ್ತಮ ವಿಧಾನ.

3. ಹಾಡಿನ ಸಾಲುಗಳು:
ಕೆಲವೊಂದು ಸಲ ಹಾಡಿನ ಸಾಲುಗಳು ನಿಮ್ಮ ಭಾವನೆಯನ್ನು ನೀವು ಹೇಳುವುದಕ್ಕಿಂತ ಒಳ್ಳೆಯ ರೀತಿಯಲ್ಲಿ ವ್ಯಕ್ತಪಡಿಸಬಹುದು ಎಂದು ನನಗೆ ತಿಳಿದಿದೆ. ಆದರೆ ನಿಮ್ಮ ಮಾಜಿಗೆ ಟೆಕ್ಸ್ಟ್ ಮಾಡಲು ಇದು ಕಾರಣವಲ್ಲ. ಹಾಡಿನ ಸಾಲುಗಳನ್ನು ಹೊಂದಿರುವ ಟೆಕ್ಸ್ಟ್ ಮೆಸೇಜ್ ಗಳನ್ನು ನಿಮ್ಮ ಮಾಜಿಗೆ ಕಳುಹಿಸಬೇಡಿ. ಅದರಲ್ಲೂ ನೀವು ಇತ್ತೀಚೆಗಷ್ಟೇ ಕೇಳಿದ ಮತ್ತು ನಿಮ್ಮಿಬ್ಬರನ್ನು ಜತೆಯಾಗಿಸಬಹುದೆಂದು ಯೋಚಿಸುತ್ತಿರುವಂತಹ ಹಾಡುಗಳ ಸಾಲನ್ನು ಕಳುಹಿಸಲೇಬಾರದು. ಇದು ಹಾಗಲ್ಲದಿದ್ದರೂ ಕಾಕತಾಳೀಯವಾಗಿರಬಹುದು.

4. ಒಂದು ಶಬ್ದದ ಟೆಕ್ಸ್ಟ್ ಮೆಸೇಜ್:
ನಿಮ್ಮ ಮಾಜಿಯನ್ನು ಸಂಪರ್ಕಿಸಲು ಪ್ರಯತ್ನಿಸುವುದು ಎಷ್ಟು ಕಷ್ಟವೆನ್ನುವುದು ನನಗೂ ತಿಳಿದಿದೆ. ಆದರೆ ನೀವು ಹೀಗೆ ಮಾಡಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುವುದು ಸರಿಯಲ್ಲ. ಹಾಯ್, ಹಲೋ ಅಥವಾ ಹೆಯ್ ಎನ್ನುವಂತಹ ಒಂದು ಶಬ್ದದ ಮೆಸೇಜ್ ಕಳುಹಿಸುವುದನ್ನು ಕಡೆಗಣಿಸಿ. ಯಾಕೆಂದರೆ ನೀವೀಗ ಜತೆಯಾಗಿಲ್ಲ ಮತ್ತು ಹೇಳಲು, ಕೇಳಲು ಏನೂ ಉಳಿದಿಲ್ಲ. ಹೆಚ್ಚು ವಿವರಿಸಿ ಮತ್ತು ಆದಷ್ಟು ಬೇಗ ವಿಷಯ ಹೇಳಿ.

5. ಸಿಟ್ಟಿನ ಅಭಿನಯಾತೀರೇಕ:
ನಿಮಗೆ ನೋವಾಗಿದೆಯೆಂದು ತಿಳಿದಿದೆ ಮತ್ತು ನೀವು ತುಂಬಾ ಸಿಟ್ಟಾಗಿರಬಹುದು. ಆದರೆ ಇದರಿಂದ ನಿಮ್ಮ ಮಾಜಿಗೆ ಬಿಡುವಿಲ್ಲದೆ ಸಿಟ್ಟುಭರಿತ ಮೆಸೇಜ್ ಗಳನ್ನು ಕಳುಹಿಸುವುದು ಸರಿಯಲ್ಲ. ನೀವು ಹಿಂದಿನದಲ್ಲೆವನ್ನು ಮರೆತು ಮುಂದೆ ಸಾಗಲು ಬಯಸುವುದಾದರೆ ಇದರಲ್ಲಿ ನಿಮ್ಮ ಮಾಜಿಗೆ ಸಂಬಂಧಪಟ್ಟ ವಿಷಯವನ್ನು ಸೇರಿಸಿ. ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ತಪ್ಪುಗಳಿಗೆ ಆತ(ಆಕೆ)ನನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ಇದರಿಂದ ನಿಮಗೆ ನೋವಾಗಬಹುದು ಅಥವಾ ಕೆಲವೊಂದು ಸಲ ನೀವು ಕುಡಿತಕ್ಕೆ ದಾಸರಾಗಬಹುದು.

6. ಥಿಂಕಿಂಗ್ ಆಫ್ ಯು:
ಈ ರೀತಿಯ ಟೆಕ್ಸ್ಟ್ ಮೆಸೇಜ್ ಕಳುಹಿಸುವುದು ಸರಿಯಾದ ಕ್ರಮವಲ್ಲ ಮತ್ತು ಇದು ಯಾಕೆಂದು ನಿಮಗೆ ತಿಳಿದರಬಹುದು. ನಿಮ್ಮ ಮಾಜಿ ಬಗ್ಗೆ ನೆನಪಿಸಿಕೊಳ್ಳುವುದು ಸಹಜ. ಯಾಕೆಂದರೆ ಆತ(ಆಕೆ) ನಿಮ್ಮ ಜೀವನದಲ್ಲಿ ದೊಡ್ಡ ಪಾತ್ರ ನಿಭಾಯಿಸಲಿದ್ದರು. ಆದರೆ ಈಗ ಅವರು ನಿಮ್ಮ ಜೀವನದ ಭಾಗವಾಗಿಲ್ಲ ಎನ್ನುವುದು ಬೇಸರದ ಸಂಗತಿ.

ಸಂಬಂಧಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಆರು ಸಲಹೆಗಳು

7. ಐ ಜಸ್ಟ್ ವಾಂಟ್ ಟು ಸೇ ಗುಡ್ ಬೈ:
ನೀವು ಯಾರೊಂದಿಗಾದರೂ ಇತ್ತೀಚೆಗೆ ಬ್ರೇಕ್ ಆಪ್ ಮಾಡಿಕೊಂಡಿದ್ದರೆ ಅದಕ್ಕೆ ಅಂತ್ಯ ಹಾಡುವುದು ಸಹಜ. ಆದರೆ ಇದನ್ನು ಈಗಾಗಲೇ ವ್ಯಕ್ತಿಗತವಾಗಿ ನೀವು ಹೇಳಿರುತ್ತೀರಿ. ಅದನ್ನು ಮತ್ತೆ ಆಕೆ(ಆತ)ಗೆ ಟೆಕ್ಸ್ಟ್ ಮಾಡುವ ಅಗತ್ಯವಿಲ್ಲ. ಯಾಕೆಂದರೆ ನೀವು ಮನಸ್ಸಿನಲ್ಲಿ ಆಕೆ(ಆತ) ಮರಳಬೇಕೆಂದು ಬಯಸುತ್ತಿರುತ್ತೀರಿ. ಇದರಿಂದ ಇದು ಒಳ್ಳೆಯ ಐಡಿಯಾವಲ್ಲ. ನಿಮ್ಮ ಜೀವನವು ಆಕೆ(ಆತ)ಯಿಲ್ಲದೆ ಉತ್ತಮವಾಗಿ ನಡೆಯುತ್ತಿರಬಹುದು. ಇದರಿಂದ ಇದನ್ನು ನಿಮಗಿಬ್ಬರಿಗೂ ಕಷ್ಟವಾಗಿಸಬೇಡಿ.

English summary

7 Text Messages You Should Never Send to Your Ex

There are a few text messages you should never send to your ex if you don’t want to give them the wrong impression. I know how painful it can be seeing your ex, not to mention talking to them,
Story first published: Wednesday, May 28, 2014, 16:36 [IST]
X
Desktop Bottom Promotion