For Quick Alerts
ALLOW NOTIFICATIONS  
For Daily Alerts

ದಂಪತಿಗಳು ತಮ್ಮ ಸಂಬಂಧದ ಕುರಿತಾಗಿ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶಗಳು

By Deepak M
|

ಜೀವನ ಪರ್ಯಂತ ಸುಖ, ಸಂತೋಷದಿಂದ ಕೂಡಿದ ಸಮಯವನ್ನು ಕಳೆಯಬೇಕೆಂದು ಪ್ರತಿಯೊಬ್ಬ ದಂಪತಿಗಳ ಆಸೆಯಾಗಿರುತ್ತದೆ. ಆದರೆ ಈ ಆಸೆಯು ಕೈಗೂಡಬೇಕಾದರೆ ನಾವು ನಮ್ಮ ಸಂಬಂಧದ ಬಗ್ಗೆ ಹಲವಾರು ಅಂಶಗಳನ್ನು ತಿಳಿದುಕೊಂಡಿರಬೇಕು. ಆದರೆ ಸಮಸ್ಯೆ ಬರುವುದೇ ಇಲ್ಲಿ,

ಆ ಅಂಶಗಳು ನಮಗೆ ಅನುಭವದಿಂದ ಮಾತ್ರ ತಿಳಿಯುತ್ತವೆ. ಹಾಗೆಂದು ಅನುಭವ ಬರುವವರೆಗು ನಾವು ಕೈಚೆಲ್ಲಿ ಕೂರಲಾಗುವುದಿಲ್ಲ. ಅದಕ್ಕಾಗಿ ನಾವಿಲ್ಲಿ ಒಂದು ಚೆಕ್‍ಲಿಸ್ಟ್ ನೀಡಿದ್ದೇವೆ. ಇದನ್ನು ಇಟ್ಟು ಕೊಂಡು ನಿಮ್ಮ ಪ್ರಸ್ತುತ ಜೀವನದ ಸ್ವಯಂ ಮೌಲ್ಯಮಾಪನವನ್ನು ಮಾಡಿಕೊಳ್ಳಿ, ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಿ.

ಕ್ಷಮಿಸುವುದು ಅತ್ಯಂತ ದೊಡ್ಡ ವಿಚಾರ:

ಕ್ಷಮಿಸುವುದು ಅತ್ಯಂತ ದೊಡ್ಡ ವಿಚಾರ:

ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸುವಂತಹ ದಂಪತಿಗಳು ತುಂಬಾ ದೀರ್ಘಕಾಲ ಜೊತೆಯಾಗಿರುತ್ತಾರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನು ಪರಿಪೂರ್ಣನಲ್ಲ ಎಂಬುದನ್ನು ಮರೆಯಬಾರದು. ದಾಂಪತ್ಯದಲ್ಲಿ ಇಬ್ಬರು ತಪ್ಪುಗಳನ್ನು ಮಾಡುತ್ತೀರಿ, ಕ್ಷಮಿಸುವ ದೊಡ್ಡತನವನ್ನು ಮಾಡಿ. ಕಳೆದು ಹೋದದ್ದು, ಕಳೆದು ಹೋಯಿತು ಎಂಬುದನ್ನು ಮೊದಲು ಅರಿಯಿರಿ. ಒಬ್ಬರನ್ನೊಬ್ಬರು ವಿಶ್ವಾಸಕ್ಕೆ ತೆಗೆದುಕೊಳ್ಳಿ, ನಿಮ್ಮ ಸಂಗಾತಿಯ ಎಲ್ಲಾ ನ್ಯೂನತೆಗಳ ಜೊತೆಗೆ ಅವರನ್ನು ಒಪ್ಪಿಕೊಳ್ಳಿ. ಒಂದು ವೇಳೆ ನೀವು ಹಿಂದಿನ ಕೆಲವು ತಪ್ಪುಗಳನ್ನು ನಿಮ್ಮ ಆಯುಧಗಳಾಗಿ ಹಿಡಿದುಕೊಂಡರೆ, ನಿಮ್ಮ ಈಗಿನ ಪ್ರೀತಿಯು ಬೆಂದು ಹೋಗುತ್ತದೆ. ಅದಕ್ಕಾಗಿ ಪ್ರೀತಿಯನ್ನು ಅನುಭವಿಸಲು ಹಳೆಯ ತಪ್ಪುಗಳನ್ನು ಕ್ಷಮಿಸಿಬಿಡಿ. ಕ್ಷಮಿಸುವುದಕ್ಕಿಂತ ದೊಡ್ಡ ಶಿಕ್ಷೆಯಿಲ್ಲ.

ಇಬ್ಬರೂ ಕೂಡಿ ನಗು ನಗುತ ಕಳೆಯಿರಿ:

ಇಬ್ಬರೂ ಕೂಡಿ ನಗು ನಗುತ ಕಳೆಯಿರಿ:

"ನಗು ನಗುತ ನಲಿ ನಲಿ ಏನೇ ಆಗಲಿ" ಈ ಹಾಡಿನ ಸಾಲನ್ನು ನಿಮ್ಮ ಜೀವನದ ಧ್ಯೇಯವಾಗಿಸಿಕೊಳ್ಳಿ. ಹೌದು ಏನೇ ಆಗಲಿ ನಗುತ್ತ ಎದುರಿಸಿ. ಈ ನಗು ನಿಮ್ಮ ನಡುವಿನ ಕಂದಕಗಳನ್ನು, ಒತ್ತಡವನ್ನು ಮತ್ತು ಸಮಸ್ಯೆಗಳನ್ನು ಹಗುರವಾಗಿಸುತ್ತದೆ. ಎಂತಹ ಸಮಸ್ಯೆಯಲ್ಲಿಯು ಒಂದು ಜೋಕ್ ಹೇಳಿಕೊಂಡು ನಕ್ಕು ಹಗುರಾಗಿ. ಸಂಶೋಧಕರ ಪ್ರಕಾರ ನಗುವು ನಮ್ಮನ್ನು ದೀರ್ಘಾಯುಷ್ಯಿಗಳನ್ನಾಗಿ ಮಾಡುತ್ತದೆಯಂತೆ. ಇದು ನಾವು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಇದೆಲ್ಲಕ್ಕು ಮೇಲಾಗಿ ನಗುವಿನಿಂದ ನಮ್ಮಲ್ಲಿ ಧನಾತ್ಮಕ ಮನೋಭಾವ ಮತ್ತು ಒಳ್ಳೆಯ ಸ್ಫೂರ್ತಿ ಉಂಟಾಗುತ್ತದೆ.

ಸರಿಯಾದ ಸಂವಹನ ರೂಢಿಸಿಕೊಳ್ಳಿ.

ಸರಿಯಾದ ಸಂವಹನ ರೂಢಿಸಿಕೊಳ್ಳಿ.

ಸುಮಾರು ಜನರು ತಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳುವ ಕೆಲಸ ಮಾಡುವುದಿಲ್ಲ. ಇದರಿಂದಲೆ ಬಹುತೇಕ ಸಮಸ್ಯೆಗಳು ಉದ್ಭವಿಸುವುದು. ಇಬ್ಬರ ನಡುವೆ ಇರುವ ಈ ಹೊಂದಾಣಿಕೆಯ ಸಮಸ್ಯೆಯೆ ಇಬ್ಬರಿಗು ನಿರಾಸೆಯನ್ನು ತಂದು ಕೊಡುತ್ತದೆ. ಇದು ಅಷ್ಟು ಅಗತ್ಯವೇ ಎಂದು ಕೇಳುತ್ತೀರಾ? ಹೌದು, ಇದರ ಅಗತ್ಯ ಪ್ರತಿಯೊಬ್ಬರಿಗು ಇರುತ್ತದೆ. ಒಬ್ಬರ ಮನಸ್ಸಿನಲ್ಲಿ ಇರುವುದನ್ನು ಇನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಸಾಕು, ನಿಮ್ಮ ಸಮಸ್ಯೆ ಅರ್ಧ ಪರಿಹಾರವಾಗುತ್ತದೆ. ಇದರಿಂದ ಸುಮಾರು ಸಮಯ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಗಂಡ -ಹೆಂಡತಿಯರ ಮಧ್ಯೆ ಸಂವಹನವು ಗುಪ್ತಗಾಮಿನಿಯಂತೆ ಇರಬೇಕು, ಆಗ ನೋಡಿ ನಿಮ್ಮ ಸಂಬಂಧ ಎಷ್ಟು ಗಾಢವಾಗುತ್ತದೆಯೆಂದು.

ಬದ್ಧತೆಯ ಪ್ರಜ್ಞೆ:

ಬದ್ಧತೆಯ ಪ್ರಜ್ಞೆ:

ಬದ್ಧತೆಯು ಎಲ್ಲಾ ವಿಚಾರದಲ್ಲಿ ಅತ್ಯಗತ್ಯ. ಅದರಲ್ಲು ಪ್ರೀತಿಯ ವಿಚಾರದಲ್ಲಿ ಇದೇ ಮೊದಲ ಮಾನದಂಡ. ನಿಮ್ಮಲ್ಲಿರುವ ಬದ್ದತೆಯೇ ನಿಮ್ಮ ಪ್ರೀತಿಯ ಪ್ರತೀಕ. ನಿಮ್ಮ ಭಾವನೆಗಳು, ನಿರ್ಧಾರಗಳನ್ನು ಈ ಬದ್ಧತೆಯೇ ತಿಳಿಸುತ್ತದೆ. ನಿಮ್ಮ ಬದ್ಧತೆಯು ಅತ್ಯಂತ ದೃಢವಾಗಿದ್ದರೆ, ಅದೇ ನಿಮ್ಮ ಸಂಗಾತಿಯನ್ನು ನಿಮ್ಮತ್ತ ಕರೆ ತರುತ್ತದೆ. ಇವೆಲ್ಲವು ದಾಂಪತ್ಯದ ಅತ್ಯಾವಶ್ಯಕ ಅಂಶಗಳು, ಕೇವಲ ಮಾತುಗಳಲ್ಲ ಎಂಬುದನ್ನು ಮೊದಲು ತಿಳಿಯಿರಿ.

ದಾಂಪತ್ಯ ಎಂಬುದು ಜಗತ್ತಿನ ಅತಿ ಹೆಚ್ಚು ಸಂಕೀರ್ಣವಾದ ಸಂಬಂಧ. ಈ ಸಂಬಂಧವು ನಮ್ಮಿಂದ ಅಪೇಕ್ಷಿಸುವಷ್ಟು ವಿಚಾರಗಳನ್ನು ಬೇರೆ ಯಾವ ಸಂಬಂಧಗಳು ಅಪೇಕ್ಷಿಸುವುದಿಲ್ಲ. ಇದರಲ್ಲಿ ಇದೇ ಸರಿ ಎಂಬ ಮಾನದಂಡಗಳು, ನೀತಿಗಳು ತುಂಬಾ ಇವೆ. ಆದರೆ ಆರೋಗ್ಯಕರ ಸಂಬಂಧವನ್ನು ಹೊಂದಲು ಕೆಲವೊಂದು ಮೂಲಭೂತ ಅಂಶಗಳನ್ನು ನಾವು ಕಡೆಗಣಿಸದೆ ಗಮನಹರಿಸಬೇಕು. ಈ ಅಂಶಗಳನ್ನು ನಿಮ್ಮ ಜೀವನದಲ್ಲಿ ಜಾರಿಗೆ ತರಲು ಪ್ರಯತ್ನಿಸಿ, ಖುಷಿಯಾಗಿ ಬಾಳಿ.

X
Desktop Bottom Promotion