For Quick Alerts
ALLOW NOTIFICATIONS  
For Daily Alerts

ಪ್ರೀತಿಯಲ್ಲಿ ಬೀಳದಂತೆ ತಡೆಯಲು ಐದು ಟಿಪ್ಸ್‌ಗಳು

By Hemanth P
|

ನೀವು ಯಾವುದೇ ವ್ಯಕ್ತಿಯೊಂದಿಗೆ ತುಂಬಾ ಗಾಢವಾಗಿ ಪ್ರೀತಿಗೆ ಬೀಳುವುದನ್ನು ತಪ್ಪಿಸಲು ನಿಮಗೆ ತುಂಬಾ ಕಠಿಣವಾಗಬಹುದು. ಆದರೆ ಇಲ್ಲಿರುವ ಟಿಪ್ಸ್ ಗಳು ನೀವು ಆ ವ್ಯಕ್ತಿಯೊಂದಿಗೆ ಪ್ರೀತಿಗೆ ಬೀಳುವುದನ್ನು ತಡೆಯುತ್ತದೆ. ಈ ಟಿಪ್ಸ್ ಗಳನ್ನು ಪಾಲಿಸುವ ಕೆಲವೊಂದು ವಾರಗಳಲ್ಲಿ ನಿಮ್ಮ ಯೋಚನೆ ಬದಲಾಗುತ್ತದೆ ಮತ್ತು ಆ ವ್ಯಕ್ತಿಯಿಂದ ನೀವು ಒಳ್ಳೆಯದಕ್ಕಾಗಿ ಬೇರೆಯಾಗಬಹುದು.

ಯಾರೊಂದಿಗಾದರೂ ಪ್ರೀತಿಗೆ ಬೀಳದಂತೆ ತಡೆಯಲು ಇಲ್ಲಿರುವ ಟಿಪ್ಸ್‌ಗಳು

1. ಬೇರೆಡೆ ಗಮನಹರಿಸಿ
ನಿಮ್ಮ ಮನಸ್ಸನ್ನು ಆ ವ್ಯಕ್ತಿ ನಿಯಂತ್ರಿಸುವಂತೆ ಮಾಡಬೇಡಿ. ಆ ವ್ಯಕ್ತಿಯ ಬಗ್ಗೆ ಚಿಂತಿಸದಿರುವುದು ಸ್ವಲ್ಪ ಕಠಿಣವಾಗಬಹುದು. ಆದರೂ ಇದು ಮಾಡಲು ಸಾಧ್ಯ. ಹೆಚ್ಚಿನ ಗಮನ ಬೇಕಾಗಿರುವ ಕೆಲವೊಂದು ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನೀವು ತುಂಬಾ ಏಕಾಂಗಿಯೆಂದು ಭಾವನೆಯಾದಾಗ ನಿಮ್ಮನ್ನು ಸಂತಸವಾಗಿಡಬಲ್ಲ ಬೇರೆ ಯಾವುದಾದರೂ ವಿಷಯದ ಬಗ್ಗೆ ಯೋಚಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಸ್ಟ್ ಫ್ರೆಂಡ್ ಜೊತೆ ಪ್ರೀತಿ ಮೂಡಿತೇ?

5 Tips to stop yourself from falling in love with someone

2. ತುಂಬಾ ಸ್ನೇಹಪರರಾಗಬೇಡಿ
ಆ ವ್ಯಕ್ತಿಯೊಂದಿಗೆ ದೀರ್ಘ ಮಾತುಕತೆಯಲ್ಲಿ ತೊಡಗಿಕೊಳ್ಳಬೇಡಿ. ಅತೀ ಪ್ರಾಮುಖ್ಯ ವಿಷಯವೆಂದರೆ ನೀವು ತಡರಾತ್ರಿಯ ಮೆಸೇಜ್ ಅಥವಾ ಕರೆಗಳನ್ನು ಮಾಡಿ ಪರಸ್ಪರರ ಜೀವನದ ತುಂಬಾ ಆತ್ಮೀಯ ಮಾಹಿತಿಗಳನ್ನು ವಿನಿಯೋಗಿಸದಿರಿ. ಇಂತಹ ಸಂದರ್ಭದಲ್ಲಿ ನೀವು ಆ ವ್ಯಕ್ತಿಯೊಂದಿಗೆ ತುಂಬಾ ಸ್ನೇಹಪರವಾಗಿ ಇರಬಾರದು. ಇದರಿಂದ ನೀವು ಮತ್ತಷ್ಟು ಪ್ರೀತಿಯಲ್ಲಿ ಬೀಳಲಿದ್ದೀರಿ ಮತ್ತು ಇದು ಒಳ್ಳೆಯದಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರೀತಿ ನಿಮ್ಮನ್ನು ಜೀವನ ಪರ್ಯಂತ ಕಾಡುವುದೇ?

3. ಕೆಟ್ಟದರ ಬಗ್ಗೆ ಗಮನಿಸಿ
ಪ್ರತಿಯೊಬ್ಬರಲ್ಲೂ ಏನಾದರೊಂದು ಕೆಟ್ಟದು ಇದ್ದೇ ಇರುತ್ತದೆ. ಪ್ರೀತಿಸುತ್ತಿರುವ ಯಾರಿಂದಾದರೂ ದೂರವಿರಲು ಒಳ್ಳೆಯ ಮಾರ್ಗವೆಂದರೆ ಅವರ ಕೆಟ್ಟದನ್ನು ಗಮನಿಸಬೇಕು. ನೀವು ಆ ಹುಡುಗ ಅಥವಾ ಹುಡುಗಿಯನ್ನು ಭೇಟಿಯಾದಾಗ ಅಥವಾ ಅವರ ಬಗ್ಗೆ ಚಿಂತಿಸಿದಾಗ ಅವರ ಕೆಟ್ಟದರ ಬಗ್ಗೆ ಅಥವಾ ಅವರು ನಿಮಗೆ ನೋವುಂಟು ಮಾಡಿರುವ ವಿಷಯದ ಬಗ್ಗೆ ಯೋಚಿಸಿ. ಆ ವ್ಯಕ್ತಿಯನ್ನು ಪ್ರೀತಿಸುವುದನ್ನು ಯಾಕೆ ನಿಲ್ಲಿಸಬೇಕು ಎನ್ನುವ ಬಗ್ಗೆ ಹಲವಾರು ಕಾರಣಗಳಿಗೆ ಇದು ಕೆಲಸ ಮಾಡುತ್ತದೆ.

4. ವ್ಯತ್ಯಾಸ ತಿಳಿದುಕೊಳ್ಳಿ
ಯಾರೊಂದಿಗಾದರೂ ಪ್ರೀತಿಗೆ ಬೀಳುವುದು ಮತ್ತು ಯಾರ ಕಡೆಗಾದರೂ ಆಕರ್ಷಿತರಾಗುವುದು ಅಥವಾ ಅವರ ಬಗ್ಗೆ ಆಸಕ್ತಿ ಮೂಡುವುದರಲ್ಲಿ ತುಂಬಾ ವ್ಯತ್ಯಾಸವಿದೆ. ಒಬ್ಬ ಹುಡುಗ ಅಥವಾ ಹುಡುಗಿ ತುಂಬಾ ಆಕರ್ಷಕ ಅಥವಾ ಅಮೋಘವೆಂದು ನಿಮಗೆ ಕಾಣಿಸಿದರೂ ಅವರನ್ನು ನೀವು ಪ್ರೀತಿಸುತ್ತಿದ್ದೀರೆಂದು ಅರ್ಥವಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

5. ಬೇರೆ ಯಾರ ಕಡೆಗಾದರೂ ಗಮನಹರಿಸಿ
ಕೆಲವೊಂದು ಒಬ್ಬರಿಂದ ದೂರವಾಗಲು ಸುಲಭವಾದ ವಿಧಾನವೆಂದರೆ ಮತ್ತೊಬ್ಬರಿಗೆ ಹತ್ತಿರವಾಗುವುದು. ನೀವು ಪ್ರೀತಿಸುವ ವ್ಯಕ್ತಿಯಿಂದ ದೂರವಾಗಲು ತುಂಬಾ ಕಷ್ಟವಾಗುತ್ತಿದ್ದರೆ ಆಗ ಬೇರೊಬ್ಬರ ಕಡೆ ನೀವು ಗಮನಹರಿಸಬೇಕಾಗುತ್ತದೆ.

English summary

5 Tips to stop yourself from falling in love with someone

If you’re having a hard time stopping yourself from falling more madly in love with this person, And within a couple of weeks of following these tips, you’d be strong enough to pull your thoughts together and walk away from them for good. Tips to stop yourself from falling in love with someone
Story first published: Saturday, March 15, 2014, 11:20 [IST]
X
Desktop Bottom Promotion