For Quick Alerts
ALLOW NOTIFICATIONS  
For Daily Alerts

ಗೆಳತಿಯ ಅಸೂಯೆ ಗುಣವನ್ನು ಪರೀಕ್ಷಿಸುವುದು ಹೇಗೆ?

By Arpitha Rao
|

ಬಹುಶಃ ಆಕೆಗೆ ನಿಮ್ಮನ್ನು ಕಳೆದುಕೊಳ್ಳಲು ಇಷ್ಟವಿರಲಿಕ್ಕಿಲ್ಲ, ಆದರೆ ಆಕೆ ನಿಮ್ಮೊಂದಿಗೆ ಆಕೆಯ ಅತಿಯಾದ ಪ್ರೀತಿಯನ್ನು ವಿಚಿತ್ರ ರೀತಿಯಲ್ಲಿ ವ್ಯಕ್ತಪಡಿಸುತ್ತಾಳೆ, ನಿಜವಾಗಿ ಹೇಳಬೇಕೆಂದರೆ ಅಸೂಯೆ ಎಂಬುದು ಒಂದು ರೀತಿಯ ಕೊಳಕು ಭಾವನೆ. ಅಸೂಯೆ ಎಂಬುದು ಭಯ, ಅಸಮಾಧಾನ, ಅಭದ್ರತೆ ಹೀಗೆ ಎಲ್ಲಾ ರೀತಿಯ ಋಣಾತ್ಮಕ ವಿಷಯಗಳನ್ನು ಆಕೆಯಲ್ಲಿ ಹುಟ್ಟುಹಾಕುತ್ತದೆ.

ಸಂಬಂಧಗಳಲ್ಲಿ ಬೇಕು ಮತ್ತು ನೀನೆ ಮುಖ್ಯ ಎಂಬ ಭಾವನೆ ಹೊಂದುವುದು ಉತ್ತಮ,ಆದರೆ ಆಕೆ,ನಿಮ್ಮ ನಂಬಿಕೆ ಎಂಬುದು ಕೂಡ ಅಷ್ಟೇ ಮುಖ್ಯ.ನಂಬಿಕೆಯನ್ನು ಕಳೆದುಕೊಂಡರೆ ತುಂಬಾ ಕಷ್ಟವಾಗಬಹುದು.ನಿಮ್ಮ ಸಂಬಂಧಗಳಲ್ಲಿ ಕೂಡ ಅಸೂಯೆ ಎಂಬುದು ಮನೆಮಾಡಿಬಿಟ್ಟಿದೆಯೇ? ಎಂಬುದನ್ನು ತಿಳಿಯಲು ನಾವಿಲ್ಲಿ ಐದು ಚಿಹ್ನೆಗಳನ್ನು ನೀಡಿದ್ದೇವೆ, ಓದಿ ನೋಡಿ.

ಸಂಬಂಧದಲ್ಲಿ ಅಸೂಯೆ ನಿವಾರಣೆಗೆ ಮಾರ್ಗಗಳು

1.ಇನ್ನೊಬ್ಬ ಮಹಿಳೆಯ ಹೆಸರನ್ನು ಹೇಳಲಾಗುತ್ತಿಲ್ಲ:-

1.ಇನ್ನೊಬ್ಬ ಮಹಿಳೆಯ ಹೆಸರನ್ನು ಹೇಳಲಾಗುತ್ತಿಲ್ಲ:-

ಆಫೀಸಿನ ಸಹೋದ್ಯೋಗಿ, ಬಾಸ್ ಅಥವಾ ನೀವು ಪ್ರತಿದಿನ ಹೋಗುವ ಕೆಫೆಯ ಹುಡುಗಿ ಹೀಗೆ ಯಾವ ಮಹಿಳೆಯ ಬಗ್ಗೆ ಕೂಡ, ಯಾವುದೇ ಸಂದರ್ಭದಲ್ಲಿ ಮನೆಯಲ್ಲಿ ಒಂದು ಮಾತು ಹೇಳುವಂತಿಲ್ಲ. ನಿಮಗೆ ಆಕೆಯ ಬಗ್ಗೆ ಯಾವುದೇ ಆಸಕ್ತಿ ಇಲ್ಲದಿದ್ದರೂ ಕೂಡ, ಆಕೆಯೊಂದಿಗೆ ಒಡನಾಡುವುದು ಅನಿವಾರ್ಯವಾಗಿರುತ್ತದೆ. ಹೀಗೆ ಮಾತನಾಡುವುದರಿಂದ ಸಮಸ್ಯೆ ಹುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿ ನೀವು ಅದರ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದೀರ! ಆಕೆಯಲ್ಲಿರುವ ಅಸೂಯೆಯೇ ಇದಕ್ಕೆ ಕಾರಣ ಎನ್ನಬಹುದು.

2.ಸಾಕಷ್ಟು ಪ್ರಶ್ನೆ ಕೇಳುತ್ತಾಳೆ(ಕೆಲವೊಮ್ಮೆ ಉತ್ತರ ಇಲ್ಲದ ಪ್ರಶ್ನೆ):-

2.ಸಾಕಷ್ಟು ಪ್ರಶ್ನೆ ಕೇಳುತ್ತಾಳೆ(ಕೆಲವೊಮ್ಮೆ ಉತ್ತರ ಇಲ್ಲದ ಪ್ರಶ್ನೆ):-

ಮಹಿಳೆಯರಿಗೆ ಕುತೂಹಲ ಎಂಬುದು ಹೆಚ್ಚು,ಹಾಗಾಗಿ ಅವರು ಪ್ರತಿದಿನ ಸಾಕಷ್ಟು ಹಾನಿಕಾರಕವಲ್ಲದ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.ಆದರೆ ಅಸೂಯೆ ಇರುವ ಮಹಿಳೆಗೆ ಈ ಎಲ್ಲಾ ಪ್ರಶ್ನೆಗಳಿಗೆ ನೀವು ಕೊಟ್ಟ ಉತ್ತರ ಸಮಂಜಸ ಎನ್ನಿಸುವುದೇ ಇಲ್ಲ.ಆಕೆ ನಿಮ್ಮಲ್ಲಿ ಆಗಾಗ ನಿಮಗೆ ಉತ್ತರ ಕೊಡಲಾಗದ ನಿಮ್ಮನ್ನು ಕೆಟ್ಟವ ಎಂದು ಸಾಬೀತು ಮಾಡುವಂತಹ ಪ್ರಶ್ನೆಯನ್ನು ಕೇಳಿಬಿಡುತ್ತಾಳೆ.ಇಲ್ಲಿ ಸಮಸ್ಯೆ ಎಂದರೆ ಸಣ್ಣ ಒಂದು ಪ್ರಶ್ನೆಯಿಂದಾಗಿ ನೀವು ಕೆಟ್ಟ ಹುಡುಗ ಎಂದು ಬಿಂಬಿಸುವ ಈ ರೀತಿಯ ಸಂಬಂಧ ಎಷ್ಟು ಸೂಕ್ತ ಎಂಬುದು,ಅಲ್ಲವೇ?.

3.ಸಂಬಂಧದ ಬಗ್ಗೆ ಆಕೆ ಅಭದ್ರತೆ ಹೊಂದಿರುತ್ತಾಳೆ:-

3.ಸಂಬಂಧದ ಬಗ್ಗೆ ಆಕೆ ಅಭದ್ರತೆ ಹೊಂದಿರುತ್ತಾಳೆ:-

ಆಕೆಯ ಅಭದ್ರತೆಯ ಭಾವನೆ ನಿಮ್ಮೊಂದಿಗಿರುವ ಇತರ ಸಂಬಂಧಿಕರ ಬಗ್ಗೆಯೂ ಅಸೂಯೆ ವ್ಯಕ್ತಪಡಿಸುವಂತೆ ಮಾಡಬಹುದು. ಇದರಿಂದಾಗಿ ನಾವು ಸರಿಯಾಗಿದ್ದೆವಾ? ನಮ್ಮ ಸಂಬಂಧ ಎಲ್ಲಿಗೆ ಹೋಗಿ ತಲುಪುತ್ತಿದೆ? ಎಂಬ ಭಾವನೆ ನಿಮ್ಮಿಬ್ಬರಲ್ಲೂ ಹುಟ್ಟಿಕೊಳ್ಳಬಹುದು.ನಿರಂತರ ಪ್ರಶ್ನೆ ಮತ್ತು ವಿಶ್ವಾಸ ಕಳೆದುಕೊಳ್ಳುವುದಕ್ಕಿಂತ ಸಂಬಂಧ ಹಾಳಾಗಲು ಇನ್ನೇನೂ ಬೇಕಿಲ್ಲ.

4.ಸೋಶಿಯಲ್ ಮೀಡಿಯಾ ಸೈಟ್ ಗಳನ್ನೂ ಆಕೆ ಗಮನಿಸುತ್ತಾಳೆ :-

4.ಸೋಶಿಯಲ್ ಮೀಡಿಯಾ ಸೈಟ್ ಗಳನ್ನೂ ಆಕೆ ಗಮನಿಸುತ್ತಾಳೆ :-

ದಿನನಿತ್ಯದ ಕಾಲ್ಸ್, ವಾಟ್ಸ್ ಆಪ್ ಸಂದೇಶಗಳು, ಸ್ಥಳದ ಅಪ್ಡೇಟ್ ಇವುಗಳನ್ನು ನೋಡುವುದು ಸಾಲವೆಂದು ನಿಮ್ಮ ಸೋಶಿಯಲ್ ಮೀಡಿಯ ಅಕೌಂಟ್ ಅನ್ನು ಕೂಡ ಆಕೆ ಫಾಲೋ ಮಾಡುತ್ತಾಳೆ, ಆಕೆ ನೀವು ಆನ್ಲೈನ್ ಇದ್ದರೆ ಅನುಮಾನ ವ್ಯಕ್ತಪಡಿಸುತ್ತಾಳೆ,ನೀವು ಏನನ್ನಾದರೂ ನ್ಯೂಸ್ ಫೀಡ್ ನಲ್ಲಿ ಹಾಕಿದರೆ ನಿಮ್ಮ ಭಾವನೆಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಾಳೆ. ಕೇವಲ ನಿಜ ಜೀವನದಲ್ಲಿ ಮಾತ್ರವಲ್ಲ ಫೇಸ್ಬುಕ್ ಇನ್ನಿತರ ಕಡೆಗಳಲ್ಲೂ ನಿಮ್ಮನ್ನು ಅನುಮಾನಿಸಲು ಪ್ರಾರಂಭಿಸಿ,ನಿಮ್ಮ ಪಾಸ್ ವರ್ಡ್ ತೆಗೆದುಕೊಂಡುಬಿಡುತ್ತಾಳೆ.ಹೌದು ಆಕೆಯದು ತೀವ್ರವಾದ ಅಸೂಯೆ!

5.ನೀವು ಇನ್ನೊಬ್ಬ ಮಹಿಳೆಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೀಯ ಎಂದು ಆರೋಪಿಸುತ್ತಾಳೆ :-

5.ನೀವು ಇನ್ನೊಬ್ಬ ಮಹಿಳೆಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೀಯ ಎಂದು ಆರೋಪಿಸುತ್ತಾಳೆ :-

ನೀವು ಬೇರೆ ಮಹಿಳೆಯೊಂದಿಗೆ ದಯೆ ಅಥವಾ ಶಿಷ್ಟಾಚಾರಯುತವಾಗಿ ಇದ್ದಾಗ ಕೂಡ ನಿಮ್ಮ ಅಸೂಯೆ ಹೊಂದಿದ ಗೆಳತಿ ನಿಮ್ಮನ್ನು ನೀವು ಫ್ಲರ್ಟ್ ಮಾಡುತ್ತಿದ್ದೀರಿ ಎಂದೇ ಆರೋಪಿಸುತ್ತಾಳೆ.ನೀವು ಬೇರೆ ಮಹಿಳೆಯ ಬಗ್ಗೆ ಪ್ರಸ್ತಾಪಿಸುವುದು ಹಾಗಿರಲಿ ಅವರು ಎದುರು ಸಿಕ್ಕಿದಾಗ ಕೂಡ ಮಾತನಾಡುವಂತಿಲ್ಲ.ನೀವು ಏನೇ ಮಾಡಿದರೂ ಅದನ್ನು ಇನ್ನೊಂದು ಅರ್ಥದಲ್ಲಿ ತೆಗೆದುಕೊಂಡು ಆರೋಪಿಸಲು ಪ್ರಾರಂಭಿಸಿಬಿಡುತ್ತಾರೆ.

English summary

5 Signs Your Girlfriend Has Extreme Jealousy Issues

Maybe she doesn’t want to lose you, but she displays her affection in all the wrong ways. After all, jealousy is an ugly emotion. It brings out all the negative thoughts in a person’s mind - fears, resentment and insecurities.
Story first published: Saturday, May 17, 2014, 15:10 [IST]
X
Desktop Bottom Promotion