For Quick Alerts
ALLOW NOTIFICATIONS  
For Daily Alerts

ಸಂಬಂಧವು ಕೊನೆಯ ಹಂತಕ್ಕೆ ಬಂದು ನಿಂತಿದೆ ಎಂದು ಸೂಚಿಸುವ 5 ಲಕ್ಷಣಗಳು

|

ಮದುವೆ ಅನ್ನೋದು ಸ್ವರ್ಗದಲ್ಲಿ ನಿರ್ಧಾರವಾಗಿರುತ್ತದೆ ಎನ್ನುವ ಮಾತಿದೆ. ಅದೇ ವಿಚ್ಛೇದನವೆನ್ನುವುದನ್ನು ಭೂಮಿ ಮೇಲೆಯೇ ನಿರ್ಧರಿತವಾಗುತ್ತದೆ! ಮದುವೆ ಎರಡು ಮನಸ್ಸು ಹಾಗೂ ದೇಹಗಳು ಒಂದಾಗುವ ಸಂಬಂಧ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಈ ಸಂಬಂಧವು ಹೆಚ್ಚಿನ ಕಾಲ ಬಾಳುವುದಿಲ್ಲ. ಈ ಏಳು ರೀತಿಯ ಹುಡುಗರನ್ನು ಹುಡುಗಿಯರು ತೆಗೆದುಹಾಕುವುದಿಲ್ಲ !

ಹೆಚ್ಚಿನ ಸಂದರ್ಭದಲ್ಲಿ ಗಂಡ ಹೆಂಡತಿಯರ ನಡುವಿನ ಸಂಬಂಧಗಳು ಹಾಳಾಗುವುದೇ ಒಬ್ಬರನ್ನೊಬ್ಬರು ಎಲ್ಲಾ ವಿಷಯಗಳಲ್ಲೂ ಆಕ್ಷೇಪ ಮಾಡುವುದರಿಂದ! ಯಾವಾಗ ನೀವು ಒಬ್ಬರನ್ನೊಬ್ಬರು ದೂಷಿಸುವುದನ್ನು ಬಿಡತ್ತೀರೋ ಅಂದೇ ನೀವು ಸಂಬಂಧಗಳನ್ನು ಅರಿತುಕೊಳ್ಳಲು ಸಾಧ್ಯ. ಯಾವುದೇ ವಿಷಯದ ಬಗ್ಗೆ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವುದರಿಂದ ಯಾವ ಸಮಸ್ಯೆಗಳಿಗೂ ಪರಿಹಾರ ದೊರೆಯಲು ಸಾಧ್ಯವಿಲ್ಲ. ಬನ್ನಿ ಇಂದು ನಾವು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುವ ಮುನ್ಸೂಚನೆಗಳೇನು ಎಂಬುದನ್ನು ಸೂಚಿಸುತ್ತಿದ್ದೇವೆ ಮುಂದೆ ಓದಿ

ಪರಸ್ಪರ ಗೌರವ ನೀಡದಿರುವುದು

ಪರಸ್ಪರ ಗೌರವ ನೀಡದಿರುವುದು

ಸಂಬಂಧದಲ್ಲಿ ಒಬ್ಬರನ್ನೊಬ್ಬರು ಗೌರವಿಸುವ ಪ್ರಕ್ರಿಯೆ ಅತ್ಯಂತ ಪ್ರಧಾನವಾದ ಅಂಶವಾಗಿರುತ್ತದೆ. ಒಂದು ವೇಳೆ ನೀವಿಬ್ಬರೂ ಈಗಾಗಲೇ ಪ್ರೇಮ ಸಂಬಂಧದಲ್ಲಿ ಮುಳುಗಿದ್ದರೆ, ಅಥವಾ ಕೇವಲ ಸ್ನೇಹದಲ್ಲಿದ್ದರೆ ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿದ್ದರೆ, ಆಗ ಅರ್ಥವಾಗುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಕಡೆಗಣಿಸಿರಬಹುದು, ಮುಜುಗರವನ್ನುಂಟು ಮಾಡಿರಬಹುದು, ಅವಮಾನಿಸಿರಬಹುದು ಅಥವಾ ಇನ್ನೂ ಯಾವುದೋ ದಾರಿಯಲ್ಲಿ ಗೋಳು ಹುಯ್ದು ಕೊಂಡಿರಬಹುದು. ಆದರೆ ಇದರ ಬಗ್ಗೆ ಅವರಿಗೆ ಪಶ್ಚಾತ್ತಾಪವೇ ಇಲ್ಲವೆಂದಾದಲ್ಲಿ ನಿಮ್ಮ ಸಂಬಂಧ ತುಂಬಾ ದಿನ ಮುಂದುವರೆಯುವುದಿಲ್ಲವೆಂದೆ ಅರ್ಥ. ಹೀಗೆ ನಿರಂತರವಾಗಿ ಅವರು ತಮ್ಮ ಎಲ್ಲೆಯನ್ನು ಮೀರುತ್ತಿದ್ದಲ್ಲಿ, ಅವರಿಗೆ ನಿಮ್ಮ ಬಗ್ಗೆ ಯಾವುದೇ ಗೌರವವಿಲ್ಲ ಎಂದೇ ಅರ್ಥ. ನಿಮ್ಮ ಮೇಲೆ ಗೌರವವಿಲ್ಲ ಎಂದರೆ ಬೇರೆ ಅಲ್ಲಾ, ನಿಮ್ಮ ಸಂಬಂಧದ ಮೇಲೆ ಗೌರವವಿಲ್ಲ ಎಂದರೆ ಬೇರೆ ಅಲ್ಲ. ಆ ಸಂಬಂಧ ಸತ್ತು ಹೋಗಿದೆ ಎಂದು ಭಾವಿಸಬೇಕಾಗುತ್ತದೆ.

ಪದೇ ಪದೇ ಸಿಟ್ಟು ಮಾಡಿಕೊಳ್ಳುವುದು

ಪದೇ ಪದೇ ಸಿಟ್ಟು ಮಾಡಿಕೊಳ್ಳುವುದು

ದಾಂಪತ್ಯದಲ್ಲಿ ವಂಚನೆಗಳಾದರೆ ಅದು ಸರಿಹೋಗಲು ಸ್ಪಲ್ವ ಸಮಯ ಬೇಕಾಗುತ್ತದೆ. ಆದರೆ ಯಾವುದೇ ವಿಷಯದ ಬಗ್ಗೆ ತಾಳ್ಮೆಗೆಟ್ಟು, ಸಿಟ್ಟಾಗುವುದು ಅಥವಾ ವಸ್ತುಗಳನ್ನು ಬಿಸಾಡುವುದು ಇಂತಹ ತಪ್ಪುಗಳನ್ನು ಮಾಡಬೇಡಿ. ಪ್ರತಿಯೊಂದು ಹಂತದಲ್ಲಿಯೂ ಸಂಬಂಧಗಳು ಸರಿಯಾಗುವಾಗ ಹಚ್ಚು ಸಮಯ ಬೇಕಾಗುತ್ತದೆ. ಆದರೆ ನಿಮ್ಮ ಆತ್ಮವಿಶ್ವಾಸ, ನಿಮ್ಮ ಪ್ರಯತ್ನ, ಹಾಗೂ ನೀವು ಸಂಬಂಧವನ್ನು ಸರಿಮಾಡಿಕೊಳ್ಳಲು ಮೀಸಲಿಟ್ಟ ಸಮಯ ನಿಮ್ಮ ಪ್ರೀತಿಯನ್ನು ನಿಮಗೆ ಹಿಂತಿರುಗಿಸಬಹುದು!

ನಿರಂತರವಾಗಿ ಸಾಗುವ ವಾದ, ಪ್ರತಿವಾದಗಳು

ನಿರಂತರವಾಗಿ ಸಾಗುವ ವಾದ, ಪ್ರತಿವಾದಗಳು

ಪ್ರತಿಯೊಂದು ಸಂಬಂಧದಲ್ಲಿ ಏರಿಳಿತಗಳು ಇರುವುದು ಸಹಜ. ವಾದ ಮತ್ತು ಪ್ರತಿ ವಾದಗಳು ಇಲ್ಲದಿದ್ದಲ್ಲಿ ಸಂಬಂಧದಲ್ಲಿ ಸ್ವಾರಸ್ಯವೇ ಇರುವುದಿಲ್ಲ. ಎರಡು ಭಿನ್ನ ವಾತಾವರಣದಲ್ಲಿ ಬೆಳೆದ ಗಂಡು- ಹೆಣ್ಣುಗಳು ಒಟ್ಟಿಗೆ ಜೀವಿಸುವಾಗ ಇಂತಹ ಸನ್ನಿವೇಶಗಳು ಉದ್ಭವಿಸುವುದು ಸಹಜ. ಈ ವಾದ ಪ್ರತಿವಾದಗಳು ಯಾವಾಗ ತಮ್ಮ ಗಡಿಯನ್ನು ದಾಟುತ್ತವೆಯೋ, ಆಗ ನೊಂದ ಮನಸ್ಸೊಂದು ಇದರಿಂದ ನೋವನ್ನು ಅನುಭವಿಸುತ್ತದೆ. ಆಗ ಸಹಜವಾಗಿ ಆ ಸಂಬಂಧ ತನ್ನ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ನಿಲ್ಲುತ್ತದೆ.

ಇಬ್ಬರೂ ಜೊತೆಯಾಗಿರಲು ಸಮಯಾವಾಕಾಶದ ಕೊರತೆ

ಇಬ್ಬರೂ ಜೊತೆಯಾಗಿರಲು ಸಮಯಾವಾಕಾಶದ ಕೊರತೆ

ಒಂದು ವೇಳೆ ಸಂಬಂಧಕ್ಕೆ ನೀವು ಕಡಿಮೆ ಆಧ್ಯತೆಯನ್ನು ನೀಡಿದ್ದಲ್ಲಿ, ಭಗವಂತ ಬಂದರು ನಿಮ್ಮ ಸಂಬಂಧವನ್ನು ಮೇಲಕ್ಕೆ ತರಲಾರ. ಪವಾಡವೊಂದೆ ನಡೆಯಬೇಕು ಅಷ್ಟೇ!. ಸಂಬಂಧವು ಬದ್ಧತೆಯನ್ನು ಕೇಳುತ್ತದೆ. ನೀವು ನಿಮ್ಮ ಸಂಗಾತಿಗೆ ಮತ್ತು ಸಂಬಂಧಕ್ಕೆ ನೀಡುವ ಬೆಲೆಯನ್ನು ಪ್ರಶ್ನಿಸುತ್ತದೆ. ಒಬ್ಬರ ಮೇಲೊಬ್ಬರು ನಿಗಾವಹಿಸಬೇಕು, ಒಬ್ಬರು ಮತ್ತೊಬ್ಬರ ಭಾವನೆಗಳಿಗೆ ಮಿಡಿಯಬೇಕು, ಇದಕ್ಕೆ ಅಗತ್ಯವಾದ ಸಮಯವನ್ನು ಪರಸ್ಪರರು ನೀಡಬೇಕು. ಆಗಲೇ ಸಂಬಂಧ ಗಟ್ಟಿಯಾಗಿರುವುದು. ಈ ಸಮಯವನ್ನು ನೀವು ನೀಡದಿದ್ದಲ್ಲಿ, ನಿಮ್ಮ ಸಂಬಂಧ ಡೆಡ್-ಎಂಡ್‍ಗೆ ಬಂದು ನಿಂತಿದೆ ಎಂದರ್ಥ.

ಆಸಕ್ತಿಯ ಕೊರತೆ

ಆಸಕ್ತಿಯ ಕೊರತೆ

ನಿಮ್ಮ ಸಂಗಾತಿಯ ಬಗ್ಗೆ ನೀವು ಗಮನ ಹರಿಸುತ್ತಿಲ್ಲವೇ?, ನೀವಿಬ್ಬರು ಪರಸ್ಪರ ಕುಳಿತು ಮಾತನಾಡಿ ಅಥವಾ ವಿಚಾರ ವಿನಿಮಯ ಮಾಡಿಕೊಂಡು ಎಷ್ಟು ದಿನವಾಯಿತು. ಆಲೋಚಿಸುತ್ತಿದ್ದೀರಾ? ನೀವು ನಿಮ್ಮ ಸಂಬಂಧದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೀರಿ ಎಂಬುದಕ್ಕೆ ಈ ಪ್ರಶ್ನೆಗಳನ್ನು ಕೇಳಿದಾಗಲೇ ನಿಮಗೆ ಅರಿವಾಗುತ್ತದೆ. ಆಸಕ್ತಿಯು ಸಂಬಂಧದ ಜೀವ, ಅದೇ ಇಲ್ಲವಾದರೆ ಸಂಬಂಧ ಎಲ್ಲಿ? ಹಾಗಾಗಿ ಯಾವಾಗ ನೀವಿಬ್ಬರೂ ಪರಸ್ಪರ ಆಸಕ್ತಿಯನ್ನು ಕಳೆದುಕೊಳ್ಳುತ್ತೀರೋ, ಆಗಲೇ ನಿಮ್ಮ ಸಂಬಂಧ ಡೆಡ್ ಎಂಡ್‍ಗೆ ಬಂದಿದೆ ಎಂದು ಭಾವಿಸಿ.

English summary

5 Signs Of Dead-end Relationship

It is being said that it is easy to make the relations, but difficult to manage them. And, in today's time, relationship, especially long-term relationship are not easy-going. Long-term relationship demands constant efforts and adjustment from both partners for the quality relation.
X
Desktop Bottom Promotion