For Quick Alerts
ALLOW NOTIFICATIONS  
For Daily Alerts

ಸುಖಿ ದಂಪತಿಗಳು ಯಾವುದೇ ಕಾರಣಕ್ಕು ಮಾಡದಿರುವ 4 ಕೆಲಸಗಳು

By Super
|

ದಾಂಪತ್ಯವೆನ್ನುವುದು ಸಾಧಾರಣವಾದ ವಿಷಯವಲ್ಲ. ದಾಂಪತ್ಯ ಜೀವನವು ಒಂದೇ, ಒಲಂಪಿಕ್ ಜ್ಯೋತಿಯನ್ನು ಹಿಡಿದು ದೇಶವನ್ನು ಪ್ರತಿನಿಧಿಸುವುದು ಒಂದೇ. ಏಕೆಂದರೆ ಇವೆರಡಕ್ಕೂ ಬದ್ಧತೆ, ಕಠಿಣ ಪರಿಶ್ರಮ ಮತ್ತು ಭಾವನಾತ್ಮಕ ಸದೃಢತೆ ಬೇಕಾಗುತ್ತದೆ. ಏಕೆಂದರೆ ಆಗಲೇ ಪ್ರೀತಿ ಎಂಬ ಜ್ಯೋತಿಯನ್ನು ಸದಾ ಬೆಳಗಲು ಸಾಧ್ಯವಾಗುತ್ತದೆ. ಆದರೂ ಸಹ ಪ್ರೀತಿ ಎನ್ನುವುದು ನಮ್ಮ ಶಕ್ತಿಯನ್ನು ಕುಂದಿಸುವಂತಹ ಅಥವಾ ನಮ್ಮನ್ನು ಅಣು ಅಣುವಾಗಿ ಹಿಂಡಿ ಹಾಕುವ ವಿಷಯವಲ್ಲ.

ಸುಖಿ ದಂಪತಿಗಳು ತಮ್ಮ ಜ್ಯೋತಿಯನ್ನು ಸದಾ ಉರಿಯುವಂತೆ ಹಿಡಿಯಲು ಪ್ರತಿನಿತ್ಯವು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಯಾವುದೇ ತರಹದ ಜಿಮ್ನಾಸ್ಟಿಕ್ ಮಾಡುವುದಿಲ್ಲ. ಇಲ್ಲಿ ನಾವು ಪ್ರೀತಿಯಲ್ಲಿ ಸುವರ್ಣ ಪದಕವನ್ನು ಗಳಿಸಿದ ದಂಪತಿಗಳು ತಮ್ಮ ಪ್ರೀತಿಯಲ್ಲಿ ಎಂದೆಂದಿಗು ಮಾಡದ ನಾಲ್ಕು ತಪ್ಪುಗಳನ್ನು ಇಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ.

4 Things Happy Couples Don’t Do No Matter What Happens

ಯಾವಾಗಲು ಅಂಕಗಳಿಸಿ
ಕೆಲವರು ಯಾವಾಗಲು ಇತರರು ಏನು ಮಾಡುತ್ತಿರುತ್ತಾರೆ ಅಥವಾ ಇಲ್ಲ ಎಂಬುದರ ಪಟ್ಟಿಯನ್ನೆ ಇಟ್ಟಿರುತ್ತಾರೆ. ಜನ ಹೀಗೆಕೆ ಮಾಡುತ್ತಾರೆ ಎಂದು ವಿವರಿಸಿ ಹೇಳ ಬೇಕಿಲ್ಲ. ಅವರಿಗೆ ತಮ್ಮ ಕೆಲಸವು ಅಧಿಕ ಹೊರೆಯಾಗಿ ಪರಿಣಮಿಸಿದೆ ಎಂದರ್ಥ. ಅದೂ ನಿಜ ಸಂಬಂಧದಲ್ಲಿ ಒಬ್ಬ ವ್ಯಕ್ತಿ ಶೇ. 10% ರಷ್ಟು ಕೆಲಸ ಮಾಡುತ್ತಾನೋ, ಅಥವಾ 110% ರಷ್ಟು ಕೆಲಸ ಮಾಡುತ್ತಾನೋ, ಅದು ಮುಖ್ಯವಲ್ಲ. ನೀವು ಎಷ್ಟು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತೀದ್ದೀರಿ ಎಂಬುದು ಮುಖ್ಯವಾಗುತ್ತದೆ.
ಒಬ್ಬರು ಇನ್ನೊಬ್ಬರ ನೆರವಿಗೆ ಕೈ ಚಾಚುವುದು ಸಮಾಜದ ನೀತಿ. ಆದರೆ ಸಂಬಂಧದಲ್ಲಿ ಒಬ್ಬರ ಕೆಲಸವನ್ನು ತನ್ನದು ಎಂದು ಭಾವಿಸಿ ನಿಭಾಯಿಸುವುದು ಮುಖ್ಯ. ಆಗಲೇ ದಾಂಪತ್ಯದಲ್ಲಿ ಜೊತೆಯಾಟದ ರನ್‍ಗತಿ ಹೆಚ್ಚಾಗುವುದು. ನೀನು ನನಗೇನು ಮಾಡಿದೆ?. ನಾನು ನಿನಗೆ ಎಷ್ಟೇಲ್ಲ ಕೆಲಸ ಮಾಡಿದ್ದೇನೆ? ಎಂಬ ಮಾತುಗಳು ಇನ್ನೊಬ್ಬರ ಮನಸ್ಸನ್ನು ನೋಯಿಸುತ್ತದೆ. ಇಂತಹ ಧೋರಣೆಗಳಿಗಿಂತ ನಾನಿದ್ದೀನಲ್ಲ, ಚಿಂತೆ ಬಿಡು ಆ ಕೆಲಸ ನಾನು ನೋಡಿಕೊಳ್ಳುತ್ತೇನೆ ಎಂಬ ಭಾವನೆಯು ನಿಮ್ಮಿಬ್ಬರ ಮಧ್ಯೆ ಅನುಬಂಧವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನಿಮ್ಮ ಜೀವನದ ಬೇಕು, ಬೇಡ ಮತ್ತು ಕನಸುಗಳ ಕುರಿತಾಗಿ ನಿಮ್ಮದೇ ಆದ ಯೋಜನೆಗಳನ್ನು ಕುಳಿತು ಚರ್ಚಿಸಿ, ಜಾರಿಗೆ ತನ್ನಿ. ಆಗ ನೋಡಿ ದಾಂಪತ್ಯದ ಓಟದಲ್ಲಿ ಚಿನ್ನದ ಪದಕ ನಿಮಗೆ ಬರುವುದು ನಿಶ್ಚಿತ.

ನಿಮ್ಮಲ್ಲಿ ಪರಸ್ಪರ ಕೃತಙ್ಞತಾ ಮನೋಭಾವನೆ ಇರಲಿ
ಚಿನ್ನದ ಪದಕ ಅಥವಾ ಇತರೆ ಪದಕಗಳನ್ನು ಗೆದ್ದ ಇಲ್ಲವೆ ಗೆಲ್ಲದ ದಂಪತಿಗಳು ಮರೆಯುವ ಒಂದು ವಿಚಾರವೆಂದರೆ ಅದು ಒಂದೇ. ತಮ್ಮ ದಾಂಪತ್ಯದ ಜ್ಯೋತಿ ಬೆಳಗಲು ಅತ್ಯಾವಶ್ಯಕವಾಗಿರುವ ಎಣ್ಣೆಯ ಪ್ರಮಾಣ ಎಷ್ಟೆಂಬುದು. ಏಕೆಂದರೆ ಜ್ಯೋತಿ ಆರಿ ಹೋದಾಗ ಇವರಿಬ್ಬರು ಪಟ್ಟ ಶ್ರಮ ನಿರರ್ಥಕವಾಗುತ್ತದೆ. ಅವರ ಶ್ರಮವು ಯಾರ ಕಣ್ಣಿಗು ಕಾಣುವುದಿಲ್ಲ. ಮತ್ತು ಅವರನ್ನು ಯಾರೂ ಪ್ರಶಂಸಿಸುವುದಿಲ್ಲ. ಆಗ ಇವರಿಬ್ಬರಲ್ಲಿ ಒಬ್ಬರು ತಮ್ಮ ಕಾರ್ಯಸಾಧನೆಗಾಗಿ ಮತ್ತು ಪರಿಶ್ರಮಕ್ಕಾಗಿ ಏಕೆ ಕೃತಙ್ಞತೆ ತೋರುತ್ತಿಲ್ಲ ಎಂದು ಪ್ರಶ್ನಿಸಲು ಆರಂಭಿಸುತ್ತಾರೆ ಮತ್ತು ಅಂತಹ ಸಂಬಂಧದ ಕುರಿತಾಗಿ ಅಸಂತೃಪ್ತಿಯನ್ನು ತೋರುತ್ತಾರೆ.
ಆದರೆ ಚಿನ್ನದ ಪದಕ ಪಡೆದ ದಂಪತಿಗಳು ಹೀಗೆಲ್ಲ ತಮ್ಮ ಸಂಬಂಧದಲ್ಲಿ ಹೆಚ್ಚು ಕಡಿಮೆ ಮಾಡಿಕೊಳ್ಳುವುದಿಲ್ಲ. ಅವರಲ್ಲಿ ಪರಸ್ಪರ ಕೊಡು-ತೆಗೆದುಕೊ ಭಾವನೆ ಮಾಡಿರುತ್ತದೆ. ಅವರು ಒಬ್ಬರ ಕುರಿತಾಗಿ ಮತ್ತೊಬ್ಬರು ಕೃತಙ್ಞತೆಯ ಭಾವನೆಯನ್ನು ತೋರುತ್ತಿರುತ್ತಾರೆ. ಇದರಿಂದ ಅವರ ನಡುವೆ ಪ್ರೇಮ, ಅನುರಾಗ ಮತ್ತು ಅನುಬಂಧ ಹೆಚ್ಚಾಗುತ್ತ ಹೋಗುತ್ತದೆ. ವಿರಸ ಅವರ ಪಕ್ಕಕ್ಕೂ ಸಹ ಸುಳಿಯುವುದಿಲ್ಲ.

ನಿಮ್ಮ ಸಮಯವನ್ನು ಒಟ್ಟಿಗೆ ಕಳೆಯಿರಿ
ಪ್ರೀತಿಯ ಮೊದಲ ಮೆಟ್ಟಿಲಿನಲ್ಲಿ ಸಂಗಾತಿಯ ಜೊತೆಗೆ ಸದಾ ಸಮಯ ಕಳೆಯಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ಪರಿಸ್ಥಿತಿಯು ಮುಂದೆ ವಿಕೋಪಕ್ಕೆ ಹೋದಾಗ ಇಬ್ಬರೂ ಅಷ್ಟೇ ಸಿಡುಕಿನಿಂದ ದೂರವಾಗಲು ಬಯಸುತ್ತಾರೆ. ಏಕೆ ಹೀಗೆ ಎಂದು ಕಾರಣ ಹುಡುಕಿದರೆ ಆಗ ನಮಗೆ ತಿಳಿಯುತ್ತದೆ. ಅತಿಯಾಗಿ ಒಡನಾಡುವುದರಿಂದ ಮೂರು ಸಮಸ್ಯೆಗಳು ತಲೆದೋರುತ್ತವೆ. ಮೊದಲಿಗೆ ಅತಿ ಹೆಚ್ಚು ಒಡನಾಟವು ಯಾರು ಹೆಚ್ಚಿಗೆ ಏನು ಮಾಡಿದರು ಎಂದು ಗಮನ ಹರಿಸುವ ಮನೋಭಾವ ಬೆಳೆದು ಬಿಡುತ್ತದೆ.
ನಂತರ ಹೊಗಳಿಕೆಯ ಕೊರತೆ ಕಂಡು ಬರುತ್ತದೆ ಮತ್ತು ಮೂರು ಇತರರ ಕುರಿತಾಗಿ " ಇತರೆ" ಮನೋಭಾವನೆ ಬೆಳೆದುಬಿಡುತ್ತದೆ. ಆದರೆ ಸುಖಿ ದಂಪತಿಗಳು ಹೀಗೆ ಮಾಡುವುದಿಲ್ಲ. ಅವರು ತಮ್ಮ ಏಕಾಂತವನ್ನು ಸಂತೋಷವಾಗಿ ಕಳೆಯುತ್ತಾರೆ. ಅವರು ತಮ್ಮ ಕೆಲಸಗಳನ್ನು ಸ್ವತಂತ್ರವಾಗಿ ಮಾಡುತ್ತಾರೆ ಮತ್ತು ತಮ್ಮ ದಿನವನ್ನು ವಿಭಿನ್ನವಾಗಿ ಕಳೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ ಅವರು ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಚಿನ್ನದ ಪದಕವನ್ನು ಪಡೆದ ದಂಪತಿಗಳು ತಮ್ಮ ದಾಂಪತ್ಯದಲ್ಲಿ ಚಿಕ್ಕ ಮಟ್ಟದ ಸ್ವಾತಂತ್ರ್ಯವು ದೊಡ್ಡ ಮಟ್ಟದ ಗುರಿಯತ್ತ ನಮ್ಮನ್ನು ಮುನ್ನಡೆಸುತ್ತದೆ ಎಂದು ತಿಳಿದಿರುತ್ತಾರೆ.

English summary

4 Things Happy Couples Don’t Do No Matter What Happens

Relationships aren’t easy. At times, being someone’s other half can feel like carrying the Olympic torch. It takes commitment, hard work and emotional stamina to keep the flame of love alive.
X
Desktop Bottom Promotion