For Quick Alerts
ALLOW NOTIFICATIONS  
For Daily Alerts

ಅವಿವಾಹಿತರಾಗಿರಲು ಬಯಸುವವರು ನೀಡುವ 20 ಕಾರಣಗಳು

By Super
|

ಸಕಲ ಜೀವಿಗಳಲ್ಲಿ ಗಂಡು ಹೆಣ್ಣಿನ ಜಾತಿಯನ್ನು ಸೃಷ್ಟಿಸಿ ಸಂತತಿ ಮುಂದುವರೆಯುವಂತೆ ಮಾಡಿರುವುದು ನಿಸರ್ಗ ನಿಯಮ. ಸಂಘಜೀವಿಯಾದ ಮನುಷ್ಯರಲ್ಲಿ ಸಮಾಜ ವ್ಯವಸ್ಥೆ ಬಂದ ಬಳಿಕ ಗಂಡಿಗೊಂದು ಹೆಣ್ಣು ಎಂಬ ನಿಯಮ ರೂಪಿಸಿ ವಿವಾಹದ ಮೂಲಕ ಈ ಸಂಬಂಧವನ್ನು ಗಟ್ಟಿಗೊಳಿಸುವುದು ಪುರಾಣಕಾಲದಿಂದ ನಡೆದುಬಂದ ಹಾಗೂ ಪ್ರಮಾಣಿತವಾದ ಆಚಾರ. ಆದರೆ ಇಂದು ನಾಗರಿಕತೆಯ ಸೌಲಭ್ಯಗಳ ಗುಲಾಮರಾಗಿರುವ ನಮ್ಮಲ್ಲಿ ಹಳೆಯ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಅನುಸರಿಸುವ ವ್ಯವಧಾನ ಕಡಿಮೆಯಾಗುತ್ತಿದೆ.

ಅಷ್ಟೇ ಏಕೆ, ನಿಸರ್ಗನಿಯಮಗಳ ವಿರುದ್ಧವೂ ನಡೆಯುತ್ತಿದ್ದೇವೆ. ಉದಾಹರಣೆಗೆ ರಾತ್ರಿ ನಿದ್ದೆಯ ಸಮಯ ಎಂದು ನಿಸರ್ಗ ನುಡಿದರೆ ನಾವು ರಾತ್ರಿ ಎಚ್ಚರಾಗಿದ್ದು ತಡಹಲಿನವರೆಗೆ ಮಲಗಿ ನಿಸರ್ಗ ನಿಯಮ ಮುರಿಯುತ್ತಿದ್ದೇವೆ. ಹಲವರು ಪ್ರಾಪ್ತವಯಸ್ಕರಾದರೂ ಮದುವೆಯಾಗದೇ ಇರುವುದೂ ನಿಸರ್ಗ ನಿಯಮದ ಉಲ್ಲಂಘನೆಯಾಗಿದೆ. ಇದರರ್ಥ ಅವರು ಬ್ರಹ್ಮಚರ್ಯ ಪಾಲಿಸುತ್ತಿದ್ದಾರೆಂದಲ್ಲ, ಆಧುನಿಕ ಜೀವನ ನಮಗೆ ನೀಡಿರುವ ಸುಖಗಳ ಮಜಲುಗಳನ್ನು ಹತ್ತೂ ದಿಕ್ಕಿನಿಂದ ಆಸ್ವಾದಿಸುವುದೇ ಇವರ ಪ್ರಮುಖ ಗುರಿಯಾಗಿರುತ್ತದೆ.

ಏಕಪ್ಪಾ ಮದುವೆಯಾಗುವುದಿಲ್ಲ ಎಂಬ ಮಾತಿಗೆ ಇವರ ಹತ್ತಿರ ಸಿದ್ಧ ಉತ್ತರಗಳ ಪಟ್ಟಿಯೇ ಇರುತ್ತದೆ. ಸಿಗರೇಟು ಸೇದುವವರು ತಮ್ಮ ವ್ಯಾಧಿಗೆ ಯಾವ ಸಬೂಬು ನೀಡುತ್ತಾರೋ ಹಾಗೇ ಇವರು ತಾವು ಮದುವೆಯಾಗದಿರುವ ಬಗ್ಗೆ ಹಲವು ರೋಚಕ ನೆವಗಳನ್ನು ನೀಡುತ್ತಾರೆ. ಒಬ್ಬಂಟಿತನ ಅಭ್ಯಾಸವಾಗಿಬಿಟ್ಟಿದೆ, ಸಂಬಂಧಗಳನ್ನು ನಿಭಾಯಿಸುವಲ್ಲಿ ವಿಫಲರಾಗುತ್ತೇವೆ, ಯಾವುದೇ ಬಂಧನದಲ್ಲಿ ಇರವು ಬಯಸುವುದಿಲ್ಲ ಮೊದಲಾದವು ಕೆಲವು ಸಾಮಾನ್ಯ ನೆಪಗಳು.

ಸಮಾಜದಲ್ಲಿ ಮದುವೆಯಾಗದೇ ಉಳಿದವರಲ್ಲಿ ಜನಸಾಮಾನ್ಯರೊಂದಿಗೆ ಬುದ್ಧಿಜೀವಿಗಳೂ ಖ್ಯಾತನಾಮರೂ ಇದ್ದಾರೆ. ಈ ಬಗ್ಗೆ ಅವರು ನೀಡುವ ಸಬೂಬು ಅಥವಾ ಸಮರ್ಥನೆಗಳಲ್ಲಿ ಪ್ರಮುಖವಾಗಿರುವ ಇಪ್ಪತ್ತನ್ನು ಇಲ್ಲಿ ವಿವರಿಸಲಾಗಿದೆ.

ಇಂತಹ 13 ಬಗೆಯ ಪ್ರೇಯಸಿಯರಿಂದ ದೂರವುಳಿದರೆ ಒಳಿತು!

ಕೆಲವೊಮ್ಮೆ ವಿವಾಹ ಸಫಲವಾಗುವುದಿಲ್ಲ

ಕೆಲವೊಮ್ಮೆ ವಿವಾಹ ಸಫಲವಾಗುವುದಿಲ್ಲ

ಮದುವೆಯಾದ ಎಲ್ಲರೂ ಸುಖವಾಗಿದ್ದಾರೇನು? ಪ್ರತಿಯೊಂದು ಜೋಡಿಯನ್ನು ನೋಡಿ, ಜಗಳ, ಕಲಹ, ಮೊದಲಾದವು ಪ್ರತಿದಿನ ನಡೆಯುತ್ತಲೇ ಇರುತ್ತದೆ. ಎಷ್ಟೋ ಜೋಡಿಗಳು ವಿಫಲರಾಗಿ ಬೇರೆಯಾಗಿದ್ದಾರೆ. ನಮ್ಮ ಮದುವೆಯೂ ಸಫಲವಾಗದಿದ್ದರೆ?

ಮದುವೆಯಿಂದ ಒತ್ತಡ ಹೆಚ್ಚುತ್ತದೆ

ಮದುವೆಯಿಂದ ಒತ್ತಡ ಹೆಚ್ಚುತ್ತದೆ

ಈಗ ನಾನು ಅತ್ಯಂತ ನಿರಾಳವಾಗಿದ್ದೇನೆ. ಒಂದು ಬಾರಿ ಮದುವೆಯ ಬಾವಿಗೆ ಬಿದ್ದೆನೋ, ಮನಃಶಾಂತಿಯೆಲ್ಲಾ ಕದಡಿ ಹೋಗುತ್ತದೆ, ಒತ್ತಡ ಹೆಚ್ಚುತ್ತದೆ. ಈಗ ಇರುವ ನೆಮ್ಮದಿ ಮತ್ತು ಸುಖವನ್ನು ಮದುವೆಯಾಗಿ ಕಳೆದುಕೊಳ್ಳಲು ನಾನು ತಯಾರಿಲ್ಲ.

ಮದುವೆಯಾದರೆ ಮನಃಸ್ವೇಚ್ಛೆ ಇರುವುದಿಲ್ಲ

ಮದುವೆಯಾದರೆ ಮನಃಸ್ವೇಚ್ಛೆ ಇರುವುದಿಲ್ಲ

ಈಗ ನಾನು ನನ್ನಿಷ್ಟ ಬಂದಂತೆ ನಡೆಯಬಹುದು. ಯಾರೂ ಕೇಳುವವರಿಲ್ಲ. ಮದುವೆಯಾದರೆ ಒಂದು ಕಡ್ಡಿ ಎತ್ತಿಟ್ಟರೂ ಅದರ ಲೆಕ್ಕಾಚಾರ ಒಪ್ಪಿಸಬೇಕು, ಇದಕ್ಕೆ ನಾನು ತಯಾರಿಲ್ಲ.

ಮದುವೆಯಾದ ಬಳಿಕ ಸಂಗಾತಿಗೇ ಪ್ರಾಮುಖ್ಯತೆ ನೀಡಬೇಕಾಗುತ್ತದೆ

ಮದುವೆಯಾದ ಬಳಿಕ ಸಂಗಾತಿಗೇ ಪ್ರಾಮುಖ್ಯತೆ ನೀಡಬೇಕಾಗುತ್ತದೆ

ಈಗ ನೋಡಿ ನನಗೊಂದು ಸ್ಥಾನ ಇದೆ. ಮದುವೆಯ ಬಳಿಕ ಆ ಸ್ಥಾನವನ್ನು ನಮ್ಮ ಸಂಗಾತಿ ಆಕ್ರಮಿಸುವುದರಿಂದ ಇಂಥವರ ಗಂಡ ಅಥವಾ ಇಂತಹವರ ಹೆಂಡತಿ ಎಂದು ಹೇಳಿಕೊಳ್ಳಲು ನನಗೆ ಇಷ್ಟವಿಲ್ಲ.

ಮೂಗುದಾರ ಹಾಕಿದ ಅನುಭವ

ಮೂಗುದಾರ ಹಾಕಿದ ಅನುಭವ

ತುಂಟತನದಿಂದ ಗುರುಗುಟ್ಟುತ್ತಿದ್ದ ಹೋರಿಗೆ ಮೂಗುದಾರ ಹಾಕಿದ ಹಾಗೇ ಮದುವೆಯಾದ ಕೂಡಲೇ ಎಲ್ಲಾ ಸ್ವಚ್ಛಂದವಾದ ಚಟುವಟಿಕೆಗಳಿಗೆ ತಡೆ ಬೀಳುತ್ತದೆ. ಇದಕ್ಕಿಂತ ಮದುವೆಯಾಗದಿರುವುದೇ ಮೇಲು.

ಓರ್ವ ವ್ಯಕ್ತಿಗೆ ಜೀವಮಾನವಿಡೀ ವಿಧೇಯನಾಗಿರಬೇಕು

ಓರ್ವ ವ್ಯಕ್ತಿಗೆ ಜೀವಮಾನವಿಡೀ ವಿಧೇಯನಾಗಿರಬೇಕು

ಒಮ್ಮೆ ಮದುವೆಯಾದರೆ ಸಾಕು ಸಂಗಾತಿಗೇ ವಿಧೇಯನಾಗಿರಬೇಕೆಂದು ಸಮಾಜ ಬಯಸುತ್ತದೆ. ನನಗದೆಲ್ಲಾ ಸರಿ ಬರುವುದಿಲ್ಲ.

ಜೀವನದಲ್ಲಿ ಸಿಗುವ ಎಲ್ಲಾ ಸುಖಗಳನ್ನು ಅನುಭವಿಸಲು ಸಾಧ್ಯವಿಲ್ಲ

ಜೀವನದಲ್ಲಿ ಸಿಗುವ ಎಲ್ಲಾ ಸುಖಗಳನ್ನು ಅನುಭವಿಸಲು ಸಾಧ್ಯವಿಲ್ಲ

ಒಂಟಿಯಾಗಿದ್ದರೆ ಜಗತ್ತಿನ ಎಷ್ಟು ಸುಖಗಳಿವೆಯೋ ಅಷ್ಟನ್ನೂ ಅನುಭವಿಸಲು ಆಸ್ಪದವಿದೆ. ಒಂದು ವೇಳೆ ಮದುವೆಯಾಗಿಬಿಟ್ಟರೆ ಈ ಸ್ವಾತಂತ್ರ್ಯಕ್ಕೆ ಕಡಿವಾಣ ಬೀಳುತ್ತದೆ.

ಜಗಳದಿಂದ ಬಿಡಿಸಿಕೊಳ್ಳುವುದು ಸುಲಭ, ಮದುವೆಯಿಂದಲ್ಲ

ಜಗಳದಿಂದ ಬಿಡಿಸಿಕೊಳ್ಳುವುದು ಸುಲಭ, ಮದುವೆಯಿಂದಲ್ಲ

ಕೆಲ ದಿನಗಳ ಸ್ನೇಹದಲ್ಲಿಯೇ ಇಬ್ಬರು ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿ ಜಗಳವಾಗುವುದುಂಟು. ಅದರಲ್ಲಿ ಜೀವಮಾನವಿಡೀ ಇಬ್ಬರು ಜಗಳವಾಡದಿರಲಾಗುತ್ತದೆಯೇ? ಬೇಡಪ್ಪಾ, ಮದುವೆಯೇ ಬೇಡ.

ಎಷ್ಟೇ ವಿಧೇಯರಾಗಿದ್ದರೂ ವೈವಾಹಿಕ ಸಂಬಂಧದಲ್ಲಿ ಮೂರನೆಯವರೊಬ್ಬರು ಇದ್ದೇ ಇರುತ್ತಾರೆ

ಎಷ್ಟೇ ವಿಧೇಯರಾಗಿದ್ದರೂ ವೈವಾಹಿಕ ಸಂಬಂಧದಲ್ಲಿ ಮೂರನೆಯವರೊಬ್ಬರು ಇದ್ದೇ ಇರುತ್ತಾರೆ

ಸುತ್ತ ಮುತ್ತ ನೋಡಿ, ಎಲ್ಲಾ ಜೋಡಿ ತಮ್ಮ ಸಂಗಾತಿಗಳಿಗೆ ವಿಧೇಯರಾಗಿದ್ದಾರೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಪ್ರತಿ ಸಂಬಂಧದಲ್ಲಿಯೂ ಮೂರನೆಯವರೊಬ್ಬರು ಇದ್ದೇ ಇರುತ್ತಾರೆ.

ಜೀವನವಿಡೀ ಓರ್ವರಿಗೇ ಬದ್ಧರಾಗಿರುವುದು ಅಸಾಧ್ಯ

ಜೀವನವಿಡೀ ಓರ್ವರಿಗೇ ಬದ್ಧರಾಗಿರುವುದು ಅಸಾಧ್ಯ

ವಿವಾಹದಲ್ಲಿ ಜೀವವಿರುವವರೆಗೂ ಸಂಗಾತಿಗೆ ಬದ್ಧರಾಗಿರಬೇಕೆಂದು ಎಲ್ಲಾ ಧರ್ಮಗಳು ಬೋಧಿಸುವ ಮಂತ್ರದಲ್ಲಿದೆ. ಯಾವುದೇ ವ್ಯಕ್ತಿ ಸಂಪೂರ್ಣ ಸಂಪನ್ನರಾಗಿರಲು ಸಾಧ್ಯವಿಲ್ಲ. ಹಾಗಿದ್ದಾಗ ಓರ್ವ ವ್ಯಕ್ತಿಗೇ ಇಡಿಯ ಜೀವಮಾನ ಬದ್ಧನಾಗಿರಲು ನಾನು ತಯಾರಿಲ್ಲ.

ಮದುವೆಯಿಂದ ಜವಾಬ್ದಾರಿ ಹೆಚ್ಚುತ್ತದೆ

ಮದುವೆಯಿಂದ ಜವಾಬ್ದಾರಿ ಹೆಚ್ಚುತ್ತದೆ

ನನಗೆ ಜೀವನದಲ್ಲಿ ಏನೋ ದೊಡ್ಡದು ಸಾಧಿಸಬೇಕಿದೆ. ಮದುವೆಯಾದರೆ ಅದರೊಂದಿಗೆ ಜವಾಬ್ದಾರಿಗಳೂ ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ಆಗ ನಾನು ಸಾಧಿಸಬೇಕಾಗಿರುವುದನ್ನು ಸಾಧಿಸಲು ಸಾಧ್ಯವಿಲ್ಲ. ಮದುವೆಯೇ ಬೇಡ.

ನನ್ನ ವ್ಯಯಕ್ತಿಯ ಅಭಿಪ್ರಾಯಕ್ಕೆ ಬೆಲೆ ಇಲ್ಲವೇ

ನನ್ನ ವ್ಯಯಕ್ತಿಯ ಅಭಿಪ್ರಾಯಕ್ಕೆ ಬೆಲೆ ಇಲ್ಲವೇ

ನನ್ನ ಮದುವೆಯನ್ನೂ ಮನೆಯವರೇ ನಿರ್ಧರಿಸಬೇಕೇ? ನನ್ನ ಅಭಿಪ್ರಾಯ ಕೇಳುವವರೇ ಇಲ್ಲವೇ? ಮದುವೆಯೇ ಬೇಡ.

ಒಂಟಿಬಾಳು ಬಂಗಾರ

ಒಂಟಿಬಾಳು ಬಂಗಾರ

ಇಷ್ಟು ದಿನ ಒಂಟಿಯಾಗಿ ಬಂಗಾರದ ಬಾಳು ಬಾಳಿದ್ದೇನೆ. ಮುಂದೆಯೂ ಇದೇ ರೀತಿ ಬಾಳಲು ತಯಾರಿದ್ದೇನೆ. ಮದುವೆಯಾಗಿ ನನ್ನ ಸಮಯ ಹಾಗೂ ಜೀವನದದ ಮಜಲುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ನಾನು ತಯಾರಿಲ್ಲ.

ಮದುವೆಯಾದರೆ ಅಗತ್ಯಕ್ಕಿಂತಲೂ ಹೆಚ್ಚಿಸ ಸಾಂಗತ್ಯ ನಡೆಸಬೇಕಾಗುತ್ತದೆ

ಮದುವೆಯಾದರೆ ಅಗತ್ಯಕ್ಕಿಂತಲೂ ಹೆಚ್ಚಿಸ ಸಾಂಗತ್ಯ ನಡೆಸಬೇಕಾಗುತ್ತದೆ

ಈಗ ನನಗೆಷ್ಟು ಬೇಕೋ ಅಷ್ಟು ಸಾಂಗತ್ಯ ಸಿಗುತ್ತಿರುವಾಗ ಮದುವೆಯಾಗಿ ಸಂಗಾತಿ ಬಯಸಿದಂತೆಲ್ಲಾ ಸಾಂಗತ್ಯ ನೀಡುವುದು ಭಾರಿಯಾಗಿ ಪರಿಣಮಿಸಬಹುದು. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ದುರ್ಬಲನಾಗಬಹುದು, ಮದುವೆಗೆ ದೊಡ್ಡ ನಮಸ್ಕಾರ.

ನನ್ನ ವೈಯಕ್ತಿಕ ಜೀವನಕ್ಕೆ ತೊಡರು ಉಂಟಾಗುತ್ತದೆ

ನನ್ನ ವೈಯಕ್ತಿಕ ಜೀವನಕ್ಕೆ ತೊಡರು ಉಂಟಾಗುತ್ತದೆ

ನನ್ನ ಜೀವನದಲ್ಲಿ ಎಲ್ಲೆಲ್ಲೋ ಓಡಾಡಿ, ಏನೇನೋ ತಿಂದು, ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾ ಸುಖಿಯಾಗಿದ್ದೇನೆ. ಈಗ ಮದುವೆಯಾದರೆ ಸಂಗಾತಿ ತಮಗೆ ಬೇಕಾದಂತೆ ನಮ್ಮನ್ನು ಕುಣಿಸಲು ನೋಡುತ್ತಾರೆ. ಒಂದು ವೇಳೆ ಒಪ್ಪದಿದ್ದರೆ ಅಳು ಎಂಬ ಅಸ್ತ್ರ ಉಪಯೋಗಿಸಿ ಸೋಲಿಸುತ್ತಾರೆ. ಅಳುವಿನ ಅಸ್ತ್ರಕ್ಕೆ ಮಣಿದ ಹಿರಿಯರೂ ನಮಗೇ ಬುದ್ದಿವಾದ ಹೇಳಿ ನಮ್ಮ ವ್ಯಯಕ್ತಿಕ ಓಡಾಡದಲ್ಲೆಲ್ಲಾ ತೊಡರು ಸೃಷ್ಟಿಸುತ್ತಾರೆ.

ಸುಳ್ಳುಸುಳ್ಳಾಗಿಯಾದರೂ ಭಾವನೆಗಳನ್ನು ತೋರ್ಪಡಿಸಬೇಕಾದ ಅನಿವಾರ್ಯತೆ

ಸುಳ್ಳುಸುಳ್ಳಾಗಿಯಾದರೂ ಭಾವನೆಗಳನ್ನು ತೋರ್ಪಡಿಸಬೇಕಾದ ಅನಿವಾರ್ಯತೆ

ನನಗೆ ನನ್ನ ಮನಸ್ಸಿನ ಮೇಲೆ ಉತ್ತಮವಾದ ಹಿಡಿತವಿದೆ. ಎಂತಹ ಪರಿಸ್ಥಿತಿಯಲ್ಲಿಯೂ ನನ್ನ ಭಾವನೆಗಳನ್ನು ಅದುಮಿಟ್ಟು ನಿರಾಳವಾಗಿರಬಲ್ಲೆ. ಒಂದು ವೇಳೆ ಮದುವೆಯಾದರೆ ಪರಿಸ್ಥಿತಿಗೆ ತಕ್ಕಂತೆ ಸಂಗಾತಿ ಹೇಳಿದಂತೆ ಸುಳ್ಳುಸುಳ್ಳಾದರೂ ಭಾವನೆಗಳನ್ನು ವ್ಯಕ್ತಪಡಿಸಲೇ ಬೇಕು. ಇದಕ್ಕಿಂತ ಮದುವೆಯಾಗದಿರುವುದು ಒಳ್ಳೆಯದವಲ್ಲವೇ?

ಮನೆ ಕೆಲಸ ನನ್ನಿಂದ ಸಾಧ್ಯವಿಲ್ಲ

ಮನೆ ಕೆಲಸ ನನ್ನಿಂದ ಸಾಧ್ಯವಿಲ್ಲ

ನನ್ನ ತಂದೆತಾಯಿಗೆ ಮುದ್ದಿನ ಮಗನಾಗಿ/ಮಗಳಾಗಿ ಬೆಳೆದ ನನಗೆ ಜೀವಮಾನದಲ್ಲಿ ಒಂದು ಕಡ್ಡಿ ಎತ್ತಿಟ್ಟು ಗೊತ್ತಿಲ್ಲ. ಈಗ ಮದುವೆಯಾದರೆ ಅವರು ಹೇಳಿದಂತೆ ಕೇಳುತ್ತಾ ಮನೆಗಲಸ ಮಾಡಲು ನನ್ನಿಂದ ಸಾಧ್ಯವಿಲ್ಲ.

ಮದುವೆಯಾದ ಬಳಿಕ ಅತ್ತೆ ಮಾವಂದಿರನ್ನು ಸಂಭಾಳಿಸಲು ನನ್ನಿಂದ ಸಾಧ್ಯವಿಲ್ಲ

ಮದುವೆಯಾದ ಬಳಿಕ ಅತ್ತೆ ಮಾವಂದಿರನ್ನು ಸಂಭಾಳಿಸಲು ನನ್ನಿಂದ ಸಾಧ್ಯವಿಲ್ಲ

ಮದುವೆಯೇನೋ ಓಕೆ ಆದರೆ ಅದರೊಂದಿಗೆ ಅವರೊಂದಿಗೆ ಅವರ ತಂದೆ ತಾಯಿ ಯಾಕೆ? ಸ್ವತಂತ್ರವಾಗಿದ್ದ ನನಗೆ ಹೆಣ್ಣು/ಗಂಡು ಕೊಟ್ಟಿದ್ದೇ ಅವರಿಗೆ ನಮ್ಮ ಮೇಲೆ ಪ್ರಭುತ್ವ ಸಾರುವ ಲಗಾಮು ಎಂದು ಏಕೆ ತಿಳಿಯಬೇಕು? ನನಗಿದೆಲ್ಲಾ ಸರಿಬರುವುದಿಲ್ಲ.

ನನಗೆ ಒಂಟಿಯಾಗಿ ಮಲಗಿ ಅಭ್ಯಾಸ

ನನಗೆ ಒಂಟಿಯಾಗಿ ಮಲಗಿ ಅಭ್ಯಾಸ

ಮದುವೆಯಾದ ಮೇಲೂ ಒಂಟಿಯಾಗಿಯೇ ಮಲಗಿದರೆ ಜನರು ಏನು ಮಾತನಾಡಿಕೊಳ್ಳುತ್ತಾರೆ ಎಂದು ನನಗೆ ಗೊತ್ತು.

ನನ್ನ ನಿರ್ಧಾರಗಳಿಗೆ ಬೆಲೆಯಿಲ್ಲ

ನನ್ನ ನಿರ್ಧಾರಗಳಿಗೆ ಬೆಲೆಯಿಲ್ಲ

ಇದುವರೆಗೆ ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತಿದ್ದೇನೆ. ಒಂದು ವೇಳೆ ಮದುವೆಯಾದರೆ ನನ್ನ ನಿರ್ಧಾರಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ.

English summary

20 Reasons Why You Shouldn't Get Married!

Some people die to get married and some resent the idea of getting tied down to one person for the rest of their life. If you decide not to tie the knot around your neck, then here are some of the reasons why you shouldn't get married.
X
Desktop Bottom Promotion