For Quick Alerts
ALLOW NOTIFICATIONS  
For Daily Alerts

ಗಂಡು ಹೆಣ್ಣಿನ ನಡುವೆ ಆತ್ಮೀಯ ಸ್ಪರ್ಶವೇಕೆ ಅಗತ್ಯ?

By Super
|

ವಿವಾಹಕ್ಕೂ ಮೊದಲು ಸಂಗಾತಿಯಾಗುವವರ ನಡುವೆ ಆತ್ಮೀಯವಾದ ಸ್ಪರ್ಶ ಸರಿಯೇ ತಪ್ಪೇ ಎಂಬ ಪ್ರಶ್ನೆಗೆ ಭಾರತದ ಇತಿಹಾಸ ತಪ್ಪು ಎಂಬ ಉತ್ತರವನ್ನೇ ನೀಡುತ್ತಾ ಬಂದಿದೆ. ಎಷ್ಟೋ ಕಡೆ ಮದುವೆಗೂ ಮುನ್ನ ಗಂಡು ಹೆಣ್ಣಿನ ಮುಖವನ್ನೇ ನೋಡಿರುವುದಿಲ್ಲ, ಇನ್ನು ಸ್ಪರ್ಶದ ಮಾತೆಲ್ಲಿಂದ ಬಂತು? ಈಗ ಕಾಲ ಬದಲಾಗಿದೆ. ಇಂದಿನ ಯುವಜನಾಂಗ ವಿವಾಹಕ್ಕೂ ಮುನ್ನ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಂಡು ತಮ್ಮ ಕನಸಿನ ಬಾಳ ಸಂಗಾತಿಯನ್ನು ನಿಜ ಜೀವನದಲ್ಲಿ ಪಡೆಯುವ ಸಂತೋಷದಲ್ಲಿರುತ್ತಾರೆ.

ಕೇವಲ ಸ್ಪರ್ಶದಿಂದ ಪ್ರಾರಂಭವಾದ ಸಂವೇದನೆ ಬಯಕೆಗಳನ್ನು ಬಡಿದೆಬ್ಬಿಸಿ ಹಾಸಿಗೆಯವರೆಗೂ ಕರೆದೊಯ್ಯುವ ಅಪಾಯವನ್ನು ಮನಗಂಡ ಹಿರಿಯರು ಈ ವಿಧಾನಕ್ಕೆ ತಡೆಯೊಡ್ದಿರುವುದು ಅವರ ಕಾಳಜಿಯ ಕಾರಣವಾಗಿದೆ. ಆದರೂ ಅಪ್ಪಟ ಪ್ರೇಮದ ಸಂಕೇತವಾಗಿರುವ ಆತ್ಮೀಯ ಸ್ಪರ್ಶ ಅತಿ ಅಗತ್ಯ ಎಂದು ಸಂಶೋಧನೆಗಳ ಮೂಲಕ ವೈದ್ಯವಿಜ್ಞಾನ ಸಾಬೀತುಪಡಿಸಿದೆ.

ದಪ್ಪ ಮೈಮಾಟದ ಹುಡುಗಿಯರು ಏಕೆ ಆಕರ್ಷಣೀಯರಾಗಿರುತ್ತಾರೆ?

ಯಾವುದೇ ಸಂಬಂಧ ಕುದುರಲು ಗಂಡು ಹೆಣ್ಣಿನ ನಡುವೆ ಪ್ರೀತಿಯ ಬಾಂಧವ್ಯ ಅಗತ್ಯ. ಈ ಬಾಂಧವ್ಯ ಬೆಳೆಯಲು ಆತ್ಮೀಯ ಸ್ಪರ್ಶ ಅತಿ ಅಗತ್ಯ. ಬಾಂಧವ್ಯವಿಲ್ಲದ ಸಂಬಂಧ ಒಡಕಿಗೆ ಕಾರಣ. ಪ್ರೀತಿಯ ಸ್ಪರ್ಶದಿಂದ ದೇಹದ ಮಿಲನಕ್ಕೂ ಮೊದಲು ಆತ್ಮಗಳ ಮಿಲನವಾಗುತ್ತದೆ. ಆತ್ಮಗಳ ಮಿಲನದ ಬಳಿಕವೇ ದೇಹಗಳ ಮಿಲನವಾದರೆ ಮಾತ್ರ ನಿಸರ್ಗನಿಯಮ ಪಾಲಿಸಿದಂತಾಗುತ್ತದೆ.

ಸುಖ, ಸಂತೋಷ, ನೆಮ್ಮದಿ ಮನೆಗೆ ಆಗಮಿಸುತ್ತದೆ. ತನ್ಮೂಲಕ ಉತ್ತಮ ಆರೋಗ್ಯ, ಹಿರಿಯರಲ್ಲಿ ಶಾಂತಿ ಮೂಡಿಸುತ್ತದೆ. ನಮ್ಮ ಅರಿವಿಗೂ ಬಾರದ ಇನ್ನೂ ಹಲವು ವಿಷಯಗಳ ಮೂಲಕ ಸಂತೋಷ ಆಗಮಿಸುತ್ತದೆ. ಆತ್ಮೀಯ ಸ್ಪರ್ಶವೇಕೆ ಅಗತ್ಯ ಎಂದು ತಿಳಿಸುವ ಇಪ್ಪತ್ತು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಭಾರತೀಯ ವಿವಾಹವನ್ನು ಅತಿ ವಿಶಿಷ್ಟಗೊಳಿಸುವ ಅಂಶಗಳಿವು

ಆತ್ಮಗಳ ಮಿಲನಕ್ಕೆ ಆತ್ಮೀಯ ಸ್ಪರ್ಶ ಸಹಕಾರಿಯಾಗಿದೆ

ಆತ್ಮಗಳ ಮಿಲನಕ್ಕೆ ಆತ್ಮೀಯ ಸ್ಪರ್ಶ ಸಹಕಾರಿಯಾಗಿದೆ

ಶರೀರಗಳ ಮಿಲನಕ್ಕೂ ಮುನ್ನ ಆತ್ಮಗಳ ಮಿಲನವಾಗಬೇಕಾಗಿರುವುದು ನಿಸರ್ಗದ ನಿಯಮ. ಆತ್ಮೀಯ ಸ್ಪರ್ಶದಿಂದ ನಮ್ಮ ಊಹೆಗೂ ನಿಲುಕದ ಹಲವು ಸಂವೇದನೆಗಳ ಮೂಲಕ ಇಬ್ಬರೂ ಪರಸ್ಪರ ಹತ್ತಿರಾಗುತ್ತಾರೆ.

ಬೆಚ್ಚನೆಯ ತಾಣದ ಭಾವ ಮೂಡುತ್ತದೆ

ಬೆಚ್ಚನೆಯ ತಾಣದ ಭಾವ ಮೂಡುತ್ತದೆ

ಪ್ರೇಮಿಯ ಅಪ್ಪುಗೆಯಲ್ಲಿ ತಾನು ಬೆಚ್ಚನೆಯ ಗೂಡಿನಲ್ಲಿರುವ ಭಾವನೆ ಮೂಡುತ್ತದೆ. ತಾಯಿಹಕ್ಕಿಯ ಮಡಿಲಿನಲ್ಲಿ ಹುದುಗಿರುವ ಮರಿಹಕ್ಕಿಯಂತಾದ ಮನ ಕಣ್ಣು ಮುಚ್ಚಿ ಈ ಬೆಚ್ಚನೆಯ ಭಾವವನ್ನು ಆಸ್ವಾದಿಸಲು ಈ ಅಪ್ಪುಗೆ ಹೀಗೇ ಇರಲಿ ಎಂದು ಹಾರೈಸುತ್ತದೆ.

ಸುರಕ್ಷಾಭಾವನೆ ಮೂಡುತ್ತದೆ

ಸುರಕ್ಷಾಭಾವನೆ ಮೂಡುತ್ತದೆ

ಪ್ರೇಮಿಯ ಆತ್ಮೀಯ ತೆಕ್ಕೆಯಲ್ಲಿರುವಾಗ ಅತ್ಯಂತ ಸುರಕ್ಷಿತವಾಗಿದ್ದೇನೆ, ತನಗೆ ಯಾವ ರೀತಿಯ ತೊಂದರೆಯೂ ಕಾಡದು, ಯಾರೂ ತನ್ನ ತಂಟೆಗೆ ಬರಲಾರರು ಎಂಬ ಭಾವನೆ ಮೂಡುತ್ತದೆ

ಆತ್ಮೀಯ ಸ್ಪರ್ಶದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳೆ ಮೂಡುತ್ತದೆ

ಆತ್ಮೀಯ ಸ್ಪರ್ಶದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳೆ ಮೂಡುತ್ತದೆ

ನಿಮ್ಮ ಸಂಗಾತಿಯ ಆತ್ಮೀಯ ಸ್ಪರ್ಶ ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಇದುವರೆಗೆ ಕೇವಲ ಮಗ/ಮಗಳಾಗಿ, ಸಹೋದರ/ಸಹೋದರಿಯಾಗಿದ್ದ ನಿಮಗೆ ಈ ಸ್ಪರ್ಶ ಓರ್ವ ವ್ಯಕ್ತಿಗೆ ತುಂಬಾ ಬೇಕಾದವನಾಗಿದ್ದೇನೆ ಎಂಬ ಭಾವನೆ ಮೂಡಿ ಮನ ಉಲ್ಲಸಿತವಾಗುತ್ತದೆ.

ನಿಮ್ಮ ಸಂಬಂಧ ಇನ್ನೂ ಗಟ್ಟಿಗೊಳ್ಳುತ್ತದೆ

ನಿಮ್ಮ ಸಂಬಂಧ ಇನ್ನೂ ಗಟ್ಟಿಗೊಳ್ಳುತ್ತದೆ

ಬಾಳಸಂಗಾತಿಯಾಗುವವನ/ಳ ನಡುವೆ ಮೊಳೆಯುತ್ತಿರುವ ಪ್ರೇಮ ಸ್ಪರ್ಶದಿಂದ ಇನ್ನಷ್ಟು ಬಲಗೊಳ್ಳುತ್ತದೆ. ದಿನಗಳೆದಂತೆ ಒಬ್ಬರು ಇನ್ನೊಬ್ಬರನ್ನು ಬಿಟ್ಟಿರಲಾರದ ಬಂಧ ಏರ್ಪಡುತ್ತದೆ.

ನಿಮ್ಮ ದೇಹದ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ.

ನಿಮ್ಮ ದೇಹದ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ.

ಕೇವಲ ಮನಸ್ಸಿನಲ್ಲಿ ನೆನೆಯುವುದರಿಂದ ಕೆಂಪೇರುವ ಕೆನ್ನೆಗಳು ಉತ್ತಮವಾದ ಸಂಬಂಧಕ್ಕೆ ಸೂಚನೆಯಾಗಿದೆ. ಆತ್ಮೀಯ ಸ್ಪರ್ಶದಿಂದ ದೇಹದಲ್ಲಿ ಹಲವು ಹಾರ್ಮೋನುಗಳು ಬಿಡುಗಡೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ. ಪ್ರಿಯಕರ/ಪ್ರಿಯತಮೆಯು ಹಿಡಿದ ಕೈ ಇಡಿಯ ದೇಹವನ್ನೇ ಕಂಪಿಸುವಂತೆ ಮಾಡುತ್ತದೆ.

ಒಂದಾಗುವ ಚೇತನಗಳು

ಒಂದಾಗುವ ಚೇತನಗಳು

ಆತ್ಮೀಯ ಸ್ಪರ್ಶದಿಂದ ಬಲಗೊಳ್ಳುವ ಸಂಬಂಧ ಇಬ್ಬರ ಚೇತನಗಳನ್ನು ಒಂದುಗೂಡಿಸುತ್ತದೆ. ಇಬ್ಬರೂ ಒಂದೇ ಪ್ರಾಣ ಎರಡು ದೇಹ ಎಂಬ ಭಾವವನ್ನು ಪಡೆಯುತ್ತಾರೆ.

ಆತ್ಮೀಯ ಸ್ಪರ್ಶದಿಂದ ಲಭ್ಯವಾಗುವ ಪ್ರೀತಿ

ಆತ್ಮೀಯ ಸ್ಪರ್ಶದಿಂದ ಲಭ್ಯವಾಗುವ ಪ್ರೀತಿ

ಪ್ರೀತಿಗಾಗಿ ಈ ಜಗತ್ತೇ ಹಂಬಲಿಸುತ್ತಿದೆ. ನಲ್ಲನ/ನಲ್ಲೆಯ ಪ್ರೀತಿ ಪಡೆಯಲು ಏಳು ಸಮುದ್ರ ಹಾರಿ ಬರಲೂ ಸಿದ್ಧರಿರುವವರಿಗೆ ಆತ್ಮೀಯ ಸ್ಪರ್ಶದಿಂದ ಪ್ರೀತಿ ಪ್ರಾಪ್ತವಾಗುತ್ತದೆ.

ಈ ಜೀವ ನಿನಗಾಗಿ ಎಂಬ ಭಾವನೆಯನ್ನು ಮೂಡಿಸುತ್ತದೆ

ಈ ಜೀವ ನಿನಗಾಗಿ ಎಂಬ ಭಾವನೆಯನ್ನು ಮೂಡಿಸುತ್ತದೆ

ಜೀವನಸಂಗಾತಿಯೊಂದಿಗಿನ ಸಾಂಗತ್ಯ ಬಲಗೊಳ್ಳಲು ಆತ್ಮೀಯ ಸ್ಪರ್ಶ ಅಗತ್ಯವಾಗಿದೆ. ಸ್ಪರ್ಶಸಂವೇದನೆಯಿಂದ ತಾನು ತನ್ನ ಜೀವನಸಂಗಾತಿಗೆ ಬದ್ಧನಾಗಿದ್ದೇನೆ ಎಂಬ ಭಾವನೆ ಬಲಗೊಳ್ಳುತ್ತದೆ. ಪರಸ್ಪರ ನಾನು ನಿನಗಾಗಿ ಎಂಬ ಭಾವನೆಯನ್ನು ಬಲಪಡಿಸುತ್ತದೆ. ಜೀವನದಲ್ಲಿ ಬರುವ ಎಲ್ಲಾ ಕಷ್ಟ ಸುಖಗಳನ್ನು ಸಮಾನವಾಗಿ ಹಂಚಿ ಬಾಳಲು ಮನಸ್ಸು ಗಟ್ಟಿಗೊಳ್ಳುತ್ತದೆ.

ಪ್ರೀತಿಯ ಸಂಕೇತವಾದ ಚುಂಬನ-ಅದೆಷ್ಟು ಪ್ರಬಲ

ಪ್ರೀತಿಯ ಸಂಕೇತವಾದ ಚುಂಬನ-ಅದೆಷ್ಟು ಪ್ರಬಲ

ನಲ್ಲ/ನಲ್ಲೆಯು ನೀಡಿದ ಹೂಚುಂಬನ ಅದೆಷ್ಟು ಪ್ರಬಲ, ಅದೆಷ್ಟು ಸುಂದರ, ಅದೆಷ್ಟು ಆಹ್ಲಾದಕರ ಎಂಬು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಈ ಚುಂಬನಕ್ಕೆ ಜೀವನವನ್ನೇ ಪ್ರಿಯತಮೆ/ಪ್ರಿಯಕರನಿಗಾಗಿ ಮುಡಿಪಾಗಿಡುವ ಮನೋಬಲ ಬೆಳೆಸಿಕೊಳ್ಳುವ ಸಾಮರ್ಥ್ಯವಿದೆ.

ನಿರಾಳವಾಗುವ ಮನ, ದೂರಾಗುವ ಬೇಗುದಿ

ನಿರಾಳವಾಗುವ ಮನ, ದೂರಾಗುವ ಬೇಗುದಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳ ತೊಳಲಾಟದಲ್ಲಿ ಬೇಯುತ್ತಿರುವ ಮನಕ್ಕೆ ನಲ್ಲ/ನಲ್ಲೆಯ ಆತ್ಮೀಯ ಸ್ಪರ್ಶ ತಂಗಾಳಿಯ ಸಿಂಚನದ ಭಾವನೆ ಮೂಡಿಸುತ್ತದೆ. ಆ ಕ್ಷಣಕ್ಕೆ ನಿರಾಳವಾದ ಮನ ಯಾವುದೇ ಸಮಸ್ಯೆಯನ್ನು ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಗಳಿಸುತ್ತದೆ. ತನ್ಮೂಲಕ ಬೇಗುದಿಯನ್ನು ದೂರಾಗಿಸುತ್ತದೆ.

ತಾನು ಒಬ್ಬಂಟಿಯಲ್ಲ ಎಂಬ ಭಾವನೆ ಮೊಳೆಯುತ್ತದೆ

ತಾನು ಒಬ್ಬಂಟಿಯಲ್ಲ ಎಂಬ ಭಾವನೆ ಮೊಳೆಯುತ್ತದೆ

ಜೀವನದ ಸಮಸ್ಯೆಗಳನ್ನು ಎದುರಿಸಲು ಒಂಟಿಯಾಗಿದ್ದ ತನಗೆ ಈಗ ಜೊತೆ ದೊರೆತಿದೆ, ಅವರ ಸಹಕಾರದಿಂದ ಈ ಜಗತ್ತನ್ನೇ ಜಯಿಸಬಲ್ಲೆ ಎಂಬ ಭಾವನೆ ಗಟ್ಟಿಗೊಳ್ಳುತ್ತದೆ.

ಜೀವನಸಂಗಾತಿಯ ಕಾಳಜಿ ತೋರಲು ಅವಕಾಶ ದೊರಕುತ್ತದೆ

ಜೀವನಸಂಗಾತಿಯ ಕಾಳಜಿ ತೋರಲು ಅವಕಾಶ ದೊರಕುತ್ತದೆ

ತಾನು ತನ್ನ ಸಂಗಾತಿಯ ಬಗ್ಗೆ ಅತೀವ ಕಾಳಜಿ ಹೊಂದಿದ್ದೇನೆ ಎಂಬ ಭಾವನೆಯನ್ನು ಯಾವುದೇ ಪದಗಳ ಮೂಲಕ ಹೇಳಲಾಗದ ಭಾವನೆಯನ್ನು ಕೇವಲ ಒಂದು ಆತ್ಮೀಯ ಸ್ಪರ್ಶದಿಂದ ಸಂಗಾತಿಗೆ ಮುಟ್ಟಿಸಬಹುದಾಗಿದೆ. ಈ ಕಾಳಜಿ ಜೀವನದ ಅತ್ಯಂತ ಅಮೂಲ್ಯವಾದ ಉಡುಗೊರೆಯಾಗಿದೆ.

ಸಮಸ್ಯೆಗಳ ಸುಳಿಯಿಂದ ಹೊರಬಂದ ಭಾವನೆ ಮೂಡುತ್ತದೆ

ಸಮಸ್ಯೆಗಳ ಸುಳಿಯಿಂದ ಹೊರಬಂದ ಭಾವನೆ ಮೂಡುತ್ತದೆ

ಜೀವನದ ಹಲವು ಸಮಸ್ಯೆಯಲ್ಲಿ ನರಳುತ್ತಿರುವವರಿಗೆ ನಲ್ಲ/ನಲ್ಲೆಯ ಒಂದು ಆತ್ಮೀಯ ಸ್ಪರ್ಶದಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಅನ್ನಿಸುತ್ತದೆ. ನೇರವಾಗಿ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲವಾದರೂ ಸಮಸ್ಯೆಗೆ ಪರಿಹಾರ ದೊರಕಿಸಿಕೊಳ್ಳಲು ಈ ಸಂವೇದನೆ ಸಹಾಯಕವಾಗಿದೆ.

ಸಪ್ಪೆಯಾಗಿದ್ದ ನಿಮ್ಮ ಸಂಬಂಧ ಸಿಹಿಯಾಗುತ್ತದೆ

ಸಪ್ಪೆಯಾಗಿದ್ದ ನಿಮ್ಮ ಸಂಬಂಧ ಸಿಹಿಯಾಗುತ್ತದೆ

ಎಷ್ಟೋ ಜೋಡಿಗಳು ದೂರವಿರುವ ಕಾರಣ ಕೇವಲ ಮಾತಿನ ಮೂಲಕ ಒಬ್ಬರಿಗೊಬ್ಬರು ಹತ್ತಿರಾಗಿರುತ್ತಾರೆಯೇ ವಿನಃ ಆತ್ಮೀಯ ಸ್ಪರ್ಶದಿಂದ ವಂಚಿತರಾಗಿದ್ದರೆ ಆ ಸಂಬಂಧ ಸಪ್ಪೆಯಾಗಿರುತ್ತದೆ. ಆತ್ಮೀಯ ಸ್ಪರ್ಶದಿಂದ ಈ ಸಂಬಂಧದಲ್ಲಿ ಹೆಚ್ಚಿನ ಸಿಹಿತುಂಬಿ ಜೀವನ ಹೆಚ್ಚು ಸಂತೋಷಕರವಾಗುತ್ತದೆ.

ತಾನು ತುಂಬಾ ಬೇಕಾದವರು ಎಂಬ ಭಾವನೆ ಮೊಳೆಯುತ್ತದೆ

ತಾನು ತುಂಬಾ ಬೇಕಾದವರು ಎಂಬ ಭಾವನೆ ಮೊಳೆಯುತ್ತದೆ

ನಲ್ಲ/ನಲ್ಲೆಗೆ ನೀನೇ ನನಗೆ ಅತ್ಯಂತ ಬೇಕಾದ ವ್ಯಕ್ತಿ, ನಿನಗಾಗಿ ಈ ಜೀವನ ಮುಡಿಪು, ನಿನ್ನಿಂದಲೇ ನಮ್ಮ ಜೀವನದಲ್ಲಿ ಸೊಗಸು ಎಂದು ಹಾಡಿ ನಿವೇದಿಸುವ ಬದಲು ಕೇವಲ ಆತ್ಮೀಯ ಸ್ಪರ್ಶದಿಂದ ಮನದಟ್ಟು ಮಾಡಬಹುದು. ನೀನೇ ನನ್ನ ಜೀವ ಎಂದು ಸಂಗಾತಿಯ ಕೈ ಹಿಡಿದು ಬೆರಳುಗಳನ್ನು ಬಿಗಿಗೊಳಿಸಿ ಹೇಳುವ ಈ ಮಾತು ಜೀವನಪರ್ಯಂತ ಸಂಗಾತಿಗೆ ಧೈರ್ಯವಾಗಿ ಉಳಿಯುತ್ತದೆ.

ನೀನೇ ನನ್ನ ಬಾಳಸಂಗಾತಿ ಎಂಬುದನ್ನು ಸ್ಪಷ್ಟಪಡಿಸಬಹುದು

ನೀನೇ ನನ್ನ ಬಾಳಸಂಗಾತಿ ಎಂಬುದನ್ನು ಸ್ಪಷ್ಟಪಡಿಸಬಹುದು

ಆತ್ಮೀಯ ಸ್ಪರ್ಶದಿಂದ ತಮ್ಮ ಸಂಗಾತಿಗೆ ನೀನೇ ನನ್ನ ಬಾಳಸಂಗಾತಿಯಾಗುವೆ ಎಂಬ ವಿಷಯವನ್ನು ಧೃಢಪಡಿಸಲು ಸಾಧ್ಯ. ಹೂಚುಂಬನ, ಆತ್ಮೀಯ ಅಪ್ಪುಗೆಯಿಂದ ಸಂಗಾತಿಯ ಆತ್ಮವನ್ನು ಆವರಿಸಿ ನಿರಾತಂಕ ಹಾಗೂ ಭದ್ರತೆಯ ಭಾವನೆ ಮೂಡುತ್ತದೆ.

ಹೃದಯ ಹಗುರಾಗುತ್ತದೆ

ಹೃದಯ ಹಗುರಾಗುತ್ತದೆ

ಆತ್ಮೀಯ ಸ್ಪರ್ಶದಿಂದ ಈಗ ತಾನು ಸಂಗಾತಿಗೆ ಮೀಸಲು ಎಂಬ ಭಾವನೆ ಮೂಡುವ ಮೂಲಕ ಹೃದಯ ಜೋರಾಗಿ ಹೊಡೆದುಕೊಳ್ಳುತ್ತದೆ. ನಲ್ಲ/ನಲ್ಲೆಯ ಎದೆಯ ಮೇಲಿನಿಂದ ಈ ಹೃದಯದ ಬಡಿತ ಇಬ್ಬರಿಗೂ ಕೇಳುತ್ತದೆ. ಈ ಮಿಡಿತ ನಿನಗಾಗಿ ಎಂಬ ಭಾವನೆಯಿಂದ ಮನ ಹಗುರಾಗಿ ಹೂವಾಗಿ ಆಗಸಕ್ಕೆ ಹಾರುತ್ತದೆ. ಬಿಸಿಯಪ್ಪುಗೆಯ ಈ ಕ್ಷಣ ಅದೆಷ್ಟು ಮಧುರ, ಸುಂದರ ಎಂದರೆ ಇಡಿಯ ಜೀವಮಾನ ಮರೆಯಲಾಗದಂಥಾಗಿರುತ್ತದೆ.

ತಾನು ವಿಶೇಷ ಎಂಬ ಭಾವನೆ ಮೂಡುತ್ತದೆ

ತಾನು ವಿಶೇಷ ಎಂಬ ಭಾವನೆ ಮೂಡುತ್ತದೆ

ಯಾವುದೇ ಸಂಬಂಧ ಒಂದೆರಡು ದಿನಗಳಲ್ಲಿ ಬೆಳೆದುಬಿಡುವುದಿಲ್ಲ.ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಾಕಷ್ಟು ಸಮಯ ಬೇಕು. ಆತ್ಮೀಯ ಸ್ಪರ್ಶದ ಹಂತಕ್ಕೆ ಬರುವ ಮುನ್ನ ಮಾನಸಿಕವಾಗಿ ಕೊಂಚ ಹತ್ತಿರಾಗಬೇಕು. ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಾ ಹೋದಂತೆ ಆತ್ಮಗಳು ಇನ್ನಷ್ಟು ಹತ್ತಿರಾಗಲು ಆತ್ಮೀಯ ಸ್ಪರ್ಶ ಅಗತ್ಯವಾಗಿದೆ. ಇದರಿಂದ ತಾನು ತನ್ನ ಸಂಗಾತಿಯ ಪಾಲಿಗೆ ವಿಶೇಷ ವ್ಯಕ್ತಿಯ ಸ್ಥಾನ ಹೊಂದಿದ್ದೇನೆ ಎಂಬ ಭಾವನೆ ಮೂಡುತ್ತದೆ. ಸಂಗಾತಿಯ ಬಗ್ಗೆ ಗೌರವ, ಪ್ರೇಮ ಹೆಚ್ಚುತ್ತದೆ.

ಅಪ್ಪಟ ಪ್ರೇಮವನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ.

ಅಪ್ಪಟ ಪ್ರೇಮವನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ.

'ನಾನು ನಿನ್ನನ್ನು ಪ್ರೀತಿಸುವೆ' ಎಂಬ ಮೂರು ಪದಗಳು ಸಂಗಾತಿಯ ಪಾಲಿಗೆ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಪದಗಳಾಗಿವೆ. ಆತ್ಮೀಯ ಸ್ಪರ್ಶದ ಜೊತೆಗೆ ಸ್ಪುರಿಸುವ ಈ ಪದಗಳು ಅಪ್ಪಟ ಪ್ರೇಮವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಆ ಭಾವನೆಯನ್ನು ಸಂಗಾತಿಯ ಮನದಲ್ಲಿ ಅಚ್ಚೊತ್ತಿ ಜೀವನಸಂಗಾತಿಯಾಗಲು ಧೃಢನಿರ್ಧಾರ ಕೈಗೊಳ್ಳಲು ಪೂರಕವಾಗಿದೆ.

English summary

20 Reasons Why Physical Intimacy Matters

Do you think intimacy before marriage is a wrong move to make? There are some who believe that it is!. Here are some of the true reasons why physical intimacy is important in a relationship:
X
Desktop Bottom Promotion