For Quick Alerts
ALLOW NOTIFICATIONS  
For Daily Alerts

ಚುಂಬನ ಪರೀಕ್ಷೆಯಲ್ಲಿ ಪಾಸಾಗಲು ಇಲ್ಲಿದೆ 15 ಸಲಹೆಗಳು!

By Super
|

ಚುಂಬನ, ತನ್ನ ಭಾವನೆಯನ್ನು ನಲ್ಲ, ನಲ್ಲೆಯ ಹೃದಯಕ್ಕೆ ತಲುಪಿಸುವ ಅತಿ ಸುಂದರ ಹಾಗೂ ಭಾವುಕ ಬಂಧನ. ತಾಯಿ ಮಗುವಿಗೆ ನೀಡುವ, ಮೇಘ ಶಿಖರಕ್ಕೆ ನೀಡುವ ಚುಂಬನ ಈ ಜಗತ್ತಿನ ಅಹ್ಲಾದಕರ ಭಾವನೆಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಪ್ರಿಯಕರ ಪ್ರಿಯತಮೆಗೆ ಹೇಳುವ ಪರಿ, ನೀವಿಬ್ಬರೂ ಈಗ ಸತಿಪತಿಗಳು, ಈಗ ನೀವು ಚುಂಬಿಸಬಹುದು ಎಂದು ಪಾದ್ರಿ ನವದಂಪತಿಗಳಿಗೆ ಸಾರಿದಾಗ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಸಂಚಲನ.

ಚುಂಬಿಸುವುದು ನಮಗೆಲ್ಲಾ ಸ್ವಾಭಾವಿಕವಾಗಿ ತಿಳಿದುಬಂದಂತಹ ಕಲೆ. ಆದರೆ ಒಂದು ವೇಳೆ ಚುಂಬನದಲ್ಲಿ ಏನಾದರೂ ಎಡವಟ್ಟಾದರೆ ಚುಂಬನ ಮೂಲಕ ತಿಳಿಸುವ ಭಾವನೆಯೇ ಬದಲಾಗಬಹುದು. ಅದರಲ್ಲೂ ಯೌವನದಲ್ಲಿ ಜೀವನ ಸಂಗಾತಿಗಳನ್ನು ಆರಿಸುವಾಗ ಪ್ರಿಯತಮ/ಪ್ರಿಯತಮೆಗೆ ನೀಡುವ ಚುಂಬನದಲ್ಲಿ ತಪ್ಪು ಸಂದೇಶ ರವಾನೆಯಾದರೆ ಜೀವನ ಸಂಗಾತಿಯಾಗುವುದಿರಲಿ, ಇರುವ ಮಾನ ಮರ್ಯಾದೆಯನ್ನೂ ಕಳೆದುಕೊಳ್ಳುವಂತಹ ಪ್ರಸಂಗ ಎದುರಾಗಬಹುದು. ನಾವು ಎಲ್ಲಿ ಎಡವಟ್ಟು ಮಾಡಿಕೊಂಡು ದಂತಭಗ್ನಕ್ಕೆ ಆಹ್ವಾನ ನೀಡುತ್ತಿದ್ದೇವೆ ಎಂದು ತಿಳಿಸುವ ಹದಿನೈದು ಉದಾಹಣೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಇಂತಹ 13 ಬಗೆಯ ಪ್ರೇಯಸಿಯರಿಂದ ದೂರವುಳಿದರೆ ಒಳಿತು!

ಹೆಚ್ಚಿನ ನಾಲಿಗೆಯ ಉಪಯೋಗ ಬೇಡ

ಹೆಚ್ಚಿನ ನಾಲಿಗೆಯ ಉಪಯೋಗ ಬೇಡ

ಚುಂಬನದ ಉತ್ಕಟತೆ ಎಂದರೆ ತುಟಿಗೆ ತುಟಿಗೆ ತಗಲುವ ಚುಂಬನ ಆದರೆ ಕೆಲವರು ಇನ್ನೂ ಮುಂದಕ್ಕೆ ಹೋಗಿ ನಾಲಿಗೆಯನ್ನೂ ಬಳಸುತ್ತಾರೆ. ಈ ಪರಿ ನಿಮ್ಮ ಪ್ರಿಯತಮ/ಪ್ರಿಯತಮೆಗೆ ಮುಜುಗರ ಉಂಟುಮಾಡಬಹುದು.

ಪ್ರತಿ ಬಾರಿ ಒಂದೇ ಭಂಗಿಯಲ್ಲಿ ಚುಂಬಿಸಬೇಡಿ

ಪ್ರತಿ ಬಾರಿ ಒಂದೇ ಭಂಗಿಯಲ್ಲಿ ಚುಂಬಿಸಬೇಡಿ

ಚುಂಬನವೂ ಊಟದಂತೆ ಪ್ರತಿದಿನ ಭಿನ್ನವಾಗಿದ್ದರೆ ಚೆನ್ನ. ಪ್ರತಿಬಾರಿಯ ಚುಂಬನವನ್ನು ಬೇರೆ ಭಂಗಿಯಲ್ಲಿ ನೀಡುವುದನ್ನು ನಿಮ್ಮ ಪ್ರಿಯತಮ/ಪ್ರಿಯತಮೆ ಮೆಚ್ಚೆಕೊಳ್ಳುತ್ತಾರೆ.

ಒಣತುಟಿಗಳಲ್ಲಿ ಚುಂಬಿಸದಿರಿ

ಒಣತುಟಿಗಳಲ್ಲಿ ಚುಂಬಿಸದಿರಿ

ತುಟಿಗಳು ಆರೋಗ್ಯಕರವಾಗಿದ್ದಾಗ ಮಾತ್ರ ಚುಂಬಿಸಿರಿ. ಚಳಿ, ಅನಾರೋಗ್ಯ ಮೊದಲಾದ ಕಾರಣಗಳಿಂದ ತುಟಿ ಒಣಗಿದ್ದರೆ, ಬಿರಿದಿದ್ದರೆ, ರಕ್ತ ಬರುವಂತಹದಂತಿದ್ದರೆ ಎಂದಿಗೂ ತುಟಿಚುಂಬನಕ್ಕೆ ಆಸ್ಪದ ನೀಡದಿರಿ. ಬದಲಿಗೆ ನನ್ನ ತುಟಿ ಒಡೆದಿದೆ ಈಗ ಶಕ್ಯವಲ್ಲ ಎಂದು ನೇರವಾಗಿ ಹೇಳಿ ಕೆನ್ನೆ-ಕೆನ್ನೆ ತಾಗಿಸಿ ನಿಮ್ಮ ಮಧುರಭಾವನೆಗಳನ್ನು ಪ್ರಕಟಿಸಿ. ಈ ಮೂಲಕ ನಿಮ್ಮ ಮನದನ್ನ/ಮನದನ್ನೆಗೆ ಇನ್ನಷ್ಟು ಹತ್ತಿರಾಗುವಿರಿ.

ಬಲವಂತದ ಚುಂಬನ ಬೇಡ

ಬಲವಂತದ ಚುಂಬನ ಬೇಡ

ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ನಲ್ಲ/ನಲ್ಲೆ ನೀವು ಮುಂಚಾಚಿದ ಚುಂಬನದ ಆಹ್ವನವನ್ನು ನಿರಾಕರಿಸಿದರೆ ಸಂತೋಷವಾಗಿಯೇ ಒಪ್ಪಿಕೊಳ್ಳಿ. ಅದರ ಬದಲು ಬಲವಂತವಾಗಿ ಚುಂಬಿಸಲು ಯತ್ನಿಸಿದರೆ ಆತನ/ಆಕೆಯ ಮನದಲ್ಲಿ ನಿಮ್ಮ ಪ್ರತಿ ತಿರಸ್ಕಾರದ ಮನೋಭಾವ ಮೂಡುತ್ತದೆ.

ಚುಂಬನದ ಅವಧಿಯಲ್ಲಿ ಚಡಪಡಿಕೆ ಸಲ್ಲದು

ಚುಂಬನದ ಅವಧಿಯಲ್ಲಿ ಚಡಪಡಿಕೆ ಸಲ್ಲದು

ಕೆಲವರು ಸಮಯಕ್ಕೆ ಅತೀವ ಹೆಚ್ಚಿನ ಮಹತ್ವ ಕೊಟ್ಟು ಅರ್ದಂಬರ್ಧ ಊಟ ಮಾಡುವುದು, ಸರಿಯಾಗಿ ಬಟ್ಟೆ ತೊಡದೇ ಇರುವ ಪರಿಯನ್ನು ಗಮನಿಸುತ್ತೀರಿ. ಆದರೆ ಈ ಚಡಪಡಿಕೆ ಚುಂಬನದ ಹೊತ್ತಿನಲ್ಲಿ ಸಲ್ಲದು. ಚುಂಬನಕ್ಕೆ ಅದರದ್ದೇ ಆದ ಸಮಯಾವಕಾಶದ ಅಗತ್ಯವಿದೆ. ಹಿತವಾದ ಅಪ್ಪುಗೆ, ನವಿರಾದ ಚುಂಬನ ಹಾಗೂ ಶೀಘ್ರವೇ ಮತ್ತೆ ಭೇಟಿಯಾಗುವ ಭರವಸೆ ನಿಮ್ಮ ಪ್ರಿಯತಮ/ಪ್ರಿಯತಮೆಯ ಹೃದಯ ಗೆಲ್ಲಲು ಸಹಾಯ ಮಾಡುತ್ತದೆ.

ಅಪ್ಪುಗೆಯ ರಹಿತ ಚುಂಬನ ಸಲ್ಲದು

ಅಪ್ಪುಗೆಯ ರಹಿತ ಚುಂಬನ ಸಲ್ಲದು

ದೇಹದ ಬೇರೆ ಯಾವುದೇ ಭಾಗಗಳನ್ನು ಸ್ಪರ್ಶಿಸದೇ ಕೇವಲ ತುಟಿಗಳನ್ನು ಮುಂಚಾಚುವುದು ಅಸಭ್ಯತನ. ಚುಂಬನಕ್ಕೂ ಮೊದಲು ಪ್ರಿಯತಮ/ಪ್ರಿಯತಮೆಯನ್ನು ನವಿರಾಗಿ ತೆಕ್ಕೆಯಲ್ಲಿ ಪಡೆದುಕೊಂಡು ಕಣ್ಣಿನಲ್ಲಿ ಕಣ್ಣಿಟ್ಟು ಹೃದಯ ಉಲ್ಲಸಿತವಾದ ಬಳಿಕ ನೀಡುವ ಚುಂಬನ ಜೀವನ ಪರ್ಯಂತ ನೆನಪಿರುತ್ತದೆ.

ಚುಂಬನದ ಸ್ಥಳದಲ್ಲಿ ಸಾಕಷ್ಟು ತಾಜಾಹವೆ ಇರಲಿ

ಚುಂಬನದ ಸ್ಥಳದಲ್ಲಿ ಸಾಕಷ್ಟು ತಾಜಾಹವೆ ಇರಲಿ

ಕೆಲವು ಬಾರಿ ಪ್ರಿಯತಮ/ಪ್ರಿಯತಮೆಯರು ಯಾರೂ ಇಲ್ಲದ ಹಾಗೂ ಗಾಳಿಯಾಡದ ಗೋಪ್ಯ ಜಾಗದಲ್ಲಿ ಚುಂಬನದ ವಿಲೇವಾರಿ ಮಾಡುವುದುಂಟು. ಆದರೆ ಇದು ಕೇವಲ ಒಂದು ಶುಷ್ಕ ಚುಂಬನವಾಗಿರುತ್ತದೆಯೇ ವಿನಃ ಸಂತೋಷದ ಭಾವನೆ ಮೂಡಲಾರದು. ಚುಂಬನದ ಸ್ಥಳದಲ್ಲಿ ಸಾಕಷ್ಟು ತಾಜಾಹವೆ ಇರುವುದು ಅಗತ್ಯ.

ಚುಂಬನ ತಡವಾಗದಿರಲಿ

ಚುಂಬನ ತಡವಾಗದಿರಲಿ

ಪ್ರಿಯತಮ/ಪ್ರಿಯತಮೆಯನ್ನು ತೆಕ್ಕೆಗೆ ತೆಗೆದುಕೊಂಡ ಬಳಿಕ ಚುಂಬನಕ್ಕೆ ತುಂಬಾ ತಡಮಾಡದಿರಿ. ತಡವಾದಷ್ಟೂ ದೇಹದಲ್ಲಿ ಆ ಕ್ಷಣದಲ್ಲಿ ಉತ್ಪತ್ತಿಯಾಗಿದ್ದ ಹಾರ್ಮೋನುಗಳ ಪ್ರಭಾವ ಕಡಿಮೆಯಾಗುತ್ತಾ ಚುಂಬನದಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ತುಂಬಾ ತಡವಾದರೆ ಆಸಕ್ತಿ ಕಳೆದುಕೊಂಡು ಪ್ರಿಯತಮ/ಪ್ರಿಯತಮೆ ತೆಕ್ಕೆಯಿಂದ ಬಿಡಿಸಿಕೊಂಡು ದೂರ ಹೋಗುವ ಅಪಾಯವಿರುತ್ತದೆ.

ಚುಂಬನದ ವೇಳೆಯಲ್ಲಿ ಕಣ್ಣು ತೆರೆಯಬೇಡಿ

ಚುಂಬನದ ವೇಳೆಯಲ್ಲಿ ಕಣ್ಣು ತೆರೆಯಬೇಡಿ

ಚುಂಬನದ ಅವಧಿಯಲ್ಲಿ ಇಬ್ಬರೂ ಕಣ್ಣುಮುಚ್ಚಿಕೊಂಡು ಆ ಕ್ಷಣದ ಪ್ರತಿಸೊಗಸನ್ನು ಅಹ್ಲಾದಿಸಿರಿ. ಒಂದು ವೇಳೆ ಇಬ್ಬರಲ್ಲಿ ಒಬ್ಬರೂ ಕಣ್ಣು ತೆರೆದು ಆಚೀಚೆ ನೋಡಿದರೆ ಅದು ಪ್ರಿಯತಮ/ಪ್ರಿಯತಮೆಯ ಮನದಲ್ಲಿ ಅನುಮಾನವನ್ನು ಹುಟ್ಟಿಸುತ್ತದೆ. ಈ ಚುಂಬನವನ್ನು ಬೇರೆ ಯಾರಾದರೂ ನೋಡಿದರೆ ಯಾವ ಗುಟ್ಟು ರಟ್ಟಾಗುತ್ತದೆ ಎಂಬ ಭಯ ಮೂಡುತ್ತಿದೆಯೋ ಎಂಬ ಅನುಮಾನ ಚುಂಬನದ ಎಲ್ಲಾ ಸಂತೋಷವನ್ನೂ ಹಾಳು ಮಾಡುತ್ತದೆ.

ಚುಂಬನದಲ್ಲಿ ಹಲ್ಲುಗಳ ಉಪಯೋಗ ಬೇಡ

ಚುಂಬನದಲ್ಲಿ ಹಲ್ಲುಗಳ ಉಪಯೋಗ ಬೇಡ

ಚುಂಬನದ ಭಾವೋತ್ಕಟತೆಗೆ ಪರವಶರಾಗಿ ಕೆಲವರು ಹಲ್ಲುಗಳಿಂದ ಕಚ್ಚುವುದುಂಟು. ಇದು ಪ್ರಿಯತಮ/ಪ್ರಿಯತಮೆಗೆ ತೀವ್ರ ಮುಜುಗರ ತರುತ್ತದೆ. ಉತ್ತಮ ಸಂಬಂಧಕ್ಕಾಗಿ ಹಿತಕರವಾದಷ್ಟು ಮಾತ್ರ ಸ್ಪರ್ಶ ಸರಿ. ಹೆಚ್ಚಿನ ಒತ್ತಡ ಮತ್ತು ಕಚ್ಚುವಿಕೆ ಮೊದಲಾದವು ಹಿಂಸೆಗೆ ತಿರುಗಿ ಸಂಬಂಧವನ್ನೇ ಕಡಿದುಕೊಳ್ಳಲು ಕಾರಣವಾಗಬಲ್ಲವು.

ನಾನೀಗ ಚುಂಬಿಸುತ್ತೇನೆ ಎಂದು ಎಂದೂ ಮುಂಚಿತವಾಗಿ ಹೇಳದಿರಿ

ನಾನೀಗ ಚುಂಬಿಸುತ್ತೇನೆ ಎಂದು ಎಂದೂ ಮುಂಚಿತವಾಗಿ ಹೇಳದಿರಿ

ಚುಂಬನ ಎರಡು ಹೃದಯಗಳ ನಡುವಿನ ಸೇತುವೆಯಾಗಬೇಕೇ ವಿನಃ ಒಂದು ಒಪ್ಪಂದವಾಗಬಾರದು. ಈಗ ನಾನು ನಿನ್ನನ್ನು ಚುಂಬಿಸುತ್ತೇನೆ ಎಂದು ಪ್ರಕಟಿಸಿದರೆ ನಿನ್ನ ದೇಹ ಮತ್ತು ಮನಸ್ಸಿನ ಮೇಲೆ ನಾನು ಒಡೆತನ ಸಾಧಿಸುತ್ತಿದ್ದೇನೆ ಎಂದು ಪರೋಕ್ಷವಾಗಿ ಹೇಳಿದಂತೆ. ಚುಂಬನ ಎಂದಿರೂ ನೈಸರ್ಗಿಕವಾಗಿ, ಸ್ವಾಭಾವಿಕವಾಗಿ ಬರಬೇಕೇ ವಿನಃ ಬಲವಂತದಿಂದಲ್ಲ.

ತುಂಬಾ ದೀರ್ಘಕಾಲದ ಚುಂಬನ ಬೇಡ

ತುಂಬಾ ದೀರ್ಘಕಾಲದ ಚುಂಬನ ಬೇಡ

ಗಿನ್ನೆಸ್ ದಾಖಲೆಗಾಗಿ ಗಂಟೆಗಟ್ಟಲೇ ಚುಂಬಿಸಿದ ಜೋಡಿಗಳು ಎಂದೂ ನಿಮಗೆ ಆದರ್ಶಪ್ರಾಯರಾಗದಿರಲಿ. ಚುಂಬನ ಇಬ್ಬರಿಗೂ ಹಿತಕರವಾದಷ್ಟು ಹೊತ್ತು ಮಾತ್ರ ಇರಲಿ. ಹೆಚ್ಚಿನ ಹೊತ್ತಿನ ಚುಂಬನ ಈಗಾಗಲೇ ಮೂಡಿರುವ ಸದಭಿಪ್ರಾಯಗಳನ್ನು ಬದಲಿಸುವ ಸಾಧ್ಯತೆ ಇದೆ.

ಚುಂಬನವೆಂದರೆ ತುಟಿಗಳು ಮಾತ್ರ ಅಲ್ಲ

ಚುಂಬನವೆಂದರೆ ತುಟಿಗಳು ಮಾತ್ರ ಅಲ್ಲ

ಚಲನಚಿತ್ರಗಳಲ್ಲಿ ನೋಡಿದಂತೆ ಚುಂಬನ ಎಂದರೆ ತುಟಿಗೆ ತುಟಿ ಹಚ್ಚುವುದು ಮಾತ್ರ ಅಲ್ಲ. ನಿಮ್ಮ ಪ್ರಿಯತಮ/ಪ್ರಿಯತಮೆ ಬಯಸುವ ಕೆನ್ನೆ, ಹಣೆ, ಗಲ್ಲ ಮೊದಲಾದೆಡೆಯೂ ನವಿರಾಗಿ ಚುಂಬಿಸುವುದು ಹೃದಯಕ್ಕೆ ಇನ್ನಷ್ಟು ಹತ್ತಿರಾಗುವ ಗುಟ್ಟು.

ಇದೇ ನನ್ನ ಜೀವನದ ಕಡೆಯ ಚುಂಬನವೆಂಬಂತೆ ಚುಂಬಿಸದಿರಿ

ಇದೇ ನನ್ನ ಜೀವನದ ಕಡೆಯ ಚುಂಬನವೆಂಬಂತೆ ಚುಂಬಿಸದಿರಿ

ಚುಂಬನದಲ್ಲಿ ನೀಡುವ ಒತ್ತಡ, ಸಮಯ, ಬಿಗಿ ಮೊದಲಾದವುಗಳು ಹಿತವಾಗುವಷ್ಟೇ ಇರಲಿ. ಇದೇ ನನ್ನ ಕಡೆಯ ಚುಂಬನ ಇನ್ನು ಹತ್ತು ವರ್ಷ ಸಿಗಲಾರೆ ಎಂಬ ಭಾವನೆಯಲ್ಲಿ ನೀಡುವ ಚುಂಬನ ನಿಜಕ್ಕೂ ನಿಮ್ಮ ಕಡೆಯ ಚುಂಬನವೇ ಆಗಬಹುದು.

ಬಾಯಿಯಲ್ಲಿ ದುರ್ವಾಸನೆಯಿದ್ದಾಗ ಚುಂಬನದಿಂದ ದೂರವಿರಿ

ಬಾಯಿಯಲ್ಲಿ ದುರ್ವಾಸನೆಯಿದ್ದಾಗ ಚುಂಬನದಿಂದ ದೂರವಿರಿ

ಚುಂಬನಕ್ಕೂ ಮೊದಲು ಬಾಯಿಯ ದುರ್ವಾಸನೆಯಿಂದ ಮುಕ್ತರಾಗಿರಿ. ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ, ಸಾಧ್ಯವಾದರೆ ಲಭ್ಯವಿರುವ ಮೌಥ್ ಫ್ರೆಷ್ನರ್ ನಿಂದ ಬಾಯಿಯ ದುರ್ವಾಸನೆಯಿಂದ ಮುಕ್ತರಾಗಿ ಪ್ರಿಯತಮ/ಪ್ರಿಯತಮೆಯನ್ನು ಭೇಟಿಯಾಗಿ.

English summary

15 Kissing Mistakes Every Couple Makes

We all love to kiss the person we are dating! But, what if your kiss turns out to be the most disastrous thing in this world? Yes, there are a lot of people who blow up their first kiss! There are several kissing mistakes that every couple makes during the first time and may be in the second or third opportunity as well.
X
Desktop Bottom Promotion