For Quick Alerts
ALLOW NOTIFICATIONS  
For Daily Alerts

ಆದರ್ಶ ಸಂಗಾತಿಯ 15 ಲಕ್ಷಣಗಳು

By Super
|

ನಮಗೆ ಒಬ್ಬ ಒಳ್ಳೆಯ ಸಂಗಾತಿ ದೊರೆತಾಗ ಮದುವೆಯ ಕನಸನ್ನು ಕಾಣಲು ಆರಂಭಿಸುತ್ತೇವೆ. ಆದರೆ ಈ ನಿಮ್ಮ ಸಂಗಾತಿಯಲ್ಲಿರುವ ಯಾವ ಗುಣಗಳು ಆ ವ್ಯಕ್ತಿಯನ್ನು ಒಬ್ಬ ಶ್ರೇಷ್ಠ ಸಂಗಾತಿಯನ್ನಾಗಿ ಮಾಡುತ್ತದೆ? ತಾಳಿ ಕಟ್ಟುವ ಮೊದಲು ನಾವು ಆಲೋಚಿಸಬೇಕಾಗಿರುವ ಹಲವಾರು ವಿಚಾರಗಳು ಇವೆಯೆಂಬುದನ್ನು ಮರೆಯಬಾರದು. ಮದುವೆ ಎಂದರೆ ಪಾರ್ಕಿನಲ್ಲಿ ಓಡಾಡಿದರೆಷ್ಟೇ ಮುಗಿಯುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಇದರ ಹೊರಗೆ ಸಾಕಷ್ಟು ವಿಚಾರಗಳು ಇನ್ನೂ ಇವೆ!

ನಿಮ್ಮ ಸಂಗಾತಿಯನ್ನು ಆಲಂಗಿಸಿಕೊಳ್ಳಲು ಹತ್ತು ಕಾರಣಗಳು

ಇಂದು ಬಹುತೇಕ ಭಾರತೀಯರು ಹಿರಿಯರು ನೋಡಿ ವ್ಯವಸ್ಥೆ ಮಾಡಿದ ಮದುವೆಗಳನ್ನೇ ಮಾಡಿಕೊಳ್ಳುತ್ತಿದ್ದಾರೆ. ಒಮ್ಮೆ ಅವರನ್ನು " ಪತ್ತೆದಾರಿಕೆ" ಮಾಡಿ ನಿಜಕ್ಕೂ ಆ ವ್ಯಕ್ತಿ ಇವರ ಯೋಗ್ಯ ಸಂಗಾತಿಯೇ? ಎಂಬುದನ್ನು. ಕನ್ಯೆಗಾಗಲಿ ಅಥವಾ ಹುಡುಗನಿಗಾಗಲಿ ವರ ಮತ್ತು ವಧುವನ್ನು ಹುಡುಕುವಾಗ ಪೋಷಕರು ಹೇಳುವುದು ಒಂದೇ ವಾಕ್ಯ " ವಿದ್ಯಾವಂತ, ಸ್ವಂತಂತ್ರ, ನೋಡಲು ಸುಂದರವಾಗಿರುವ, ಗುಣವಂತ ಮತ್ತು ಪ್ರಬುದ್ಧಳಾದ/ನಾದ ವರ ಅಥವಾ ವಧು ಬೇಕು ಎಂದು. ಇದರ ಅರ್ಥ ಅವರು ಬಯಸುವ ವಧು ಮತ್ತು ವರ ತಮ್ಮ ಮಗ/ಮಗಳಿಗೆ ಆದರ್ಶ ಪ್ರಾಯವಾಗಿರಬೇಕು ಎಂದರ್ಥ. ಈ ಮಾನದಂಡವನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ.

ಒಂದು ವೇಳೆ ನೀವು ನಿಮಗೆ ತಕ್ಕನಾದ ಮಿಸ್ಟರ್ ಅಥವಾ ಮಿಸ್ ಪರ್ಫೆಕ್ಟ್‌ಳನ್ನು ಹುಡುಕುತ್ತಿದ್ದಲ್ಲಿ ಇದೇ ಸುಸಮಯ ಅದರ ಕುರಿತಾಗಿ ಪತ್ತೆದಾರಿಕೆಯನ್ನು ಮಾಡಲು. ಒಂದು ವೇಳೆ ನಿಮ್ಮ ಸಂಗಾತಿಯೊಂದಿಗೆ ನೀವು ಡೇಟಿಂಗ್‍ ಮಾಡುತ್ತಿದ್ದಲಿ ನಿಮ್ಮ ಸಂಗಾತಿಯಲ್ಲಿ ಈ ಎಲ್ಲಾ ಅಂಶಗಳು ಇವೆಯೇ ಇಲ್ಲವೇ ಎಂದು ಖಾತ್ರಿ ಪಡಿಸಿಕೊಳ್ಳಿ. ಈ ಲಕ್ಷಣಗಳಲ್ಲಿ ಕೆಲವಾದರು ನಿಮ್ಮ ಸಂಗಾತಿಯಲ್ಲಿ ಇದ್ದಲ್ಲಿ ಅದು ನಿಮಗೆ ಕಂಡೇ ಕಾಣುತ್ತದೆ ಬಿಡಿ. ಏಕೆಂದರೆ ಜೀವನ ಪರ್ಯಂತ ನೀವು ಜೊತೆಯಾಗಿ ಬಾಳು ಸಾಗಿಸಬೇಕಾಗಿರುವ ವ್ಯಕ್ತಿಯು, ನಿಮ್ಮನ್ನು ಅರಿತು ಬೆರೆತು ಹೋಗುತ್ತಾರಾ? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಅದಕ್ಕಾಗಿ ಇಲ್ಲಿ ನಾವು ಕೆಲವೊಂದು ಆದರ್ಶ ಸಂಗಾತಿಯ ಲಕ್ಷಣಗಳನ್ನು ನೀಡಿದ್ದೇವೆ ಓದಿಕೊಳ್ಳಿ. ನಿಮ್ಮ ಆದರ್ಶ ಸಂಗಾತಿಯನ್ನು ಅರಿತುಕೊಳ್ಳಿ.

ನಿಮ್ಮ ಗಂಡನಿಗಾಗಿ ಕೆಲವು ಮುದ್ದು ಹೆಸರುಗಳು

ಪ್ರಬುದ್ಧತೆ

ಪ್ರಬುದ್ಧತೆ

ಮದುವೆಯೆಂಬುದು ಸರಳವಾದ ಅಂಶವಲ್ಲ. ಅದಕ್ಕಾಗಿ ನಿಮ್ಮ ಸಂಗಾತಿಯು ಜೀವನವನ್ನು ಹಗುರವಾಗಿ ತೆಗೆದುಕೊಳ್ಳುವ ಗುಣವನ್ನು ಹೊಂದಿರಬಾರದು ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕಾದುದು ಮುಖ್ಯ. ಆತನಲ್ಲಿರುವ ಪ್ರಬುದ್ಧತೆಯು ಆತನು ನೀವು ಮುಂದೆ ಮದುವೆಯಾಗಿ ಬಾಳು ಸಾಗಿಸಲು ಯೋಗ್ಯನಾದ ಸಂಗಾತಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

ಸ್ವತಂತ್ರ

ಸ್ವತಂತ್ರ

ನೀವು ಒಂದು ಸಂಬಂಧದಲ್ಲಿದ್ದರೆ, ನೀವು ಒಬ್ಬರ ಮೇಲೊಬ್ಬರು ಅವಲಂಬನೆಯಾಗಿರುವುದು ಸಹಜ. ಹಾಗೆಂದು ಎಲ್ಲದಕ್ಕು ನೀವು ಇತರರ ಮೇಲೆ ಅವಲಂಬನೆಯಾಗಿರುವುದು ಸರಿಯಲ್ಲ. ಅದಕ್ಕಾಗಿಯೇ ನಿಮ್ಮ ಆದರ್ಶ ಸಂಗಾತಿಯು ಸ್ವತಂತ್ರನಾಗಿರಬೇಕು ಎಂಬುದನ್ನು ಮರೆಯಬೇಡಿ.

ರಾಜಿ ಮನೋಭಾವ ಹೊಂದಿರಬೇಕು

ರಾಜಿ ಮನೋಭಾವ ಹೊಂದಿರಬೇಕು

ನಿಮ್ಮ ಸಂಗಾತಿಯಲ್ಲಿ ರಾಜಿಯಾಗುವ ಮನೋಭಾವ ತುಂಬಾ ಇರಬೇಕು. ಏಕೆಂದರೆ ಮನುಷ್ಯ ಎನ್ನುವವನು ಯಾರಾದರು ಸರಿ ತಪ್ಪು ಮಾಡಿಯೇ ತೀರುತ್ತಾರೆ! ನಿಮ್ಮ ತಪ್ಪು ಒಪ್ಪುಗಳನ್ನು ಅನುಸರಿಸಿಕೊಂಡು ಹೋಗುವ ಉದಾರತೆ ಅವರಲ್ಲಿ ಇರಬೇಕು. ಒಂದು ವೇಳೆ ಆತನಲ್ಲಿ/ ಆಕೆಯಲ್ಲಿ ಈ ಗುಣವಿಲ್ಲದಿದ್ದಲ್ಲಿ ಮುಂದೆ ನಿಮ್ಮ ಬಾಳು ಅಧೋಗತಿಯಾಗಿ ಬಿಡುತ್ತದೆ.

ಸಮಯಕ್ಕೆ ಬೆಲೆ ಕೊಡಬೇಕು

ಸಮಯಕ್ಕೆ ಬೆಲೆ ಕೊಡಬೇಕು

ನಿಮ್ಮ ಸಂಗಾತಿಯ ಆದರ್ಶ ಗುಣಗಳಲ್ಲಿ ಮುಖ್ಯವಾಗಿರಬೇಕಾದುದು ಸಮಯ ಪಾಲನೆ. ಸಮಯಕ್ಕೆ ಬೆಲೆ ನೀಡುವವರು ಜೀವನದಲ್ಲಿ ಮುಂದೆ ಬರುತ್ತಾರೆ. ಆತ/ಆಕೆ ಸಮಯಕ್ಕೆ ಅಥವಾ ಹಣಕ್ಕೆ ಬೆಲೆ ನೀಡದಿದ್ದಲ್ಲಿ, ನಿಮ್ಮ ಬಾಳಿನಲ್ಲಿ ಅವರು ಬರುವ ಮೌಲ್ಯವನ್ನು ಅವರು ಹೊಂದಿಲ್ಲ ಎಂದೇ ಅರ್ಥ.

ಪರಿಪೂರ್ಣತೆ ಬಯಸದವರು

ಪರಿಪೂರ್ಣತೆ ಬಯಸದವರು

ನೀವೇ ಯಾರೇ ಆಗಿರಿ, ಏನೇ ಮಾಡಲಿ ನಿಮ್ಮನ್ನು ಇಷ್ಟಪಡುವ ವ್ಯಕ್ತಿಯೇ ನಿಮ್ಮ ಯೋಗ್ಯ ಸಂಗಾತಿ. ಅದರ ಬದಲಿಗೆ ನಿಮ್ಮನ್ನು ತಮ್ಮಿಷ್ಟಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಮನಃಸ್ಥಿತಿಯ ವ್ಯಕ್ತಿ ಬೇಡ. ಹಾಗಾಗಿ ಪರಿಪೂರ್ಣತೆ ಬಯಸದಿರುವ, ಇದ್ದುದ್ದನ್ನು ಇದ್ದಂತೆ ಸ್ವೀಕರಿಸುವ ಮನೋಭಾವದ ವ್ಯಕ್ತಿತ್ವ ನಿಮ್ಮ ಸಂಗಾತಿಯಲ್ಲಿದೆಯೇ ಪರಿಶೀಲಿಸಿ.

ಸಹಾನುಭೂತಿ

ಸಹಾನುಭೂತಿ

ಸಂಗಾತಿಯ ಮನಸ್ಸನ್ನು ಅರಿಯುವ ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿ ಪ್ರತಿಯೊಬ್ಬರ ಆಸ್ತಿ. ತನ್ನ ರುಚಿ, ಅಭಿರುಚಿ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಆದರ್ಶ ಗುಣಗಳು ನಿಮ್ಮ ಸಂಗಾತಿಯಲ್ಲಿ ಇದೆಯೇ. ಈ ಗುಣವನ್ನು ನಿಮ್ಮ ಸಂಗಾತಿಯಲ್ಲಿ ಹುಡುಕಿರಿ, ಈ ಗುಣವನ್ನು ಹೊಂದಿರಬೇಕಾದುದು ಅನಿವಾರ್ಯ ಎಂಬುದನ್ನು ಇಬ್ಬರೂ ಮರೆಯಬಾರದು.

ಹಾಸ್ಯ ಪ್ರವೃತ್ತಿ

ಹಾಸ್ಯ ಪ್ರವೃತ್ತಿ

ನೀವು ಸುಮ್ಮನೆ ಬೇಸರಗೊಂಡು ಕುಳಿತಾಗ ನಿಮ್ಮನ್ನು ನಕ್ಕುನಗಿಸುವ ಗುಣವನ್ನು ತನ್ನಲ್ಲಿ ಹೊಂದಿರುವ ಮತ್ತು ನಿಮ್ಮಲ್ಲಿ ಮತ್ತೆ ಮಂದಹಾಸವನ್ನು ತುಂಬುವ ವ್ಯಕ್ತಿಯಾಗಿರಬೇಕು ನಿಮ್ಮ ಸಂಗಾತಿ. ಯಾವುದೇ ಬೇಸರವನ್ನು ಮರೆಸುವಂತಹ ಮುಗುಳು ನಗೆ ಮತ್ತು ಮಂದಹಾಸ ನಿಮ್ಮ ಸಂಗಾತಿಯ ಮುಖದಲ್ಲಿ ಸದಾ ನಗುತ್ತಿರಬೇಕು. ಅಂತಹ ಶಕ್ತಿಯನ್ನು ಹೊಂದಿರುವ ಸಂಗಾತಿ ಜೀವನದ ಎಂತಹ ಕಷ್ಟದಲ್ಲಿಯೂ ನಿಮ್ಮನ್ನು ಮುಂದೆ ಸಾಗಲು ನೆರವಾಗಬಲ್ಲರು.

ಸಾಧನೆಯನ್ನು ಮಾಡುವ ಹಂಬಲ

ಸಾಧನೆಯನ್ನು ಮಾಡುವ ಹಂಬಲ

ನಿಮ್ಮ ಸಂಗಾತಿಯಲ್ಲಿ ಏನಾದರು ಸಾಧಿಸುವ ಹಂಬಲ ಇರಬೇಕು. ಏನಾದರು ಗುರಿಯನ್ನು ನಿರ್ಧರಿಸಿಕೊಂಡು, ಆ ಗುರಿಯನ್ನು ತಲುಪುವ ಛಲ ಮತ್ತು ತುಡಿತವನ್ನು ಹೊಂದಿರುವ ಗುಣ ನಿಮ್ಮ ಸಂಗಾತಿಯಲ್ಲಿರಬೇಕು. ಅಂತಹ ಕನಸನ್ನು ಹೊಂದಿರುವ ಸಂಗಾತಿಯ ಬಾಳ ಸಂಗಾತಿ ನೀವು ಆಗಬೇಕು.

ಪ್ರಾಮಾಣಿಕತೆ

ಪ್ರಾಮಾಣಿಕತೆ

"ಸತ್ಯ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವವನಿಗೆ ಹೇಳಬೇಕಾದುದು ಏನೂ ಇಲ್ಲ" ಎಂದು ಹೇಳುತ್ತಾರೆ ಕನ್‍ಫ್ಯೂಶಿಯಸ್, ಹಾಗೆಯೇ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಹೊಂದಿರುವ ನಿಮ್ಮ ಸಂಗಾತಿಯ ಬಗ್ಗೆ ಇನ್ನೇನು ತಾನೇ ಹೇಳಲಾದೀತು. ಸಂಬಂಧದ ಬುನಾದಿಯೇ ಪ್ರಾಮಾಣಿಕತೆ. ನಿಮ್ಮ ಸಂಬಂಧವನ್ನು ಶಾಶ್ವತಗೊಳಿಸುವ ಮೊದಲು ಆತ ಅಥವಾ ಆಕೆಯು ನಿಮ್ಮೆಡೆಗೆ ಪ್ರಾಮಾಣಿಕತೆಯನ್ನು ಹೊಂದಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ.

ವಾಸ್ತವ ಪ್ರಜ್ಞೆಯುಳ್ಳವರಾಗಿರಬೇಕು

ವಾಸ್ತವ ಪ್ರಜ್ಞೆಯುಳ್ಳವರಾಗಿರಬೇಕು

ಸುಮಾರು ದಂಪತಿಗಳಲ್ಲಿ ಇರುವ ಕೊರತೆಯೇ ಇದು, ವಾಸ್ತವದಿಂದ ದೂರವುಳಿಯುವುದು. ಅವರಿಗೆ ಭವಿಷ್ಯದ ಬಗ್ಗೆ ಅಂತಹ ಸ್ಪಷ್ಟ ಪರಿಕಲ್ಪನೆಯೇ ಇರುವುದಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ತಮ್ಮದೇ ಆದ ಭ್ರಮಾ ಲೋಕದಲ್ಲಿ ಜೀವಿಸಿಬಿಡುವ ಅಪಾಯಕಾರಿ ಮನೋಭಾವ ನಿಮ್ಮ ಸಂಗಾತಿಯಲ್ಲಿ ಇರಬಾರದು. ಈ ವಿಶಾಲವಾದ ಪ್ರಪಂಚದ ಉದ್ದ, ಅಗಲದ ಅರಿವು ನಿಮ್ಮ ಬಾಳ ಸಂಗಾತಿಗೆ ತಪ್ಪದೆ ಇರಬೇಕು. ಇದು ಜೀವನ, ಹುಡುಗಾಟವಲ್ಲ.

ಅಹಂಕಾರವಿರಬಾರದು

ಅಹಂಕಾರವಿರಬಾರದು

ಗಂಡಸರು ಹುಟ್ಟು ಅಹಂಕಾರಿಗಳು, ಆದರೆ ಇವರು ಇದನ್ನು ಸುತರಾಂ ಒಪ್ಪುವುದಿಲ್ಲ. ಒಂದು ವೇಳೆ ನಿಮ್ಮ ಹುಡುಗನಲ್ಲಿ ಈ ಗುಣಗಳು ಇದ್ದಲ್ಲಿ ಮೊದಲು ಅದನ್ನು ಹದ್ದು ಬಸ್ತಿಗೆ ತರಲು ಪ್ರಯತ್ನಿಸಿ. ಒಂದು ವೇಳೆ ಈ ನಿಟ್ಟಿನಲ್ಲಿ ನೀವು ಸೋತರೆ ಖಂಡಿತವಾಗಿ ಆ ವ್ಯಕ್ತಿಯ ಜೊತೆ ನೀವು ಬಾಳಲು ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ.

ಗೌರವಿಸುವವರು

ಗೌರವಿಸುವವರು

ಒಬ್ಬ ಆದರ್ಶ ಸಂಗಾತಿಯ ಮುಖ್ಯ ಗುಣಗಳಲ್ಲಿ ಮುಖ್ಯವಾಗಿರುವ ಮತ್ತೊಂದು ಗುಣ ಗೌರವ ನೀಡುವುದು. ಹೆಣ್ಣನ್ನು ಗೌರವಿಸುವುದು ನಿಜಕ್ಕು ಗಂಡಿನ ಮುಖ್ಯ ಗುಣಗಳಲ್ಲಿ ಒಂದು. ಒಂದು ವೇಳೆ ನಿಮ್ಮ ಹುಡುಗನು ನಿಮ್ಮನ್ನು ಮತ್ತು ಇತರ ಮಹಿಳೆಯರನ್ನು (ತಾಯಿ, ಅಕ್ಕ, ತಂಗಿ ಇತ್ಯಾದಿ) ಗೌರವಿಸುತ್ತಿದ್ದಲ್ಲಿ, ನೀವು ನಿಜಕ್ಕೂ ಅದೃಷ್ಟಶಾಲಿಗಳು ಎಂಬುದರಲ್ಲಿ ಎರಡು ಮಾತಿಲ್ಲ.

ನೇರ ನಡೆ- ನುಡಿ

ನೇರ ನಡೆ- ನುಡಿ

ನಿಮ್ಮ ಸಂಗಾತಿಯಲ್ಲಿ ನೇರ ನಡೆ- ನುಡಿಯನ್ನು ಹೊಂದಿರುವ ಗುಣವಿದೆಯೇ ನೋಡಿ. ಏಕೆಂದರೆ ಈ ನೇರ ನಡೆ- ನುಡಿಯನ್ನು ಹೊಂದಿರುವ ವ್ಯಕ್ತಿಯು ಸಂಬಂಧವನ್ನು ಜೀವನ ಪರ್ಯಂತ ಕಾಪಾಡಿಕೊಂಡು ಹೋಗುವ ಗುಣವನ್ನು ಹೊಂದಿರುತ್ತಾನೆ. ನೀವು ಡೇಟಿಂಗ್ ಮಾಡುವಾಗ ಈ ಗುಣವನ್ನು ಸುಲಭವಾಗಿ ಗ್ರಹಿಸಬಹುದು. ಇದರಿಂದ ನಿಮ್ಮ ಸಂಗಾತಿಯ ಬೇಕು, ಬೇಡಗಳ ಪರಿಚಯ ನಿಮಗೆ ಸಂಪೂರ್ಣವಾಗಿ ಸಿಗುತ್ತದೆ.

ತಾಳ್ಮೆ

ತಾಳ್ಮೆ

"ತಾಳಿದವನು ಬಾಳಿಯಾನು" ಎಂಬ ಗಾದೆಯೇ ಇದೆ. ಯಾರ ಬಳಿ ತಾಳ್ಮೆ ಇರುತ್ತದೆಯೋ, ಅವರ ಬಳಿಗೆ ಜೀವನದ ಸುಖ ಸಂತೋಷಗಳೆಲ್ಲವು ಬರುತ್ತದೆ. ನಿಮ್ಮ ಸಂಗಾತಿಯಲ್ಲಿ ಈ ಗುಣವಿದ್ದಲ್ಲಿ, ಆತ/ಆಕೆ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರ ಜೊತೆಯಲ್ಲಿ ನೀವು ಕಾಲ ಕಳೆಯಲು ಆಸೆ ಪಡುತ್ತೀರಿ. ಅಂತಹವರು ನಿಮ್ಮ ಸಂಗಾತಿಯಾಗಿದ್ದರೆ ನೀವೇ ಅದೃಷ್ಟಶಾಲಿಗಳು.

ರೊಮ್ಯಾಂಟಿಕ್ ಆಗಿರಬೇಕು

ರೊಮ್ಯಾಂಟಿಕ್ ಆಗಿರಬೇಕು

ಎಲ್ಲಾ ಇದ್ದು, ರೊಮ್ಯಾಂಟಿಕ್ ಆಗಿಲ್ಲದಿರುವ ಸಂಗಾತಿಯಾಗಿದ್ದರೆ ಏನು ಚೆಂದ. ನಿಮ್ಮ ಸಂಗಾತಿಯಲ್ಲಿ ಈ ಗುಣವು ಖಂಡಿತ ಇರಬೇಕು ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಏಕೆಂದರೆ ರೊಮ್ಯಾಂಟಿಕ್ ಆಗಿಲ್ಲದಿರುವ ಸಂಗಾತಿಯನ್ನು ನೀವು ಹೊಂದಿದ್ದರೆ, ನಿಮ್ಮ ಬಾಳು ಅಧೋಗತಿಯಾಗುವುದರಲ್ಲಿ ಸಂಶಯವಿಲ್ಲ. ನೀವು ಡೇಟಿಂಗ್ ಮಾಡುವ ವ್ಯಕ್ತಿಯಲ್ಲಿ ಈ ಗುಣಗಳು ಇದೆಯೇ ಎಂಬುದನ್ನು ಗುರುತಿಸಿ. ರೊಮ್ಯಾಂಟಿಕ್ ಆಗಿರುವ ಸಂಗಾತಿಯು ನಿಮ್ಮನ್ನು ಸದಾ ಲವಲವಿಕೆಯಿಂದ ಇಟ್ಟಿರುತ್ತಾನೆ.

English summary

15 Characteristics Of An Ideal Partner

Marriage is something we all look at in the near future when we think we have found the right partner! But, what makes him or her ideal to be a great partner for you? There are certain things to look into before you tie the knot.
X
Desktop Bottom Promotion