For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೀತಿಯ ಸೊಬಗನ್ನು ಸದಾ ಕಾಪಾಡಿಕೊಳ್ಳುವುದು ಹೇಗೆ?

By Deepak M
|

ಸಂಬಂಧದಲ್ಲಿ ದೂರ ಎನ್ನುವ ಮಾತು ಬಂದಾಗ ಪ್ರತಿಯೊಬ್ಬರಿಗು ತಮ್ಮ ಸಂಬಂಧದ ನಡುವೆ ಕಂದಕ ಉಂಟಾಗುತ್ತದೆ ಎಂಬ ಭಯ, ಗೊಂದಲ ಮುಂತಾದ ಆಲೋಚನೆಗಳು ಮೂಡುವುದು ಸಹಜ. ಜೊತೆಗೆ ಇದು ಸವಾಲಿನ ಕೆಲಸವು ಸಹ ಹೌದು.

ಆದರೆ ನನ್ನ ಪ್ರಕಾರ ಸಂಬಂಧದಲ್ಲಿ ದೂರವಿರುವಾಗ ಕೆಲವೊಂದು ಒಳ್ಳೆಯ ಅಂಶಗಳು ಸಹ ನಮಗೆ ಮುದ ನೀಡುತ್ತವೆ. ದೂರ ಇದ್ದಷ್ಟು ಸಂಬಂಧ ಮಧುರಾತಿ ಮಧುರವಾಗುವ ಸಂಭವಗಳು ಸಹ ಹೆಚ್ಚಾಗಿರುತ್ತವೆ. ನೀವು ದೂರವಿದ್ದಷ್ಟು ನಿಮ್ಮ ಸಂಗಾತಿಗೆ ನೀವು ಮತ್ತಷ್ಟು ಹತ್ತಿರವಾಗುವ ಮತ್ತು ಅವರ ಪ್ರೀತಿಗೆ ಪಾತ್ರವಾಗುವ ಕ್ಷಣಗಳು ನಿಮಗೆ ಲಭ್ಯವಾಗುತ್ತವೆ.

ದಕ್ಷಿಣ ಭಾರತೀಯ ಹುಡುಗನನ್ನು ಗೆಳೆಯನ್ನಾಗಿ ಮಾಡಿಕೊಳ್ಳಬಹುದೇ?

ಬಹುತೇಕ ಮಂದಿ ತುಂಬಾ ದಿನ ದೂರವಿದ್ದರೆ ತಮ್ಮ ಸಂಬಂಧ ಹಳಸಿ ಹೋಗುತ್ತದೆ ಎಂದು ಕಳವಳಪಡುತ್ತಾರೆ. ಆದರೆ ಎರಡು ಪರಸ್ಪರ ಇಷ್ಟಪಟ್ಟ ಜೀವಗಳು ತುಂಬಾ ದಿನ ತುಂಬಾ ದೂರವಿದ್ದರು ಸಹ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ ತಮ್ಮ ಪ್ರೀತಿಯನ್ನು ಮತ್ತು ಸಂಬಂಧವನ್ನು ಕಾಪಾಡಿಕೊಂಡಿರುತ್ತಾರೆ.

ನೀವು ಪ್ರೀತಿಸುವ ವ್ಯಕ್ತಿಯನ್ನು ಪ್ರತಿದಿನವೂ ಭೇಟಿ ಮಾಡಿದರೆ ಮಾತ್ರ ನಿಮ್ಮ ಪ್ರೀತಿಯ ತಾಜಾತನ ಉಳಿಯುತ್ತದೆಯೆಂದು ಭಾವಿಸಬೇಡಿ. ಒಂದು ತಿಂಗಳು, ಎರಡು ತಿಂಗಳು ಅಥವಾ ಆರು ತಿಂಗಳ ನಂತರವು ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಯನ್ನು ಭೇಟಿಯಾದಾಗಲೂ ನಿಮ್ಮ ಪ್ರೀತಿಗೆ ಯಾವುದೇ ಕುಂದು ಉಂಟಾಗಿರುವುದಿಲ್ಲ. ಇಲ್ಲಿ ನಿಮ್ಮ ಪ್ರೀತಿಯ ಸೊಬಗನ್ನು ಸದಾ ಕಾಪಾಡಿಕೊಳ್ಳಲು ಕೆಲವೊಂದು ಸೃಜನಶೀಲ ಸಲಹೆಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ಇದನ್ನು ನೀವು ಇಬ್ಬರೂ ಪಾಲಿಸಿ ನಂತರ ನೋಡಿ! ಎಲ್ಲೇ ಇರಿ, ಹೇಗೆ ಇರಿ, ಎಂದೆಂದಿಗು ನಿಮ್ಮ ಸಂಗಾತಿಯ ಮನದಲ್ಲಿ ನೀವೇ ನೆಲೆಸಿರುವಿರಿ.

ಒಟ್ಟಿಗೆ ಏನಾದರು ಮಾಡಿ

ಒಟ್ಟಿಗೆ ಏನಾದರು ಮಾಡಿ

ನೀವಿಬ್ಬರೂ ಒಂದೇ ಸ್ಥಳದಲ್ಲಿ ಒಟ್ಟಿಗೆ ಇಲ್ಲದಿದ್ದಲ್ಲಿ ಒಟ್ಟಿಗೆ ಏನು ಮಾಡಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನೀವು ದೂರವಿದ್ದರು ಸಹ ಒಟ್ಟಿಗೆ ಏನಾದರು ಮಾಡಬಹುದು. ಅದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯೇ? ಅದಕ್ಕೆ ಇದೇ ಉತ್ತರ, ಇಬ್ಬರೂ ಸೇರಿ ಒಂದೇ ಟಿ.ವಿ ಕಾರ್ಯಕ್ರಮ ವೀಕ್ಷಿಸಿ, ಅದರ ಮೇಲೆ ಚರ್ಚಿಸಿ. ಕಾರ್ಯಕ್ರಮದ ನಡುವೆ ಜಾಹೀರಾತುಗಳು ಬಂದಾಗ ನಿಮ್ಮ ಚರ್ಚೆ ನಡೆಯಲಿ. ಇದರಿಂದ ಒಟ್ಟಿಗೆ ಇದ್ದಾಗ ದೊರೆಯುವ ಅನುಭವವೇ ದೊರೆಯುತ್ತದೆ. ಜೊತೆಗೆ ನಿಮ್ಮಿಬ್ಬರಿಗು ಇಷ್ಟವಾಗುವ ಕೆಲವೊಂದು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಅದು ಗಾರ್ಡೆನಿಂಗ್ ಆಗಬಹುದು ಅಥವಾ ಅಡುಗೆ ಮಾಡುವುದು ಆಗಬಹುದು. ಒಟ್ಟಿನಲ್ಲಿ ಇಬ್ಬರಿಗು ಇದು ಇಷ್ಟವಾಗುವ ಕೆಲಸವಾಗಿರಬೇಕು. ಈ ಕ್ರಿಯೆಗಳು ನಿಮ್ಮಿಬ್ಬರಿಗೆ ಒಳ್ಳೆಯ ಅನುಭವವನ್ನು ದೊರಕಿಸುತ್ತದೆ. ಜೊತೆಗೆ ನೀವಿಬ್ಬರೂ ದೂರವಿದ್ದೀರಾ ಎನ್ನುವ ಭಾವನೆಯೇ ನಿಮ್ಮ ನಡುವೆ ಬರದಂತೆ ತಡೆಯುತ್ತದೆ.

ಭವಿಷ್ಯದ ಭೇಟಿಗಳ ಕುರಿತಾಗಿ ಯೋಜನೆ ತಯಾರಿಸುವುದು

ಭವಿಷ್ಯದ ಭೇಟಿಗಳ ಕುರಿತಾಗಿ ಯೋಜನೆ ತಯಾರಿಸುವುದು

ಇದು ನಿಜಕ್ಕು ಒಂದು ಆರೋಗ್ಯಕಾರಿ ಪ್ರಕ್ರಿಯೆ. ನೀವಿಬ್ಬರೂ ಮುಂದೆ ಎಂದು ಭೇಟಿಯಾಗುತ್ತೀರಿ ಮತ್ತು ಆ ದಿನ ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳನ್ನು ಮೊದಲೇ ಯೋಜನೆ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಭೇಟಿಯ ಬಗೆಗೆ ಕುತೂಹಲ ನಿಮ್ಮಿಬ್ಬರಲ್ಲೂ ಬೆಳೆಯುತ್ತದೆ ಮತ್ತು ಈ ಕುತೂಹಲವೇ ನಿಮ್ಮಿಬ್ಬರ ನಡುವಿನ ಪ್ರೀತಿಯ ತಾಜಾತನವನ್ನು ಕಾಯ್ದಿಡುತ್ತದೆ. ಜೊತೆಗೆ ಇದರಿಂದ ನೀವು ಭೇಟಿಯಾದ ದಿನ ಸಮಯವು ಸಹ ವ್ಯರ್ಥವಾಗುವುದಿಲ್ಲ. ಏಕೆಂದರೆ ಅಂದು ಏನು ಮಾಡಬೇಕು ಎಂಬುದರ ಕುರಿತಾಗಿ ನೀವು ಈಗಾಗಲೇ ನಿರ್ಧಾರ ಮಾಡಿರುತ್ತೀರಿ.

ಯಾವಾಗಲೂ ರೊಮ್ಯಾಂಟಿಕ್ ಆಗಿರಿ

ಯಾವಾಗಲೂ ರೊಮ್ಯಾಂಟಿಕ್ ಆಗಿರಿ

ರೊಮ್ಯಾಂಟಿಕ್ ಆಗಿರುವುದೇ? ಎಂದು ಆಲೋಚಿಸಬೇಡಿ. ರೊಮ್ಯಾಂಟಿಕ್ ಆಗಿರುವುದು ಎಂದರೆ ನಿಮ್ಮೊಳಗೆ ಒಬ್ಬ ಪ್ರೇಮಿ ಸದಾ ಸಕ್ರಿಯನಾಗಿರುವುದು ಎಂದರ್ಥ. ಎಷ್ಟು ದೂರದಲ್ಲಿದ್ದರೆ ಏನಂತೆ? ನಿಮ್ಮ ಸಂಗಾತಿಗೆ ಆಗಾಗ ಒಂದು ಪ್ರೇಮ ಪೂರ್ವಕವಾದ ಎಸ್‍ಎಂಎಸ್ ಅಥವಾ ವಾಟ್ಸ್‌ಅಪ್‍ನಲ್ಲಿ ಆಗಾಗ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಂತಹ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಿ. ಈ ಸಂದೇಶಗಳು ನೀವು ನಿಮ್ಮ ಸಂಗಾತಿಯನ್ನು ಎಷ್ಟು ಇಷ್ಟಪಡುತ್ತೀರಾ ಮತ್ತು ಅವರು ನಿಮಗೆ ಎಷ್ಟು ಮುಖ್ಯ ಎಂದು ತೋರಿಸುವಂತಿರಲಿ.

ಸಾಂಪ್ರದಾಯಿಕ ಪತ್ರಗಳು ಅಥವಾ ಉಡುಗೊರೆಗಳ ಸಹಿತ ಮೇಲ್‍ಗಳು

ಸಾಂಪ್ರದಾಯಿಕ ಪತ್ರಗಳು ಅಥವಾ ಉಡುಗೊರೆಗಳ ಸಹಿತ ಮೇಲ್‍ಗಳು

ಇದು ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ಅತ್ಯಂತ ಹಳೆಯ ಸಾಧನಗಳು. ಹಿಂದಿನ ಕಾಲದಲ್ಲಿ ಜನರಿಗೆ ಮೊಬೈಲ್ ಮತ್ತು ಇಂಟರ್‌ನೆಟ್‍ನಂತಹ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಹಾಗಾಗಿ ಅವರು ತಮ್ಮ ಪ್ರೀತಿ ಪಾತ್ರರಾದ ವ್ಯಕ್ತಿಗಳಿಗೆ ಪತ್ರದ ಮುಖಾಂತರವೇ ತಮ್ಮ ಪ್ರೀತಿಯನ್ನು ಅಭಿವ್ಯಕ್ತಪಡಿಸುತ್ತಿದ್ದರು. ಹಾಗಾಗಿ ನೀವು ಸಹ ಇದೇ ಸಾಂಪ್ರದಾಯಿಕ ವಿಧಾನದಲ್ಲಿ ಒಂದು ದೊಡ್ಡ ಪತ್ರವನ್ನು ಬರೆಯಿರಿ. ಅದರಲ್ಲಿ ನಿಮ್ಮ ಅಗಾಧವಾದ ಭಾವನೆಗಳನ್ನು ಮತ್ತು ಪ್ರೀತಿಯನ್ನು ತುಂಬಿ ಕಳುಹಿಸಿ. ಜೊತೆಗೆ ನಿಮ್ಮ ಪ್ರೀತಿಯನ್ನು ಸಾರುವ ಒಂದು ಸಣ್ಣ ಉಡುಗೊರೆ ಇದ್ದಲ್ಲಿ ಈ ಪತ್ರಕ್ಕೆ ಮತ್ತಷ್ಟು ತೂಕ ಲಭ್ಯವಾಗುತ್ತದೆ. ಪತ್ರ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ನೀವು ಇತರ ವ್ಯಕ್ತಿಗಳ ಮನದಲ್ಲಿ ಪ್ರೀತಿಯನ್ನು ಮತ್ತು ಅವರ ಕುರಿತಾದ ಕಾಳಜಿಯ ಮನೋಭಾವವನ್ನು ಬಿತ್ತಲು ಸಹಕಾರಿಯಾಗುತ್ತದೆ. ಇದರಿಂದ ಪ್ರೀತಿ ಮತ್ತು ಕಾಳಜಿ ಮತ್ತಷ್ಟು ಮಗದಷ್ಟು ಹೆಚ್ಚಾಗುತ್ತದೆ.

ಸ್ಕೈಪ್

ಸ್ಕೈಪ್

ಪ್ರಸಕ್ತ ಕಾಲದಲ್ಲಿ ತುಂಬಾ ದಿನಗಳು ನಾವು ಅಂದುಕೊಂಡಷ್ಟು "ತುಂಬಾ ದೊಡ್ಡದೇನಲ್ಲ". ಏಕೆಂದರೆ ಇಂದಿನ ಆಧುನಿಕ ಯುಗದಲ್ಲಿ ಸ್ಕೈಪ್ ಮತ್ತು ಫೇಸ್ ಟೈಮ್‍ನಂತಹ ವೀಡಿಯೊ ಕಾಲ್ಲಿಂಗ್ ಸಾಫ್ಟ್‌ವೇರ್ ಮತ್ತು ಆಪ್ಸ್‌ಗಳು ಯಾವುದೇ ವ್ಯಕ್ತಿಯನ್ನು ತುಂಬಾ ದೂರವಿದ್ದಾರೆ ಎಂಬ ಭಾವನೆಯನ್ನು ಬೆಳೆಯಲು ಬಿಡುವುದೇ ಇಲ್ಲ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ತಂತ್ರಙ್ಞಾನಗಳು ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಯ ಜೊತೆಗೆ ಕಾಲ ಕಳೆಯುತ್ತಿದ್ದೀರಾ ಎಂಬ ಭಾವನೆಯನ್ನು ಮೂಡಿಸುತ್ತವೆ. ನಿಮ್ಮ ಲ್ಯಾಪ್‍ಟಾಪ್ ಅಥವಾ ಮೊಬೈಲ್ ಫೋನ್‍ನಲ್ಲಿ ಇದನ್ನು ಇನ್‍ಸ್ಟಾಲ್ ಮಾಡಿಕೊಳ್ಳಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಿ.

ಫೋಟೊಗಳನ್ನು ವಿನಿಮಯ ಮಾಡಿಕೊಳ್ಳಿ

ಫೋಟೊಗಳನ್ನು ವಿನಿಮಯ ಮಾಡಿಕೊಳ್ಳಿ

ಫೋಟೊಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಯು ದೂರದಲ್ಲಿದ್ದಾರೆ ಎಂಬ ಭಾವನೆ ಬರುವುದನ್ನು ತಡೆಯಬಹುದು. ಇಂದು ವಾಟ್ಸ್ ಆಪ್ ಮತ್ತು ಬಿಬಿಎಂ ನಂತಹ ಆಪ್ಸ್‌ಗಳು ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಗಳನ್ನು ಹತ್ತಿರ ಸೇರಿಸಲು ತುಂಬಾ ಸಹಕರಿಸುತ್ತವೆ. ಕೇವಲ ಒಂದು ಕ್ಲಿಕ್ ಮೂಲಕ ನೀವು ನಿಮ್ಮವರಿಗೆ ನಿಮ್ಮ ಫೋಟೋಗಳನ್ನು ಕಳುಹಿಸಬಹುದು. ಇದರಿಂದ ಕಾಲ ಕಾಲಕ್ಕೆ ನಿಮ್ಮ ಕುರಿತಾದ ಮಾಹಿತಿ, ಹಾಗು ಈ ಕ್ಷಣ ನೀವು ಹೇಗೆ ಕಾಣುತ್ತಿದ್ದೀರಿ ಎಂಬುದರ ಕುರಿತಾಗಿ ಅವರಿಗೆ ಮಾಹಿತಿ ಲಭ್ಯವಾಗುತ್ತಿರುತ್ತದೆ. ಸಮಯ ಸಿಕ್ಕಾಗಲೆಲ್ಲ ನಿಮ್ಮ ಫೋಟೊಗಳನ್ನು ( ಅದು ಹಾಸ್ಯ, ರೊಮ್ಯಾಂಟಿಕ್ ಅಥವಾ ಇತ್ಯಾದಿ) ವಿನಿಮಯ ಮಾಡಿಕೊಳ್ಳಿ. ನಿಮ್ಮ ಪ್ರೀತಿಯನ್ನು ಸದಾ ಕಾಯ್ದಿಡಿ.

ಪ್ರೀತಿಗಾಗಿ ಅನಿರೀಕ್ಷಿತ ಭೇಟಿ

ಪ್ರೀತಿಗಾಗಿ ಅನಿರೀಕ್ಷಿತ ಭೇಟಿ

ಯಾರಿಗೆ ತಾನೇ ಅನಿರೀಕ್ಷಿತ ಉಡುಗೊರೆಗಳು ಅಥವಾ ಭೇಟಿಗಳು ಇಷ್ಟವಾಗುವುದಿಲ್ಲ. ಆದರೆ ಒಂದು ವಿಚಾರ ನೆನಪಿರಲಿ ನಿಮ್ಮ ಅನಿರೀಕ್ಷಿತ ಭೇಟಿ ಖುಷಿಯನ್ನುಂಟು ಮಾಡುವಂತಿರಲಿ. ಅದನ್ನು ಬಿಟ್ಟು ನಿಮ್ಮ ಭೇಟಿ ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಗೆ ಷಾಕ್ ನೀಡುವಂತಿರಬಾರದು. ನೀವು ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಯನ್ನು ಭೇಟಿ ಮಾಡಲು ಹೋದಾಗ ಅದರಿಂದ ಅವರಿಗೆ ಯಾವುದೇ ಕಿರಿಕಿರಿ ಉಂಟಾಗಬಾರದು. ಅವರ ಯೋಜನೆಗಳಿಗೆ ಭಂಗ ಬರಬಾರದು. ನಿಮ್ಮ ಅನಿರೀಕ್ಷಿತ ಭೇಟಿಯಲ್ಲೂ ಸಹ ಒಂದು ಸ್ವಲ್ಪ ಯೋಜನೆಯಿರಲಿ ಮತ್ತು ನಿಮ್ಮ ಸಂಗಾತಿಯ ದೈನಂದಿನ ಕಾರ್ಯಗಳಿಗೆ ಅಡಚಣೆಯುಂಟು ಮಾಡದಿರಲಿ.

ಪ್ರತಿದಿನ ಮಾತನಾಡಿ

ಪ್ರತಿದಿನ ಮಾತನಾಡಿ

ಎಷ್ಟು ದೂರವಿದ್ದರು ನೀವಿಬ್ಬರು ಒಟ್ಟಿಗೆ ಇದ್ದೀರಾ ಎಂಬ ಭಾವನೆಯನ್ನು ಬರದಂತೆ ತಡೆಯುವಲ್ಲಿ ಫೋನ್ ಮಾತುಕತೆಯು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ. ಮಾತನಾಡುವ ಮೂಲಕವೇ ನಿಮ್ಮ ಪ್ರೀತಿಯನ್ನು ಮತ್ತೊಬ್ಬರಿಗೆ ವ್ಯಕ್ತಪಡಿಸಬಹುದಾಗಿರುತ್ತದೆ. ಮಾತು ಮಾತ್ರವೇ ದೂರದಲ್ಲಿದ್ದರು ಮತ್ತೊಬ್ಬರಿಗೆ ನಮ್ಮ ಇರುವಿಕೆಯನ್ನು ಮತ್ತು ನಮ್ಮ ಪ್ರಸಕ್ತ ಸ್ಥಿತಿಯನ್ನು ತಿಳಿಸುತ್ತದೆ ಮತ್ತು ಅವರ ಕುರಿತಾಗಿ ತಿಳಿದುಕೊಳ್ಳಲು ನೆರವಾಗುತ್ತದೆ. ಹಾಗಾಗಿ ಪ್ರತಿದಿನ ತಪ್ಪದೆ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಲು ಮರೆಯಬೇಡಿ. ತುಂಬಾ ಜನ ಬಿಡುವಿಲ್ಲದ ಕೆಲಸ ಕಾರ್ಯಗಳ ನೆಪದಲ್ಲಿ ತಮ್ಮ ಸಂಗಾತಿಯನ್ನು ಮರೆತು ಬಿಡುತ್ತಾರೆ. ಆದರೆ ಪ್ರತಿದಿನ ಕೇವಲ ಹತ್ತು ನಿಮಿಷವಾದರು ಸಮಯವನ್ನು ಸಂಗಾತಿಗಾಗಿ ವಿನಿಯೋಗಿಸಲು ಸಾಧ್ಯವಿಲ್ಲವೇ ಆಲೋಚಿಸಿ.

ನಿಮ್ಮ ಸಂಗಾತಿಗೆ ಕಾಟ ಕೊಡಬೇಡಿ

ನಿಮ್ಮ ಸಂಗಾತಿಗೆ ಕಾಟ ಕೊಡಬೇಡಿ

ದೂರದಲ್ಲಿದ್ದುಕೊಂಡು ಸಂಬಂಧವನ್ನು ಕಾಪಾಡಿಕೊಳ್ಳುವುದು ನಿಜಕ್ಕು ಒತ್ತಡದಾಯಕ ಕೆಲಸ. ಹಾಗಾಗಿ ಯಾವಾಗ ಭೇಟಿಯಾಗುವುದು?, ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ? ಎಂಬಂತಹ ಕಿರಿಕಿರಿಯನ್ನುಂಟು ಮಾಡುವ ಕ್ಷುಲ್ಲಕ ಪ್ರಶ್ನೆಗಳಿಂದ ನಿಮ್ಮ ಸಂಗಾತಿಯನ್ನು ಹಿಂಸಿಸಬೇಡಿ. ಇದರಿಂದ ನಿಮ್ಮ ನಡುವಿನ ಪ್ರೀತಿಯು ಹೆಚ್ಚಾಗುವುದಿಲ್ಲ. ಬದಲಿಗೆ ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಈ ಭಿನ್ನಾಭಿಪ್ರಾಯಗಳಿಗೆ ತಲೆ ಬುಡವಿರುವುದಿಲ್ಲ. ಅದಕ್ಕಾಗಿ ಇಂತಹ ಸಂಬಂಧಗಳಲ್ಲಿ ಯಾವಾಗಲು ತಾಳ್ಮೆಯನ್ನು ಇರಿಸಿಕೊಳ್ಳಿ. ಸ್ವಾರ್ಥಿಗಳಾಗಬೇಡಿ, ನಿಮ್ಮ ಸಂಗಾತಿಯ ಕುರಿತಾಗಿ ಕಾಳಜಿಯನ್ನು ವ್ಯಕ್ತಪಡಿಸಿ.

ಫೋನ್ ಸೆಕ್ಸ್

ಫೋನ್ ಸೆಕ್ಸ್

ಕೇಳಲು ವಿಲಕ್ಷಣವಾಗಿ ತೋರಬಹುದು. ಆದರೆ ಇದನ್ನು ಪ್ರಯೋಗ ಮಾಡಿದಾಗ ನಿಜಕ್ಕು ಅದ್ಭುತವಾದ ಫಲಿತಾಂಶಗಳು ಲಭಿಸುತ್ತವೆ. ಇದರಿಂದ ನೀವು ನಿಮ್ಮ ಸಂಗಾತಿಯ ಜೊತೆಗೆ ಮತ್ತೇ ಮತ್ತೆ ಪ್ರೀತಿಯಲ್ಲಿ ಮುಳುಗೇಳುತ್ತೀರಾ!. ಜೊತೆಗೆ ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಆಸಕ್ತಿಕರವಾಗಿಸುತ್ತದೆ. ಒಮ್ಮೆ ಪ್ರಯತ್ನಿಸಿ!! ಈ ಎಲ್ಲಾ ಅಂಶಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪ್ರೀತಿಯನ್ನು ಹೆಚ್ಚಿಸಲು ಸಹಕರಿಸುತ್ತವೆ. ಇವುಗಳನ್ನು ಪಾಲಿಸಿ ನಿಮ್ಮ ಸಂಬಂಧವನ್ನು ಎಷ್ಟು ದೂರದಲ್ಲಿದ್ದರು ನಿರಾಯಾಸವಾಗಿ ಕಾಪಾಡಿಕೊಳ್ಳಿ.

English summary

10 Tested Tricks to Keep the Long Distance Relationship Alive

Being in a long distance relationship is quite challenging for most of the people. So, here are some really effective and creative ideas that will help people to keep the charm for each other alive whilst being in a long distance relationship.
X
Desktop Bottom Promotion