For Quick Alerts
ALLOW NOTIFICATIONS  
For Daily Alerts

ಪ್ರಿಯತಮನ ಹುಟ್ಟು ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲು 10 ಸಲಹೆಗಳು

By Deepak M
|

ಪ್ರೀತಿ ಮಾಡುವವರಿಗೆ ವಾರ,ತಿಥಿ,ನಕ್ಷತ್ರ ಬೇಕೇನು? ಪ್ರೀತಿ ಮಾಡುವವರಿಗೆ ಪ್ರತಿದಿನವು ಸಂಕ್ರಾಂತಿಯೇ, ಆದರೂ ಸಹ ಹುಟ್ಟು ಹಬ್ಬಗಳಂತಹ ವಿಶೇಷ ದಿನಗಳನ್ನು ಮತ್ತಷ್ಟು ವಿಶೇಷವಾಗಿ ಆಚರಿಸಲು ಹಲವಾರು ದಿನಗಳಿಂದಲೆ ಯೋಜನೆಗಳು ಸಿದ್ಧವಾಗುತ್ತಿರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರಥಮ ಚುಂಬನ ಯಶಸ್ವಿಯಾಗಲು ಕೆಲವು ಸಲಹೆಗಳು!

ಅದರಲ್ಲೂ ಹುಡುಗಿಯರಂತು ತಮ್ಮ ಪ್ರೀತಿ ಪಾತ್ರ ಹುಡುಗನಿಂದ ಸದಾ ಮುದ್ದಾದ ಪ್ರೀತಿಯನ್ನು ಅಪೇಕ್ಷಿಸುತ್ತಾರೆ. ಆದರೆ ಎಲ್ಲರು ತಪ್ಪು ತಿಳಿದಿರುವ ವಿಚಾರವೇನೆಂದರೆ ಹುಡುಗರು ಇಂತಹ ಮುದ್ದನ್ನು ಅಪೇಕ್ಷಿಸುವುದಿಲ್ಲವೆಂದು. ಆದರೆ ಇದು ಅಕ್ಷರಶಃ ತಪ್ಪು. ಒಂದು ಮಾತು ಸತ್ಯ, ಹುಡುಗರು ಸಹ ತಮ್ಮನ್ನು ಮಗುವಿನಂತೆ ಮುದ್ದು ಮಾಡಬೇಕೆಂದು ಆಶಿಸುತ್ತಾರೆ.

ಇನ್ನೇಕೆ ತಡ ನಾವು ನೀಡುತ್ತಿರುವ ಸಲಹೆಗಳನ್ನು ಪಾಲಿಸಿ, ಅತನ ಹುಟ್ಟುಹಬ್ಬದ ದಿನ ಆತನನ್ನು ಮತ್ತಷ್ಟು ಮುದ್ದು ಮಾಡುವ ಈ ಮಧುರ ಕಾರ್ಯಗಳನ್ನು ಜಾರಿಗೊಳಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಇನಿಯನ್ನನು ಅರ್ಥ ಮಾಡಿಕೊಳ್ಳುವುದು ಹೇಗೆ?

ಉಡುಗೊರೆ # 1 -ಸಂದೇಶ

ಉಡುಗೊರೆ # 1 -ಸಂದೇಶ

ಒಂದು ಪಾರದರ್ಶಕ ಜಾರ್ ಅಥವಾ ಜಾಡಿಯನ್ನು ತೆಗೆದುಕೊಳ್ಳಿ. ಅದರಲ್ಲಿ ಸಂಪೂರ್ಣವಾಗಿ ಪ್ರೀತಿಯನ್ನು ವ್ಯಕ್ತಪಡಿಸುವ ಸಂದೇಶಗಳನ್ನು ಬರೆದಿರುವ ಚೀಟಿಗಳನ್ನು ಹಾಕಿ. ಅದರಲ್ಲಿ ನಿಮ್ಮ ಮತ್ತು ನಿಮ್ಮ ಹುಡುಗನ ಹೆಸರು ಇರಲಿ. ಈ ಸಂದೇಶಗಳು ಆದಷ್ಟು ಕೈಬರಹದಲ್ಲಿದ್ದರೆ ಚೆನ್ನ. ಈ ಸಂದೇಶಗಳ ಜಾಡಿಯನ್ನು ಆತನಿಗೆ ಉಡುಗೊರೆಯನ್ನಾಗಿ ನೀಡಿ. ಪ್ರತಿದಿನ ಕಚೇರಿಗೆ ಹೋಗುವ ಮುನ್ನ ಇದರಲ್ಲಿರುವ ಸಂದೇಶವನ್ನು ಓದಿ ಹೋಗಲು ತಿಳಿಸಿ. ಇದರಿಂದ ಆತನ ಮನಸ್ಸು ವಿಶೇಷವಾಗಿ ಪುಳಕಿತಗೊಳ್ಳುವುದರ ಜೊತೆಗೆ ನಿಮ್ಮ ಮತ್ತು ಆತನ ಸಂಬಂಧವು ಮತ್ತಷ್ಟು ಗಟ್ಟಿಗೊಳ್ಳುತ್ತದೆ.

ಉಡುಗೊರೆ # 2 - ಅನಿರೀಕ್ಷಿತ ಸಂತೋಷ ಕೂಟ

ಉಡುಗೊರೆ # 2 - ಅನಿರೀಕ್ಷಿತ ಸಂತೋಷ ಕೂಟ

ಹುಟ್ಟು ಹಬ್ಬದ ವಿಚಾರಕ್ಕೆ ಬಂದರೆ ಎಲ್ಲರು ತಮ್ಮ ವಯಸ್ಸನ್ನು ಮರೆತು ಚಿಕ್ಕ ಮಕ್ಕಳಂತೆ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ. ಈ ದಿನ ಅವರು ತಮ್ಮ ಬಂಧು ಬಾಂಧವರೊಡನೆ ಸೇರಿ ಕೇಕ್ ಕತ್ತರಿಸಿ ತಮ್ಮ ಸಂತೋಷವನ್ನು ಹಂಚಿಕೊಳ್ಳಬೇಕೆಂದು ಆಶಿಸುತ್ತಾರೆ. ಅದಕ್ಕಾಗಿ ನಿಮ್ಮ ಹುಡುಗನಿಗೆ ತಿಳಿಯದೆ ಆತನ ಸ್ನೇಹಿತರು ಮತ್ತು ಬಂಧುಗಳನ್ನು ಕರೆದು ಒಂದು ಸಂತೋಷಕೂಟವನ್ನು ನಡೆಸಿ, ಆತನಿಗೆ ಉಡುಗೊರೆಯಾಗಿ ನೀಡಿ.

ಉಡುಗೊರೆ # 3 - ವಿದೇಶಿ ತಿಂಡಿ

ಉಡುಗೊರೆ # 3 - ವಿದೇಶಿ ತಿಂಡಿ

ಭಾರತದಲ್ಲಿ ಪ್ರಚಲಿತವಾಗಿರುವ ಮಾತಿನಂತೆ ಹೇಳಬೇಕೆಂದರೆ "ಗಂಡಸಿನ ಮನಸ್ಸನ್ನು ಗೆಲ್ಲಬೇಕೆಂದರೆ, ಅದು ಆಹಾರದ ಮೂಲಕವೇ ಸಾಧ್ಯ" ಎಂಬ ಮಾತು ಸತ್ಯ. ಹುಟ್ಟು ಹಬ್ಬದ ದಿನದಂದು ಆತನಿಗಾಗಿ ಕೆಲವು ವಿಶೇಷ ಆಹಾರಗಳನ್ನು ತಯಾರಿಸಿ. ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಊಟದವರೆಗು ನಿಮ್ಮ ವಿಶೇಷ ಆಹಾರಗಳ ಪಟ್ಟಿ ಸಾಗಲಿ. ಇದರಲ್ಲಿ ಕೆಲವು ವಿದೇಶಿ ಮತ್ತು ಹೊಸ ರುಚಿಗಳು ಸಹ ಸೇರಿರಲಿ. ಇದನ್ನೇ ಆತನಿಗೆ ಅನಿರೀಕ್ಷಿತ ಉಡುಗೊರೆಯಾಗಿ ನೀಡಿ.

ಉಡುಗೊರೆ # 4 - ಆತನು ನಿಮ್ಮ ಮನಸ್ಸಿಗೆ ಇಷ್ಟವಾದದ್ದು ಹೇಗೆ

ಉಡುಗೊರೆ # 4 - ಆತನು ನಿಮ್ಮ ಮನಸ್ಸಿಗೆ ಇಷ್ಟವಾದದ್ದು ಹೇಗೆ

ನನಗೆ ಗೊತ್ತು ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಸಾವಿರಾರು ಗ್ರೀಟಿಂಗ್ ಕಾರ್ಡ್‌ಗಳು ಅಂಗಡಿಗಳಲ್ಲಿ ದೊರೆಯುತ್ತದೆ. ಆದರೆ ಅವುಗಳನ್ನೆಲ್ಲ ಕೊಂಡು ಕೊಳ್ಳಬೇಡಿ. ಅದರ ಬದಲಿಗೆ ನೀವು ಆತನನ್ನು ಏಕೆ ಇಷ್ಟಪಡುತ್ತೀರ, ಯಾವೆಲ್ಲ ಸಂದರ್ಭದಲ್ಲಿ ಆತ ನಿಮ್ಮ ಮನಸ್ಸನ್ನು ಗೆದ್ದ ಎಂಬುದನ್ನು ವಿವರಿಸಿ 100 ಅಥವಾ 50 ಕಾರಣಗಳನ್ನು ಬರೆಯಿರಿ. ಆದಷ್ಟು ನಿಮ್ಮ ಕೈಬರಹದಲ್ಲಿ ಇದ್ದರೆ ಉತ್ತಮ. ಏಕೆಂದರೆ ನಿಮ್ಮ ಕೈಬರಹವು ಈ ಸಂದರ್ಭದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ರೆಡಿಮೇಡ್ ಕೊಳ್ಳದೆ ನಿಮ್ಮದೆ ಆದ ಉಡುಗೊರೆಯನ್ನು ಸಿದ್ಧಪಡಿಸಿಕೊಳ್ಳಿ.

ಉಡುಗೊರೆ # 5 - ನೀವು ಮೊದಲು ಭೇಟಿಯಾದ ಸ್ಥಳಕ್ಕೆ ಮತ್ತೆ ಭೇಟಿ ಕೊಡಿ.

ಉಡುಗೊರೆ # 5 - ನೀವು ಮೊದಲು ಭೇಟಿಯಾದ ಸ್ಥಳಕ್ಕೆ ಮತ್ತೆ ಭೇಟಿ ಕೊಡಿ.

ನೀವಿಬ್ಬರು ದಂಪತಿಗಳಾಗಿದ್ದಲ್ಲಿ, ನಿಮ್ಮ ಹುಡುಗನ ಕಣ್ಣಿಗೆ ಬಟ್ಟೆ ಕಟ್ಟಿ. ಅವನನ್ನು ನೀವು ಮೊದಲು ಭೇಟಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿ. ಇದು ನಿಜಕ್ಕು ನೆನಪಿನ ದೋಣಿಯಲ್ಲಿ ತೇಲಿಸುವಂತಹ ಒಂದು ಅನುಭವವನ್ನು ನಿಮ್ಮಿಬ್ಬರಿಗು ನೀಡುತ್ತದೆ. ಅಲ್ಲಿ ಕುಳಿತು ನಿಮ್ಮ ಮೊದಲ ಭೇಟಿ, ಅದು ನಿಮ್ಮ ಮನಸ್ಸಿಗೆ ನೀಡಿದ ಪುಳಕ, ಒಂದು ಬೆಚ್ಚನೆಯ ಸ್ಪರ್ಷ! ಓಹ್, ಎಷ್ಟೆಲ್ಲ ನೆನಪುಗಳು ನಿಮಗೆ ಮರುಕಳಿಸುತ್ತವೆ. ನಿಜಕ್ಕು ಮರೆತು ಹೋಗಬಹುದಾಗಿದ್ದ ಎಲ್ಲಾ ಘಟನೆಗಳು ಆತನ ಕಣ್ಣ ಮುಂದೆ ಮೆರವಣಿಗೆ ಹೊರಡುತ್ತವೆ. ನಿಜಕ್ಕು ಇದನ್ನು ಆತ ಇಷ್ಟಪಡುತ್ತಾನೆ.

ಉಡುಗೊರೆ # 6 - ನಿಮ್ಮ ಸುಮಧುರ ಕ್ಷಣಗಳ ಸಿಡಿ

ಉಡುಗೊರೆ # 6 - ನಿಮ್ಮ ಸುಮಧುರ ಕ್ಷಣಗಳ ಸಿಡಿ

ಆತನಿಗೆ ಈ ಹುಟ್ಟು ಹಬ್ಬಕ್ಕೆ ನಿಮ್ಮ ಸುಮಧುರ ಕ್ಷಣಗಳ ಸಿಡಿಯನ್ನು ಉಡುಗೊರೆಯಾಗಿ ನೀಡಿ. ಇದರಲ್ಲಿ ನಿಮ್ಮ ಜೀವನದ ಮಧುರ ನೆನಪನ್ನು ತರುವ ಪೋಟೊಗಳು ಇರಲಿ.ಆದರೆ ಅವುಗಳಿಗೆ ಸ್ವಲ್ಪ ಎಡಿಟ್ ಮಾಡಿ, ಹಿನ್ನಲೆಗೆ ಒಂದು ಮಧುರ ಸಂಗೀತ ಅಥವಾ ನಿಮ್ಮ ನೆಚ್ಚಿನ ಪ್ರೇಮ ಗೀತೆಗಳನ್ನು ಸೇರಿಸಿ. ಸರಿಯಾಗಿ ಮಧ್ಯರಾತ್ರಿ 12ಕ್ಕೆ ಇದು ಚಾಲೂ ಆಗವಂತೆ ಮಾಡಿ. ನಿಮ್ಮವರನ್ನು ಕರೆದು ತೋರಿಸಿ, ಆತನಿಗೆ ಶುಭಾಷಯ ಹೇಳಿ. ಇದರಲ್ಲಿ ಆತನ ಗೆಳೆಯರ ಮತ್ತು ಪ್ರೀತಿ ಪಾತ್ರ ಜನರ ಕೆಲವೊಂದು ವೀಡಿಯೋ ತುಣುಕುಗಳನ್ನು ಸೇರಿಸಿ. ಅದರಲ್ಲಿ ಅವರು ನಿಮ್ಮ ಹುಡುಗನ ಕುರಿತಾಗಿ ನಾಲ್ಕು ಮಾತುಗಳನ್ನು ಹಂಚಿಕೊಳ್ಳಲಿ. ಅದು ವಿನೋದದಿಂದ ಕೂಡಿದ್ದರೆ ಮತ್ತಷ್ಟು ಸೊಗಸಾಗಿರುತ್ತದೆ. ನಿಜಕ್ಕು ನಿಮ್ಮವರು ಈ ಉಡುಗೊರೆಗೆ ಮಾರು ಹೋಗುತ್ತಾರೆ.

ಉಡುಗೊರೆ # 7 ರಜೆ ಹಾಕಿ

ಉಡುಗೊರೆ # 7 ರಜೆ ಹಾಕಿ

ಇಬ್ಬರು ಕೆಲಸದ ಒತ್ತಡದಲ್ಲಿ ಮುಳುಗಿರುವವರಾದಲ್ಲಿ ಅಂದು ರಜೆ ಹಾಕಿ. ಆತನನ್ನು ಹತ್ತಿರದ ಗಿರಿಧಾಮ ಅಥವಾ ಯಾವುದಾದರು ರೊಮ್ಯಾಂಟಿಕ್ ಆಗಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ. ಇಡೀ ದಿನವನ್ನು ಸಂತೋಷವಾಗಿ ಜೊತೆಯಾಗಿ ಕಳೆಯಿರಿ. ಇದರಿಂದ ನಿಮಗೆ ಬಿಡುವು ದೊರೆಯುತ್ತದೆ, ಮನಸ್ಸಿಗೆ ಮುದವು ದೊರೆಯುತ್ತದೆ. ಬೆಳಗ್ಗೆಯಿಂದ ರಾತ್ರಿಯವರೆಗು ಮೈ ಮುರಿದು ದುಡಿಯುವ ಆತನು ಈ ದಿನ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವ ಅವಕಾಶ ಮಾಡಿಕೊಡಿ. ಈ ಉಡುಗೊರೆಯನ್ನು ನಿಜಕ್ಕು ಆತ ಮರೆಯುವುದಿಲ್ಲ.

ಉಡುಗೊರೆ # 8 - ರಾತ್ರಿ ಚಲನಚಿತ್ರಕ್ಕೆ ವೀಕ್ಷಿಸಿ

ಉಡುಗೊರೆ # 8 - ರಾತ್ರಿ ಚಲನಚಿತ್ರಕ್ಕೆ ವೀಕ್ಷಿಸಿ

ಸಾಮಾನ್ಯವಾಗಿ ಗಂಡಸರು ಹೆಚ್ಚು ಸಿನಿಮಾ ನೋಡಲು ಇಷ್ಟಪಡುತ್ತಾರೆ. ಆದರೆ ಹೆಂಗಸರು ಅಷ್ಟಾಗಿ ಸಿನಿಮಾ ನೋಡುವುದಿಲ್ಲ. ಆದರೆ ಈ ದಿನ ಬಿಡಿ, ಇಂದು ಆತನ ಹುಟ್ಟು ಹಬ್ಬ ಅದಕ್ಕಾಗಿ ಆತನಿಗೆ ಉಡುಗೊರೆ ನೀಡಲು ಇಂದು ಇಡೀ ರಾತ್ರಿ ಆತನಿಗೆ ಇಷ್ಟವಾದ ಸಿನಿಮಾಗಳನ್ನು ಜೊತೆಯಾಗಿ ಕುಳಿತು ನೋಡಿ. ಇಲ್ಲವಾದಲ್ಲಿ ಆತನನ್ನು ಸಂಜೆ ಸಿನಿಮಾಗೆ ಕರೆದುಕೊಂಡು ಹೋಗಿ.

ಉಡುಗೊರೆ # 9 - ಆತನ ಹುಟ್ಟು ಹಬ್ಬವನ್ನು ಆತನ ಇಷ್ಟದಂತೆ ಆಚರಿಸಿ.

ಉಡುಗೊರೆ # 9 - ಆತನ ಹುಟ್ಟು ಹಬ್ಬವನ್ನು ಆತನ ಇಷ್ಟದಂತೆ ಆಚರಿಸಿ.

ಇಂದು ಅವರ ಹುಟ್ಟು ಹಬ್ಬ, ಆತನೇ ನಿರ್ಧರಿಸಲಿ ಆತನಿಗೆ ಏನು ಬೇಕೆಂದು. ಅದು ಬೋಲಿಂಗ್‍ಗೆ ಹೋಗಬೇಕೆ? ಕ್ಲಬ್‍ಗೆ ಹೋಗಬೇಕೆ? ಅಥವಾ ಆತನಿಗೆ ಇಷ್ಟವಾದ ರೆಸ್ಟೋರೆಂಟ್‍ನಲ್ಲಿ ಊಟ ಮಾಡಬೇಕೆ? ಯಾವುದಾದರು ಸರಿ ವಾದ ಮಾಡಬೇಡಿ. ಆತನ ಇಚ್ಛೆಯಂತೆ ಇಂದು ನಡೆಯಿರಿ. ಏಕೆಂದರೆ ಇದು ಅವರ ದಿನ ಆತ ಖುಷಿಯಾಗಿರಲಿ, ಆದರೆ ಆ ಖುಷಿಯನ್ನು ನೀವು ಹಂಚಿಕೊಳ್ಳಿ.

ಉಡುಗೊರೆ # 10 - ಹಚ್ಚೆ ಅಥವಾ ಬಣ್ಣ ಹಚ್ಚಿಕೊಳ್ಳಿ.

ಉಡುಗೊರೆ # 10 - ಹಚ್ಚೆ ಅಥವಾ ಬಣ್ಣ ಹಚ್ಚಿಕೊಳ್ಳಿ.

ಆತನ ಮನಸೆಳೆಯುವ ಮತ್ತೊಂದು ಮಧುರ ಸಲಹೆ ಎಂದರೆ ಹಚ್ಚೆ ಅಥವಾ ಬಣ್ಣ ಹಚ್ಚಿಕೊಳ್ಳಿ. ಆತನ ಹೆಸರನ್ನು ಅಥವಾ ಇನಿಷಿಯಲ್ ಅನ್ನು ಹಚ್ಚೆಯ ಮೂಲಕ ಅಥವಾ ಬಣ್ಣದ ಮೂಲಕ ಸುಂದರವಾಗಿ ನಿಮ್ಮ ದೇಹದ ಮೇಲೆ ಬರೆಸಿಕೊಳ್ಳಿ. ಮಧ್ಯರಾತ್ರಿ ಅನಿರೀಕ್ಷಿತವಾಗಿ ಆತನಿಗೆ ಆ ಭಾಗವನ್ನು ತೋರಿಸಿ. ಇದರಿಂದ ಆತ ನಿಮಗೆ ಎಷ್ಟು ವಿಶೇಷವೋ, ತಿಳಿಸಿ. ನಿಜಕ್ಕು ಇದರಿಂದ ಆತ ನಿಮ್ಮನ್ನು ಮತ್ತಷ್ಟು ಇಷ್ಟಪಡಲು ಆರಂಭಿಸುತ್ತಾನೆ.

English summary

10 Romantic Birthday Gifts to Make His Birthday More Special

Although we try to make each day special for people we love, but birthday is something that has to be even more special. It is true that all the girls want to be pampered by their guys all the time, but it would be erroneous to say that guys do not want to get pampered.
Story first published: Saturday, April 5, 2014, 16:25 [IST]
X
Desktop Bottom Promotion