For Quick Alerts
ALLOW NOTIFICATIONS  
For Daily Alerts

ನಿಮ್ಮ ಇನಿಯನ್ನನು ಅರ್ಥ ಮಾಡಿಕೊಳ್ಳುವುದು ಹೇಗೆ?

By Arpitha Rao
|

ನಿಮ್ಮ ಬಾಯ್ ಫ್ರೆಂಡ್ ತುಂಬಾ ಅರ್ಥಹೀನನಾಗಿ ನಡೆದುಕೊಳ್ಳುತ್ತಿರುವುದಕ್ಕೆ ಆತಂಕಗೊಂಡಿದ್ದೀರಾ? ಒಂದು ಸುಂದರ ಸಂಬಂಧ ಬೆಳೆಯಬೇಕೆಂದರೆ ಅಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕಾದುದು ತುಂಬಾ ಮುಖ್ಯ.

ನಿಮ್ಮಿಬ್ಬರ ಬಿರುಕಿನ ನಂತರವೂ ನೀವು ಎಷ್ಟೇ ಕಥೆ ಕಟ್ಟಿದರೂ, ರೋಮಾನ್ಸ್ ಮಾಡಿದರೂ ಒಂದು ಸಂಪೂರ್ಣ ಸಂಬಂಧ ನಿಭಾಯಿಸಲು ಸಾಧ್ಯವಾಗದಿರಬಹುದು. ಆ ರೀತಿಯ ಪ್ರಣಯ ಪರಿಪೂರ್ಣ ಜೀವನದ ಪ್ರೀತಿಯಿಂದ ದೂರವಾದುದ್ದು ಎಂದೇ ಅರ್ಥ.

ನೀವು ಪ್ರೀತಿಸುತ್ತಿರುವ ಗೆಳೆಯ ನಿಮ್ಮ ಜೊತೆಗೆ ಪ್ರತಿ ಭಾರಿ ಅರ್ಥ ಹೀನವಾಗಿ ನಡೆದುಕೊಂಡಾಗ ನೀವು ಚಿಂತಿಸಬೇಕಾದುದು ನಿಮ್ಮ ಪ್ರೀತಿ ನಿಜವೇ ಎಂಬುದರ ಬಗ್ಗೆ!!. ಆ ರೀತಿ ನಡೆದುಕೊಳ್ಳುತ್ತಿರುವ ಹುಡುಗ ಬಹುಷಃ ನಿಮಗೆ ಸರಿಯಾದ ಜೋಡಿ ಅಲ್ಲದಿರಬಹುದು ಆತ ನಿಜವಾದ ಪ್ರೇಮಿ ಅಲ್ಲದಿರಬಹುದು!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಕ್ಕೆ ಫ್ಲರ್ಟಿಂಗ್ ಯಾಕೆ ಒಳ್ಳೆಯದು?

10 Reasons Why Your Boyfriend’s So Mean!

ಈ ರೀತಿ ಅನುಮಾನಗಳನ್ನು ಇಟ್ಟುಕೊಂಡು ಸಂಬಂಧ ಮುಂದುವರೆಸುವುದರ ಬದಲು ನೀವು ನಿಮ್ಮ ಅನುಮಾನಗಳನ್ನು ಅಲ್ಲೇ ಬಗೆಹರಿಸಿಕೊಂಡರೆ ಬಹುಶಃ ನಿಮಗೆ ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಬಹುದು.ಸಂಬಂಧಗಳನ್ನು ಸರಿಯಾಗಿ ಅರಿತುಕೊಂಡಾಗ ಜೀವನ ಸುಂದರವಾಗಿ ಮುಂದುವರೆಯಲು ಸಾಧ್ಯ. ನಿಮ್ಮ ಗೆಳೆಯ ನಿಮ್ಮನ್ನು ಸಾಕಷ್ಟು ನಿರ್ಲಕ್ಷಿಸುತ್ತಿದ್ದರೆ,ಒರಟಾಗಿದ್ದರೆ ಅಂತಹ ಗೆಳೆಯನನ್ನು ನೀವು ನಿಭಾಯಿಸುತ್ತಿದ್ದರೆ ಈ ಕೆಳಗೆ ನಾವು ನೀಡಿರುವ ಕಾರಣಗಳನ್ನು ಓದಿ ನೋಡಿ ಮತ್ತು ಬಗೆಹರಿಸಿಕೊಳ್ಳಿ.

ನಿಮ್ಮ ಪ್ರೇಮಿ ನಿಮ್ಮನ್ನು ಕಡೆಗಣಿಸುವುದಕ್ಕೆ ಕಾರಣಗಳು:

1.ಗಂಭೀರನಲ್ಲ: ನಿಮ್ಮಿಬ್ಬರ ಪ್ರೀತಿಯ ವಿಷಯವನ್ನು ನಿಮ್ಮ ಗೆಳೆಯ ಗಂಭೀರವಾಗಿ ತೆಗೆದುಕೊಂಡಿದ್ದಾನೆಯೇ?ಹೌದು ಎಂದು ನೀವು ತಿಳಿದುಕೊಂಡಿರಬಹುದು ಆದರೆ ಅದು ನಿಮ್ಮ ಗೆಳೆಯ ಹೇಳುವವರೆಗೆ ನಂಬಲಾಗುವುದಿಲ್ಲ.ನಿಮ್ಮ ಗೆಳೆಯ ಬಹುಶಃ ಈ ಪ್ರೀತಿ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇರಬಹುದು.

2.ನಿಮ್ಮ ಜೊತೆ ಆಟವಾಡುತ್ತಿರಬಹುದು:ನಿಮ್ಮ ಗೆಳೆಯ ಬಹುಶಃ ನಿಮಗೇ ತಿಳಿಯದಂತೆ ನಿಮ್ಮ ಭಾವನೆಗಳೊಂದಿಗೆ ಆಟವಾಡುತ್ತಿರಬಹುದು.ಅವನಿಗೆ ತಿಳಿದಿರುತ್ತದೆ ನಿಮ್ಮನ್ನು ಆತ ನಿರ್ಲಕ್ಷಿಸಿದರೆ ನೀವು ಆತನೊಂದಿಗೆ ಇನ್ನಷ್ಟು ಹತ್ತಿರ ಹೋಗಲು ಬಯಸುತ್ತೀರಿ ಮತ್ತು ಗೊಂದಲಗೊಂಡಿರುತ್ತೀರಿ.

3.ಸಂವಹನ ಮತ್ತು ಸಂಪರ್ಕದ ಕೊರತೆ:ನಿಮಗೆ ನಿಮ್ಮ ಗೆಳೆಯ ನಿಮ್ಮನ್ನು ಕಡೆಗಣಿಸುತ್ತಿದ್ದಾನೆ ಎಂದೆನಿಸುತ್ತದೆಯೇ ಅಥವಾ ನಿಮ್ಮ ಸಂಬಂಧ ಅರ್ಥಹೀನವಾಗಿದೆ ಎಂದೆನಿಸುತ್ತದೆಯೇ ? ನಿಮ್ಮ ಗೆಳೆಯನೊಂದಿಗೆ ಸಂವಹನ ನಡೆಸಿ ನಿಮಗೆ ಹೀಗೆನ್ನಿಸುತ್ತಿದೆ ಎಂಬುದನ್ನು ತಿಳಿಸಿ ಪರಿಹರಿಸಿಕೊಳ್ಳಿ.ನಿಮ್ಮ ಗೆಳೆಯನಿಗೆ ಬಹುಶಃ ನಿಮಗೆ ಈ ರೀತಿಯ ಭಾವನೆ ಬಂದಿದೆ ಎಂಬುದರ ಬಗ್ಗೆ ತಿಳಿದಿರಲಿಕ್ಕಿಲ್ಲ ನೀವು ತಿಳಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಗಳಲ್ಲಿ ವಂಚನೆಯಾದರೆ ನಿಭಾಯಿಸುವುದು ಹೇಗೆ?

4.ವ್ಯಸನ: ನಿಮ್ಮ ಗೆಳೆಯ ಯಾವುದಾದರೂ ವ್ಯಸನದಲ್ಲಿ ಮುಳುಗಿರಬಹುದು ಅದು ವಿಡಿಯೋ ಗೇಮ್ ಆಗಿರಬಹುದು ಅಥವಾ ಅದಕ್ಕಿಂತ ಬೇರೆ ಕೆಟ್ಟ ಚಟಗಳಾಗಿರಬಹುದು!

5.ಅವನ ತಾಯಿ ಆತನಿಗೆ ಸರಿಯಾದ ವರ್ತನೆ ಕಲಿಸಿಲ್ಲದಿರುವುದು:ಹೌದು ಇದು ಕೂಡ ಒಂದು ಕಾರಣವಾಗುತ್ತದೆ.ಕೆಲವು ಮಕ್ಕಳು ತನ್ನ ತಂದೆಯನ್ನು ನೋಡಿ ಆತನಂತೆಯೇ ವರ್ತಿಸುತ್ತಾರೆ.ಅವನ ತಾಯಿ ಆತನಿಗೆ ತಿಳಿ ಹೇಳಿ ಅದನ್ನು ತಪ್ಪಿಸದಿದ್ದಲ್ಲಿ ಆತ ತಾನು ತನ್ನ ತಂದೆಯಂತೆ ವರ್ತಿಸುವುದರಿಂದ ಅದು ಸರಿಯಾದುದು ಎಂಬ ತಪ್ಪು ಕಲ್ಪನೆ ಹೊಂದಿರಬಹುದು.

6.ಅವನು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿರಬಹುದು:ಇದು ನಿಜವಾಗಿಯೂ ಆತಂಕಕಾರಿ ನೋವಿನ ಸಂಗತಿ. ಆದರೆ ನಿಮ್ಮ ಗೆಳೆಯ ನಿಮ್ಮನ್ನು ಕೇವಲ ಅವನಿಗೆ ಬೇಕಾಗಿರುವುದೇನನ್ನೋ ಪಡೆದುಕೊಳ್ಳುವುದಕ್ಕೆ ಮಾತ್ರ ನಿಮನ್ನು ಉಪಯೋಗಿಸಿಕೊಳ್ಳುತ್ತಿರಬಹುದು.ಅದು ಕೇವಲ ದೈಹಿಕ ಆಸಕ್ತಿ ಆಗಿರಬಹುದು ಅಥವಾ ಬೇರೆಯವರಿಗೆ ತೋರಿಸಿಕೊಳ್ಳಲು ಬಳಸಿಕೊಳ್ಳುವುದಿರಬಹುದು.

7.ನಿಮ್ಮ ಗೆಳೆಯನಿಗೆ ನೀವು ಬೋರ್ ಎನಿಸಿರಬಹುದು:ನಿಮ್ಮ ಗೆಳೆಯನಿಗೆ ನೀವು ಬೋರ್ ಎನಿಸಿಬಿಟ್ಟರೆ ಆತ ನಿಮಗಾಗಿ ಸಮಯ ಕೊಡುವುದಿಲ್ಲ.ಅವನ ಆಸಕ್ತಿ ಉಳಿಸಿಕೊಳ್ಳಲು ನೀವು ಸ್ವಲ್ಪ ಆಗಾಗ ಬದಲಾವಣೆ ತರುತ್ತಿರಬೇಕಾಗುತ್ತದೆ.ಆದರೆ ಆತ ನಿಜವಾಗಿಯೂ ನಿಮ್ಮ ಪ್ರೀತಿ ಬಯಸುತ್ತಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.ಇಷ್ಟಕ್ಕೂ ಆತ ನಿಮ್ಮ ಸಂಬಂಧ ಕಡಿದುಕೊಂದು ದೂರ ಹೋಗಬೇಕು ಎಂದಿದ್ದಲ್ಲಿ ನೀವೇಕೆ ಆತನನ್ನು ಆಸಕ್ತಿ ಹೆಚ್ಚುವಂತೆ ಮಾಡಬೇಕು ?!

8.ನೀವು ಆತನಿಗೆ ಮುಖ್ಯವಾಗಿರದಿರಬಹುದು:ಅವನು ನಿಮಗೆ ನಿಮ್ಮ ಜೀವನದ ಅತಿ ಮುಖ್ಯ ವ್ಯಕ್ತಿಯಾಗಿರಬಹುದು.ಆದರೆ ಆತನಿಗೆ ನೀವು ಕೇವಲ ಸಂಜೆ ಕಳೆಯಲು ಬೇಕಾಗುವ ವ್ಯಕ್ತಿ ಮಾತ್ರವಾಗಿರಬಹುದು.ನಿಮ್ಮ ಪ್ರೀತಿಯಲ್ಲಿ ನಿಮ್ಮಿಬ್ಬರ ಬಯಕೆಗಳು ಹೊಂದಾಣಿಕೆ ಆಗದಿದ್ದಲ್ಲಿ ಅದು ಪರಿಪೂರ್ಣ ಪ್ರೀತಿಯಾಗಲು ಸಾಧ್ಯವಿಲ್ಲ.

9.ನೀವು ಕಿರಿಕಿರಿ ಎಂದೆನಿಸಬಹುದು: ಆತನಿಗೂ ಅವನಿಗೆಂದೇ ಸ್ವಲ್ಪ ಸಮಯದ ಅವಶ್ಯಕತೆ ಇರುತ್ತದೆ.ಅವನಿಗೆ ನೀವು ಯಾವಾಗಲೂ ಅವನ ಹಿಂದೇ ಸುತ್ತುವುದು ಇಷ್ಟವಾಗದಿರಬಹುದು ಅವನಿಗೆ ಪ್ರತ್ಯೇಕ ಸಮಯದ ಅವಶ್ಯಕತೆ ಇರಬಹುದು.ಆದರೆ ನಿಮಗೆ ನೀವು ಆತನಿಗೆ ಸಮಯ ಕೊಡುತ್ತೀರಿ ಅವನಿಗೆ ಕಿರಿಕಿರಿ ಮಾಡುತ್ತಿಲ್ಲ ಎಂಬ ನಂಬಿಕೆ ಇದ್ದೂ ಆತ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ ಅಂತವನೊಂದಿಗೆ ಡೇಟಿಂಗ್ ಮಾಡುವುದು ಸರಿಯಲ್ಲ.

10.ಬೇರೆ ಒಬ್ಬಳು ಆತನ ಮನಸ್ಸಿನಲ್ಲಿದ್ದರೆ: ನೀವು ನಿಮ್ಮ ಬಾಯ್ ಫ್ರೆಂಡ್ ಅನ್ನು ಪ್ರೀತಿಸುತ್ತಿರಬಹುದು ಆದರೆ ಆತ ಬೇರೆಯವರನ್ನು ಇಷ್ಟಪಡುತ್ತಿದ್ದರೆ ? ಅಥವಾ ಬೇರೆ ಒಬ್ಬಳು ಆತನ ಹಿಂದೆ ಬಿದ್ದಿದ್ದರೆ ಆತನ ಆಸಕ್ತಿ ಆಕೆಯೆಡೆಗೆ ಹರಿಯುತ್ತಿದ್ದರೆ,ಇವೆಲ್ಲವೂ ನಿಮ್ಮ ಗೆಳೆಯ ಅರ್ಥಹೀನನಾಗಿ ಒರಟಾಗಿ ನಡೆದುಕೊಳ್ಳುತ್ತಿರುವುದರ ಕಾರಣ ಆಗಬಹುದು.

English summary

10 Reasons Why Your Boyfriend’s So Mean!

Want to know why your boyfriend’s so mean? Well, here are 10 reasons why he could be mean to you, and one thing you need to understand about it.
X
Desktop Bottom Promotion