For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಗಾತಿಯನ್ನು ಆಲಂಗಿಸಿಕೊಳ್ಳಲು ಹತ್ತು ಕಾರಣಗಳು

|

ಸಂಬಂಧದಲ್ಲಿ ಚುಂಬನಕ್ಕಿಂತಲೂ ಆಲಿಂಗನ ತುಂಬಾ ಮಹತ್ವಪೂರ್ಣವಾದುದು. ಆಲಿಂಗನದ ಮಹತ್ವ ಕೆಲವರಿಗೆ ತಿಳಿದಿರಲಾರದು. ಸಂಬಂಧಗಳನ್ನು ಬೆಸೆದು ಬಾಂಧವ್ಯವನ್ನು ಗಟ್ಟಿಗೊಳಿಸುವ ಆಲಿಂಗನ ಎನ್ನುವುದು ಹೃದಯಗಳ ಸ್ಪರ್ಶವನ್ನು ಇನ್ನಷ್ಟು ಹತ್ತಿರಕ್ಕೆ ತರುವಂಥದ್ದು. ದೀರ್ಘ ಕಾಲ ಸಂಬಂಧದಲ್ಲಿ ತಮ್ಮನ್ನು ತೊಡಗಿಸಿಕೊಂಡವರಲ್ಲಿ ಈ ಪ್ರಶ್ನೆಯನ್ನು ನೀವು ಕೇಳಿದಾಗ ಆಲಿಂಗನದ ಮಹತ್ವತೆಯನ್ನು ಅವರ ಮಾತುಗಳಲ್ಲೇ ಕೇಳಬಹುದು.

ಒಂದು ಸಣ್ಣ ಜಗಳವನ್ನು, ಸಿಟ್ಟನ್ನು, ದುಃಖವನ್ನು ಸಣ್ಣ ಬೆಚ್ಚಗಿನ ಆಲಿಂಗನ ಸವಿಯಾಗಿಸುತ್ತದೆ. ನಿಮ್ಮ ಪ್ರೀತಿ ಪಾತ್ರರ ನಡುವಿನ ಸಾಮರಸ್ಯವನ್ನು ಅನನ್ಯಗೊಳಿಸುವ ಆಲಿಂಗನ ಓಕ್ಸಿಟೋಕಿನ್ ಎಂಬ ಹಾರ್ಮೋನ್‌ನ ಬಿಡುಗಡೆಗೆ ಸಹಕಾರಿಯಾಗಿದೆ. ಇದು ಒತ್ತಡದ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಸಾಮಾಜಿಕ ಬಾಂಧವ್ಯದ ವಿಷಯಕ್ಕೆ ಬಂದಾಗ ಇದು ಅದನ್ನು ಬೆಳೆಸಲು ಸಹಕಾರಿಯಾಗುತ್ತದೆ. ಇದರಿಂದ ಉತ್ತನ ಸಂಬಂಧ ಹಳಸದೇ ಚೆನ್ನಾಗಿರುತ್ತದೆ.

ನಿಮ್ಮ ಗೆಳತಿಗೆ ಪ್ರೀತಿ ತೋರಿಸಲು 10 ಸೂಕ್ತ ಸಲಹೆಗಳು

ಸಂಗಾತಿಗಳ ನಡುವಿನ ದೈಹಿಕ ಆಕರ್ಷಣೆಯನ್ನು ವ್ಯಕ್ತಪಡಿಸಲು ಆಲಿಂಗನ ಅತೀ ಮುಖ್ಯವಾಗಿದೆ. ಹಾಗಿದ್ದರೆ ಬರೀ ನೀವು ಚುಂಬಿಸಿದರೆ ಮಾತ್ರ ಯಾವುದೇ ಜಾದೂ ಮಾಡಿದಂತಾಗುವುದಿಲ್ಲ ಇದರೊಂದಿಗೆ ಆಲಿಂಗನದ ಸುಖ ಇದ್ದರೆ ಮಾತ್ರ ಸಂಬಂಧ ಗಟ್ಟಿಯಾಗಿರುತ್ತದೆ ಮತ್ತು ಅದ್ಭುತಗಳು ನಡೆಯುತ್ತವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆಲಿಂಗನದ ಮಹತ್ವವನ್ನು ತಿಳಿದುಕೊಳ್ಳುತ್ತಾ ಇದು ನಿಮ್ಮ ಸಂಗಾತಿಯನ್ನು ಓಲೈಸುವಲ್ಲಿ ಹೇಗೆ ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ದೈಹಿಕ ಆಕರ್ಷಣೆಯನ್ನು ತರುತ್ತದೆ

ದೈಹಿಕ ಆಕರ್ಷಣೆಯನ್ನು ತರುತ್ತದೆ

ನಿಮ್ಮ ಹಾಗೂ ಸಂಗಾತಿಯ ನಡುವೆ ಯಾವುದೇ ದೈಹಿಕ ಸಂಬಂಧ ನಡೆದಿಲ್ಲವೆಂದಾದಲ್ಲಿ ಆಲಿಂಗನದ ಮೂಲಕ ಅದನ್ನು ಪ್ರಾರಂಭಿಸಿ. ನಿಮ್ಮಲ್ಲಿ ದೈಹಿಕ ಆಕರ್ಷಣೆ ಉಂಟಾಗಲು ಆಲಿಂಗನ ನೆರವುಕಾರಿ. ನಿಮ್ಮ ಸಂಗಾತಿ ಇಂದು ಅಂದವಾಗಿ ಕಾಣುತ್ತಿದ್ದರೆ ಅವರತ್ತ ಸುಳಿದು ಪ್ರೀತಿಯಿಂದ ಆಲಂಗಿಸಿ ನೀನು ಇಂದು ತುಂಬಾ ಚೆಂದ ಕಾಣಿಸುತ್ತಿದ್ದೀಯಾ ಎಂದು ಹೇಳಿ ಇದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಂತರ ನೋಡಿ.

ಜಗಳವನ್ನು ಮರೆಸುತ್ತದೆ

ಜಗಳವನ್ನು ಮರೆಸುತ್ತದೆ

ನಿಮ್ಮ ಸಂಗಾತಿಯೊಂದಿಗೆ ನೀವು ಜಗಳ ಮಾಡುತ್ತಿರುವಾಗ ಈ ಸರಳವಾದ ಆಲಿಂಗನ ವಿಧಾನವನ್ನು ಅನುಸರಿಸಿ. ಇದರಿಂದ ಜಗಳ ಮರೆತು ಅಲ್ಲಿ ಪ್ರೀತಿ ನೆಲೆಗೊಳ್ಳುತ್ತದೆ.

ಪ್ರೀತಿಯ ಆಳವನ್ನು ಹೆಚ್ಚಿಸುತ್ತದೆ

ಪ್ರೀತಿಯ ಆಳವನ್ನು ಹೆಚ್ಚಿಸುತ್ತದೆ

ನಿಮ್ಮ ಪ್ರೀತಿಯ ಆಳವನ್ನು ಇನ್ನಷ್ಟು ಗಾಢಗೊಳಿಸಲು ಆಲಿಂಗನ ಸಹಕಾರಿಯಾಗಿದೆ.

ಭದ್ರತೆಯ ಅನುಭವ

ಭದ್ರತೆಯ ಅನುಭವ

ಭದ್ರತಯ ಅನುಭವ ಆಲಿಂಗನದಿಂದ ಚೆನ್ನಾಗಿ ವ್ಯಕ್ತವಾಗುತ್ತದೆ. ಆಲಿಂಗನವನ್ನು ನೀವು ಹಂಚಿಕೊಂಡಾಗ, ಮಹಿಳೆಯು ತನ್ನ ಹೆಚ್ಚು ಸುರಕ್ಷಿತಳಾಗಿದ್ದೇನೆ ಎಂಬ ಭಾವನೆಯನ್ನು ಅನುಭವಿಸುತ್ತಾಳೆ. ಈ ಭದ್ರತೆ ಸುರಕ್ಷತೆಯನ್ನು ಪದಗಳಲ್ಲಿ ವರ್ಣಿಸಲಾಗದು.

ಒತ್ತಡ ನಿವಾರಕ

ಒತ್ತಡ ನಿವಾರಕ

ಜೋಡಿಗಳ ನಡುವೆ ಧನಾತ್ಮಕ ಶಕ್ತಿಯನ್ನು ಉದ್ದೀಪನಗೊಳಿಸಲು ಆಲಿಂಗನ ಸಹಕಾರಿ. ಎಲ್ಲಾ ಒತ್ತಡ ಮತ್ತು ಆತಂಕ ದೇಹದಿಂದ ನಿವಾರಣೆಯಾಗಲು ಆಲಿಂಗನ ಸಹಕಾರಿಯಾಗಿದೆ.

ಕಾಳಜಿಯನ್ನು ವ್ಯಕ್ತಪಡಿಸಲು

ಕಾಳಜಿಯನ್ನು ವ್ಯಕ್ತಪಡಿಸಲು

ನಿಮ್ಮ ಪ್ರೀತಿ ಪಾತ್ರರ ಮೇಲೆ ನಿಮಗೆಷ್ಟು ಕಾಳಜಿ ಇದೆ ಎಂಬುದನ್ನು ವ್ಯಕ್ತಪಡಿಸಲು ಆಲಿಂಗನ ಮುಖ್ಯವಾಗಿದೆ. ಈ ಅವಕಾಶವನ್ನು ಮಾತ್ರ ಎಂದಿಗೂ ಕಳೆದುಕೊಳ್ಳಬೇಡಿ

ನಗುವಿನ ಶಕ್ತಿ

ನಗುವಿನ ಶಕ್ತಿ

ನಿಮ್ಮ ತೋಳನ್ನು ಬಳಸಿ ಆಕೆಯನ್ನು ಆಲಂಗಿಸುವಾಗ ಆಕೆಯ ಮುಖದಲ್ಲಿ ಉಂಟಾಗುವ ನಗುವನ್ನು ನೋಡಿ. ಆಲಿಂಗನವು ಸಂಗಾತಿಗಳ ನಡುವೆ ಹೂನಗುವನ್ನು ಉಂಟುಮಾಡಿ ಸಂತೋಷದಿಂದಿರಲು ಕಾರಣವಾಗಿದೆ.

ಪ್ರೀತಿಯನ್ನು ಆಘ್ರಾಣಿಸಲು

ಪ್ರೀತಿಯನ್ನು ಆಘ್ರಾಣಿಸಲು

ನಿಮ್ಮ ಸಂಗಾತಿಯನ್ನು ನೀವು ಆಲಂಗಿಸಿಕೊಂಡಾಗ ಅವರ ಪ್ರೀತಿಯ ಆಘ್ರಾಣಿಸುವಿಕೆ ನಿಮ್ಮಲ್ಲಿ ಚೈತನ್ಯವನ್ನುಂಟು ಮಾಡುತ್ತದೆ. ಈ ಪ್ರೀತಿಯ ಪರಿಮಳ ಎಂದೆಂದೂ ಹರಡಿರುತ್ತದೆ.

ಬಿಸಿಯ ಅನುಭವ

ಬಿಸಿಯ ಅನುಭವ

ನಿಮ್ಮ ಪ್ರೀತಿಪಾತ್ರರ ಬೆಚ್ಚಗಿನ ಹಿಡಿತದಲ್ಲಿ ನೀವಿದ್ದಾಗ ಬಿಸುಪನ್ನು ನೀವು ಅನುಭವಿಸಿದ್ದೀರಾ? ಹಾಗಿದ್ದರೆ ಇದು ನಿಮ್ಮ ಸಂಬಂಧದ ದೃಢತೆಯ ಉತ್ತಮ ಲಕ್ಷಣವಾಗಿದೆ. ಸಂಬಂಧದಲ್ಲಿ ಗಟ್ಟಿಯಿಂದಿರಲು ಆಲಿಂಗನ ಹಿತಕಾರಿಯಾಗಿದೆ.

ಧೈರ್ಯವನ್ನು ನೀಡುತ್ತದೆ

ಧೈರ್ಯವನ್ನು ನೀಡುತ್ತದೆ

ನೀವು ತುಂಬಾ ಇಳಿದಾಗ ಕಂಗೆಟ್ಟಾಗ ನಿಮ್ಮ ಪ್ರೀತಿಯ ಹುಡುಗನ ಅಥವಾ ಹುಡುಗಿಯ ಆಲಿಂಗನದ ದೃಢತೆಯನ್ನು ನೀವು ಬಯಸುತ್ತೀರಿ ಅಲ್ಲವೇ? ಆದ್ದರಿಂದಲೇ ಆಲಿಂಗನ ಎನ್ನುವುದು ಅಷ್ಟೊಂದು ಹಿತಕಾರಿಯಾಗಿರುವುದು ಮತ್ತು ಮಹತ್ವಪೂರ್ಣವಾದುದು.

English summary

10 Reasons To Hug Your Partner Now

Hugging is important in a relationship as it elevates physical attraction between partners. So, if you thought just a kiss will do all the magic, you are wrong. Here are some reasons you need to grab your partner today and give him/her a hug.
Story first published: Wednesday, July 9, 2014, 14:05 [IST]
X
Desktop Bottom Promotion