For Quick Alerts
ALLOW NOTIFICATIONS  
For Daily Alerts

ವಾಹ್ 10 ವಿಭಿನ್ನ ಚುಂಬನಗಳು ಮತ್ತು ಮಹತ್ವಗಳು

|

ನಿಮ್ಮ ಪ್ರೀತಿಯ ಸಂಬಂಧದಲ್ಲಿ ಚುಂಬನಕ್ಕಿರುವ ಮಹತ್ವದ ಬಗೆಗೆ ನೀವು ಅರಿತಿದ್ದೀರಾ? ಇನ್ನೊಬ್ಬ ವ್ಯಕ್ತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನ ಒಂದು ಸುಂದರ ಮಾಧ್ಯಮಾಗಿದೆ. ಚುಂಬನದಲ್ಲಿ ಹಲವಾರು ವಿಧಗಳಿದ್ದು ಅದರದ್ದೇ ಆದ ಮಹತ್ವ ಈ ಚುಂಬನಕ್ಕಿದೆ. ನಿಮ್ಮ ಸಂಬಂಧದ ಮಧುರತೆಯನ್ನು ಮೇಲ್ಮಟ್ಟಕ್ಕೆ ಒಯ್ಯುವ ಶಕ್ತಿ ಚುಂಬನಕ್ಕಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರಥಮ ಚುಂಬನ ಯಶಸ್ವಿಯಾಗಲು ಕೆಲವು ಸಲಹೆಗಳು!

ನಿಮ್ಮ ಪ್ರೀತಿಯನ್ನು ಅರುಹುವ ಒಂದು ಸುಂದರ ಭಾವನಾತ್ಮಕ ಮಾಧ್ಯಮವಾಗಿದೆ ಚುಂಬನ ಎಂಬುದನ್ನು ನೀವು ಅಂಗೀಕರಿಸುತ್ತೀರಾ? ನಿಮ್ಮ ದೇಹದ ಯಾವುದೇ ಭಾಗಕ್ಕೂ ಚುಂಬನವನ್ನು ನೀಡಬಹುದು ಅದೊಂದು ಜೋಡಿಗಳ ನಡುವಿನ ಸುಂದರ ಕ್ಷಣವಾಗಿದೆ.

ಕೆಲವರ ಪ್ರಕಾರ, ನೀವು ಡೇಡಿಂಗ್‌ನಲ್ಲಿರುವವರಾಗಿದ್ದರೆ ಚುಂಬನಕ್ಕೆ ಅಡಿ ಇಡುವ ಮುನ್ನ ಅದರ ಮಹತ್ವವನ್ನು ಅರಿತಿರುವುದು ಒಳ್ಳೆಯದು. ಹತ್ತು ವಿಭಿನ್ನ ರೀತಿಯ ಚುಂಬನಗಳಿದ್ದು ಸಂಬಂಧದಲ್ಲಿ ಅದನ್ನು ವಿನಿಮಯ ಮಾಡಿಕೊಳ್ಳಬಹುದು. ಕೆಲವೊಮ್ಮೆ ಚುಂಬನದ ಮೂಲಕ ವ್ಯಕ್ತಿ ಏನನ್ನು ಹೇಳಹೊರಟಿದ್ದಾನೆ ಎಂಬುದು ಜಟಿಲವಾಗಿ ಬಿಡುತ್ತದೆ. ಆದರೆ ಈ ಲೇಖನ ನಿಮ್ಮ ಈ ಜಟಿಲತೆಯನ್ನು ನಿವಾರಿಸುವ ಸುಲಭ ಉಪಾಯವಾಗಿದೆ. ಹೇಗೆಂದು ಕಾತರಗೊಂಡಿರುವಿರಾ ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಗೆಳತಿಗೆ ನೀಡಲೇಬಾರದ 6 ಕೊಡುಗೆಗಳು!

1.ಕೆನ್ನಯ ಮೇಲಿನ ಚುಂಬನ:

1.ಕೆನ್ನಯ ಮೇಲಿನ ಚುಂಬನ:

ಇದೊಂದು ಪ್ರಾಮಾಣಿಕ ಚುಂಬನವಾಗಿದೆ. ವ್ಯಕ್ತಿಯನ್ನು ಮತ್ತು ನೀವು ಎಷ್ಟು ಸಮಯದವರರೆಗೆ ಡೇಟಿಂಗ್‌ ಮಾಡಲಾಗಿದೆ ಎಂಬುದನ್ನು ಇದು ಆಧರಿಸಿದೆ. ಮೊದಲ ಡೇಟಿಂಗ್‌ನಲ್ಲೇ ಈ ಪ್ರಕಾರದ ಚುಂಬನವನ್ನು ನೀವು ಸ್ವೀಕರಿಸಿದರೆಂದರೆ, ಆಕ್ರಮಣಕಾರಿಯಾಗಿ ತೋರ್ಪಡಿಸದೆ ಪರೀಕ್ಷಿಸುವುದು ಎಂದಾಗಿದೆ.

2.ತೆರೆದ ಕಣ್ಣುಗಳ ಚುಂಬನ;

2.ತೆರೆದ ಕಣ್ಣುಗಳ ಚುಂಬನ;

ನೀವು ಚುಂಬಿಸುವಾಗ ನಿಮ್ಮ ಸಂಗಾತಿ ಆಕೆ/ ಆತ ಕಣ್ಣುಗಳನ್ನು ಮುಚ್ಚಿಕೊಳ್ಳದಿದ್ದರೆ, ನಿಮ್ಮ ಸಂಗಾತಿ ಒಬ್ಬ ಭಾಗವಹಿಸುವವರಲ್ಲ ಕೇವಲ ವೀಕ್ಷಕ ಎಂಬುದು ಸಾಬೀತಾಗುತ್ತದೆ. ಇದೊಂದು ವಿಭಿನ್ನ ರೀತಿಯ ಚುಂಬನವಾಗಿದ್ದು ಎರಡು ಹೊಸ ಜೋಡಿಗಳ ಮಧ್ಯೆ ಹಂಚಿಕೊಳ್ಳಲಾಗುತ್ತದೆ.

3.ಪೂರ್ಣ ತುಟಿ ಚುಂಬನ;

3.ಪೂರ್ಣ ತುಟಿ ಚುಂಬನ;

ಕಣ್ಣುಗಳನ್ನು ಮುಚ್ಚಿ ತುಟಿಗಳು ಬೆಸೆದವೆಂದರೆ, ನೀವಿಬ್ಬರೂ ಈ ಕ್ಷಣವನ್ನು ಆಸ್ವಾದಿಸುತ್ತಿರುವಿರಿ ಎಂದರ್ಥವಾಗಿದೆ.

4.ಫ್ರೆಂಚ್ ಚುಂಬನ;

4.ಫ್ರೆಂಚ್ ಚುಂಬನ;

ಸಂಬಂಧದಲ್ಲಿ ವಿನಿಮಯ ಮಾಡಿಕೊಳ್ಳುವ ಹೆಚ್ಚು ಪ್ರೀತಿಯ ಚುಂಬನವಾಗಿದೆ ಫ್ರೆಂಚ್ ಚುಂಬನ. ಈ ಚುಂಬನದಲ್ಲಿ ನಾಲಿಗೆಯು ಪೂರ್ಣವಾಗಿ ಒಳಗೊಳ್ಳುತ್ತದೆ ಇದರರ್ಥ ವ್ಯಕ್ತಿ ಭಾವೋದ್ರಿಕ್ತನಾಗಿದ್ದಾರೆ ಮತ್ತು ನಿಮ್ಮೊಂದಿಗಿನ ಭೌತಿಕ ಸಂಬಂಧ ತಡೆಯಿಲ್ಲದ್ದು ಎಂಬುದು ವ್ಯಕ್ತವಾಗುತ್ತದೆ.

5.ವಾಂಪೈರ್ ಚುಂಬನ;

5.ವಾಂಪೈರ್ ಚುಂಬನ;

ನಿಮ್ಮ ಸಂಗಾತಿಯ ಕುತ್ತಿಗೆಯ ಸಮೀಪ ನೀಡುವಂತಹ ಚುಂಬನವಾಗಿದೆ ವಾಂಪೈರ್ ಚುಂಬನ. ಸಣ್ಣ ಮಟ್ಟಿಗಿನ ಕಚ್ಚುವಿಕೆ ಮತ್ತು ಹೀರುವಿಕೆ ಇಲ್ಲಿ ಸಾಧ್ಯ. ನಿಮ್ಮ ಸಂಗಾತಿಯ ಪೂರ್ಣ ಪ್ರೇಮದರಿವು ನಿಮಗಿಲ್ಲಿ ಉಂಟಾಗುತ್ತದೆ. ನಿಮ್ಮ ಸಂಗಾತಿ ಚುಂಬನಕ್ಕಿಂತ ಬೇರೆ ಯಾವುದನ್ನೋ ನಿಮ್ಮಿಂದ ಹೆಚ್ಚು ಬಯಸುತ್ತಿದ್ದಾರೆ ಎಂಬುದು ಇದರರ್ಥವಾಗಿದೆ.

6.ಕುತ್ತಿಗೆ ಚುಂಬನ;

6.ಕುತ್ತಿಗೆ ಚುಂಬನ;

ಕುತ್ತಿಗೆಯ ಚುಂಬನವನ್ನು ಹೆಚ್ಚಾಗಿ ಎಲ್ಲಾ ಸಂಗಾತಿಗಳೂ ಇಷ್ಟಪಡುತ್ತಾರೆ. ನಿಮ್ಮ ಸಂಗಾತಿ ನಿಮ್ಮ ದೇಹದ ಇತರ ಭಾಗವನ್ನೂ ಇಷ್ಟಪಡುತ್ತಾನೆ ಕೇವಲ ತುಟಿಯನ್ನು ಮಾತ್ರವಲ್ಲ ಎಂಬುದು ಈ ಚುಂಬನದ ಹಿಂದಿರುವ ಮರ್ಮವಾಗಿದೆ.

7.ಗಾಳಿಯಲ್ಲಿ ಚುಂಬನ;

7.ಗಾಳಿಯಲ್ಲಿ ಚುಂಬನ;

ಗಾಳಿಯಲ್ಲಿ ಚುಂಬನ ವಿಭಿನ್ನ ಪ್ರಕಾರದ ಚುಂಬನವಾಗಿದೆ. ನಿಮ್ಮ ಕೆನ್ನೆಯ ಬಳಿ ನಿಮ್ಮ ಸಂಗಾತಿಯು ತಮ್ಮ ಕೆನ್ನೆಯನ್ನು ತಂದು ಚುಂಬನದ ಧ್ವನಿಯನ್ನು ಹೊರಡಿಸುವುದಾಗಿದೆ. ಸಂಗಾತಿಯ ಕ್ರಿಯೆಯನ್ನು ಇದು ಒಳಗೊಂಡಿರುವುದಿಲ್ಲ.

8.ಕಿವಿಯನ್ನು ಕಚ್ಚಿ ಚುಂಬಿಸುವುದು;

8.ಕಿವಿಯನ್ನು ಕಚ್ಚಿ ಚುಂಬಿಸುವುದು;

ಸಂಗಾತಿಯ ಕಿವಿಯ ಮೇಲ್ಭಾಗ ಮತ್ತು ಕೆಳಭಾಗವನ್ನು ಹಲ್ಲಿನಿಂದ ಸ್ವಲ್ಪ ಸ್ವಲ್ಪವೇ ಅಗಿಯುತ್ತಾ ಬರುವುದನ್ನು ಈ ಚುಂಬನ ಒಳಗೊಂಡಿದೆ. ಸಂಗಾತಿಯೊಂದಿಗೆ ನಿಕಟವಾಗಿ ಬೆರೆಯಲು ಸಿದ್ಧ ಎಂಬುದನ್ನು ಈ ಚುಂಬನ ತೋರಿಸಿಕೊಡುತ್ತದೆ.

9.ಹಸ್ತ ಚುಂಬನ;

9.ಹಸ್ತ ಚುಂಬನ;

ಸಂಬಂಧದಲ್ಲಿ ಕಂಡುಬರುವ ಸೌಮ್ಯ ರೂಪದ ಚುಂಬನವಾಗಿದೆ ಹಸ್ತ ಚುಂಬನ. ಗೌರವ, ಅರ್ಹತೆ ಮತ್ತು ದಯೆಯನ್ನು ಈ ಚುಂಬನ ಪ್ರಕಟಪಡಿಸುತ್ತದೆ.

10.ಹಣೆಯನ್ನು ಚುಂಬಿಸುವುದು;

10.ಹಣೆಯನ್ನು ಚುಂಬಿಸುವುದು;

ಹಣೆಯನ್ನು ಚುಂಬಿಸುವುದು ನೀವು ಕೇವಲ ಸ್ನೇಹಿತರು ಎಂಬುದನ್ನು ತೋರಿಸುತ್ತದೆ. ನೀವು ಸಂಬಂಧವನ್ನು ಹೇಗೆ ಬೆಳೆಸಿದ್ದೀರಿ ಎಂಬುದನ್ನು ಈ ಚುಂಬನ ಅವಲಂಬಿಸಿರುತ್ತದೆ. ಸಂಗಾತಿಯ ಮೇಲಿನ ಆಳವಾದ ಪ್ರೀತಿಯನ್ನು ಈ ಚುಂಬನ ಅರುಹುತ್ತದೆ.

English summary

10 Different Types Of Kisses & Meanings

Kissing on the lips is not everyone's cup of tea. But there are various other kisses which one loves to receive when in a relationship. A kiss can be placed on any part of the body and it is a sensual moment for the couple.
X
Desktop Bottom Promotion