For Quick Alerts
ALLOW NOTIFICATIONS  
For Daily Alerts

ನಿಮ್ಮ ಸಹೋದ್ಯೋಗಿಯನ್ನು ಪ್ರೀತಿಸಿದ್ದಿರಿ ಎನ್ನುವ ಸೂಚನೆ

By Poornima Hegde
|

ಪ್ರೀತಿ ನಿಮಗೆ ಹೇಳಿ ಕೇಳಿ ಹುಟ್ಟಿಕೊಳ್ಳುವುದಿಲ್ಲ. ಇದು ಎಂದಿಗೂ ಯೋಜಿತವಾದ ಹೆಜ್ಜೆಯಲ್ಲ. ನಿಮಗೆ ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ ಎಂದು ನಿಮಗೇ ಗೊತ್ತಿರುವುದಿಲ್ಲ. ಪರಿಚಯವಾದ ಕೂಡಲೇ ಪ್ರೀತಿ ಹುಟ್ಟಬೇಕೆಂಬ ನಿಯಮವೂ ಇಲ್ಲ. ವರ್ಷಗಳ ಬರಿಯ ಗೆಳೆತನ ಒಂದೇ ಒಂದು ಘಟನೆಯಿಂದಾಗಿ ಪ್ರೀತಿಯಾಗಿ ಪರಿವರ್ತನೆ ಆಗಬಹುದು.

ಇಂದಿನ ಯುಗದಲ್ಲಿ ಒಂದೇ ಆಫೀಸಿನಲ್ಲಿ ಕೆಲಸ ಮಾಡುವವರ ಮಧ್ಯೆ ಪ್ರೇಮಾಂಕುರವಾಗುವ ಅದೆಷ್ಟೋ ಉದಾಹರಣೆಗಳಿವೆ. ಒಂದು ಆಫೀಸು ಎಂದ ಮೇಲೆ ಅಲ್ಲಿ ಒಂದೇ ರೀತಿಯಾಗಿ ಯೋಚನಾ ಲಹರಿ ಇರುವ ಜನರು ಸಿಗುವುದು ಸಾಮಾನ್ಯ. ಹೀಗೆ ನಮ್ಮ ಆಲೋಚನೆಗಳಿಗೆ ಕನಸುಗಳಿಗೆ ಯಾರೋ ರೆಕ್ಕೆ ಪುಕ್ಕ ಕಟ್ಟಿದಾಗ ಅವರ ಮೇಲೆ ಆಕರ್ಷಣೆ ಉಂಟಾಗುವುದು ಸಾಮಾನ್ಯ. ಅದೂ ಅಲ್ಲದೆ ಕೆಲಸದ ಒತ್ತಡದಿಂದ ಸಂಬಂಧಗಳು ದೂರವಾಗುತ್ತಿರುವ ಇಂದಿನ ಕಾಲದಲ್ಲಿ ಆಫೀಸು ಎರಡನೆ ಮನೆ ಆಗಿರುವುದೂ ಸತ್ಯ. ಒಟ್ಟಿಗೆ ಕೆಲಸ ಮಾಡುವವರು ಜೀವನ ಪೂರ್ತಿ ಒಟ್ಟಿಗೆ ಇರಲು ನಿರ್ಧರಿಸಿದರೆ ಅದರಲ್ಲೇನೂ ಆಶ್ಚರ್ಯವಿಲ್ಲ.

ನೀವು ನಿಮ್ಮ ಸಹೋದ್ಯೋಗಿಯ ಜೊತೆ ಪ್ರೀತಿಯಲ್ಲಿದ್ದೀರಿ ಎಂದರೆ ಅದು ಸಾಮಾನ್ಯ. ಇದು ಯಾಕಾಗುತ್ತದೆ ಎನ್ನುವುದಕ್ಕೆ ಉತ್ತರವಿಲ್ಲ. ಇದು ನಡೆದು ಹೋಗುತ್ತದೆ ಅಷ್ಟೇ. ನಿಮ್ಮ ಸಹೋದ್ಯೋಗಿ ನಿಮ್ಮ ಬಳಿ ಬಂದಾಗ ಏನೋ ಹೇಳಲಾಗದ ಭಾವ ನಿಮ್ಮನ್ನು ಆವರಿಸುತ್ತದೆಯೇ? ಹೃದಯ ಬಡಿತ ವೇಗವಾಗುತ್ತದೇಯೇ? ಹೀಗಾದ ಕೂಡಲೇ ಮುಂದಿನ ಹೆಜ್ಜೆ ನೀವು ಅವರನ್ನು ಆಫೀಸಿನ ಹೊರಗೆಯೂ ಭೇಟಿ ಮಾಡಲು ಬಯಸುತ್ತೀರಿ. ಅದೂ ನೀವಿಬ್ಬರೂ ಒಂದೇ ಪ್ರಾಜೆಕ್ಟ್ ನಲ್ಲಿ ಇದ್ದೀರಿ ಎಂದಾದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಂದರ್ಭಗಳು ಇನೂ ಹೆಚ್ಚು. ನಿಮ್ಮ ಸಹೋದ್ಯೋಗಿಯ ಮೇಲೆ ಪ್ರೀತಿ ಇದೆಯೇ ಇಲ್ಲವೇ ಎಂಬ ಬಗ್ಗೆ ನಿಮ್ಮಲ್ಲಿ ನಿಶ್ಚಿತತೆ ಇಲ್ಲವೇ? ಹಾಗಿದ್ದರೆ ಈ ಕೆಳಗಿನ ಅಂಶಗಳು ನಿಮ್ಮಲ್ಲಿರುವ ಆ ಸಂದೇಹವನ್ನು ಹೋಗಲಾಡಿಸುತ್ತವೆ.

ಆಕೆ / ಆತನ ಬಗೆಗಿನ ಯೋಚನೆಗಳು ದಿನವಿಡಿ ಆವರಿಸಿರುವುದು

ಆಕೆ / ಆತನ ಬಗೆಗಿನ ಯೋಚನೆಗಳು ದಿನವಿಡಿ ಆವರಿಸಿರುವುದು

ಇದು ಎಲ್ಲಾ ಸೂಚನೆಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಸೂಚನೆ. ನೀವು ಪ್ರೀತಿಯಲ್ಲಿದ್ದರೆ ಆಕೆ / ಆತನ ಬಗೆಗಿನ ಆಲೋಚನೆಗಳು ಬೇಡವೆಂದರೂ ನಿಮ್ಮ ಮನಸ್ಸಿನಿಂದ ಹೋಗಲಾರವು. ಅವರ ಬಗ್ಗೆಯೇ ನಿಮ್ಮ ಮನಸ್ಸು ಯೋಚಿಸುತ್ತಾ ಇರುತ್ತದೆ. ಅವರು ಮತ್ತು ನೀವು ಎಲ್ಲೋ ಇರುವ ಹಾಗೆ ಅವರ ಜೊತೆ ಮಾತನಾಡಿದ ಹಾಗೆ ಕಲ್ಪನೆಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಅವರ ಜೊತೆ ಸದಾ ಮಾತನಾಡುತ್ತಾ ಇರಬೇಕು ಎಂಬ ಆಸೆಯೂ ಸಹಜ.

ಎಲ್ಲವನ್ನೂ ಹಂಚಿಕೊಳ್ಳುವ ಆಸೆ

ಎಲ್ಲವನ್ನೂ ಹಂಚಿಕೊಳ್ಳುವ ಆಸೆ

ಆಫೀಸಿನಲ್ಲಿ ಭೇಟಿಯಾದದ್ದು ಸಾಕಾಗದೇ ಮನೆಯಲ್ಲೂ ಅಥವಾ ಹೊರಗಡೆ ಎಲ್ಲಾದರೂ ಅವರ ಜೊತೆ ಸಮಯ ಕಳೆಯಬೇಕೆಂಬ ಆಸೆ ಇನ್ನೊಂದು ಸೂಚನೆ. ರಜಾ ದಿನಗಳಲ್ಲಿ ಒಂದೋ ಭೇಟಿ ಆಗಬೇಕು ಅಥವಾ ಅವರ ಜೊತೆಗೆ ಕಡೆ ಪಕ್ಷ ಮೆಸೇಜು, ಫೇಸ್ ಬುಕ್ ಅಥವಾ ಫೋನಿನಲ್ಲಾದರೂ ಮಾತನಾಡುತ್ತಾ ಸಮಯ ಕಳೆಯಬೇಕೆಂಬ ಬಯಕೆ ಸಾಮಾನ್ಯ.

ಸಣ್ಣ ಸಣ್ಣ ಘಟನೆಗಳೂ ಮರೆಯುವುದಿಲ್ಲ

ಸಣ್ಣ ಸಣ್ಣ ಘಟನೆಗಳೂ ಮರೆಯುವುದಿಲ್ಲ

ನೀವು ಆವರ ಬಗ್ಗೆ ಪ್ರಣಯದ ಮೂಡ್ ನಲ್ಲಿರುವಾಗ ಅವರ ಬಗೆಗಿನ ಸಣ್ಣ ಸಣ್ಣ ಅಂಶಗಳೂ ನಿಮ್ಮ ನೆನಪಿಗೆ ಬರುತ್ತವೆ. ಅವರು ಮಾತನಾಡುವ ಧಾಟಿ, ಅವಳ ಮುಂಗುರುಳು, ಅಥವಾ ಆತನ ಫೆವರಿಟ್ ಶರ್ಟ್ ಇವೆಲ್ಲಾ ನಿಮ್ಮ ನೆನಪಿನಿಂದ ಮರೆಯಾಗುವುದೇ ಇಲ್ಲ.

ಒಲವಿನ ಉಡುಗೊರೆ

ಒಲವಿನ ಉಡುಗೊರೆ

ನಿಮ್ಮ ಸಹೋದ್ಯೋಗಿಯ ಜನ್ಮದಿನ ನಿಮಗೆ ವರ್ಷವಿಡಿ ಮರೆಯುವುದೇ ಇಲ್ಲವಾದರೆ ಅವರ ಮೇಲೆ ನಿಮಗೆ ಖಂಡಿತ ಪ್ರೀತಿ ಇದೆ ಎಂದರ್ಥ. ಅವರ ಜನ್ಮ ದಿನಕ್ಕೆ ಏನು ಉಡುಗೊರೆ ಕೊಡಬೇಕೆಂಬ ಬಗ್ಗೆ ತಿಂಗಳ ಮೊದಲೇ ಯೋಚನೆಗಳು ಆರಂಭವಾಗುತ್ತವೆ. ಅವನ/ ಅವಳ ಬಳಿ ಏನಿದೆ ಏನಿಲ್ಲ, ಏನಿಷ್ಟ ಎಂಬೆಲ್ಲಾ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಆವರಿಸಿರುತ್ತವೆ.

ಅವರ ಕೆಲಸವೂ ನಿಮ್ಮ ಕೆಲಸವೇ ಆಗಿರುತ್ತದೆ

ಅವರ ಕೆಲಸವೂ ನಿಮ್ಮ ಕೆಲಸವೇ ಆಗಿರುತ್ತದೆ

ನೀವು ನಿಮ್ಮ ಕೆಲಸದಲ್ಲಿ ತೋರಿಸುವ ದುಪ್ಪಟ್ಟು ಆಸಕ್ತಿ ಆಕೆ / ಆತನಿಗೆ ಕೆಲಸದಲ್ಲಿ ಸಹಾಯ ಮಾಡಲು ತೋರಿಸುತ್ತೀರಿ. ನಿಮ್ಮಿಂದ ಸುಲಭದಲ್ಲಿ ಸಾಧ್ಯವಾಗುವುದನ್ನಂತು ಖಂಡಿತ ಮಾಡುತ್ತೀರಿ ಅದರ ಜೊತೆಗೆ ನಿಮಗೆ ಗೊತ್ತಿಲ್ಲದ ಕೆಲಸವನ್ನು ಕಲಿತಾದರೂ ಸರಿ ಅವರಿಗೆ ಸಹಾಯ ಮಾಡುತ್ತೀರಿ.

ಹೊಟ್ಟೆಕಿಚ್ಚು

ಹೊಟ್ಟೆಕಿಚ್ಚು

ಬೇರೆಯವರು ಅವರ ಬಳಿ ಮಾತನಾಡಿದರೆ ಬೇರೆಯವರು ಅವರಿಗೆ ಸಹಾಯ ಮಾಡಿದರೆ, ಯಾವುದೋ ಪ್ರಾಜೆಕ್ಟ್ ಮೇಲೆ ಬೇರೆ ಸಹೋದ್ಯೋಗಿ ಅವರ ಜೊತೆ ಕೆಲಸದಲ್ಲಿ ತೊಡಗಿಕೊಂಡರೆ ನಿಮಗೆ ಆ ದಿನವಿಡಿ ಹೊಟ್ಟೆ ಉರಿ. ಆಕೆ / ಆತ ಬೇರೆ ಯಾರಜೊತೆಗಾದರೂ ಫರ್ಟ್ ಮಾಡಿದರಂತೂ ನಿಮಗೆ ಸಹಿಸಲಾರದಷ್ಟು ನೋವಾಗುತ್ತದೆ.

ಸಾಧ್ಯವಾದಷ್ಟು ಮಾಹಿತಿ ಕಲೆ ಹಾಕುತ್ತೀರಿ

ಸಾಧ್ಯವಾದಷ್ಟು ಮಾಹಿತಿ ಕಲೆ ಹಾಕುತ್ತೀರಿ

ಆಕೆ ಅಥವಾ ಆತನ ಬಗ್ಗೆ ಯಾವ ಮಾಹಿತಿ ಸಿಕ್ಕರೂ ನಿಮಗೆ ಅದು ಬೇಕು. ಆಕೆಯ ಮನೆ ಎಲ್ಲಿ, ಯಾರಿದ್ದಾರೆ ಮನೆಯಲ್ಲಿ, ಆಕೆಯ ಆಸಕ್ತಿಗಳೇನು, ಯಾವ ತಿಂಡಿ ಇಷ್ಟ, ಯಾವ ಪುಸ್ತಕ ಓದುತ್ತಾಳೆ ಇವೆಲ್ಲ ನಿಮ್ಮ ಆದ್ಯ ಮಾಹಿತಿಗಳಾಗಿರುತ್ತವೆ.

ಪ್ರತಿದಿನ ನಗುಮೊಗದ ಸ್ವಾಗತ

ಪ್ರತಿದಿನ ನಗುಮೊಗದ ಸ್ವಾಗತ

ನೀವು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ನಿಮ್ಮ ಪ್ರೀತಿಯ ಸಹೋದ್ಯೋಗಿ ಬಂದ ಕೂಡಲೆ ನಗುಮೊಗದ ಸ್ವಾಗತ ನೀಡುತ್ತೀರಿ. ಸಾಮಾನ್ಯ ಸಂದರ್ಭಗಳಲ್ಲಿ ನೀವು ನೀಡುವ ನಗುವಿಗಿಂತ ಎಷ್ಟೋ ಹೆಚ್ಚು ಪಟ್ಟು ನಗುವನ್ನು ಅವರ ಮುಂದೆ ಬೀರುತ್ತೀರಿ. ಆಕೆ / ಆತನ ಯಾವುದೇ ಹೊಸ ಫ್ಯಾಷನ್ ಅನ್ನು ಹೊಗಳುವಲ್ಲಿ ನೀವು ಮೊದಲಿಗರಾಗಿರುತ್ತೀರಿ.

ಈ ಎಲ್ಲಾ ಲಕ್ಷಣಗಳು ನಿಮ್ಮಲ್ಲಿವೆಯೇ ಪ್ರಶ್ನಿಸಿಕೊಳ್ಳಿ ಹೌದು ಎಂದಾದರೆ ನೀವು ಅವರನ್ನು ಪ್ರೀತಿಸುತ್ತಿದ್ದೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.


Read more about: relationship ಸಂಬಂಧ
English summary

Signs you are in love with your colleague

Love just blooms without your knowledge. It is never a planned affair. Nobody decides how and when to fall in love and with whom to fall in love.
Story first published: Wednesday, December 18, 2013, 17:08 [IST]
X
Desktop Bottom Promotion