For Quick Alerts
ALLOW NOTIFICATIONS  
For Daily Alerts

ನಿಮ್ಮ ನಡುವೆ ಮೂರನೆಯವರು ಬಾರದಿರಲಿ

By Hemanth P
|

ಸಂಬಂಧದಲ್ಲಿ ಸವಾಲುಗಳು ಹಾಗೂ ಸಮಸ್ಯೆಗಳು ಸಾಮಾನ್ಯ, ಕೇವಲ ಪ್ರೀತಿ ಮಾತ್ರ ಸಂಬಂಧವನ್ನು ಜತೆಯಾಗಿ ಬಂಧಿಸುತ್ತದೆ. ಸ್ನೇಹಿತರು, ಸಂಗಾತಿ, ಸೋದರರು ಅಥವಾ ಪೋಷಕರೊಂದಿಗಿನ ಸಂಬಂಧವಾಗಿರಬಹುದು, ಅದನ್ನು ಒಳ್ಳೆಯ ರೀತಿ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯ. ಸಂಬಂಧದಲ್ಲಿನ ಸಾಮಾನ್ಯ ಸಮಸ್ಯೆಯೆಂದರೆ ಅದು ಮೂರನೇ ವ್ಯಕ್ತಿ. ಸಂಬಂಧದಲ್ಲಿ ಕೆಲವು ಸಲ ಮೂರನೇ ವ್ಯಕ್ತಿ ಇರುವುದು ಹಿತಕರವೆನಿಸಿದರೆ, ಮತ್ತೆ ಕೆಲವು ಸಲ ಇದು ದೊಡ್ಡ ಹೊರೆಯಾಗಬಹುದು. ಮೂರನೇ ವ್ಯಕ್ತಿ ಒಬ್ಬನಿಗೆ ನೋವುಂಟು ಮಾಡಿದರೆ ಅಥವಾ ಮೂರನೇ ವ್ಯಕ್ತಿಯ ಅಪ್ರಿಯ ವರ್ತನೆಯಿಂದ ಸಮಸ್ಯೆ ಆರಂಭವಾಗಬಹುದು.

ಮದುವೆಯ ವಿಷಯಕ್ಕೆ ಬಂದರೆ ದಂಪತಿ ತಮ್ಮ ಭರವಸೆ ಉಳಿಸಿಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ ಮತ್ತು ಕೆಲವೊಂದು ಸಲ ಮೂರನೇ ವ್ಯಕ್ತಿಯಿಂದಾಗಿ ಸಮಸ್ಯೆಯಾಗಬಹುದು. ಸಂಬಂಧದಲ್ಲಿ ಮೂರನೇ ವ್ಯಕ್ತಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ತ್ರಿಕೋನ ಸಂಬಂಧದಲ್ಲಿ ಇನ್ನೊಬ್ಬ ವ್ಯಕ್ತಿಯ ಭಾವನೆಗಳು ಒಳಗೊಂಡಿರುವುದರಿಂದ ಸಮಸ್ಯೆಗಳು ಆರಂಭವಾಗುತ್ತದೆ. ಮೂರನೇ ವ್ಯಕ್ತಿಯಿಂದ ಸಮಸ್ಯೆ ತುಂಬಾ ಜಟಿಲವಾಗಿ ಅದನ್ನು ಬಗೆಹರಿಸಲು ಕಷ್ಟವಾಗಬಹುದು. ಇದರಿಂದ ಸಂಬಂಧದಲ್ಲಿ ಮೂರನೇ ವ್ಯಕ್ತಿಯನ್ನು ಸೇರಿಸಿಕೊಳ್ಳಬೇಡಿ. ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವೇ ಯಾವಾಗಲೂ ಒಳ್ಳೆಯದು. ಇಬ್ಬರ ನಡುವಿನ ಬಂಧವು ಬಲವಾಗಿರುವ ಕಾರಣ ಆ ಸಂಬಂಧವು ಸುಂದರವಾಗಿರುತ್ತದೆ. ಸಂಬಂಧದಲ್ಲಿ ಮೂರನೇ ವ್ಯಕ್ತಿಯನ್ನು ಕಡೆಗಣಿಸಲು ಕೆಲವೊಂದು ವಿಧಾನಗಳು ಇಲ್ಲಿವೆ.

How to avoid third person in relationship

1. ಬಲೆಗೆ ಬೀಳದಿರಿ
ನೀವು ಸಂಬಂಧದಲ್ಲಿದ್ದರೆ ನಿಮ್ಮ ಆತ್ಮೀಯ ಗೆಳೆಯ ಕೆಲವೊಂದು ಸಲ ತೊಂದರೆ ಉಂಟು ಮಾಡಬಹುದು. ಇದನ್ನು ಗಮನಿಸಿ. ಸಂಗಾತಿಗೆ ನೀವು ಲಭ್ಯರಾಗುವುದಿಲ್ಲ ಅಥವಾ ಅವರಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತೀರಿ ಎಂಬ ಭಾವನೆ ಮೂಡಬಾರದು. ಅಭದ್ರತೆ ಕಾಡಿದಾಗ ಸಮಸ್ಯೆಗಳು ಶುರುವಾಗುತ್ತದೆ. ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಬಗ್ಗೆ ಗಮನಹರಿಸಬೇಕು ಮತ್ತು ಅವರನ್ನು ಯಾವುದೇ ಬೆಲೆ ಕೊಟ್ಟಾದರೂ ಕಡೆಗಣಿಸಬೇಕು. ನಿಮ್ಮ ಸಂಗಾತಿ ಜತೆಗೆ ಹೆಚ್ಚಿನ ಸಮಯ ಕಳೆಯಿರಿ, ಆದರೆ ನಿಮ್ಮ ಸ್ನೇಹಿತನನ್ನು ಸಂಪೂರ್ಣವಾಗಿ ಕಡೆಗಣಿಸಬೇಡಿ. ನಿಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತೆ ಗೆಳೆಯನಿಗೆ ತಿಳಿಸಿ.

2. ವಿಶ್ಲೇಷಿಸಿ
ನಿಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಬಂದಾಗ ನೀವು ವಿಶ್ಲೇಷಣೆ ಮಾಡುವುದು ತುಂಬಾ ಮುಖ್ಯ. ನಿಷ್ಪಕ್ಷಪಾತವಾಗಿ ನಿಜವಾದ ಸಮಸ್ಯೆ ತಿಳಿಯಿರಿ. ವಿಶ್ಲೇಷಣೆ ಮಾಡಿ ಮತ್ತು ನಿಜವಾದ ಸಮಸ್ಯೆ ಎಲ್ಲಿದೆ ಎಂದು ಪತ್ತೆಹಚ್ಚಿ. ಸಂಬಂಧದಲ್ಲಿ ಮೂರನೇ ವ್ಯಕ್ತಿಯನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ಸಂಬಂಧದ ಕೆಲವೊಂದು ಟಿಪ್ಸ್ ನಿಮಗೆ ನೆರವಾಗಬಹುದು. ಸಂಬಂಧದಲ್ಲಿ ಮೂರನೇ ವ್ಯಕ್ತಿ ತುಂಬಾ ಜಟಿಲ ಮತ್ತು ಇದರ ಬಗ್ಗೆ ಎಚ್ಚರಿಕೆ ಅತ್ಯಗತ್ಯ.

3. ದೂರವಿರಿ
ಮೂರನೇ ವ್ಯಕ್ತಿಯ ಸಂಬಂಧದಲ್ಲಿ ನೀವಿಬ್ಬರು ಚರ್ಚೆಯನ್ನು ನಿಮ್ಮೊಳಗೆ ಮಾಡಿ ಮತ್ತು ಮೂರನೇ ವ್ಯಕ್ತಿಯನ್ನು ದೂರವಿಡಿ. ಸಂಬಂಧದಲ್ಲಿರುವ ಮೂರನೇ ವ್ಯಕ್ತಿಯಿಂದ ಸಮಸ್ಯೆಗಳು ಯಾವಾಗಲೂ ಬರಬಹುದು. ನಿಮ್ಮ ಸಂಬಂಧದ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದರೆ ಕೆಲವೊಂದು ಸಂಬಂಧದ ಸಲಹೆಗಳನ್ನು ಪಾಲಿಸಿ, ಇದು ನೆರವಾಗಬಹುದು.

4. ನಿಮ್ಮ ಗಮನವನ್ನು ವೈಯಕ್ತಿಕ ಸಂಬಂಧದ ಮೇಲೆ ಇಡಿ
ಮೂರನೇ ವ್ಯಕ್ತಿಯ ಸಂಬಂಧದಲ್ಲಿ ಪಾಲಿಸಬೇಕಾದ ಅತ್ಯುತ್ತಮ ಸಂಬಂಧಿ ಸಲಹೆಯೆಂದರೆ ವೈಯಕ್ತಿಕ ಸಂಬಂಧದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ. ಇದು ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು ಅಥವಾ ಕಡೆಗಣಿಸಬಹುದು. ಮೂರನೇ ವ್ಯಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸುವ ಬದಲು ಅವರಿಂದ ದೂರವಿದ್ದು, ನಿಮ್ಮ ಸಂಗಾತಿಗೆ ಹತ್ತಿರವಾಗಿ. ಇದರಿಂದ ನಿಮ್ಮ ಸಂಬಂಧದ ಋಣಾತ್ಮಕ ಭಾವವನ್ನು ತೆಗೆಯಬಹುದು.

5. ಎಲ್ಲಿ ಗಡಿರೇಖೆ ಹಾಕಬೇಕೆಂದು ತಿಳಿಯಿರಿ
ಈ ಒಂದು ವಿಷಯವನ್ನು ನೀವು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು. ಈ ಒಂದು ಸಂಬಂಧದ ಸಲಹೆಯನ್ನು ಪ್ರತಿಯೊಬ್ಬರು ಪಾಲಿಸಬೇಕು. ನೀವು ಮೂವರು ಜತೆಯಾಗಿ ಮಾತುಕತೆ ಆರಂಭಿಸಿದರೆ ಆಗ ಎಲ್ಲಿ ಗಡಿರೇಖೆ ಹಾಕಬೇಕೆಂದು ನಿರ್ಧರಿಸಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ಮಿತಿ ಇರುತ್ತದೆ ಮತ್ತು ತೃತೀಯ ವ್ಯಕ್ತಿಯ ಸಂಬಂಧದಲ್ಲಿರುವಾಗ ನೀವು ನಿಮ್ಮ ಮಿತಿಯನ್ನು ಮನವರಿಕೆ ಮಾಡಿಕೊಳ್ಳಬೇಕು. ನಿಮ್ಮ ಮಿತಿಯೊಳಗೆ ಇದ್ದು ಕೆಲವೊಂದು ಸರಳ ಸಂಬಂಧಿ ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಸಂಬಂಧವು ಉತ್ತಮವಾಗಿರುತ್ತದೆ. ಸಂಬಂಧವು ಯಾವಾಗಲೂ ಉತ್ತಮವಾಗಿರಬೇಕೆಂದು ನೀವು ಭಾವಿಸಿದ್ದರೆ ಆಗ ತಾಳ್ಮೆಯಿಂದ ಇರಿ ಮತ್ತು ಏನು ಬರುತ್ತದೆಯೊ ಅದನ್ನು ಎದುರಿಸಿ.

English summary

How to avoid third person in relationship

Challenges and pitfalls are common in a relationship and it is only love that will bind a relationship together. The relationship may be with a friend, spouse, sibling or a parent, it is imperative to maintain it the good way.
Story first published: Tuesday, December 10, 2013, 10:37 [IST]
X
Desktop Bottom Promotion