For Quick Alerts
ALLOW NOTIFICATIONS  
For Daily Alerts

ಪುರುಷರು ಲಿವ್ ಇನ್ ರಿಲೇಶನ್ ಶಿಪ್ ದ್ವೇಷಿಸಲು ಕಾರಣಗಳು

By Hemanth P
|

ಪುರುಷರೇ ತುಂಬಿರುವ ಮನೆಯಲ್ಲಿ ನೀವು ಲಿವ್ ಇನ್ ರಿಲೇಶನ್ ಬಗ್ಗೆ ಹೇಳಿದರೆ ಆಗ ಮನೆಯೂ ಇದರ ಪರ ಮತ್ತು ವಿರೋಧವಾಗಿ ಮಾತನಾಡುವವರಿಂದಾಗಿ ಇಬ್ಭಾಗವಾಗಬಹುದು. ಹೆಚ್ಚಿನ ಪುರುಷರು ಅದರಲ್ಲೂ ನಗರ ಪ್ರದೇಶದ ಯುವಕರು ಮದುವೆಗಿಂತ ಲಿವ್ ಇನ್ ರಿಲೇಶನ್ ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಸಾಂಪ್ರದಾಯವಾದಿಗಳು ಮತ್ತು ತುಂಬಾ ಸಂಪ್ರದಾಯಸ್ಥ ಮನೆತನದಿಂದ ಬಂದವರು ಲಿವ್ ಇನ್ ರಿಲೇಶನ್ ನ್ನು ವಿರೋಧಿಸುತ್ತಾರೆ.

ಹೆಚ್ಚಿನ ರಾಷ್ಟ್ರಗಳಲ್ಲಿ ಲಿವ್ ಇನ್ ರಿಲೇಶನ್ ನ್ನು ಇದುವರೆಗೆ ಸ್ವೀಕರಿಸಿಲ್ಲ ಮತ್ತು ಕೆಲವೆಡೆ ಇದಕ್ಕಾಗಿ ಕಾನೂನು ರೂಪಿಸಬೇಕಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಲಿವ್ ಇನ್ ರಿಲೇಶನ್ ಶಿಪ್ ನ್ನು ಒಪ್ಪಿಕೊಂಡಿದ್ದಾರೆ ಮತ್ತು ಹೆಚ್ಚಿನ ಯುವಕರು ಇದನ್ನೇ ಅನುಸರಿಸುತ್ತಿದ್ದಾರೆ. ಆದರೆ ಭಾರತ ಸಹಿತ ಕೆಲವೊಂದು ರಾಷ್ಟ್ರಗಳಲ್ಲಿ ಮದುವೆಯಾಗದೆ ಜತೆಯಾಗಿ ವಾಸಿಸುವುದಕ್ಕೆ ನಿಷೇಧವಿದೆ.

Do men hate live in relationship: Reasons

ಜೀವನದಲ್ಲಿ ಕೆಲವೊಂದು ಶಾರ್ಟ್ ಕಟ್ ದೀರ್ಘಾವಧಿಗೆ ತುಂಬಾ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಸಾಂಪ್ರದಾಯಿಕ ಹಾಗೂ ಜೀವಮಾನವಿಡಿ ಮದುವೆಯ ಬಂಧನಕ್ಕೆ ಬೆಸೆದುಕೊಂಡು ಇರುವ ಬದಲು ಕೆಲವರು ಲಿವ್ ಇನ್ ರಿಲೇಶನ್ ಶಿಪ್ ನ ಶಾರ್ಟ್ ಕಟ್ ನ್ನು ಇಷ್ಟಪಡುತ್ತಾರೆ. ದೀರ್ಘಾವಧಿಗೆ ಲಿವ್ ಇನ್ ರಿಲೇಶನ್ ನ ಸಂಬಂಧವು ಎಷ್ಟು ಫಲಪ್ರದವಾಗಿದೆ ಎಂದು ಇದುವರೆಗೆ ಸಾಬೀತಾಗಿಲ್ಲ. ಹೆಚ್ಚಿನ ಪುರುಷರು ಪುಸ್ತಕಕ್ಕೆ ಅಂಟಿಕೊಂಡಿರುತ್ತಾರೆ. ಮತ್ತೆ ಕೆಲವರು ಡೇಟಿಂಗ್ ಅಥವಾ ಮದುವೆಯನ್ನು ಇಷ್ಟಪಡುತ್ತಾರೆ.

1. ಸಾಮಾಜಿಕ ಕಳಂಕ
ಹೆಚ್ಚಿನ ಪುರುಷರು ಲಿವ್ ಇನ್ ರಿಲೇಶನ್ ನಲ್ಲಿ ಇರುವುದು ಒಂದು ಸಾಮಾಜಿಕ ಕಳಂಕವೆಂದು ಭಾವಿಸುತ್ತಾರೆ. ನಗರ ಪ್ರದೇಶಗಳಲ್ಲಿ ಲಿವ್ ಇನ್ ರಿಲೇಶನ್ ಎನ್ನುವುದು ಹೊಸ ಟ್ರೆಂಡ್ ಆಗುತ್ತಿದ್ದರೂ ಸಮಾಜ ಮಾತ್ರ ಇದುವರೆಗೆ ಅದನ್ನು ಒಪ್ಪಿಕೊಂಡಿಲ್ಲ. ಹಿರಿಯರಿಂದ ಇದಕ್ಕೆ ಈಗಲೂ ನಿಷೇಧ ಹೇರಿದ್ದಾರೆ. ಇಂತಹ ದಂಪತಿಯನ್ನು ಸಮಾಜವು ವಿಚಿತ್ರವಾಗಿ ನೋಡುತ್ತದೆ. ಇಂತಹವರನ್ನು ಸಮಾಜವು ಮೂದಲಿಸುತ್ತದೆ, ಟೀಕಿಸುತ್ತದೆ ಮತ್ತು ಕೆಲವೊಮ್ಮೆ ಅವರ ವೈಯಕ್ತಿಕ ಆಯ್ಕೆಗೆ ಕಿರುಕುಳವನ್ನೂ ನೀಡಲಾಗುತ್ತದೆ.

2. ಹೊರಗೆ ಬರುವುದು ಸುಲಭ
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ತುಂಬಾ ಅನುಕೂಲಗಳು ಇರುವಂತೆ ಅನಾನುಕೂಲಗಳು ಇರುತ್ತದೆ. ಅದೆಂದರೆ ಬದ್ಧತೆಯ ಕೊರತೆ. ಸಣ್ಣ ಜಗಳ, ಭಿನ್ನಾಭಿಪ್ರಾಯ ಅಥವಾ ಯಾವುದಾದರೂ ಒಂದು ಪ್ರಶ್ನೆ ಇಬ್ಬರು ಸಂಗಾತಿಗಳು ಸಂಬಂಧದಿಂದ ಹೊರನಡೆಯಬಹುದು. ಮದುವೆಯಾಗಿರುವ ಸಂಗಾತಿಗಳಾದರೆ ಆಗ ಅವರು ತಮ್ಮ ಸಂಬಂಧ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಾರೆ. ಬೇರೆಯಾಗುದಕ್ಕಿಂತ ಸಮಸ್ಯೆಗೆ ಮತ್ತು ಭಿನ್ನಾಭಿಪ್ರಾಯಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿಸುತ್ತಾರೆ.

3. ಮಗುವಿನ ಅಂಶ
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಹುಟ್ಟುವ ಮಕ್ಕಳು ತುಂಬಾ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಮೊದಲನೇಯದಾಗಿ ಅವರು ಯಾವುದೇ ನಿಯಮ ಮತ್ತು ಕಟ್ಟಳೆಗಳಿಗೆ ಅಗೌರವ ನೀಡುತ್ತಾ ಬೆಳೆಯಬಹುದು. ಕೆಲವು ವರ್ಷಗಳ ಬಳಿಕ ಸಂಗಾತಿಗಳು ಬೇರೆಯಾಗುವ ಕಾರಣ ಇಂತಹ ಮಕ್ಕಳಿಗೆ ಹೆತ್ತವರ ಪ್ರೀತಿ ಮತ್ತು ಆರೈಕೆ ಸಿಗದಿರಬಹುದು. ಹೆಚ್ಚಿನ ಪುರುಷರು ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗುವನ್ನು ಪಡೆದು ಬಳಿಕ ಅವರನ್ನು ಅನಾಥರನ್ನಾಗಿ ಮಾಡುವುದನ್ನು ಇಷ್ಟಪಡುವುದಿಲ್ಲ.

4. ಅವಲಂಬಿಸಿರುವುದಿಲ್ಲ

ಮದುವೆಯ ಬಂಧನದಲ್ಲಿ ಸಂಗಾತಿ ಮಧ್ಯೆ ಇರುವ ಅವಲಂಬನೆ ಇಲ್ಲಿ ಕಾಣಿಸದು. ಕೆಲವೊಂದು ಸಂದರ್ಭಗಳಲ್ಲಿ ನೆರವು ಸಿಗಬಹುದು. ಆದರೆ ಕೆಟ್ಟ ಸಮಯದಲ್ಲಿ ಅಲ್ಲ. ಇದರಲ್ಲಿ ಮದುವೆಯ ಸಂಬಂಧದ ಆಳವಿರುವುದಿಲ್ಲ. ಲಿವ್ ಇನ್ ರಿಲೇಶನ್ ನಲ್ಲಿ ಯಾವುದೇ ಬದ್ಧತೆ ಇಲ್ಲದ ಕಾರಣ ಸಂಗಾತಿ ಸಂಕಷ್ಟದಲ್ಲಿ ಸಿಲುಕಿದ್ದಾಗ ಅವರು ಸಂಬಂಧದಿಂದ ಹೊರಹೋಗಲು ಹಿಂಜರಿಯುವುದಿಲ್ಲ.

5. ಗೌರವದ ಕೊರತೆ
ಮದುವೆಯಂತೆ ಇಲ್ಲಿ ದೀರ್ಘ ಕಾಲದ ಸಂಬಂಧವಿರುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಲಿವ್ ಇನ್ ರಿಲೇಶನ್ ಶಿಪ್ ಅಸ್ಥಿರತೆ ಮತ್ತು ಅಬದ್ಧತೆ ಮೇಲೆ ನಿಂತಿರುತ್ತದೆ. ಇದರಿಂದ ಪರಸ್ಪರರ ಬಗ್ಗೆ ಗೌರವವಿರದು. ಸಂಬಂಧ ಯಾವಾಗಲೂ ಮುರಿದು ಹೋಗಬಹುದು ಎಂದು ಅವರಿಬ್ಬರಿಗೆ ತಿಳಿದಿರುತ್ತದೆ.

English summary

Do men hate live in relationship: Reasons

When you fill a room with men and divide them with men preferring a live-in relation to those who oppose it, the house can end divided vertically into identically equal portion. Even though most men, especially urban young, prefer a live in relationship over marriage,
Story first published: Thursday, December 19, 2013, 12:29 [IST]
X
Desktop Bottom Promotion