For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿನ ಆತಂಕ ನಿವಾರಿಸಲು ಸಲಹೆ

By Hemanth P
|

ನಿಮ್ಮ ಜೀವನಪೂರ್ತಿ ಕನಸಿನ ರಾಜಕುಮಾರನಾಗಿದ್ದ ಆ ಅದ್ಭುತ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಿದ್ದರೂ ಹಠಾತ್ ಆಗಿ ನಿಮಗೆ ಅಭದ್ರತೆಯ ಭಾವ ಕಾಡುತ್ತಿದೆಯಾ? ಯಾವುದೇ ಸಮಯದಲ್ಲಿ ಈ ಸಂಬಂಧ ಕೊನೆಯಾಗಬಹುದು ಮತ್ತು ಇದು ನಿಮಗೆ ಆಘಾತ ಉಂಟುಮಾಡಬಹುದೆಂದು ಭಾವಿಸಿದ್ದೀರಾ? ಕೆಟ್ಟ ಅಂತ್ಯದ ಬಗ್ಗೆ ತುಂಬಾ ಭಯಭೀತರಾಗಿದ್ದೀರಿ. ಹಿಂದೆ ನಡೆದಂತಹ ಘಟನೆಯೊಂದು ನಿಮ್ಮಲ್ಲಿ ಈ ಯೋಚನೆ ಬಲವಾಗಿ ಬೇರೂರುವಂತೆ ಮಾಡಿರಬಹುದು.

ಸಂಬಂಧವು ಹಲವಾರು ರೀತಿಯಲ್ಲಿ ತುಂಬಾ ಸೂಕ್ಷ್ಮವಾಗಿರುತ್ತದೆ. ಆರಂಭದಲ್ಲಿ ಇದು ತುಂಬಾ ಸುಂದರವಾಗಿ ಬೆಳೆಯುತ್ತದೆ ಎಂದು ಕಾಣಿಸುತ್ತದೆ. ನಿಮ್ಮ ಸಂಬಂಧಕ್ಕೆ ಅಭದ್ರತೆ ಕಾಡದಂತೆ ಆತಂಕದ ಸಂಬಂಧದೊಂದಿಗೆ ವ್ಯವಹರಿಸಲು ಇದು ಒಳ್ಳೆಯ ಮಾರ್ಗ. ಆತಂಕ ಮತ್ತು ಅಭದ್ರತೆ ಆಳವಾಗಿ ಬೇರೂರಿದೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಆದರೆ ಇದನ್ನು ನಿಭಾಯಿಸುವುದು ಮತ್ತು ಅದರಿಂದ ಹೊರಬರುವುದು ಹೇಗೆಂದು ಯಾರೂ ತಿಳಿದುಕೊಳ್ಳುವುದಿಲ್ಲ. ಇದರಿಂದ ಹೊರಬರುವ ಒಳ್ಳೆಯ ವಿಧಾನವೆಂದರೆ ನಿಮ್ಮ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದು. ಈ ರೀತಿಯಾಗಿ ಇದರೊಂದಿಗೆ ವ್ಯವಹರಿಸಬಹುದು. ಭಾವನೆ ಅದುಮಿಡುವುದು ಪರಿಸ್ಥಿತಿ ತೀವ್ರಗೊಳಿಸಬಹುದು. ಒಂದು ಹಂತದಲ್ಲಿ ನಿಮಗೆ ಅಭದ್ರತೆ ಕಾಡಲು ಆರಂಭಿಸಿದರೆ ಆಗ ಇದುವರೆಗೆ ಅದುಮಿಟ್ಟಿದ್ದ ಕೋಪವು ಒಮ್ಮೆಲೆ ಜ್ವಾಲಮುಖಿಯಾಗಿ ಹೊರಬಂದು ಸಂಬಂಧವನ್ನು ಸುಟ್ಟುಹಾಕಬಹುದು. ಅಭದ್ರತೆಗೆ ಕಾರಣ ಕಂಡುಕೊಂಡು ಅದನ್ನು ಒಳ್ಳೆಯ ರೀತಿ ನಿಭಾಯಿಸಲು ಪ್ರಯತ್ನಿಸಿ ಮತ್ತು ಅಂತಿಮವಾಗಿ ಅದರಿಂದ ಹೊರಬನ್ನಿ. ಸಂಬಂಧದಲ್ಲಿನ ಆತಂಕದಿಂದ ಹೊರಬರಲು ಇಲ್ಲಿರುವ ಕೆಲವೊಂದು ಟಿಪ್ಸ್ ಗಳು ನಿಮಗೆ ನೆರವಾಗಬಹುದು.

Deal With Anxiety In Relationship

ಆತಂಕಕ್ಕೆ ಕಾರಣವೇನು?
ಸಂಬಂಧದಲ್ಲಿನ ಆತಂಕ ನಿವಾರಿಸುವ ಮೊದಲು ನೀವು ಆತಂಕಕ್ಕೆ ಕಾರಣವೇನೆಂದು ಮೊದಲು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸಂಬಂಧದಲ್ಲಿ ಆತಂಕಕ್ಕೆ ಪ್ರಮುಖ ಕಾರಣವೆಂದರೆ ವಿಶ್ವಾಸ ಕಳಕೊಳ್ಳುವುದು, ಮುಂದುವರಿದ ಜಗಳ ಮತ್ತು ಒತ್ತಡ. ಸಂಬಂಧದಲ್ಲಿನ ಕೆಲವೊಂದು ಸಮಸ್ಯೆಗಳಿಂದಾಗಿ ಉಂಟಾಗುವ ನಕಾರಾತ್ಮಕ ಅಂಶಗಳಿಂದ ಆತಂಕ ಉಂಟಾಗುತ್ತದೆ. ಒಂದು ವೇಳೆ ನೀವಿಬ್ಬರು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆಗ ಅದು ಸಂಬಂಧದಲ್ಲಿನ ನಕಾರಾತ್ಮಕಕ್ಕೆ ಕಾರಣವಾಗುತ್ತದೆ. ಆತಂಕ ಬಗೆಹರಿಸಲು ನೀವು ಸಲಹೆ ಕೇಳುವ ಮೊದಲು ಯಾವ ರೀತಿಯ ಸಮಸ್ಯೆ ಎದುರಿಸುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಮಾತನಾಡಿ ಬಗೆಹರಿಸಿ
ಹೌದು, ಸಂಬಂಧದಲ್ಲಿನ ಆತಂಕ ನಿವಾರಿಸಲು ಸಂವಹನವು ಅತೀ ಮುಖ್ಯವಾಗಿರುತ್ತದೆ. ನಿಮ್ಮನ್ನು ಕಾಡುತ್ತಿರುವ ಅಭದ್ರತೆಯ ಬಗ್ಗೆ ನಿಮ್ಮ ಸಂಗಾತಿ ಜತೆಗೆ ಮಾತನಾಡಬೇಕೆಂದು ಹೆಚ್ಚಿನ ಸಂಬಂಧ ಸಲಹೆಗಳು ಹೇಳುತ್ತವೆ. ನಿಮ್ಮಿಬ್ಬರಿಗೆ ಸರಿಹೊಂದುವಂತಹ ಪರಿಹಾರವನ್ನು ಈ ಮೂಲಕ ಕಂಡುಕೊಳ್ಳಬಹುದು. ಯಶಸ್ವಿ ಸಂಬಂಧಕ್ಕೆ ಸಂವಹನ ಅತಿ ಮುಖ್ಯ. ಇದನ್ನು ಯಾವಾಗಲೂ ನೆನಪಿನಲ್ಲಿಡಿ.

ಮತ್ತೆ ಎಲ್ಲವನ್ನು ಪುನರಾರಂಭಿಸಿ
ಸಂಬಂಧ ಮೂಲವೆಂದರೆ ಅದು ವಿಶ್ವಾಸ. ಇದನ್ನು ನೀವು ಮೊದಲು ಪರಿಗಣಿಸಿ. ಸಂಬಂಧದಲ್ಲಿ ವಿಶ್ವಾಸ ಕಳಕೊಳ್ಳುವುದು ಇಂದಿನ ದಿನಗಳಲ್ಲಿ ನಡೆಯುತ್ತಿರುತ್ತದೆ. ವಿಶ್ವಾಸವಿಲ್ಲವೆಂಬ ಕಾರಣಕ್ಕೆ ನಿಮ್ಮ ಸಂಬಂಧವನ್ನು ಮರಳಿ ಪುನರಾರಂಭಿಸಲು ಆಗುವುದಿಲ್ಲವೆಂದಲ್ಲ. ಮತ್ತೆ ಹೊಸದಾಗಿ ಆರಂಭಿಸುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಇದನ್ನು ಮಾಡಿ. ವಿಶ್ವಾಸದ ವಿಷಯಕ್ಕೆ ಬಂದರೆ ಇದು ಒಳ್ಳೆಯ ರೀತಿ ಕೆಲಸ ಮಾಡುತ್ತದೆ.

ಅಗತ್ಯತೆಯ ಚರ್ಚೆ
ಷರತ್ತುಗಳಿಲ್ಲದ ಪ್ರೀತಿಯಲ್ಲಿ ಕೂಡ ಅಗತ್ಯತೆ ಯಾವಾಗಲೂ ಇದ್ದೇ ಇರುತ್ತದೆ. ಸಂಬಂಧದಲ್ಲಿ ಇಬ್ಬರಿಗೂ ವೈಯಕ್ತಿಕ ಅಗತ್ಯತೆಗಳಿರುತ್ತದೆ. ಅದನ್ನು ಪರಸ್ಪರರು ಆದ್ಯತೆಯ ಮೇಲೆ ಪೂರೈಸಬೇಕು. ಸಂಬಂಧದಿಂದ ಏನು ನಿರೀಕ್ಷಿಸುತ್ತಿದ್ದೀರಿ, ನಿಮ್ಮ ಅಗತ್ಯತೆ ಏನು ಮತ್ತು ಪ್ರತಿಯೊಂದರ ಬಗ್ಗೆ ನೀವು ಏನು ಬಯಸುತ್ತೀರಿ ಎಂದು ಪರಸ್ಪರಲ್ಲಿ ಚರ್ಚಿಸಿ. ಈ ಮೂಲಕ ಸಂಬಂಧದಲ್ಲಿ ಅಭದ್ರತೆಯ ಬಾಗಿಲನ್ನು ಮುಚ್ಚಬಹುದು.

ವ್ಯಸ್ತವಾಗಿರಿ
ಕೆಲವೊಮ್ಮೆ ಮನಸ್ಸು ಖಾಲಿಯಾಗಿದ್ದಾಗ ಸಂಬಂಧದಲ್ಲಿನ ಅಭದ್ರತೆ ಕಾಡುತ್ತದೆ. ಇದರಿಂದ ನಿಮ್ಮ ಯಾವುದಾದರೂ ಕೆಲಸದಲ್ಲಿ ವ್ಯಸ್ತರಾಗಿರಿ ಮತ್ತು ಆತಂಕಕ್ಕೆ ಕಾರಣವಾಗಲೂ ಯಾವುದೇ ವಿಷಯವನ್ನು ಯೋಚಿಸಬೇಡಿ.

ಸಂಬಂಧದ ಈ ಸಲಹೆಗಳನ್ನು ಪಾಲಿಸಿ, ಸಂತೋಷ ಮತ್ತು ಆರೋಗ್ಯಕರ ಸಂಬಂಧವು ಯಾವಾಗಲೂ ಎಂದೆಂದಿಗೂ ನಿಮ್ಮದಾಗಲಿ.

English summary

Deal With Anxiety In Relationship

In love with this amazing person, who you have in fact dreamt of all your life? But, suddenly you are insecure! You feel things can end at any moment and, the end would shatter you.
Story first published: Saturday, December 14, 2013, 10:17 [IST]
X
Desktop Bottom Promotion