For Quick Alerts
ALLOW NOTIFICATIONS  
For Daily Alerts

ಪ್ರಣಯದ ಸಮಯದಲ್ಲಿ ಚುಂಬನದ ಸಮಸ್ಯೆ ಅಡ್ಡ ಬರುತ್ತಿದೆಯೇ?

By Super
|

ನಿಸರ್ಗ ಗಂಡುಹೆಣ್ಣುಗಳ ನಡುವೆ ನೀಡಿರುವ ವ್ಯತ್ಯಾಸಗಳಲ್ಲಿ ಎತ್ತರವೂ ಒಂದು. ಹೆಚ್ಚಿನ ದಂಪತಿಗಳಲ್ಲಿ ಸುಮಾರು ಅರ್ಧ ಅಡಿಯಿಂದ ಒಂದು ಅಡಿಯವರೆಗೆ ಅಂತರವಿರುವುದು ಸರ್ವೇಸಾಮಾನ್ಯವಾಗಿದೆ. ಆದರೆ ಕೆಲವು ದಂಪತಿಗಳಲ್ಲಿ ಈ ವ್ಯತ್ಯಾಸ ಒಂದು ಅಡಿಗಿಂತಲೂ ಹೆಚ್ಚಿರುತ್ತದೆ. ಕೆಲವರಲ್ಲಂತೂ ಮೂರು ಅಡಿಗಳಿಗೂ ಹೆಚ್ಚು ವ್ಯತ್ಯಾಸವಿದೆ! ಫೋಟೋ ತೆಗೆಸಿಕೊಳ್ಳಬೇಕಾದ ಸಂದರ್ಭ ಎದುರಾದರೆ ಕಡಿಮೆ ಎತ್ತರದವರು ಒಂದು ಕುರ್ಚಿ ಅಥವಾ ಮಣೆಯ ಮೇಲೆ ನಿಂತು ಭುಜ ಸಮಾನಾಂತರವಾಗಿಸಿಕೊಳ್ಳುವುದು ಇಂತಹ ದಂಪತಿಗಳು ಅನುಸರಿಸುವ ಉಪಾಯ.

ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಾದರೆ ಸರಿ, ಪ್ರಣಯದ ಸಮಯದಲ್ಲಿ? ಅದರಲ್ಲೂ ತುಟಿಗೆ ತುಟಿ ಹಚ್ಚಿ ಚುಂಬಿಸಲು ಈ ಎತ್ತರ ಅಡ್ಡಿ ಬರುವುದಿಲ್ಲವೇ? ನಿಮ್ಮ ಅನುಮಾನ ಸರ್ವಥಾ ಸರಿ. ಎತ್ತರ ಖಂಡಿತಾ ಅಡ್ಡ ಬರುತ್ತದೆ. ಹೆಚ್ಚಿನ ದಂಪತಿಗಳು ಮಾಹಿತಿಯ ಕೊರತೆಯಿಂದಾಗಿ ಹಾಸಿಗೆಯ ಹೊರತು ಬೇರೆ ಸಂದರ್ಭಗಳಲ್ಲಿ ಚುಂಬನದಿಂದಲೇ ದೂರವಿದ್ದುಬಿಡುತ್ತಾರೆ.

How to Kiss Somebody Who Is a Different Height?

ನಿಸರ್ಗ ನೀಡಿದ ಈ ಸುಂದರ ಕಾಣಿಕೆಯನ್ನು ಸವಿಯದೇ ವ್ಯರ್ಥವಾಗುವುದರ ಬದಲು ಕೆಳಗೆ ನೀಡಲಾಗಿರುವ ಸುಲಭ ಉಪಾಯಗಳನ್ನು ಅನುಸರಿಸಿ ಎತ್ತರದಲ್ಲಿ ವ್ಯತ್ಯಾಸವಿರುವ ದಂಪತಿಗಳೂ ಎಲ್ಲರಂತೆ ಚುಂಬನದ ಸವಿಯನ್ನು ಸವಿಯಬಹುದು.

ನಿಮ್ಮ ಸಂಗಾತಿಯ ಎತ್ತರಕ್ಕೆ ಅನುಗುಣವಾಗಲು ಸಮರ್ಪಕ ಸಾಧನ ಬಳಸಿ
ಫೋಟೋ ತೆಗೆಸಿಕೊಳ್ಳುವಾಗ ಮಾಡಿದ್ದಂತೆಯೇ ಚುಂಬನದ ಸಮಯದಲ್ಲಿಯೂ ನಿಮ್ಮ ಸಂಗಾತಿಯ ಎತ್ತರಕ್ಕೆ ಅನುಗುಣವಾದ ಎತ್ತರದ ಹಿಮ್ಮಡಿಯಿರುವ ಪಾದರಕ್ಷೆ, ಕಿರಿದಾದ ಕುರ್ಚಿ, ಸ್ಟೂಲು, ಮೆಟ್ಟಿಲು, ಹೊಸಿಲು, ಒಟ್ಟಾರೆ ನಿಮಗೆ ಸೂಕ್ತವಾಗಿ ಕಂಡ ಯಾವುದೇ ವಸ್ತುವಿನ ಮೇಲೆ ಕಾಲಿಟ್ಟು ಎತ್ತರವನ್ನು ಸಮಾನಾಂತರವಾಗಿಸಿಕೊಳ್ಳಿ. ಎತ್ತರವಿರುವವರು ತಮ್ಮ ಸಂಗಾತಿಯನ್ನೇ ಕೇಳಿ ಅವರಿಗೆ ಸಮರ್ಪಕವೆನಿಸಿದ ಸ್ಥಳ ಅಥವಾ ವಸ್ತುವನ್ನೇ ಆಯ್ದುಕೊಳ್ಳಿ. ನಿಮ್ಮ ಆಯ್ಕೆ ಖಂಡಿತಾ ಬೇಡ. ಏಕೆಂದರೆ ಈ ಮೂಲಕ ಎತ್ತರವಿರುವವರು ದಬ್ಬಾಳಿಕೆಯ ಮೂಲಕ ಮಾಲಿಕತನ ಸ್ಥಾಪಿಸುವ ಹುನ್ನಾರ ಎಂಬ ಭಾವನೆ ಮೂಡಬಹುದು. ನಿಮ್ಮ ಸಂಬಂಧ ಇತ್ತೀಚೆಗಷ್ಟೇ ಕುದುರಿದ್ದರೆ ಬೇರೆ ವಿಷಯಗಳ ಜೊತೆ ಎತ್ತರದ ವಿಷಯವನ್ನೂ ಗಂಭೀರವಾಗಿ ಪರಿಗಣಿಸಬೇಕು. ಪ್ರಥಮ ಚುಂಬನ ಯಶಸ್ವಿಯಾಗಲು ಕೆಲವು ಸಲಹೆಗಳು!


ಸದ್ಯಕ್ಕೆ ಇಂತಹ ಯಾವುದೇ ವಸ್ತು ಅಥವಾ ಸ್ಥಳ ಸಿಕ್ಕದೇ ಇದ್ದರೆ ಅಥವಾ ಈ ಸ್ಥಳಗಳಲ್ಲಿ ಖಾಸಗಿತನವನ್ನು ಕಾಪಾಡಿಕೊಳ್ಳಲಾಗದಿದ್ದರೆ ಈ ಉಪಾಯವನ್ನು ಅನುಸರಿಸಿ. ಎತ್ತರವಿರುವ ಸಂಗಾತಿ ಎರಡೂ ಕಾಲುಗಳನ್ನು ಸಾಧ್ಯವಾದಷ್ಟು ದೂರ ಅಗಲಿಸಿ ನಿಂತುಕೊಳ್ಳಲಿ. ನಡುವಣ ಖಾಲಿ ಜಾಗದಲ್ಲಿ ಕಡಿಮೆ ಎತ್ತರದ ಸಂಗಾತಿ ನಿಂತಾಗ ತುಟಿಗಳು ಪರಸ್ಪರ ತಾಕುವಂತಿರಬೇಕು. ಈ ಭಂಗಿ ಸುಮಾರು ಒಂದು ಅಡಿಯ ವ್ಯತ್ಯಾಸದವರಿಗೆ ಸೂಕ್ತವಾಗಿದೆ. ಇನ್ನೂ ಹೆಚ್ಚಿನ ವ್ಯತ್ಯಾಸವಿದ್ದರೆ ತುಂಬಾ ಹೆಚ್ಚು ಕಾಲುಗಳನ್ನು ಅಗಲಿಸಿ ಮೊಣಕಾಲನ್ನು ಬಾಗಿಸಿ. ಬೆನ್ನನ್ನು ಗೋಡೆಗೆ ಒರಗಿ ಪಾದಗಳನ್ನು ಗೋಡೆಗಿಂತ ಸುಮಾರು ಆರಿಂಚು ಮುಂದೆ ಇಟ್ಟು ಸಂಗಾತಿಯ ತುಟಿಗಳು ತಾಕುವಷ್ಟು ಬಗ್ಗಿದರೆ ಸಾಕಾಗುತ್ತದೆ.

ಕೆಲವರು ಒಂದು ಕಾಲನ್ನು ಗೋಡೆಗೆ ಆನಿಸಿ, ಇನ್ನೊಂದು ಕಾಲನ್ನು ಕೊಂಚ ಮುಂದೆ ಇಡುವ ಮೂಲಕ ಚುಂಬನಕ್ಕೆ ಮುಂದಾಗುತ್ತಾರೆ. ಬಾಲಿವುಡ್ ಚಿತ್ರಗಳಲ್ಲಿ ಸಾಮಾನ್ಯವಾಗಿರುವ ಈ ಭಂಗಿ ಆರಾಮದಾಯಕವೇನೂ ಅಲ್ಲ, ಏಕೆಂದರೆ ಕೆಲವೇ ನಿಮಿಷಗಳಲ್ಲಿ ನೆಲದ ಮೇಲಿದ್ದ ಕಾಲು ನೋಯಲು ತೊಡಗುತ್ತದೆ. ಹಾಗಾಗಿ ಎರಡೂ ಕಾಲುಗಳನ್ನು ಅಗತ್ಯವಿದ್ದಷ್ಟು ಅಗಲಿಸಿ ಮೊಣಕಾಲು ಮಡಚುವುದೇ ಸೂಕ್ತ. ಈ ಭಂಗಿಯಲ್ಲಿ ಕಡಿಮೆ ಎತ್ತರದ ಸಂಗಾತಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಾರೆ.

ಇಬ್ಬರೂ ಪರಸ್ಪರ ಮುಂದಕ್ಕೆ ಮತ್ತು ಹಿಂದಕ್ಕೆ ಬಾಗಿ ಚುಂಬಿಸಿ
ಒಂದು ವೇಳೆ ಎತ್ತರದಲ್ಲಿ ವ್ಯತ್ಯಾಸ ಒಂದು ಅಡಿಗಿಂತಲೂ ಕಡಿಮೆಯಿದ್ದರೆ ಈ ಭಂಗಿ ಸೂಕ್ತವಾಗಿದೆ. ಎತ್ತರವಿರುವ ಸಂಗಾಗಿ ಕೊಂಚ ಮುಂದಕ್ಕೆ ಬಾಗಿ, ಕಡಿಮೆ ಎತ್ತರದ ಸಂಗಾಗಿ ತಲೆಯನ್ನು ಮೇಲಕ್ಕೆತ್ತಿ ಕೊಂಚ ಹಿಂದಕ್ಕೆ ಬಾಗುವ ಮೂಲಕ ಸಮರ್ಪಕವಾದ ಚುಂಬನವನ್ನು ಸಾಧಿಸಬಹುದು. ಅಗತ್ಯವಿದ್ದರೆ ಎತ್ತರದ ಸಂಗಾತಿಯ ಪಾದಗಳ ಮೇಲೆ ನಿಂತುಕೊಳ್ಳಿ, ಅಥವಾ ಕಾಲ್ಬೆರಳುಗಳ ಮೇಲೆ ಭಾರ ಬರುವಂತೆ ದೇಹವನ್ನು ಮೇಲಕ್ಕೆತ್ತಿ. ಬಾಹುಗಳು ಪರಸ್ಪರ ಒಬ್ಬರನ್ನೊಬ್ಬರು ತನ್ನ ಬಳಿ ಎಳೆದುಕೊಳ್ಳುತ್ತಿರಲಿ ಹಾಗೂ ಒಬ್ಬರಿಗೊಬ್ಬರು ಆಧಾರ ನೀಡುವಂತಿರಲಿ. ಅಗತ್ಯಬಿದ್ದರೆ ಎತ್ತರದ ಸಂಗಾತಿ ಕೊಂಚವಾಗಿ ಕಾಲುಗಳನ್ನಗಲಿಸಿ ಹೆಚ್ಚಿನ ಸ್ಥಳಾವಕಾಶ ನೀಡಿ. ಈ ಭಂಗಿಯಲ್ಲಿ ಇಬ್ಬರೂ ಸಮಾನವಾದ ಪ್ರಾಮುಖ್ಯತೆ ಪಡೆಯುತ್ತಾರೆ.

ಆತ್ಮೀಯ ಅಪ್ಪುಗೆಯಿಂದ ಸಂಗಾತಿಗೆ ಬೆಚ್ಚನೆಯ ಅನುಭವ ನೀಡಿ
ಕಡಿಮೆ ಎತ್ತರದ ಸಂಗಾತಿ ತನ್ನ ತಲೆಯನ್ನು ಎತ್ತರದ ಸಂಗಾತಿಯ ಎದೆಯ ಮೇಲಿಟ್ಟು ಆತ್ಮೀಯವಾಗಿ ಅಪ್ಪಿಕೊಳ್ಳಿ. ಕೆನ್ನೆ ಭುಜ ಅಥವಾ ಎದೆಯನ್ನು ತಾಕುತ್ತಿರುವಂತಿರಲಿ. ಎತ್ತರದ ಸಂಗಾತಿ ತನ್ನ ತಲೆಯನ್ನು ಮುಂಬಾಗಿಸಿ ಎರಡೂ ಕೈಗಳಿಂದ ಸಂಗಾತಿಗೆ ಆತ್ಮೀಯವಾದ ಅಪ್ಪುಗೆ ನೀಡಿ. ಈ ಭಂಗಿ ನಿಮಗಿಬ್ಬರಿಗೂ 'ನೀನು ಹೇಗಿದ್ದರೂ ಹಾಗೇಯೇ ನನಗೆ ಇಷ್ಟ' ಎಂಬ ಭಾವನೆಯನ್ನು ಮೂಡಿಸುತ್ತದೆ. ಅಲ್ಲದೇ ಈ ಭಂಗಿ ಯಾವುದೇ ಜೋಡಿಗೂ ಅನ್ವಯವಾಗುತ್ತದೆ. ಈ ಭಂಗಿಯಲ್ಲಿ ಇಬ್ಬರೂ ಸಮಾನವಾದ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ.

ದೇಹದ ಬೇರೆ ಭಾಗಗಳಿಗೂ ಚುಂಬಿಸಿ
ಎತ್ತರದ ಸಂಗಾತಿ ಕೊಂಚ ಬಾಗಿದಾದ ಕಡಿಮೆ ಎತ್ತರದ ಸಂಗಾತಿ ತನ್ನ ಎತ್ತರಕ್ಕೆ ತಕ್ಕಂತೆ ಸಾಧ್ಯವಾದ ಬೇರೆಲ್ಲಾ ಸ್ಥಳಗಳನ್ನು ಚುಂಬಿಸಬಹುದು. ಕೆನ್ನೆ, ಹಣೆ, ಎದೆ, ಗಲ್ಲ, ಕೈಗಳು, ಭುಜ, ಹೊಟ್ಟೆಯ ಭಾಗದಲ್ಲೆಲ್ಲಾ ಚುಂಬಿಸಬಹುದು. ಚುಂಬನವೆಂದರೆ ಕೇವಲ ಗಲ್ಲಕ್ಕೆ ಮತ್ತು ತುಟಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಚುಂಬನ ಪರೀಕ್ಷೆಯಲ್ಲಿ ಪಾಸಾಗಲು ಇಲ್ಲಿದೆ 15 ಸಲಹೆಗಳು!

ಕಡಿಮೆ ಎತ್ತರದ ಸಂಗಾತಿಯನ್ನು ಸಂಪೂರ್ಣವಾಗಿ ಆವರಿಸಿ
ನಿಮ್ಮ ಚುಂಬನ ಅತ್ಯಂತ ಫಲಕಾರಿಯಾಗಬೇಕಾಗಿದ್ದರೆ ನಿಮ್ಮ ಎತ್ತರದ ಪೂರ್ಣ ಉಪಯೋಗ ಪಡೆದುಕೊಳ್ಳಿ. ಎತ್ತರದ ಸಂಗಾತಿ ಸಾಧ್ಯವಾದಷ್ಟು ಮುಂದಕ್ಕೆ ಬಾಗಿ ನಲ್ಲ/ನಲ್ಲೆಯ ತುಟಿಗಳನ್ನು ಸಂಧಿಸಿ. ಇದೇ ವೇಳೆ ಕಡಿಮೆ ಎತ್ತರದ ಸಂಗಾತಿ ಸಾಧ್ಯವಾದಷ್ಟು ಹಿಂದಕ್ಕೆ ಬಾಗಿ ತನ್ನ ಸಹಕಾರ ನೀಡಲಿ. ಈ ಬಾಗುವಿಕೆ ಎಷ್ಟು ಇರಬೇಕೆಂದರೆ ಬೆನ್ನನ್ನು ಹಿಂದಕ್ಕೆ ಇನ್ನೂ ಹೆಚ್ಚಿಗೆ ಬಾಗಿಸಿದರೆ ನೋವಾಗಬಾರದು, ಅಷ್ಟು ಹಿಂದಕ್ಕೆ ಬಾಗಿಸಿ. ಒಂದು ಕೈಯಿಂದ ಬೆನ್ನಿಗೆ ಆಸರೆ ನೀಡಿ ಸಂಗಾತಿ ಹಿಂದಕ್ಕೆ ಬೀಳದಂತೆ ತಡೆಯಿರಿ, ಇನ್ನೊಂದು ಕೈಯಿಂದ ಸೊಂಟ ಬಳಸಿ.

ಇದೇ ವೇಳೆ ಕಡಿಮೆ ಎತ್ತರದ ಸಂಗಾತಿ ತನ್ನ ಭಾರವನ್ನು ಸಂಗಾತಿಯ ಕೈಗಳ ಮೇಲೆ ಹೇರಿ ಒಂದು ಕೈಯಿಂದ ಸಂಗಾತಿಯ ಕುತ್ತಿಗೆಯನ್ನು ಬಳಸಿ, ಇನ್ನೊಂದು ಕೈಯಿಂದ ಭುಜ ಅಥವಾ ರಟ್ಟೆಯನ್ನು ಹಿಡಿದು ಸಾವರಿಸಿಕೊಳ್ಳಿ. ಈ ಭಂಗಿಯಲ್ಲಿ ಎತ್ತರದ ಸಂಗಾತಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಾರೆ. ಎತ್ತರದ ಸಂಗಾತಿ ತನ್ನ ಕೈಗಳನ್ನು ಮೇಲಕ್ಕೆತ್ತುವ ಅಥವಾ ಕೆಳಗೆ ಬಿಡುವ ಮೂಲಕ ಇಬ್ಬರಿಗೂ ಸಮರ್ಪಕವಾದ ಅಂತರವನ್ನು ಪಡೆಯಬಹುದು. ಈ ಭಂಗಿಯನ್ನು ಹೆಚ್ಚು ಹೊತ್ತು ನಡೆಸಲು ಸಾಧ್ಯವಿಲ್ಲ, ಏಕೆಂದರೆ ಕೆಲವೇ ನಿಮಿಷಗಳಲ್ಲಿ ರಟ್ಟೆ ಬಿದ್ದು ಹೋಗುವುದೂ, ಕಡಿಮೆ ಎತ್ತರದ ಸಂಗಾತಿಗೆ ಕುತ್ತಿಗೆಯಲ್ಲಿ ನೋವು ಬರುವುದೂ ಪ್ರಾರಂಭವಾಗುತ್ತದೆ.

ಈ ನಿಟ್ಟಿನಲ್ಲಿ ಇನ್ನೂ ಹಲವು ಉಪಯೋಗಕಾರಿ ಸಲಹೆಗಳು:
* ಕಡಿಮೆ ಎತ್ತರದ ಸಂಗಾತಿ ತೊಟ್ಟಿರುವ ಉಡುಗೆಗಳಲ್ಲಿ ದಾರ, ಪಟ್ಟಿ (ಬೆಲ್ಟ್) ಅಥವಾ ಹಗ್ಗಗಳ ಮೂಲಕ ಹೆಚ್ಚಿನ ಬಲ ಇದೆಯೆಂದಾರೆ ಈ ದಾರಗಳನ್ನು ಉಪಯೋಗಿಸಿ ನಿಮ್ಮ ಸಂಗಾತಿಯನ್ನು ಹತ್ತಿರಕ್ಕೆಳೆದುಕೊಳ್ಳಲು ಸಾಧ್ಯವಾಗುತ್ತದೆ.
* ಒಂದು ವೇಳೆ ನಿಮ್ಮಿಬ್ಬರ ಎತ್ತರದ ಅಂತರ ಎರಡು ಅಡಿಗಿಂತಲೂ ಹೆಚ್ಚಿದ್ದರೆ ಕಡಿಮೆ ಎತ್ತರದ ಸಂಗಾತಿ ತನ್ನ ಬಾಹುಗಳನ್ನು ಪ್ರಿಯತಮ/ತಮೆಯ ಕುತ್ತಿಗೆಯ ಸುತ್ತ ಹಾಕಿ ನವಿರಾಗಿ ಹತ್ತಿರಕ್ಕೆಳೆದುಕೊಳ್ಳಿ. ಈ ಭಂಗಿಯ ಮೂಲಕ ನೀವು ಸಿದ್ಧರಿದ್ದೀರೆಂದು ಸಂಗಾತಿಗೆ ತಿಳಿಸಿದಂತಾಗುತ್ತದೆ.
* ನಿಮ್ಮಿಬ್ಬರಿಗೂ ಯಾವ ಭಂಗಿ ಸೂಕ್ತ ಎಂಬ ಪ್ರಯೋಗಗಳನ್ನು ಮಾಡಿ. ಯಾವ ಯಾವ ಭಂಗಿಯಿಂದ ಇಬ್ಬರಿಗೂ ಸಮನಾದ ತೃಪ್ತಿ ಸಿಗುತ್ತದೆಯೋ ಆ ಭಂಗಿಗಳನ್ನು ಹೆಚ್ಚಾಗಿ ಅನುಸರಿಸಿ.

English summary

How to Kiss Somebody Who Is a Different Height?

How to kiss somebody who is a different height? You make a charming couple, however, there must be in any event a foot between you when you are standing. Don’t fuss – there’s a way to pull this off. To kiss somebody who’s an alternate height, try the accompanying procedures.Steps to Kiss Somebody Who Is a Different Height:
X
Desktop Bottom Promotion