For Quick Alerts
ALLOW NOTIFICATIONS  
For Daily Alerts

ವಿವಾಹ ಪೂರ್ವ ಮಿಲನ ಏಕೆ ಸಲ್ಲದು? ಇಲ್ಲಿದೆ 10 ಕಾರಣಗಳು

By Super
|

ಸುಮಾರು ತೊಂಭತ್ತರ ದಶಕದಲ್ಲಿ ನಮ್ಮ ದೇಶಕ್ಕೆ ಕಾಲಿಟ್ಟ ಕಂಪ್ಯೂಟರ್ ನೊಂದಿಗೆ ದೇಶದ ಪ್ರಗತಿ ನಾಗಾಲೋಟದಲ್ಲಿ ಏರುತ್ತಿದ್ದಂತೆಯೇ ಪಾಶ್ಚಾತ್ಯ ಸಂಸ್ಕೃತಿಯೂ ನಿಧಾನಕ್ಕೆ ಲಗ್ಗೆಯಿಟ್ಟು ನಮ್ಮ ಸಂಸ್ಕೃತಿಯನ್ನು ನಿಧಾನವನ್ನು ಹಿಂದೆ ಸರಿಸುತ್ತ ಬಂದಿರುವುದನ್ನು ಅಲ್ಲಗಳೆಯಲಾಗದು. ಮಹಾನಗರಗಳಿಂದ ಹಿಡಿದ ಚಿಕ್ಕ ಪಟ್ಟಣಗಳವರೆಗೆ ಪಾಶ್ಚಾತ್ಯ ಆಹಾರ, ಸಂಗೀತ, ಆಚಾರ ವಿಚಾರ, ನಡೆನುಡಿಗಳು ನಿಧಾನವಾಗಿ ನಮ್ಮ ಯುವಜನಾಂಗದ ಮನಗೆಲ್ಲುವುತ್ತಿರುವುದು ಸ್ಪಷ್ಟವಾಗಿ ಕಾಣಬರುತ್ತಿದೆ.

ಅತ್ತ ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಯೋಗಾಭ್ಯಾಸ, ಸರಳ ಆಹಾರ, ಆಧ್ಯಾತ್ಮಗಳಿಗೆ ಮನಸೋಲುತ್ತಿದ್ದರೆ ಇತ್ತ ಯುವ ಜನಾಂಗ ಪಬ್, ಬಾರ್, ಡ್ಯಾನ್ಸ್, ಡೇಟಿಂಗ್, ಚಾಟಿಂಗ್, ಮೊದಲಾದ ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮರುಳಾಗುತ್ತಿದ್ದಾರೆ.

ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ತಮ್ಮ ಓರಗೆಯವರು ಮನಸೋಲುತ್ತಿರುವ ಈ ಪರಿಯಲ್ಲಿ ಭಾಗಿಯಾಗಲೇ ಅಥವಾ ಹಿರಿಯರು ಕಲಿಸಿದ ನಮ್ಮ ಸಂಸ್ಕೃತಿಯಲ್ಲಿ ಮುಂದುವರೆಯಲೇ ಎಂಬ ಇಬ್ಬಂದಿ ಕಾಣಸಿಗುತ್ತಿದೆ. ಆದರೆ ಈಗಾಗಲೇ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದವರು ಅದರಲ್ಲಿರುವ ಮಜಾ ಏನು ಎಂದು ವರ್ಣಿಸಿದಾಗ ನಿಧಾನಕ್ಕೆ ಅತ್ತ ಕಡೆಗೆ ಒಲಿಯುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿರುವ ಸತ್ಯ.

ಗಂಡಸರು ಕಾಂಡೋಮ್ ಬೇಡ ಎನ್ನಲು 10 ಕಾರಣಗಳು

ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಪೂರ್ವ ಶಾರೀರಿಕ ಸಂಬಂಧಕ್ಕೆ ಸಮಾಜ ಅನುಮತಿ ನೀಡುವುದಿಲ್ಲ. ವಿವಾಹದ ಬಳಿಕವೂ ಸತಿಪತಿಯರ ಹೊರತಾದ ಸಂಬಂಧಗಳಿಗೂ ಮಾನ್ಯತೆ ಇಲ್ಲ. ಆದರೆ ಹದಿಹರೆಯಕ್ಕೆ ಕಾಲಿಟ್ಟ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ಹಲವು ಯುವಕ ಯುವತಿಯರು ಈ ಬಂಧವನ್ನು ಮೀರಿ ಹದಿಹರೆಯದಲ್ಲಿ ಸ್ವಾಭಾವಿಕವಾದ ಬಯಕೆಗಳನ್ನು ತೀರಿಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಅವರ ಪಾಶ್ಚಾತ್ಯ ಸ್ನೇಹಿತರಲ್ಲಿ ಪ್ರಥಮ ಶಾರೀರಿಕ ಸಂಬಂಧವನ್ನು ಹೊಂದಿದಾಗ ಅವರ ವಯಸ್ಸು ಕಡಿಮೆಯಿದ್ದು ಅದಕ್ಕಿಂತಲೂ ಹೆಚ್ಚು ವಯಸ್ಸಾಗಿಯೂ ಇನ್ನೂ ಮುಂದುವರೆಯದ ಬಗ್ಗೆ ಸ್ನೇಹಿತರ ವಲಯದಲ್ಲಿ ಕುಹಕವಾಡುವುದರಿಂದ ಈ ಸಂಬಂಧಕ್ಕೆ ಹೆಚ್ಚು ಮುಂದಾಗುವುದು ಪ್ರಮುಖ ಕಾರಣವಾಗಿದೆ.

ದಾಂಪತ್ಯ ಸುಖವೆಂಬುದು ಸತಿಪತಿಯರ ನಡುವೆ ವಿನಿಮಯವಾಗುವ ಒಂದು ಅತ್ಯಂತ ಪವಿತ್ರವಾದ ಸಂಬಂಧವಾಗಿದೆ. ವಿವಾಹದ ಬಳಿಕವೇ ದಾಂಪತ್ಯದ ಕಟ್ಟುಪಾಡಿನೊಳಗೇ ಈ ಸಂಬಂಧ ಮುಂದುವರೆಸಲು ನಮ್ಮ ದೇಶದ ಎಲ್ಲಾ ಧರ್ಮಗಳು ಹಾಗೂ ಕಾನೂನು ಅನುಮತಿ ನೀಡುತ್ತದೆ. ನಿಶ್ಚಿತಾರ್ಥವಾಗಿದ್ದರೂ ಮದುವೆಯ ಪವಿತ್ರ ಬಂಧನದಲ್ಲಿ ಬೆಸೆಯುವವರೆಗೂ ಈ ಸಂಪರ್ಕಕ್ಕೆ ಧರ್ಮ ಹಾಗೂ ಕಾನೂನಿನ ಅನುಮತಿಯಿಲ್ಲ.

ಆದರೂ ಈ ಬಯಕೆಯನ್ನು ಹತ್ತಿಕ್ಕಲು ಕೇವಲ ಸಾಮಾಜಿಕ ಭಯಕ್ಕಿಂತ ಭಾವನಾತ್ಮಕವಾದ ನಿರೀಕ್ಷಣೆ ಉತ್ತಮವಾಗಿದೆ. ಮಾವಿನಕಾಯಿ ಬಲಿತಾಗ ಹುಳಿಯಾಗಿ ತಿನ್ನುವುದಕ್ಕಿಂತಲೂ ನಾಲ್ಕು ದಿನ ಕಾದು ಹಣ್ಣಾದ ಬಳಿಕ ಸಿಹಿಯಾಗಿರುವುದನ್ನು ತಿನ್ನುವುದು ಒಳಿತು. ಸೂಕ್ತ ಸಮಯದವರೆಗೂ ಈ ಬಯಕೆಯನ್ನು ಹತ್ತಿಕ್ಕಲು ಹತ್ತು ಸಕಾರಣಗಳನ್ನು ಕೆಳಗೆ ನೀಡಲಾಗಿದೆ.

ಭಾರತೀಯರು ಹೆಣ್ಣಿನ ಕನ್ಯತ್ವ ಬಯಸಲು ಕಾರಣಗಳೇನು?

ಅತ್ಯುತ್ತಮವಾದುದನ್ನು ಕಟ್ಟಕಡೆಗೆ ಮೀಸಲಿಡಿ

ಅತ್ಯುತ್ತಮವಾದುದನ್ನು ಕಟ್ಟಕಡೆಗೆ ಮೀಸಲಿಡಿ

ಯಾವುದೇ ಸರ್ಕಸ್ ಕಲಾವಿದ ತನ್ನ ಪ್ರದರ್ಶನದಲ್ಲಿ ತನ್ನ ಅತ್ಯುತ್ತಮ ಕೌಶಲಗಳನ್ನು ಮೊದಲೇ ತೋರಿಸುವುದಿಲ್ಲ. ಮೊದಲಿಗೆ ಸುಲಭವಾದ ಅಥವಾ ಒಂದೆರಡು ವಸ್ತುಗಳನ್ನೊಳಗೊಂಡ ಕೌಶಲಗಳನ್ನು ತೋರಿಸುತ್ತಾ ಕ್ರಮೇಣ ಹೆಚ್ಚಿಸುತ್ತಾ ಅಂತಿಮವಾಗಿ ತನ್ನ ಅತ್ಯುತ್ತಮವಾದ ಕೌಶಲವನ್ನು ಪ್ರದರ್ಶಿಸಿ ನಿರ್ಗಮಿಸುತ್ತಾನೆ. ಜೀವನದಲ್ಲಿಯೂ ಹಾಗೇ. ಅತ್ಯುತ್ತಮವಾದ ವಿಷಯಗಳನ್ನು ಕಟ್ಟಕಡೆಗೆ ಇಡುವುದು ಶ್ರೇಯಸ್ಕರವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ವಿವಾಹಕ್ಕೂ ಮೊದಲು ಜೀವನದಲ್ಲಿ ನೆಲೆಕಾಣಲು ಆದ್ಯತೆ ನೀಡಲಾಗಿದೆ. ಹದಿಹರೆಯದ ವಯಸ್ಸು ಮತ್ತು ವೃತ್ತಿಜೀವನದಲ್ಲಿ ಉತ್ತಮ ಸಾಧನೆ ತೋರಿದ ಬಳಿಕ ಗುರುಹಿರಿಯರ ಆಶೀರ್ವಾದದೊಂದಿಗೆ ವಿವಾಹವಾದ ಬಳಿಕ ನಡೆಸುವ ಸಂಪರ್ಕದಲ್ಲಿ ಅತ್ಯಂತ ಹೆಚ್ಚಿನ ಸಂತಸ ಮತ್ತು ಸಂತೃಪ್ತಿ ಇರುತ್ತದೆ.

ನಿಮ್ಮ ಸಂಗಾತಿಯನ್ನು ಅರಿಯಲು ಸಾಧ್ಯವಾಗುತ್ತದೆ

ನಿಮ್ಮ ಸಂಗಾತಿಯನ್ನು ಅರಿಯಲು ಸಾಧ್ಯವಾಗುತ್ತದೆ

ಇಂದು ವಿಚ್ಛೇದನಗೊಂಡ ದಂಪತಿಗಳ ಪೈಕಿ ಹೆಚ್ಚು ಪಾಲು ಪ್ರೇಮ ವಿವಾಹವಾಗಿದ್ದಾರೆ. ವಿವಾಹಕ್ಕೂ ಮೊದಲು ಒಬ್ಬರನ್ನೊಬ್ಬರು ಪರಸ್ಪರ ಅರಿತು ವಿವಾಹವಾಗಿದ್ದರೂ ಅರಿಯದ ಹಲವು ವಿಷಯಗಳಿರುತ್ತವೆ. ವಿವಾಹದ ಬಳಿಕ ಚಿಕ್ಕ ವಿಷಯಗಳೇ ಅಗ್ನಿಯಂತೆ ಭುಗಿಲೆದ್ದು ವಿಚ್ಛೇದನದಲ್ಲಿ ಪರ್ಯವಸಾನವಾಗುತ್ತದೆ. ಶಾರೀರಿಕ ಸೌಂದರ್ಯಕ್ಕೆ ಮೊದಲ ನೋಟದಲ್ಲಿಯೇ ಮರುಳಾಗದೇ ಸಂಗಾತಿಯ ವ್ಯಕ್ತಿತ್ವವನ್ನು ಮೊದಲು ಅರಿತು ಬಾಳಸಂಗಾತಿಯಾಗಿ ಆಯ್ದುಕೊಳ್ಳಲು ಅಂತಿಮವಾಗಿ ಒಪ್ಪಿಗೆ ನೀಡಲು ಈ ಸಮಯ ಅಗತ್ಯವಾಗಿದೆ.

ಕನಸುಗಳಿಗೆ ಮರುಳಾಗಬೇಡಿ

ಕನಸುಗಳಿಗೆ ಮರುಳಾಗಬೇಡಿ

ಸಾಧಾರಣವಾಗಿ ಲೋಲುಪರು ಹದಿಹರೆಯದವರನ್ನು ಸುಲಭವಾಗಿ ಮರಳು ಮಾಡಿ ಸಂಪರ್ಕಕ್ಕೆ ಎಳೆಯಬಲ್ಲರು. ಯಾವ ಮೀನಿಗೆ ಯಾವ ಗಾಳ ಎಂದು ಅವರಿಗೆ ಹಲವು ಅನುಭವಗಳ ಮೂಲಕ ಕರಗತವಾಗಿರುತ್ತದೆ. ಆದರೆ ಅವರ ಸುಂದರ ಮಾತುಗಳ ಹಾಗೂ ಅವರು ತೋರಿಸುವ ಕನಸುಗಳಿಗೆ ಮರುಳಾಗಿ ಸಂಪರ್ಕಕ್ಕೆ ಒಪ್ಪಿದರೆ ಪ್ರಾರಂಭ ಸುಖವೆಂದು ಕಂಡರೂ ಜೀವನ ನರಕವಾಗುವುದು ಮಾತ್ರ ಸತ್ಯ.

ಒಂದು ರಾತ್ರಿಯ ಅನುಭವಕ್ಕಾಗಿ ಜೀವನವನ್ನು ಬಲಿಗೊಡದಿರಿ

ಒಂದು ರಾತ್ರಿಯ ಅನುಭವಕ್ಕಾಗಿ ಜೀವನವನ್ನು ಬಲಿಗೊಡದಿರಿ

ಪಾಶ್ಚಾತ್ಯ ಸಂಸ್ಕೃತಿಯ ಕರಾಳ ರೂಪವಾದ ಒಂದು ರಾತ್ರಿಯ ಅನುಭವ ಯುವಜನಾಂಗವನ್ನು ದಿಕ್ಕು ತಪ್ಪಿಸುತ್ತಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಪರಿಚಯವನ್ನು ಕೇವಲ ಒಂದು ರಾತ್ರಿಗೆ ನಿಯಮಿತಗೊಳಿಸಿ ಮರುದಿನ ಬೆಳಿಗ್ಗೆ ಮತ್ತೆ ಅಪರಿಚಿತರಾಗುತ್ತಾರೆ. ವ್ಯಕ್ತಿ ಎಷ್ಟೇ ಆಕರ್ಷಕ ರೂಪ, ಲಾವಣ್ಯ ಹೊಂದಿದ್ದರೂ ಭಾವನೆಯಿಲ್ಲದ ಸಂಗ ಕೇವಲ ಯಾಂತ್ರಿಕವಾಗುತ್ತದೆ. ಹಲವು ಬಾರಿ ಅನೈಚ್ಛಿಕ ಗರ್ಭಧಾರಣೆ, ಸೋಂಕು ರೋಗಗಳಿಗೂ ಬಲಿಯಾಗುವುದಿದೆ. ಅಪರಿಚಿತರಾಗಿ ಹಾಸಿಗೆಗೆ ಬಂದ ಬಳಿಕ ತಾವಿಬ್ಬರೂ ಅಣ್ಣ-ತಂಗಿ, ತಂದೆ-ಮಗಳ ಎಂದು ಗೊತ್ತಾಗಿ ಹಲವು ಆತ್ಮಹತ್ಯೆಗಳು ಜರುಗಿವೆ.

ಮಾನವ ಜೀವನದ ಪಾವಿತ್ರ್ಯಕ್ಕೆ ಮಹತ್ವ ನೀಡಿ

ಮಾನವ ಜೀವನದ ಪಾವಿತ್ರ್ಯಕ್ಕೆ ಮಹತ್ವ ನೀಡಿ

ಪುರಾಣದಲ್ಲಿ ಸೀತೆ, ದ್ರೌಪದಿಯರಿಗೂ ತಮ್ಮ ಪಾವಿತ್ರ್ಯತೆಯನ್ನು ಸಾಬೀತುಪಡಿಸಬೇಕಾಗಿ ಬಂದಿತ್ತು. ಜೀವನದ ಯಾವುದೇ ವಸ್ತುವಿಗಿಂತ ಪಾವಿತ್ರ್ಯತೆ ಅತ್ಯಂತ ಅಮೂಲ್ಯವಾದುದು ಹಾಗೂ ಬೆಲೆಕಟ್ಟಲಾಗದ್ದು ಎಂಬುದನ್ನು ಧೃಢವಾಗಿ ನಂಬಿ. ಈ ಪಾವಿತ್ರ್ಯತೆಯನ್ನು ಎಷ್ಟೋ ಹಿಂದೆ ಕಳೆದುಕೊಂಡು ಕೊರಗುತ್ತಿರುವ ಪಾಶ್ಚಾತ್ಯರ ಹೊಟ್ಟೆಕಿಚ್ಚಿನ ಮಾತುಗಳಿಗೆ ಮರುಳಾಗದಿರಿ.

ಅನೈಚ್ಛಿಕ ಸೋಂಕುಗಳಿಗೆ ಬಲಿಯಾಗದಿರಿ

ಅನೈಚ್ಛಿಕ ಸೋಂಕುಗಳಿಗೆ ಬಲಿಯಾಗದಿರಿ

ಶಾರೀರಿಕ ಸಂಪರ್ಕಕ್ಕೆ ಆಹ್ವಾನ ನೀಡುವ ವ್ಯಕ್ತಿ ಎಷ್ಟೇ ಸುಂದರ/ಸುಂದರಿಯಾಗಿದ್ದರೂ ಸಂಸರ್ಗದಿಂದ ದೇಹಕ್ಕೆ ಪ್ರವೇಶ ಪಡೆಯುವ ಸೋಂಕು ಮುಂದೆ ಹಲವಾರು ಕಾಯಿಲೆಗಳಿಗೆ ಕಾರಣವಾಗಬಲ್ಲುದು. ನೆನಪಿಡಿ, ಯಾವುದೇ ಸುರಕ್ಷಾಕ್ರಮ ಶೇ ನೂರರಷ್ಟು ಸುರಕ್ಷಿತವಲ್ಲ.

ನಿಮ್ಮ ಸಂಗಾತಿ ನಿಮ್ಮ ಮನಗೆಲ್ಲದಿದ್ದರೆ ಸಂಪರ್ಕವೇ ಬೇಡ

ನಿಮ್ಮ ಸಂಗಾತಿ ನಿಮ್ಮ ಮನಗೆಲ್ಲದಿದ್ದರೆ ಸಂಪರ್ಕವೇ ಬೇಡ

ಪ್ರತಿಯೊಬ್ಬರಿಗೂ ತಮ್ಮ ಸಂಗಾತಿ ಹೀಗಿರಬೇಕು ಎಂಬ ಕಲ್ಪನೆಯಿರುತ್ತದೆ. ಆದರೆ ಎಲ್ಲಾ ಗುಣಗಳಿರುವ ಯುವಕ/ಯುವತಿ ದೊರಕುವುದು ಮಾತ್ರ ಅಸಾಧ್ಯ. ದ್ರೌಪದಿ ತನಗೆ ಇಂತಿಂತಹ ಗುಣಗಳಿರುವ ಗಂಡನೇ ಬೇಕು ಎಂದು ಘೋರ ತಪಸ್ಸು ಮಾಡಿದ್ದಳಂತೆ. ಆದರೆ ಆ ಎಲ್ಲಾ ಗುಣಗಳ ಒಬ್ಬನಲ್ಲಿಲ್ಲದೇ ಇದ್ದುದರಿಂದ ಒಂದೊಂದು ಗುಣವಿರುವ ಐವರು ಪಾಂಡವರನ್ನು ವರಿಸಬೇಕಾಗಿ ಬಂದಿತ್ತು. ನಿಮ್ಮ ಜೀವನಸಂಗಾತಿಯ ಒಳ್ಳೆಯ ಗುಣಗಳನ್ನು ಮನಸಾರೆ ಮೆಚ್ಚಿ ಕೆಟ್ಟ ಗುಣಗಳನ್ನು ತಿದ್ದಲು ಪ್ರಯತ್ನಿಸಿ ಪರಸ್ಪರ ಪ್ರೀತಿಸಿದ ಬಳಿಕ ಶಾರೀರಿಕ ಸಂಪರ್ಕದಲ್ಲಿ ಸಿಗುವ ಸುಖ ನಿಸರ್ಗ ನೀಡುವ ಒಂದು ಸುಂದರ ಉಡುಗೊರೆ.

ಕಾಮನೆಗಳನ್ನು ಇನ್ನಷ್ಟು ಕೆರಳಿಸುತ್ತದೆ

ಕಾಮನೆಗಳನ್ನು ಇನ್ನಷ್ಟು ಕೆರಳಿಸುತ್ತದೆ

ವಿವಾಹ ಬಂಧನಕ್ಕೂ ಮುನ್ನ ನಡೆಸಿದ ಸಂಪರ್ಕ ದೇಹದ ಲೈಂಗಿಕ ಕಾಮನೆಗಳನ್ನು ಇನ್ನಷ್ಟು ಕೆರಳಿಸುತ್ತದೆ. ಭಾವನೆಯಿಲ್ಲದ ಕೆರಳಿದ ದೇಹ ಬೇರೆ ಸಂಗಾತಿಯನ್ನು ಬಯಸುತ್ತದೆ. ಇದು ಇನ್ನಷ್ಟು ಸಂಪರ್ಕಗಳಿಗೆ ಮಣೆ ಹಾಕುತ್ತದೆ. ಜೀವನ ಜಟಿಲವಾಗುತ್ತಾ ಹೋಗುತ್ತದೆ. ಯಾವುದೇ ವ್ಯಸನಕ್ಕೆ ಮೊತ್ತ ಮೊದಲ ಬಾರಿಯ ಪ್ರಯತ್ನವೇ ಮುಳುವಾಗಿದೆ. ಉದಾಹರಣೆಗೆ ಸಿಗರೇಟು. ಒಂದು ಮಾತ್ರ ಸೇದಿ ಬಳಿಕ ಬಿಟ್ಟು ಬಿಡು ಎಂದು ಸ್ನೇಹಿತರು ಪ್ರಚೋದಿಸಿದ ಬಳಿಕ ಪ್ರಾರಂಭವಾದ ಸಿಗರೇಟಿನ ವ್ಯಸನ ಶ್ವಾಸಕೋಶದ ಕ್ಯಾನ್ಸರ್ ವರೆಗೆ ಕರೆದೊಯ್ದಿದೆ. ಬದಲಾಗಿ ಜೀವನದಲ್ಲಿ ಸಿಗರೇಟು ಸೇದಲೇ ಬೇಡ ಎಂದಿರುವಾಗ ಒಂದೂ ಸೇದಲಾರೆ ಎಂದು ಧೃಢನಿಶ್ಚಯದಿಂದ ಒಂದೂ ಸೇದದಿದ್ದವರು ಉತ್ತಮ ಆರೋಗ್ಯ ಹೊಂದಿದ್ದಾರೆ. ವಿವಾಹಪೂರ್ವ ಸಂಬಂಧ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಹೇಳುವುದು ಅತ್ಯುತ್ತಮ ನಿರ್ಧಾರವಾಗಿದೆ.

ತಿಂಗಳ ರಜಾಕಾಲದ ನೆವ ಬೇಡ

ತಿಂಗಳ ರಜಾಕಾಲದ ನೆವ ಬೇಡ

ಮಹಿಳೆಯರ ತಿಂಗಳ ರಜಾಕಾಲದಲ್ಲಿ ಸಂಪರ್ಕ ನಡೆಸಿದರೆ ಯಾವ ಅಪಾಯವೂ ಇಲ್ಲ ಎಂದು ಪ್ರೇರೇಪಿಸುವ ಲೋಭಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಬೇಡಿ. ವಿವಾಹದ ಬಳಿಕವೇ ಏನಿದ್ದರೂ ಎಂದು ಖಡಾಖಂಡಿತವಾಗಿ ಹೇಳಿ.

ನಿಮಗೆ ಅರಿವಿಲ್ಲದಿರುವ ಸೋಂಕು ನಿಮ್ಮ ಸಂಗಾತಿಗೂ ಬರಬಹುದು

ನಿಮಗೆ ಅರಿವಿಲ್ಲದಿರುವ ಸೋಂಕು ನಿಮ್ಮ ಸಂಗಾತಿಗೂ ಬರಬಹುದು

ಇಂದು ಸೋಂಕು ಉಂಟಾಗಲು ಲೈಂಗಿಕ ಸಂಪರ್ಕವೇ ಆಗಬೇಕೆಂದಿಲ್ಲ. ಸೋಂಕು ತಗುಲಿದ ಸೂಜಿ, ರಕ್ತ ಮೊದಲಾದ ಕಡೆಗಳಿಂದಲೂ ನಿಮ್ಮ ದೇಹದಲ್ಲಿ ಸೋಂಕು ಉಂಟಾಗಿರಬಹುದು, ಆದರೆ ನಿಮಗೆ ಅದರ ಅರಿವಿಲ್ಲದೇ ಇರಬಹುದು. ವಿವಾಹಪೂರ್ವ ಸಂಪರ್ಕದಿಂದ ಆ ಸೋಂಕು ನಿಮ್ಮ ಸಂಗಾತಿಗೆ ಹರಡಿ ಆ ಬಳಿಕ ಅವರಿಂದ ಬೇರೆಯವರಿಗೂ ಹರಡಬಹುದು. ವಿವಾಹಕ್ಕೂ ಮುನ್ನ ಇಬ್ಬರೂ ವೈದ್ಯಕೀಯ ತಪಾಸಣೆಗೊಳಗಾಗುವುದು ಉತ್ತಮ. ಅದರಲ್ಲೂ ನಿಮ್ಮಲ್ಲಿ ಸೋಂಕು ಇದೆ ಎಂದು ಖಾತ್ರಿಯಾದರೆ ಸಂಪರ್ಕ ಖಂಡಿತವಾಗಿಯೂ ಬೇಡ.

English summary

10 Reasons You Shouldn't Have Sex Before...,

These days, teenagers just love to get between the sheets without even knowing their partner well. As a result, a lot of problems come up in the relationship Here are some reasons why you shouldn't have intercourse before marriage or on the first date. Take a look:
Story first published: Thursday, September 11, 2014, 16:54 [IST]
X
Desktop Bottom Promotion